ಭಾರತದ ಮಿಡ್-ಪ್ರೀಮಿಯಂ ಸ್ಮಾರ್ಟ್‌ಫೋನ್ ಮಾರುಕಟ್ಟೆ ಬದಲಾಗುತ್ತಿದ್ದು, ಒಪ್ಪೋ ಕೇವಲ ಸ್ಪೆಸಿಫಿಕೇಶನ್‌ಗಳ ಬದಲು ಸಂಪೂರ್ಣ ಅನುಭವದ ಮೇಲೆ ಗಮನಹರಿಸುತ್ತಿದೆ. ಒಪ್ಪೋ ರೇನೋ16 ಸಿರೀಸ್ ಇದಕ್ಕೆ ಉತ್ತಮ ಉದಾಹರಣೆಯಾಗಿದೆ.
ಭಾರತದ ಸ್ಮಾರ್ಟ್‌ಫೋನ್ ಮಾರುಕಟ್ಟೆಯು ಪ್ರೀಮಿಯಂನ ಹೊಸ ಹಂತಕ್ಕೆ ಕಾಲಿಡುತ್ತಿದೆ. ಹೆಚಿನ ಬಳಕೆದಾರರು ಮಿಡ್-ಪ್ರೀಮಿಯಂ (Mid-premium) ವಿಭಾಗಕ್ಕೆ ಅಪ್‌ಗ್ರೇಡ್ ಆಗುತ್ತಿದ್ದು, ಅವರ ನಿರೀಕ್ಷೆಗಳು ಕೇವಲ ವೇಗದ ಪ್ರೊಸೆಸರ್‌ಗಳು ಅಥವಾ ದೊಡ್ಡ ಬ್ಯಾಟರಿಗಳಿಗಷ್ಟೇ ಸೀಮಿತವಾಗಿಲ್ಲ; ಅದಕ್ಕೂ ಮೀರಿದ್ದಾಗಿವೆ. ಇಂದು, ಒಂದು ಪ್ರೀಮಿಯಂ ಸ್ಮಾರ್ಟ್‌ಫೋನ್ ಎಂದರೆ ಅದು ಒದಗಿಸುವ ಅನುಭವಗಳಿಂದ ವ್ಯಾಖ್ಯಾನಿಸಲ್ಪಡುತ್ತದೆ. ಅದು ದೈನಂದಿನ ಜೀವನಕ್ಕೆ ಎಷ್ಟು ಸುಲಭವಾಗಿ ಒಗ್ಗಿಕೊಳ್ಳುತ್ತದೆ, ಕಂಟೆಂಟ್ ಕ್ರಿಯೇಷನ್,ಪ್ರಯಾಣದಲ್ಲಿರುವಾಗ ಕೆಲಸದ ನಿರ್ವಹಣೆ, ವಿವಿಧ ಡಿವೈಸ್‌ಗಳ ನಡುವೆ ಸಂಪರ್ಕದಲ್ಲಿರುವುದು ಅಥವಾ ಜೀವನದ ಅತ್ಯಂತ ಅರ್ಥಪೂರ್ಣ ಕ್ಷಣಗಳನ್ನು ಸೆರೆಹಿಡಿಯುವುದರಲ್ಲಿ ಅದು ಹೇಗೆ ನೆರವಾಗುತ್ತದೆ ಎಂಬುದರ ಮೇಲೆ ನಿರ್ಧಾರವಾಗುತ್ತದೆ.
ಒಪ್ಪೋ (OPPO) ಸಂಸ್ಥೆಯಲ್ಲಿ ಈ ಬದಲಾವಣೆಯು ನಾವೀನ್ಯತೆಯನ್ನು (Innovation) ರೂಪಿಸುವ ವಿಧಾನವನ್ನೇ ತಿದ್ದಿ ಬರೆದಿದೆ. ಕೇವಲ ಪ್ರತ್ಯೇಕ ಫೀಚರ್‌ಗಳನ್ನಷ್ಟೇ (Standalone Features) ಹೊಂದಿರುವ ಉತ್ಪನ್ನಗಳನ್ನು ಅಭಿವೃದ್ಧಿಪಡಿಸುವ ಬದಲು, ಜನರು ಇಂದು ಜೀವಿಸುವ ಶೈಲಿಗೆ ತಕ್ಕಂತೆ ಅರ್ಥಗರ್ಭಿತ, ಉದ್ದೇಶಪೂರ್ವಕ ಮತ್ತು ಸೂಕ್ತವಾದ ಅನುಭವಗಳನ್ನು ಸೃಷ್ಟಿಸುವತ್ತ ಒಪ್ಪೋ ಗಮನ ಹರಿಸುತ್ತದೆ. ಈ ತತ್ವವು ಭಾರತದ ಮಿಡ್-ಪ್ರೀಮಿಯಂ ಸ್ಮಾರ್ಟ್‌ಫೋನ್ ವಿಭಾಗದಲ್ಲಿ ಬ್ರ್ಯಾಂಡ್‌ನ ಪ್ರಯಾಣಕ್ಕೆ ಮಾರ್ಗದರ್ಶನ ನೀಡಿದೆ ಮತ್ತು ಬದಲಾಗುತ್ತಿರುವ ಗ್ರಾಹಕರ ನಿರೀಕ್ಷೆಗಳಿಗೆ ಸ್ಪಂದಿಸುವ ರೀತಿಯನ್ನು ಪ್ರಭಾವಿಸುತ್ತಲೇ ಬಂದಿದೆ.
ಈ ದೃಷ್ಟಿಕೋನಕ್ಕೆ ಒಪ್ಪೋ ರೇನೋ ಸಿರೀಸ್ (OPPO Reno Series) ಅತ್ಯುತ್ತಮ ಉದಾಹರಣೆಯಾಗಿದೆ.
ಪರಿಚಯಗೊಂಡ ದಿನದಿಂದಲೂ, ರೇನೋ ಸಿರೀಸ್ ಪ್ರೀಮಿಯಂ ವಿನ್ಯಾಸ, ಸುಧಾರಿತ ಇಮೇಜಿಂಗ್ ಮತ್ತು ಸರಳ ತಂತ್ರಜ್ಞಾನ ಆಧಾರಿತ ಸಾಫ್ಟ್‌ವೇರ್ ಅನುಭವಗಳನ್ನು ನಿರಂತರವಾಗಿ ಒಟ್ಟುಗೂಡಿಸುತ್ತಾ ಬಂದಿದ್ದು, ಅರ್ಥಪೂರ್ಣ ನಾವೀನ್ಯತೆಯನ್ನು ವ್ಯಾಪಕ ಗ್ರಾಹಕರಿಗೆ ತಲುಪುವಂತೆ ಮಾಡಿದೆ. ಪ್ರತಿಯೊಂದು ಜನರೇಷನ್‌ನಲ್ಲೂ ಈ ಸಿರೀಸ್ ಯೂಸರ್‌ಗಳ ಬದಲಾಗುತ್ತಿರುವ ಜೀವನಶೈಲಿಗೆ ತಕ್ಕಂತೆ ವಿಕಸನಗೊಂಡಿದೆ. ಸ್ಮಾರ್ಟ್‌ಫೋನ್ ಫೋಟೋಗ್ರಫಿ ಮಟ್ಟವನ್ನು ಎತ್ತರಿಸುವುದರಿಂದ ಹಿಡಿದು ದೈನಂದಿನ ಸಂವಹನಗಳನ್ನು ಸರಳಗೊಳಿಸುವ ಚುರುಕಾದ ಸಾಫ್ಟ್‌ವೇರ್ ಅನುಭವಗಳನ್ನು ಪರಿಚಯಿಸುವವರೆಗೆ ತನ್ನ ಕೊಡುಗೆ ನೀಡಿದೆ. ಇತ್ತೀಚಿನ ಒಪ್ಪೋ ರೇನೋ16 ಸಿರೀಸ್ (OPPO Reno16 Series) ಈ ಪರಂಪರೆಯನ್ನು ಮುಂದುವರಿಸಿದ್ದು, ಕಲಾತ್ಮಕ ವಿನ್ಯಾಸ, ಕ್ರಿಯೇಟರ್‌ಗಳ ಅಗತ್ಯಕ್ಕೆ ತಕ್ಕ ಇಮೇಜಿಂಗ್, ಬುದ್ಧಿವಂತ ಸಾಫ್ಟ್‌ವೇರ್ ಮತ್ತು ತಡೆರಹಿತ ಕನೆಕ್ಟಿವಿಟಿಯನ್ನು ಒಟ್ಟುಗೂಡಿಸಿದ ಅನುಭವದಲ್ಲಿ ತಂದಿದೆ.
ಪ್ರೀಮಿಯಂ ಸ್ಮಾರ್ಟ್‌ಫೋನ್ ಅನುಭವದ ಮರು ವ್ಯಾಖ್ಯಾನ
ವರ್ಷಗಳಿಂದ, ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳನ್ನು ಕೇವಲ ತಾಂತ್ರಿಕ ವಿವರಣೆಗಳು (Specifications) ಮತ್ತು ಬೆಲೆಯ ಆಧಾರದ ಮೇಲೆ ವ್ಯಾಖ್ಯಾನಿಸಲಾಗುತ್ತಿತ್ತು. ಆದರೆ ಇಂದು, ಗ್ರಾಹಕರು ತಾವು ಪ್ರತಿದಿನ ಬಳಸುವ ಸಾಧನಗಳಿಂದ ಹೆಚ್ಚಿನದನ್ನು ನಿರೀಕ್ಷಿಸುತ್ತಾರೆ.
ಒಂದು ಸ್ಮಾರ್ಟ್‌ಫೋನ್ ಈಗ ಕ್ಯಾಮೆರಾ, ವರ್ಕ್‌ಸ್ಪೇಸ್, ಎಂಟರ್‌ಟೈನ್‌ಮೆಂಟ್ ಹಬ್ ಮತ್ತು ಪ್ರೊಡಕ್ಷನ್ ಸಂಗಾತಿಯಾಗಿದೆ. ಟ್ರಾವೆಲ್ ವ್ಲಾಗ್ ರೆಕಾರ್ಡ್ ಮಾಡುವುದಾಗಲಿ, ಪ್ರಯಾಣದ ಸಮಯದಲ್ಲಿ ಕೆಲಸ ನಿರ್ವಹಿಸುವುದಾಗಲಿ, ವರ್ಚುವಲ್ ಮೀಟಿಂಗ್‌ಗಳಲ್ಲಿ ಭಾಗವಹಿಸುವುದಾಗಲಿ ಅಥವಾ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಕ್ಷಣಗಳನ್ನು ಹಂಚಿಕೊಳ್ಳುವುದಾಗಲಿ—ತಮ್ಮ ಸಾಧನವು ಪ್ರತಿಯೊಂದು ಸನ್ನಿವೇಶಕ್ಕೂ ಸುಲಭವಾಗಿ ಒಗ್ಗಿಕೊಳ್ಳಬೇಕೆಂದು ಬಳಕೆದಾರರು ಬಯಸುತ್ತಾರೆ.
ಸ್ಮಾರ್ಟ್‌ಫೋನ್‌ನ ಈ ಬದಲಾಗುತ್ತಿರುವ ಪಾತ್ರವು ಒಪ್ಪೋ ನಾವೀನ್ಯತೆ ತರುವ ರೀತಿಯನ್ನೂ ಬದಲಾಯಿಸಿದೆ.
'ಮುಂದೆ ಯಾವ ಫೀಚರ್ ಸೇರಿಸಬಹುದು?' ಎಂದು ಯೋಚಿಸುವ ಬದಲು, ತಂತ್ರಜ್ಞಾನವು ದೈನಂದಿನ ಅನುಭವಗಳನ್ನು ಹೇಗೆ ಸರಳ ಮತ್ತು ಹೆಚ್ಚು ಅರ್ಥಗರ್ಭಿತವಾಗಿ ಮಾಡಬಹುದು ಎಂಬುದರ ಮೇಲೆ ಒಪ್ಪೋ ಗಮನ ಹರಿಸುತ್ತದೆ. ತೊಡಕುಗಳನ್ನು ಕಡಿಮೆ ಮಾಡುವುದು, ತಡೆರಹಿತ ಸಂವಹನಗಳನ್ನು ಸೃಷ್ಟಿಸುವುದು ಮತ್ತು ನಾವೀನ್ಯತೆಯು ದೈನಂದಿನ ಜೀವನದಲ್ಲಿ ಪ್ರಾಯೋಗಿಕ ಮೌಲ್ಯವನ್ನು ನೀಡುವುದನ್ನು ಖಚಿತಪಡಿಸಿಕೊಳ್ಳುವುದಕ್ಕೆ ಇಲ್ಲಿ ಆದ್ಯತೆ ನೀಡಲಾಗುತ್ತದೆ.
ಒಪ್ಪೋ ರೇನೋ16 ಸರಣಿ: ದೈನಂದಿನ ಸೃಜನಶೀಲತೆಗಾಗಿ ನಿರ್ಮಿತ

ಒಪ್ಪೋ ರೇನೋ16 ಸರಣಿಯು ಈ ತತ್ವದ ಇತ್ತೀಚಿನ ಅಭಿವ್ಯಕ್ತಿಯಾಗಿದೆ.
ಪ್ರತಿದಿನ ದೃಶ್ಯ ವಿಷಯಗಳ (Visual Content) ಮೂಲಕ ರಚಿಸುವ, ಹಂಚಿಕೊಳ್ಳುವ ಮತ್ತು ಸಂವಹನ ನಡೆಸುವ ಪೀಳಿಗೆಗಾಗಿ ವಿನ್ಯಾಸಗೊಳಿಸಲಾದ ರೇನೋ16 ಸರಣಿಯು ಪ್ರೀಮಿಯಂ ಕೌಶಲ್ಯ ಮತ್ತು ಬುದ್ಧಿವಂತ ಟೂಲ್ಸ್‌ಗಳನ್ನು ಒಟ್ಟುಗೂಡಿಸುತ್ತದೆ. ಇದು ಶೂಟ್ ಮಾಡುವುದರಿಂದ ಹಿಡಿದು ಎಡಿಟ್ ಮಾಡುವ ಮತ್ತು ಹಂಚಿಕೊಳ್ಳುವವರೆಗಿನ ಕಂಟೆಂಟ್ ಕ್ರಿಯೇಷನ್ ಪ್ರಕ್ರಿಯೆಯನ್ನು ಅತ್ಯಂತ ಸರಳಗೊಳಿಸುತ್ತದೆ.



ಇದರ ಕೇಂದ್ರಭಾಗದಲ್ಲಿ ಪ್ರಬಲವಾದ 50MP ಟ್ರಿಪಲ್ ಕ್ಯಾಮೆರಾ ಸಿಸ್ಟಮ್ ಇದ್ದು, ಇದು ಮೇನ್ ಕ್ಯಾಮೆರಾ, ಟೆಲಿಫೋಟೋ ಕ್ಯಾಮೆರಾ ಮತ್ತು ಆಲ್ಟ್ರಾ-ವೈಡ್ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ. ಇದು ಪೋರ್ಟ್ರೇಟ್‌ಗಳು, ಲ್ಯಾಂಡ್‌ಸ್ಕೇಪ್‌ಗಳು ಮತ್ತು ಸಿನೆಮ್ಯಾಟಿಕ್ 4K HDR ವೀಡಿಯೊಗಳ ನಡುವೆ ಸುಲಭವಾಗಿ ಚೇಂಜ್ ಓವರ್ ಆಗಲು ಯೂಸರ್‌ಗಳಿಗೆ ಅನುವು ಮಾಡಿಕೊಡುತ್ತದೆ. ಇದರೊಂದಿಗೆ ColorOS 16 ಜೋಡಿಯಾಗಿದ್ದು, ಇದು ತಕ್ಷಣದ ವಿಶುವಲ್ ಸ್ಟೋರಿಟೆಲಿಂಗ್‌ಗಾಗಿ 'AI ರಿಮಿಕ್ಸ್ ಕೊಲಾಜ್' (AI Remix Collage), ನೋಟ್‌ಗಳು ಮತ್ತು ಥಿಂಕ್ ಸ್ಮಾರ್ಟ್ ಸಂಘಟನೆಗಾಗಿ 'AI ಮೈಂಡ್ ಸ್ಪೇಸ್' (AI Mind Space) ಮತ್ತು ಒಪ್ಪೋ ಸ್ಮಾರ್ಟ್‌ಫೋನ್‌ಗಳು, ವಿಂಡೋಸ್ ಪಿಸಿ ಹಾಗೂ iOS ಸಾಧನಗಳ ನಡುವೆ ಸುಲಭವಾಗಿ ಫೈಲ್ ಹಂಚಿಕೊಳ್ಳಲು 'O+ ಕನೆಕ್ಟ್' (O+ Connect) ಫೀಚರ್‌ಗಳನ್ನು ಪರಿಚಯಿಸುತ್ತದೆ.
ಇವೆಲ್ಲವೂ ಸೇರಿ, ಕೇವಲ ಕೆಲವು ಟ್ಯಾಪ್‌ಗಳಲ್ಲಿ ದೈನಂದಿನ ಕ್ಷಣಗಳನ್ನು ತಕ್ಷಣ ಹಂಚಿಕೊಳ್ಳಬಹುದಾದ ಕಂಟೆಂಟ್ ಆಗಿ ಪರಿವರ್ತಿಸುತ್ತವೆ. ಉದಾಹರಣೆಗೆ, ಒಬ್ಬ ಕ್ರಿಯೇಟರ್ ಪ್ರಾಡಕ್ಟ್ ಫೋಟೋಗಳನ್ನು ಶೂಟ್ ಮಾಡಿ, 'AI ರಿಮಿಕ್ಸ್ ಕೊಲಾಜ್' ಬಳಸಿ ಅವುಗಳನ್ನು ಕಿರು ರೀಲ್ (Reel) ಆಗಿ ಬದಲಾಯಿಸಬಹುದು ಮತ್ತು ಅಂತಿಮ ಎಡಿಟ್‌ಗಾಗಿ 'O+ ಕನೆಕ್ಟ್' ಮೂಲಕ ಫೈಲ್‌ಗಳನ್ನು ತಕ್ಷಣವೇ ಲ್ಯಾಪ್‌ಟಾಪ್‌ಗೆ ವರ್ಗಾಯಿಸಬಹುದು. ಒಬ್ಬ ಟೂರಿಸ್ಟ್ ಪ್ರಯಾಣದಲ್ಲಿರುವಾಗಲೇ ಸುಂದರವಾದ ಭೂದೃಶ್ಯಗಳು ಮತ್ತು ವಿವರವಾದ ಪೋರ್ಟ್ರೇಟ್‌ಗಳನ್ನು ಸೆರೆಹಿಡಿಯಬಹುದು, ಅದೇ ಸಮಯದಲ್ಲಿ ಪ್ರಯಾಣದ ಯೋಜನೆಗಳು ಮತ್ತು ಆಲೋಚನೆಗಳನ್ನು 'AI ಮೈಂಡ್ ಸ್ಪೇಸ್'ನಲ್ಲಿ ಅಂದವಾಗಿ ಸಂಘಟಿಸಿಡಬಹುದು. ಒಬ್ಬ ಉದ್ಯೋಗಿಯು ಹಗಲಿನಲ್ಲಿ ನೋಟ್‌ಗಳು, ಪ್ರೆಸೆಂಟೇಷನ್ ಮತ್ತು ದಾಖಲೆಗಳನ್ನು ನಿರ್ವಹಿಸಬಹುದು, ನಂತರ ಸಂಜೆ ವೈಯಕ್ತಿಕ ಕ್ಷಣಗಳನ್ನು ಸೆರೆಹಿಡಿಯಲು ಅದೇ ಸಾಧನದಲ್ಲಿ ಸುಲಭವಾಗಿ ಶಿಫ್ಟ್ ಆಗಬಹುದು.
ರೇನೋ16 ಸಿರೀಸ್ ಕೇವಲ ಅದರ ಪ್ರತ್ಯೇಕ ವೈಶಿಷ್ಟ್ಯಗಳಿಂದಷ್ಟೇ ಗುರುತಿಸಿಕೊಳ್ಳುವುದಿಲ್ಲ, ಬದಲಾಗಿ ಆ ವೈಶಿಷ್ಟ್ಯಗಳು ಎಷ್ಟು ನೈಸರ್ಗಿಕವಾಗಿ ಒಟ್ಟಾಗಿ ಕೆಲಸ ಮಾಡುತ್ತವೆ ಎಂಬುದರ ಮೇಲೆ ವ್ಯಾಖ್ಯಾನಿಸಲ್ಪಡುತ್ತದೆ. ಇದು ಇಮೇಜಿಂಗ್, ಬುದ್ಧಿವಂತಿಕೆ ಮತ್ತು ಕನೆಕ್ಟಿವಿಟಿಯನ್ನು ಒಂದೇ ತಡೆರಹಿತ ಅನುಭವದಲ್ಲಿ ತರುತ್ತದೆ. ಯೂಸರ್‌ಗಳ ದಿನನಿತ್ಯದ ಪ್ರತಿಯೊಂದು ಅಗತ್ಯಕ್ಕೂ ತಕ್ಕಂತೆ ಚಲಿಸಲು ಇದನ್ನು ನಿರ್ಮಿಸಲಾಗಿದೆ.
ಭಾರತದ ಮಿಡ್-ಪ್ರೀಮಿಯಂ ವಿಭಾಗದ ಭವಿಷ್ಯವನ್ನು ರೂಪಿಸುತ್ತಿದೆ
ಗ್ರಾಹಕರ ನಿರೀಕ್ಷೆಗಳು ನಿರಂತರವಾಗಿ ವಿಕಸನಗೊಳ್ಳುತ್ತಿರುವುದರಿಂದ ಭಾರತದ ಮಿಡ್-ಪ್ರೀಮಿಯಂ ಸ್ಮಾರ್ಟ್‌ಫೋನ್ ವಿಭಾಗವು ಸಹ ಬೆಳೆಯುತ್ತಿದೆ. ಜನರು ಇನ್ನು ಮುಂದೆ ಉತ್ತಮ ತಾಂತ್ರಿಕ ಸ್ಪೆಸಿಫಿಕೇಶನ್‌ನಿಂದಾಗಿ ಮಾತ್ರ ಅಪ್‌ಗ್ರೇಡ್ ಆಗುತ್ತಿಲ್ಲ. ಅವರು ತಾವು ಜೀವಿಸುವ, ಕೆಲಸ ಮಾಡುವ ಮತ್ತು ಸೃಷ್ಟಿಸುವ ಶೈಲಿಗೆ ನೈಸರ್ಗಿಕವಾಗಿ ಹೊಂದುವ ಸಾಧನಗಳನ್ನು ಹುಡುಕುತ್ತಿದ್ದಾರೆ.
ಒಪ್ಪೋಗೆ ಇದು ಪ್ರೀಮಿಯಂ ಎಂದರೆ ಏನು ಎಂಬುದನ್ನು ಮರುವ್ಯಾಖ್ಯಾನಿಸಲು ಒಂದು ಅವಕಾಶವಾಗಿದೆ.
ರೇನೋ ಸಿರೀಸ್ ಅರ್ಥಪೂರ್ಣ ನಾವೀನ್ಯತೆಯನ್ನು ಹೆಚ್ಚು ಜನರಿಗೆ ತಲುಪಿಸುವ ಒಪ್ಪೋದ ಬದ್ಧತೆಯನ್ನು ಸತತವಾಗಿ ಪ್ರತಿಬಿಂಬಿಸುತ್ತಾ ಬಂದಿದೆ. ಪ್ರಸ್ತುತ ರೇನೋ16 ಸರಣಿಯು ಪ್ರೀಮಿಯಂ ವಿನ್ಯಾಸ, ಸುಧಾರಿತ ಇಮೇಜಿಂಗ್, ಚಿಂತನಶೀಲ ಸಾಫ್ಟ್‌ವೇರ್ ಮತ್ತು ಸಂಪರ್ಕಿತ ಈಕೋಸಿಸ್ಟಮ್ ಅನ್ನು ಒಂದೇ ತಡೆರಹಿತ ಅನುಭವದಲ್ಲಿ ತರುವ ಮೂಲಕ ಆ ಬಲವಾದ ಅಡಿಪಾಯವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುತ್ತಿದೆ.
