Asianet Suvarna News Asianet Suvarna News

ಪೋಕೋ ಮೊದಲ ಸ್ವತಂತ್ರ ಮೊಬೈಲ್‌ ಬಿಡುಗಡೆ!, ಆ್ಯಪಲ್, ಸ್ಯಾಮ್ಸಂಗ್‌ಗೆ ಟಕ್ಕರ್!

ಪೋಕೋ ಮೊದಲ ಸ್ವತಂತ್ರ ಮೊಬೈಲ್‌ ಬಿಡುಗಡೆ| ನಾಡಿದ್ದ ಪೋಕೋ ಎಕ್ಸ್‌2 ಮೊಬೈಲ್‌ ಮಾರಕಟ್ಟೆಗೆ| ಶಿಯೋಮಿಯಿಂದ ಪ್ರತ್ಯೇಕಗೊಂಡ ಪೋಕೋ

POCO To Launch Independent Smartphone POCO X2 feature that even Samsung and Apple do not offer
Author
Bangalore, First Published Feb 9, 2020, 12:07 PM IST

ಗಿರೀಶ್‌ ಮಾದೇನಹಳ್ಳಿ

ನವದೆಹಲಿ[ಫೆ.09]: ಶಿಯೊಮಿ ಬ್ರ್ಯಾಂಡ್‌ನಿಂದ ಪೋಕೋ ಕಂಪನಿ ಪ್ರತ್ಯೇಕಗೊಂಡಿದ್ದು, ಫೆ.11ರಂದು ಆ ಕಂಪನಿಯ ಮೊದಲ ಸ್ವತಂತ್ರ ಬ್ರ್ಯಾಂಡ್‌ ಆದ ‘ಪೋಕೋ ಎಕ್ಸ್‌2’ ಮೊಬೈಲ್‌ ಮಾರುಕಟ್ಟೆಗೆ ಲಗ್ಗೆ ಹಾಕಲಿದೆ.

ನವದೆಹಲಿಯಲ್ಲಿ ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಮಾತನಾಡಿದ ಪೊಕೊ ಇಂಡಿಯಾದ ಪ್ರಧಾನ ವ್ಯವಸ್ಥಾಪಕ ಮದನ್‌ ಮೋಹನ್‌ ಚಂದೋಲು ಅವರು, ಇದುವರೆಗೆ ಭಾರತದಲ್ಲಿ ಶಿಯೊಮಿ ಬ್ರ್ಯಾಂಡ್‌ನೊಂದಿಗೆ ಪೋಕೋ ಗುರುತಿಸಿಕೊಂಡಿತ್ತು. ಆ ಕಂಪನಿಯ ಒಡಂಬಡಿಕೆಯಲ್ಲಿ 2018ರಲ್ಲಿ ಪೊಕೊ ಎಫ್‌1 ಬಿಡುಗಡೆ ಮಾಡಲಾಗಿತ್ತು. ಈಗ ನಾವು ಶಿಯೊಮಿ ಬ್ರಾಂಡ್‌ನಿಂದ ಹೊರಬಂದಿದ್ದೇವೆ. ಈಗ ಪೋಕೋ ಸ್ವತಂತ್ರ ಸಂಸ್ಥೆಯಾಗಿದೆ ಎಂದು ಹೇಳಿದರು.

ಬಳಕೆದಾರರ ಬೇಡಿಕೆಗೆ ಅನುಗುಣವಾಗಿ ಪೋಕೋ ಎಕ್ಸ್‌2 ಉತ್ಪಾದಿಸಲಾಗಿದೆ. ಇದರಲ್ಲಿ 120 ಎಚ್‌ಝಡ್‌ ಡಿಸ್‌ಪ್ಲೇ, 64 ಎಂಪಿ ಐಎಂಎಕ್ಸ್‌ 686 ಕ್ಯಾಮೆರಾ, ಲಿಕ್ವಿಡ್‌ ಕೂಲ್‌ ತಂತ್ರಜ್ಞಾನವಿದೆ. ಒಟ್ಟಾರೆ 6ಜಿಬಿ+256 ಜಿಬಿ ಸಂಗ್ರಹ ಸಾಮರ್ಥ್ಯ ಹೊಂದಿದೆ. ಇವುಗಳ ಮೂರು ಮಾದರಿಯ ಮೊಬೈಲ್‌ಗಳು ಮಾರುಕಟ್ಟೆಗೆ ಬರಲಿದ್ದು, ಅವುಗಳಿಗೆ . 15,999, 16,999 ಮತ್ತು 19,999 ದರ ನಿಗದಿಪಡಿಸಲಾಗಿದೆ. ನೇರಳೆ, ನೀಲಿ ಹಾಗೂ ಕೆಂಪು ಬಣ್ಣಗಳಲ್ಲಿ ಲಭ್ಯವಿದೆ. ಫೆಬ್ರವರಿ 11ರಂದು ಮಾರುಕಟ್ಟೆಯಲ್ಲಿ ಪೊಕೊ ಎಕ್ಸ್‌2 ಸಿಗಲಿದೆ. ಐಸಿಐಸಿಐ ಕ್ರೆಡಿಟ್‌ ಕಾರ್ಡ್‌ ಮತ್ತು ಇಎಂಐಗೆ ಒಂದು ಸಾವಿರ ಬೆಲೆ ಕಡಿಮೆಯಾಗಲಿದೆ ಎಂದು ಮಾಹಿತಿ ನೀಡಿದರು.

ನೂತನ ಉತ್ಪನ್ನ 120 ಎಚ್‌ಝಡ್‌ ಡಿಸ್‌ಪ್ಲೇ ಹೊಂದಿದ್ದು, ರಿಯಾಲಿಟಿ ಫೆä್ಲೕ ಎಂಜಿನ್‌ ಹೊಂದಿದೆ. ಪೂರ್ಣ ಪ್ರಮಾಣದ ಎಚ್‌ಡಿ ರೆಸಲ್ಯೂಷನ್‌ 2400*1080 ಪಿಕ್ಸೆಲ್‌ ಮತ್ತು 20:9 ಅನುಪಾತವಿದೆ. ಡಿಸ್‌ಪ್ಲೇ ಮತ್ತು ಫೋನ್‌ನ ಹಿಂಭಾಗವು ಕಾರ್ನಿಂಗ್‌ ಗೊರಿಲ್ಲಾ ಗ್ಲಾಸ್‌ 5 ಒಳಗೊಂಡಿದೆ ಎಂದು ಪ್ರಧಾನ ವ್ಯವಸ್ಥಾಪಕರು ಮಾಹಿತಿ ನೀಡಿದರು.

ಪೊಕೊ 2 ಮೊಬೈಲ್‌ನಲ್ಲಿ 8 ಜಿ.ಬಿ., ಎಲ್‌ಪಿಡಿಡಿಆರ್‌1ಎಕ್ಸ್‌ ರಾರ‍ಯಮ್‌, ಯುಎಫ್‌ಎಸ್‌ 2.1 ಸ್ಟೋರೇಜ್‌ ಇದೆ. 245 ಜಿ.ಬಿ.ವರೆಗೂ ಸಂಗ್ರಹ ಸಾಮರ್ಥ್ಯವಿದೆ. ಜೊತೆಗೆ, ಸ್ಟೋರೇಜ್‌ ವಿಸ್ತರಣೆಗೆ ಹೈಬ್ರೀಡ್‌ ಸ್ಲಾಟ್‌ ಸಹ ಹಾಕಬಹುದಾಗಿದೆ ಎಂದು ಅವರು ವಿವರಿಸಿದರು.

Follow Us:
Download App:
  • android
  • ios