Asianet Suvarna News Asianet Suvarna News

4,999 ರೂಪಾಯಿಗೆ Nokia 4ಜಿ ಫೀಚರ್ ಫೋನ್, ವೈಯರ್ಲೆಸ್ ಇಯರ್ಬಡ್ಸ್ ಉಚಿತ!

ನೋಕಿಯಾ 5710 ಎಕ್ಸ್‌ಪ್ರೆಸ್ ಆಡಿಯೊ ಫೀಚರ್ ಫೋನ್ ಬಿಡುಗಡೆಯಾಗಿದೆ. ನೂತನ ಫೋನ್ ಬೆಲೆ  4999 ರೂಪಾಯಿಗೆ ಲಭ್ಯವಿದೆ. ಸ್ವತಃ ಚಾರ್ಜ್ ಆಗುವ ಇನ್-ಬಿಲ್ಟ್ ವೈರ್ಲೆಸ್ ಇಯರ್ಬರ್ಡ್ಸ್ ಉಚಿತವಾಗಿ ಸಿಗಲಿದೆ.

Nokia launch 5710 XpressAudio 4G feature phone with wireless earbuds in India ckm
Author
First Published Sep 13, 2022, 9:09 PM IST

ನವದೆಹಲಿ(ಸೆ.13): ನೋಕಿಯಾ  ಹೊಸ ಫೀಚರ್ ಫೋನ್ ‘ನೋಕಿಯಾ 5710 ಎಕ್ಸ್‌ಪ್ರೆಸ್ ಆಡಿಯೊ’ವನ್ನು (Nokia 5710 XpressAudio ) ಭಾರತದ ಮಾರುಕಟ್ಟೆಗೆ  ಪರಿಚಯಿಸಿದೆ.  ಈ ಹೊಸ 4ಜಿ ಫೀಚರ್ ಫೋನ್  Xpress ಮ್ಯೂಸಿಕ್ ಪರಂಪರೆಯ ಸಂಭ್ರಮಾಚರಣೆ ಮಾಡಲಿದೆ. ಫೋನ್ ಒಳಗೆ ಇರುವ ಮತ್ತು ಸ್ವತಃ ಚಾರ್ಜ್ ಆಗುವ ಇನ್-ಬಿಲ್ಟ್ ವೈರ್ಲೆಸ್ ಇಯರ್ಬರ್ಡ್ಸ್ ಜೊತೆಗೆ ಬರಲಿದೆ. ಧ್ವನಿವರ್ಧಕಗಳು, ಧ್ವನಿ ನಿಯಂತ್ರಣ ಬಟನ್ಗಳು ಮತ್ತು ಯಾವುದೇ ಸಂದರ್ಭದಲ್ಲೂ ತಡೆರಹಿತ ಬಗೆಯಲ್ಲಿ  ಧ್ವನಿ ಆಲಿಸುವ ಸೌಲಭ್ಯ ಒದಗಿಸಲು ದೊಡ್ಡ ಬ್ಯಾಟರಿ ಅನ್ನು ಇದರಲ್ಲಿ ಅಳವಡಿಲಾಗಿದೆ.  ನೋಕಿಯಾ  5710 XpressAudio  ಇಂದಿನಿಂದ ಲಭ್ಯವಿದೆ.  ನೂತನ ಫೋನ್ ಬೆಲೆ  4999 ರೂಪಾಯಿಗೆ ಲಭ್ಯವಿದೆ. ಸೆಪ್ಟೆಂಬರ್  19ರಿಂದ ಎಲ್ಲಾ ಪ್ರಮುಖ ರಿಟೇಲ್ ಮಳಿಗೆಗಳು, ಪಾಲುದಾರ ಆನ್ಲೈನ್ ಮಳಿಗೆಗಳಲ್ಲಿ ದೊರೆಯಲಿದೆ.

200MP ಕ್ಯಾಮೆರಾದೊಂದಿಗೆ Nokia N73 ಲಾಂಚ್? ಐದು ಕ್ಯಾಮೆರಾ ಹೊಂದಿರುವ ಮೊದಲ ಸ್ಮಾರ್ಟ್‌ಫೋನ್?

ನಮ್ಮ ಅಭಿಮಾನಿಗಳಿಂದ ನೋಕಿಯಾ 8210 4ಜಿ ಮತ್ತು  ನೋಕಿಯಾ(Nokia) 2660 ಫ್ಲಿಪ್ಗೆ ದೊರೆತ ಅತ್ಯುತ್ತಮ ಪ್ರತಿಕ್ರಿಯೆಯಿಂದ ನಾವು ಉತ್ಸುಕರಾಗಿದ್ದೇವೆ. ನೋಕಿಯಾ 5710 ಎಕ್ಸ್ಪ್ರೆಸ್ಆಡಿಯೊ ನಮ್ಮ ನೋಕಿಯಾ ಶ್ರೇಷ್ಠ ಉತ್ಪನ್ನಗಳ ಸಾಲಿಗೆ ಹೊಸ ಸೇರ್ಪಡೆಯಾಗಿದೆ. ಈ ಹೊಸ ಫೋನ್ ,ವ್ಯಾಪಕ ಬದಲಾವಣೆಯ ವಿನ್ಯಾಸದ ನೆರವಿನಿಂದ ಧ್ವನಿ ಆಲಿಸುವ ಸ್ವಾತಂತ್ರ್ಯನೀಡಲಿದೆ. ಗ್ರಾಹಕರು ಅತಿ ಹೆಚ್ಚು ಇಷ್ಟಪಟ್ಟಿರುವ  ನೋಕಿಯಾ 5310ದ  ಸೌಲಭ್ಯಗಳನ್ನೆಲ್ಲ ಒಳಗೊಂಡಿದ್ದು, ವೈರ್ಲೆಸ್ ಇಯರ್ಬಡ್ಸ್ಗಳ ಸಂಯೋಜನೆ, ಬ್ಯಾಟರಿ ಬಾಳಿಕೆ ಹೆಚ್ಚಳ, ಧ್ವನಿ ನಿಯಂತ್ರಣದ ಪ್ರತ್ಯೇಕ ಕೀಗಳು  ಮತ್ತು 4ಜಿ ತಂತ್ರಜ್ಞಾನದ ನೆರವಿನಿಂದ ಹೊಸ ಫೋನ್ನ ಆಕರ್ಷಣೆ ಹೆಚ್ಚಿಸಿವೆ. ನೋಕಿಯಾ 5710 ಎಕ್ಸ್ಪ್ರೆಸ್ಆಡಿಯೊ ಸಂಗೀತ ಪ್ರಿಯರಿಗಾಗಿ ಮತ್ತು ದೈನಂದಿನ ಸಂವಹನಕ್ಕಾಗಿ ಫೀಚರ್ ಫೋನ್ಗಳನ್ನೇ ಅವಲಂಬಿಸಿರುವ ವಿಶ್ವದಾದ್ಯಂತ ಇರುವ ಲಕ್ಷಾಂತರ ಗ್ರಾಹಕರಿಗಾಗಿಯೇ ಈ ಫೋನ್ ಅನ್ನು ವಿಶಿಷ್ಟ ಬಗೆಯಲ್ಲಿ ವಿನ್ಯಾಸ ಮಾಡಲಾಗಿದೆ. 2ಜಿ ಮತ್ತು 3ಜಿ ನೆಟ್‌ವರ್ಕ್ ಹಿಂದಿಕ್ಕಿ  4ಜಿ ತಂತ್ರಜ್ಞಾನದ ಪ್ರಯೋಜನ ಪಡೆಯುತ್ತಿರುವ ಗ್ರಾಹಕರ ಅಗತ್ಯಗಳನ್ನೆಲ್ಲ ಈಡೇರಿಸಲೆಂದೇ ಇದರ ವಿನ್ಯಾಸವನ್ನು ವಿಶಿಷ್ಟವಾಗಿ ರೂಪಿಸಲಾಗಿದೆ ಎಂದು ನೋಕಿಯಾ ಫೋನ್‌ ತಯಾರಿಸುವ ಎಚ್ಎಂಡಿ ಗ್ಲೋಬಲ್‌ನ ಭಾರತ ಮತ್ತು ಎಂಇಎನ್ಎ ಉಪಾಧ್ಯಕ್ಷ ಸನ್ಮಿತ್ ಸಿಂಗ್ ಕೊಚ್ಚರ್ ಹೇಳಿದ್ದಾರೆ.

ಬಳಕೆದಾರರು ಫೋನ್ ಸ್ಪೀಕರ್, ಧ್ವನಿವರ್ಧಕ ಅಥವಾ ವೈರ್ಲೆಸ್ ನೋಕಿಯಾ Xpress ಆಡಿಯೊ ಇಯರ್ಬಡ್ಸ್ ಬಳಸುತ್ತಿರಲಿ, ನೋಕಿಯಾ  5710 Xpressಆಡಿಯೊ, ದಿನವಿಡೀ ಧ್ವನಿ ಆಲಿಸುವ ಅಗತ್ಯಗಳನ್ನೆಲ್ಲ ಪೂರೈಸಲಿದೆ. ಸಂಗೀತ ಆಲಿಸಲು ಪ್ರತ್ಯೇಕ  ಬಟನ್ ಪ್ಲೇಬ್ಯಾಕ್ ಅನ್ನು ಸುಲಭಗೊಳಿಸುತ್ತವೆ. ಫೋನ್‌ನಲ್ಲಿಯೇ ಅಂತರ್ನಿರ್ಮಿತ ಎಂಪಿ3 ಪ್ಲೇಯರ್ ನಿಮ್ಮ ಸಾವಿರಾರು ಹಾಡುಗಳನ್ನು ಸಂಗ್ರಹಿಸುತ್ತದೆ3, ಮತ್ತು ವೈರ್ಲೆಸ್ ಎಫ್ಎಂ ರೇಡಿಯೊ ನಿಮ್ಮನ್ನು ಮನೆಯಲ್ಲಿ ಅಥವಾ ಸಂಚಾರದಲ್ಲಿ ಇರುವಾಗ ಮನೋಲ್ಲಾಸ ನೀಡಲಿದ್ದು ಜೊತೆಗೆ ಉತ್ತಮ ಧ್ವನಿಯನ್ನೂ ಹೊರಹೊಮ್ಮಿಸುತ್ತದೆ.

2030ರ ವೇಳೆಗೆ 6G ಆರಂಭ, ಆದರೆ ಸ್ಮಾರ್ಟ್‌ಫೋನ್ಸ್ ಮಾತ್ರ ಇರಲ್ಲ: ನೋಕಿಯಾ ಸಿಇಓ ಹೀಗಂದಿದ್ಯಾಕೆ?

ಫೋನ್‌ನಿಂದ ಬೇರ್ಪಡಿಸಬಹುದಾದ ವೈರ್ಲೆಸ್ ಇಯರ್ಬರ್ಡ್ಸ್ ಹೆಚ್ಚು  ಅನುಕೂಲತೆ ಒದಗಿಸಲಿವೆ. ಅವುಗಳನ್ನು ಬಳಸದ ಸಂದರ್ಭದಲ್ಲಿ  ಫೋನ್ನ ಹಿಂಭಾಗದಲ್ಲಿ ನಯವಾದ ಮತ್ತು ದೃಢವಾದ ಸ್ಲೈಡರ್ನ ಕೆಳಗೆ ಇರಿಸಬಹುದು. ಇದು ಬಳಕೆದಾರರ ಜೇಬಿನಲ್ಲಿ ಹೆಚ್ಚಿನ ಸ್ಥಳಾವಕಾಶ ಒದಗಿಸಲಿದೆ. ಇದು ಬಳಕೆದಾರರು ಇಯರ್ಬಡ್ಸ್ಗಳಿಗಾಗಿ ಹುಡುಕಾಟ ನಡೆಸುವುದನ್ನೂ ತಪ್ಪಿಸಲಿದೆ. ಜೊತೆಗೆ ಸಂಚಾರದಲ್ಲಿ ಇರುವಾಗಲೂ ಅವುಗಳನ್ನು  ಚಾರ್ಜ್ ಮಾಡಲು ಅವಕಾಶ ಒದಗಿಸುತ್ತದೆ. 

ದೃಢತೆ ಮತ್ತು ವಿಶ್ವಾಸಾರ್ಹತೆ
ಶ್ರೇಷ್ಠ ದರ್ಜೆಯ ತಯಾರಿಕೆಯ ಗುಣಮಟ್ಟಕ್ಕೆ ಪೂರಕವಾಗಿ, ನೀವು ಪ್ರತಿ ಬಾರಿಯೂ ನೋಕಿಯಾ 5710 ಎಕ್ಸ್ಪ್ರೆಸ್ಆಡಿಯೊ ಫೋನ್ ಅನ್ನು ಕೈಗೆತ್ತಿಕೊಂಡಾಗ ಅಥವಾ ನಿಮ್ಮ ನೆಚ್ಚಿನ ಗೀತೆ ಆಲಿಸುವಾಗ  ನೀವು ಅತ್ಯುತ್ತಮ ಅನುಭವ ಪಡೆಯಲು ಈ ಫೋನ್ ಮೇಲೆ ಸಂಪೂರ್ಣ ವಿಶ್ವಾಸ ಇರಿಸಬಹುದು. ಹೆಚ್ಚಿನ ಸಾಮರ್ಥ್ಯದ 1450 ಎಂಎಎಚ್ ಬ್ಯಾಟರಿಯು ಗಂಟೆಗಳವರೆಗೆ ಮಾತನಾಡುವ ಮತ್ತು ಹಾಡುಗಳನ್ನು ಆಲಿಸುವ ಅವಕಾಶ ನೀಡುತ್ತದೆ. ವಾರಗಳವರೆಗೆ ಬಳಕೆಗೆ ಫೋನ್ ಲಭ್ಯ ಇರಲಿದೆ. ಸುತ್ತಮುತ್ತಲಿನ ಗೌಜುಗದ್ದಲದ ಸದ್ದು ಅಡಗಿಸುವ ಸೌಲಭ್ಯ ಮತ್ತು ಕರೆಗಳನ್ನು ಬೆಂಬಲಿಸುವ ಗರಿಷ್ಠ ವೇಗದ ನಿಸ್ತಂತು ಸಂವಹನ ಕಲ್ಪಿಸುವ ವೊಲ್ಟೆ (VoLTE) ಸಾಧನದ ನೆರವಿನಿಂದ ವೈರ್ಲೆಸ್ ಇಯರ್ಬಡ್ಸ್ಗಳಲ್ಲಿ ಮೊಬೈಲ್  ಕರೆಗಳ ಗುಣಮಟ್ಟವನ್ನು ಗರಿಷ್ಠ ಮಟ್ಟದಲ್ಲಿ ಸಾಧಿಸಲಾಗುತ್ತದೆ, ಹೀಗಾಗಿ ಜನನಿಬಿಡ ಪ್ರದೇಶದಲ್ಲಿಯೂ ನಿಮ್ಮ ಧ್ವನಿ  ಸ್ಪಷ್ಟವಾಗಿರಲಿದೆ. ಈ ಫೋನ್ ಒಂದು ವರ್ಷದ ಬದಲಿಸುವ ಖಚಿತ ಭರವಸೆಯೊಂದಿಗೆ ಬರುತ್ತದೆ.

ದೀರ್ಘಕಾಲೀನ ಕಾರ್ಯಕ್ಷಮತೆ
ಆಕರ್ಷಕ ವಿನ್ಯಾಸ - ಬಿಳಿ/ಕೆಂಪು ಮತ್ತು ಕಪ್ಪು/ಕೆಂಪು ಬಣ್ಣಗಳ ಸಂಯೋಜನೆಗಳಲ್ಲಿ ಲಭ್ಯ ಇದೆ. ಫೋನ್  ಹಿಡಿತ ಸುಧಾರಿಸುವ ನಿರ್ದಿಷ್ಟ ಉದ್ದೇಶಕ್ಕೆ ದುಂಡನೆಯ ಆಕಾರ ಹೊಂದಿದೆ. ನೋಕಿಯಾ 5710 ಎಕ್ಸ್ಪ್ರೆಸ್ಆಡಿಯೊ–  ಇದು ನಿಖರ  ಬಾಳಿಕೆಯ ಮಾನದಂಡಗಳಿಗೆ ಅನುಗುಣವಾಗಿರುವುದನ್ನು ಖಚಿತಪಡಿಸಿಕೊಳ್ಳಲು ಕಠಿಣ ಪರೀಕ್ಷೆ ನಡೆಸಲಾಗಿದೆ. ಹೀಗಾಗಿ  ಇದು ಸುದೀರ್ಘ ಸಮಯದವರೆಗೆ ನಿರಂತರವಾಗಿ ಕಾರ್ಯನಿರ್ವಹಿಸುತ್ತಲೇ ಇರಲಿದೆ ಮತ್ತು ಉತ್ತಮವಾಗಿಯೂ ಕಾಣಲಿದೆ.
 

Follow Us:
Download App:
  • android
  • ios