Moto G52 ಭಾರತದಲ್ಲಿ ಶೀಘ್ರದಲ್ಲೇ ಬಿಡುಗಡೆ ಸಾಧ್ಯತೆ: ಇಲ್ಲಿದೆ ನಿರೀಕ್ಷಿತ ಬೆಲೆ, ಫೀಚರ್ಸ್‌

Moto G52 ಪಂಚ್-ಹೋಲ್ ಡಿಸ್ಪ್ಲೇ, Qualcomm Snapdragon 680SoC ಜೊತೆಗೆ 4GB RAM, ಟ್ರಿಪಲ್ ಕ್ಯಾಮೆರಾ ಸೆಟಪ್ ಸೇರಿದಂತೆ ಆಸಕ್ತಿದಾಯಕ ವೈಶಿಷ್ಟ್ಯಗಳೊಂದಿಗೆ ಬಿಡುಗಡೆ ಮಾಡಲಾಗಿದೆ.
 

Motorola Moto G52 may launch in India end of April features price specifications mnj

Moto G52 Launch: ಯುರೋಪಿಯನ್ ಮಾರುಕಟ್ಟೆಗಳಲ್ಲಿ Moto G52  ಬಿಡುಗಡೆ ಮಾಡಿದ ಕೆಲವು ದಿನಗಳ ನಂತರ, ಮೊಟೊರೊಲಾ ಭಾರತದಲ್ಲಿ ಇದೇ ಸ್ಮಾರ್ಟ್ಫೋನ್ ಬಿಡುಗಡೆ ಮಾಡಲಿದೆ ಎಂದು ವರದಿಗಳು ತಿಳಿಸಿವೆ. ಹೊಸ ವರದಿಗಳ ಪ್ರಕಾರ, ಈ ತಿಂಗಳ ಅಂತ್ಯದ ವೇಳೆಗೆ Moto G52 ಭಾರತದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.  ಮೊಟೊರೊಲಾ ಇತ್ತೀಚೆಗೆ ಭಾರತದಲ್ಲಿ Moto G22 ಬಜೆಟ್ ವಿಭಾಗದಲ್ಲಿ ಬಿಡುಗಡೆ ಮಾಡಿದೆ ಎಂಬುದ ಉಲ್ಲೇಖನಿಯ. ಇನ್ನು Moto G52 ಕಳೆದ ವರ್ಷ ಭಾರತದಲ್ಲಿ ಅನಾವರಣಗೊಂಡ Moto G51ನ ಉತ್ತರಾಧಿಕಾರಿಯಾಗಿದೆ.

Moto G52 ಈ ತಿಂಗಳಲ್ಲಿ ಭಾರತೀಯ ಮಾರುಕಟ್ಟೆಗಳಿಗೆ ಬಿಡುಗಡೆಯಾಗಲಿದೆ ಎಂದು GSM Arean ವರದಿಯ ತಿಳಿಸಿದೆ. Moto G52 ಒಂದು ಪಂಚ್-ಹೋಲ್ ಡಿಸ್ಪ್ಲೇ, Qualcomm Snapdragon 680SoC ಜೊತೆಗೆ 4GB RAM ಒಳಗೊಂಡಂತೆ ಆಸಕ್ತಿದಾಯಕ ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ಸ್ಮಾರ್ಟ್ಫೋನ್ ಹಿಂಭಾಗದಲ್ಲಿ 50-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಒಳಗೊಂಡ ಟ್ರಿಪಲ್ ಕ್ಯಾಮೆರಾ ಸೆಟಪನ್ನು ಹೊಂದಿದೆ. ಡಿಸ್ಪ್ಲೇ 90hZ ರಿಫ್ರೆಶ್ ದರವನ್ನು ಸಹ ಬೆಂಬಲಿಸುತ್ತದೆ.

Moto G52 ಬೆಲೆ ಮತ್ತು ಲಭ್ಯತೆ: Moto G52 ಏಕೈಕ 4GB + 128GB ಸ್ಟೋರೇಜ್ ರೂಪಾಂತರಕ್ಕಾಗಿ EUR 249 (ಸುಮಾರು ರೂ. 20,600) ಬೆಲೆಯಲ್ಲಿ ಬಿಡುಗಡೆ ಮಾಡಲಾಗಿದೆ. ಚಾರ್ಕೋಲ್ ಗ್ರೇ ಮತ್ತು ಪಾರ್ಸಿಲೀನ್ ವೈಟ್ ಸೇರಿದಂತೆ ಎರಡು ಬಣ್ಣದ ಆಯ್ಕೆಗಳಲ್ಲಿ ಸ್ಮಾರ್ಟ್ಫೋನ್ ನೀಡಲಾಗುತ್ತದೆ.  ಭಾರತದಲ್ಲಿಯೂ ಸ್ಮಾರ್ಟ್‌ಫೋನ್‌ನ ಬೆಲೆ 20,000 ರೂ.ಗಿಂತ ಕಡಿಮೆಯಿರಬಹುದು ಎಂದು ವರದಿಗಳು ಸೂಚಿಸಿವೆ. 

ಇದನ್ನೂ ಓದಿಕ್ವಾಡ್ ರಿಯರ್ ಕ್ಯಾಮೆರಾ, 5,000mAh ಬ್ಯಾಟರಿ: ಅತೀ ಅಗ್ಗದ Moto G22 ಭಾರತದಲ್ಲಿ ಲಾಂಚ್!‌

Moto G52 ಫೀಚರ್ಸ್:‌ Moto G52 90Hz ರಿಫ್ರೆಶ್ ದರಕ್ಕೆ ಬೆಂಬಲದೊಂದಿಗೆ 6.6-ಇಂಚಿನ Full-HD+ AMOLED ಡಿಸ್ಪ್ಲೇಯೊಂದಿಗೆ ಬರುತ್ತದೆ. Moto G52 ಕ್ವಾಲ್‌ಕಾಮ್ ಸ್ನಾಪ್‌ಡ್ರಾಗನ್ 680 SoC ಜೊತೆಗೆ 4GB RAM ಮತ್ತು 128GB ಸಂಗ್ರಹಣೆಯೊಂದಿಗೆ ಚಾಲಿತವಾಗಿದೆ.

ಕ್ಯಾಮೆರಾ ಯಾವುದು?:  Moto G52 ಹಿಂಭಾಗದಲ್ಲಿ ಟ್ರಿಪಲ್ ಕ್ಯಾಮೆರಾ ಸೆಟಪನ್ನು ಒಳಗೊಂಡಿದೆ, ಇದು f/1.8 ಅಪೆರ್ಚರ್‌ನೊಂದಿಗೆ 50-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ, ಜೊತೆಗೆ f/2.2 ಅಪರ್ಚರ್‌ನೊಂದಿಗೆ 8-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್-ಆಂಗಲ್ ಡೆಪ್ತ್ ಸೆನ್ಸಾರ್ ಮತ್ತು . f/2.4 ಅಪೆರ್ಚರ್‌ನೊಂದಿಗೆ 2-ಮೆಗಾಪಿಕ್ಸೆಲ್ ಮ್ಯಾಕ್ರೋ ಸೆನ್ಸರಾ ಒಳಗೊಂಡಿದೆ. ಮುಂಭಾಗದಲ್ಲಿ, ಸೆಲ್ಫಿಗಾಗಿ 16-ಮೆಗಾಪಿಕ್ಸೆಲ್ ಕ್ಯಾಮೆರಾ ಇದೆ.

Moto G52 5,000mAh ಬ್ಯಾಟರಿಯನ್ನು ಹೊಂದಿದೆ ಮತ್ತು 30W ಟರ್ಬೋಪವರ್ ಚಾರ್ಜಿಂಗ್‌ಗೆ ಬೆಂಬಲವನ್ನು ಹೊಂದಿದೆ. ಸ್ಮಾರ್ಟ್ಫೋನ್ IP52 ರೇಟಿಂಗ್  ಹೊಂದಿದ್ದು Dolby Atmos ಬೆಂಬಲದೊಂದಿಗೆ ಬರುತ್ತದೆ.

Moto G51 5G:ಲೆನೋವೋ (Lenevo) ಮಾಲೀಕತ್ವದ ಸ್ಮಾರ್ಟ್‌ಫೋನ್ ಕಂಪನಿ  Moto G51 ಕಳೆದ ವರ್ಷ್‌ ಬಿಡುಗಡೆ ಮಾಡಿತ್ತು. ಇದರ ವೈಶಿಷ್ಟ್ಯಗಳನ್ನು ನೋಡುವುದಾದರೆ  ಡ್ಯುಯಲ್-ಸಿಮ್ (Dual Sim)ಸ್ಮಾರ್ಟಫೋನ್ Android 11 MyUX ರನ್‌ ಆಗುತ್ತದೆ. ಇದು Qualcomm Snapdragon 480 Plus (octa-core) ಪ್ರೊಸೆಸರ್‌ ಹೊಂದಿದ್ದು
4GB RAM ನೊಂದಿಗೆ ಜೋಡಿಸಲಾಗಿದೆ. 

ಇದನ್ನೂ ಓದಿ: OnePlus 10R, Xiaomi 12 Pro: ಏಪ್ರಿಲ್ 2022ರಲ್ಲಿ ಬಿಡುಗಡೆಗೆ ಸಿದ್ಧವಾಗಿವೆ ಈ 5 ಸ್ಮಾರ್ಟ್‌ಫೋನ್ಸ್‌

ಕ್ಯಾಮೆರಾ ವಿಭಾಗದಲ್ಲಿ  Moto G51 5G ಟ್ರಿಪಲ್‌ ಕ್ಯಾಮೆರಾ ಸೆಟಪ್‌ ಹೊಂದಿದ್ದು 50MP ಪ್ರೈಮರಿ ಕ್ಯಾಮೆರಾ 8MP ಅಲ್ಟ್ರಾ-ವೈಡ್ ಹಾಗೂ 2MP ಮ್ಯಾಕ್ರೋ ಕ್ಯಾಮೆರಾ ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಚಾಟ್‌ಗಳಿಗಾಗಿ ಮುಂಭಾದಲ್ಲಿ 13MP ಸೆಲ್ಫೀ ಕ್ಯಾಮೆರಾ ನೀಡಲಾಗಿದೆ. ಸ್ಮಾರ್ಟ್‌ ಫೋನ್ 5,000mAh ಬ್ಯಾಟರಿ ಹೊಂದಿದ್ದು 20W ವೇಗದ ಚಾರ್ಜಿಂಗ್ ಬೆಂಬಲಿಸುತ್ತದೆ

Latest Videos
Follow Us:
Download App:
  • android
  • ios