ಹೆಸರೇ ಹೇಳುವಂತೆ ಇದು ನಾರ್ಡ್‌ ಸಿಇ 5ಜಿಯ ಲೈಟರ್‌ ವರ್ಷನ್‌. ಬೆಲೆಯೂ ಲೈಟೇ- .19,999. ಇದರಿಂದಾಗಿ ಎಂಟ್ರಿ ಲೆವೆಲ್‌ ಫೋನ್‌ ಕೊಳ್ಳುವವರು ಒಂಚೂರು ಹೆಚ್ಚಿನ ಬೆಲೆಗೆ ವನ್‌ಪ್ಲಸ್‌ನಂಥ ಜನಪ್ರಿಯ ಬ್ರಾಂಡ್‌ನ ಫೋನನ್ನೇ ಕೊಳ್ಳುವಂತಾಗಿದೆ.

ಅದು ಕೋವಿಡ್‌ ಪರಿಣಾಮವೋ ಅಥವಾ ಕಂಪೆನಿಯ ನಿರ್ಧಾರವೋ ಹೇಳಲಾಗದು. ಗ್ರಾಹಕರ ಕೊಳ್ಳುವ ಕ್ರಮ ಬದಲಾಗಿದ್ದರ ಸೂಚನೆ ಇದ್ದರೂ ಇದ್ದೀತು. ಮಾರುಕಟ್ಟೆಗೆ ಕಾಲಿಡುವಾಗ ಪ್ರೀಮಿಯಮ್‌ ಬ್ರಾಂಡ್‌ ಎಂದೇ ಹೆಸರಾಗಿದ್ದ ವನ್‌ ಪ್ಲಸ್‌ ಇದ್ದಕ್ಕಿದ್ದಂತೆ ಕಳೆದ ಮೂರು ವರ್ಷಗಳಿಂದ ನಾರ್ಡ್‌ ಎಂಬ ಹೊಸ ವರ್ಷನ್ನಿನ ಜತೆಗೆ ಮಾರುಕಟ್ಟೆಗೆ ಬಂತು. ಅದರಲ್ಲೇ ಸುಧಾರಿತ ತಳಿಗಳೂ ಅಗ್ಗದ ಮಾಡೆಲ್‌ಗಳೂ ಬಂದವು. ಕೆಲವೇ ತಿಂಗಳುಗಳ ಹಿಂದೆ ನಾರ್ಡ್‌ ಸಿಇ 5ಜಿ ಬಂತು. ಅದರ ಕುರಿತ ಪರಿಚಯವನ್ನು ನೀವಿಲ್ಲಿ ಓದಿರುತ್ತೀರಿ.

ಅದರ ಬಿಸಿ ಆರುವ ಮೊದಲೇ ವನ್‌ಪ್ಲಸ್‌ ನಾರ್ಡ್‌ ಸಿಇ 5ಜಿ ಲೈಟ್‌ ಎಂಬ ಮತ್ತಷ್ಟುಕಡಿಮೆ ಬೆಲೆಯ ಫೋನನ್ನು ಮಾರುಕಟ್ಟೆಗೆ ತಂದಿದೆ. ಹೆಸರೇ ಹೇಳುವಂತೆ ಇದು ನಾರ್ಡ್‌ ಸಿಇ 5ಜಿಯ ಲೈಟರ್‌ ವರ್ಷನ್‌. ಬೆಲೆಯೂ ಲೈಟೇ- .19,999. ಇದರಿಂದಾಗಿ ಎಂಟ್ರಿ ಲೆವೆಲ್‌ ಫೋನ್‌ ಕೊಳ್ಳುವವರು ಒಂಚೂರು ಹೆಚ್ಚಿನ ಬೆಲೆಗೆ ವನ್‌ಪ್ಲಸ್‌ನಂಥ ಜನಪ್ರಿಯ ಬ್ರಾಂಡ್‌ನ ಫೋನನ್ನೇ ಕೊಳ್ಳುವಂತಾಗಿದೆ. ಹೀಗಾಗಿಯೇ ಇದನ್ನು ಕಿಲ್ಲರ್‌ ಬ್ರಾಂಡ್‌ ಅಂತಲೂ ಕರೆಯಬಹುದು. ಎದುರಾಳಿಗಳು ಇಪ್ಪತ್ತು ಸಾವಿರದ ಆಸುಪಾಸಲ್ಲಿ ಯಾವ ಫೋನ್‌ ಬಿಟ್ಟರೂ ಇದರ ಮುಂದೆ ಸೋಲೊಪ್ಪಿಕೊಳ್ಳಲೇಬೇಕು. ಅದು ತಂತ್ರ.

ಇದು ಲೈಟರ್‌ ವರ್ಷನ್‌ ಆದ ಮಾತ್ರಕ್ಕೆ ಮೊದಲನೆಯದ್ದರಷ್ಟುಚೆನ್ನಾಗಿಲ್ಲ ಅಂತ ಭಾವಿಸಬಾರದು. ಕೆಲವೊಂದಷ್ಟುಅಂಶಗಳು ನಾರ್ಡ್‌ ಸಿಇಗಿಂತಲೂ ಚೆನ್ನಾಗಿವೆ. ಬ್ಲೂಟೈಡ್‌ ಮತ್ತು ಬ್ಲಾಕ್‌ ಡಸ್‌್ಕ ಎಂಬ ಎರಡು ಕಲರ್‌ಗಳಲ್ಲಿ ಫೋನು ಲಭ್ಯ. ಬಣ್ಣದಿಂದಾಗಿ ಇದು ವನ್‌ಪ್ಲಸ್‌ ಗುಂಪಿಗೆ ಸೇರಿದ್ದು ಅಂತ ಹೇಳಬಹುದಾದರೂ ಫೋನ್‌ ಆಕಾರ ನೋಡಿದಾಗ ರಿಯಲ್‌ಮಿ ಅಥವಾ ವಿವೋ ಇರಬಹುದೇನೋ ಅನ್ನಿಸುವಂತಿದೆ. ಹಿಂಬದಿಯಲ್ಲಿ ಕಂಡೂ ಕಾಣದಂತೆ ವನ್‌ಪ್ಲಸ್‌ ಲೋಗೋ ಇದೆ.

OnePlus Nord 2T ಮೇ 19 ರಂದು ಬಿಡುಗಡೆ: ನಿರೀಕ್ಷಿತ ಬೆಲೆ, ಫೀಚರ್‌ಗಳೇನು?

ಈ ಫೋನಿನ ವಿಶೇಷವೆಂದರೆ 120 ಹರ್ಚ್‌್ಝ ರಿಫ್ರೆಶಿಂಗ್‌ ರೇಟ್‌. ಜತೆಗೇ 5000 ಎಂಎಎಚ್‌ ಬ್ಯಾಟರಿ, 64 ಮೆಗಾಪಿಕ್ಸೆಲ್‌ ಪ್ರೈಮರಿ ಕೆಮರಾ, 33 ವಾಟ್‌ ಫಾಸ್ಟ್‌ ಚಾರ್ಜರ್‌ ಎಲ್ಲವೂ ಇಲ್ಲುಂಟು.

ಈ ಫೋನು 6ಜಿಬಿ ಮತ್ತು 8ಜಿಬಿ ವೇರಿಯಂಟ್‌ಗಳಲ್ಲಿ ಲಭ್ಯ. 8ಜಿಬಿ ಬೇಕಿದ್ದರೆ ಎರಡು ಸಾವಿರ ರುಪಾಯಿ ಜಾಸ್ತಿ. ಫೋನಿಗೆ ಬೇಕಾದ ಅಂದಚಂದ, ವೇಗ ಎಲ್ಲವೂ ಇದೆ. ಬ್ಯಾಟರಿ ಬೇಗ ಖಾಲಿಯಾಗುವುದಿಲ್ಲ, ಗೇಮಿಂಗ್‌ ಮೋಡ್‌ನಲ್ಲಿದ್ದರೂ ಬಿಸಿಯಾಗುವುದಿಲ್ಲ. ಹೀಗಾಗಿ ಗೇಮ್‌ ಪ್ರಿಯರಿಗೆ ಇದು ಹೇಳಿ ಮಾಡಿಸಿದ ಆಯ್ಕೆ.

OnePlus Nord Buds

ಹೊಸ OnePlus Nord Buds ರೂ. 2,799 ಬೆಲೆಯಲ್ಲಿ ಬಿಡುಗಡೆಯಾಗಿದೆ. ಬಡ್ಸ್ ಬ್ಲ್ಯಾಕ್ ಸ್ಲೇಟ್ ಮತ್ತು ವೈಟ್ ಮಾರ್ಬಲ್ ಬಣ್ಣ ಆಯ್ಕೆಗಳಲ್ಲಿ ನೀಡಲಾಗುತ್ತದೆ. ಹೊಸ ಒನ್‌ಪ್ಲಸ್ ಇಯರ್‌ಬಡ್‌ಗಳು ಭಾರತದಲ್ಲಿ ಮೇ 10 ರಂದು ಮಧ್ಯಾಹ್ನ 12ಕ್ಕೆ ಕಂಪನಿಯ ವೆಬ್‌ಸೈಟ್, ಅಮೆಝಾನ್‌ ಇಂಡಿಯಾ, ಫ್ಲಿಪ್‌ಕಾರ್ಟ್ ಮತ್ತು ಒನ್‌ಪ್ಲಸ್ ಎಕ್ಸ್‌ಕ್ಲೂಸಿವ್ ಸ್ಟೋರ್‌ಗಳ ಮೂಲಕ ಮಾರಾಟವಾಗಲಿದೆ.

OnePlus Nord CE 2 Lite ಫೋನಿನಲ್ಲಿ 64 ಮೆಗಾಪಿಕ್ಸೆಲ್ ಕ್ಯಾಮೆರಾ!

OnePlus Nord Buds 12.4mm ಟೈಟಾನಿಯಂ ಡ್ರೈವರ್‌ಗಳಿಂದ ಚಾಲಿತವಾಗಿದ್ದು ಅದು 20Hz-20,000Hz ಫ್ರಿಕ್ವೆನ್ಸಿ ರೆಸ್ಪಾನ್ಸ್‌ ರೇಂಜ್ ಹೊಂದಿದೆ ಮತ್ತು ಉತ್ತಮ ಬಾಸ್ ಮತ್ತು ಧ್ವನಿ ಗುಣಮಟ್ಟಕ್ಕಾಗಿ 102dBನ ಡ್ರೈವರ್ ಸೆನ್ಸಿಟಿವಿಟಿಯನ್ನು ಹೊಂದಿದೆ. ಇಯರ್‌ಬಡ್‌ಗಳು IP55-ರೇಟೆಡ್ ವಿನ್ಯಾಸ ಹೊಂದಿದ್ದು ಅದು ಧೂಳು ಮತ್ತು ನೀರು-ನಿರೋಧಕವಾಗಿದೆ ಮತ್ತು ಹಗುರವಾದ ಎರ್ಗಾನಾಮಿಕ್ ವಿನ್ಯಾಸವನ್ನು ಹೊಂದಿದೆ.