Motorola Edge 30 ಮೇ 12ರಂದು ಭಾರತದಲ್ಲಿ ಬಿಡುಗಡೆ: ನಿರೀಕ್ಷಿತ ಬೆಲೆ, ಫೀಚರ್‌ಗಳೇನು?

Motorola Edge 30  ಆರಂಭದಲ್ಲಿ ಜಾಗತಿಕವಾಗಿ EUR 449.99 (ಸುಮಾರು ರೂ. 36,300) ಆರಂಭಿಕ ಬೆಲೆಯೊಂದಿಗೆ ಬಿಡುಗಡೆ ಮಾಡಲಾಗಿತ್ತು. 

Motorola Edge 30 India Launch date May 12 expected price specifications mnj

Motorola Edge 30 Launch: ಮೊಟೊರೊಲಾ ಎಡ್ಜ್ 30  ಭಾರತದಲ್ಲಿ ಮೇ 12 ರಂದು ಬಿಡುಗಡೆ ಮಾಡಲಾಗುವುದು ಎಂದು ಕಂಪನಿಯು ಶುಕ್ರವಾರ ಟೀಸರ್ ಮೂಲಕ ಬಹಿರಂಗಪಡಿಸಿದೆ. ಫ್ಲಿಪ್‌ಕಾರ್ಟ್‌ನಲ್ಲಿ ಮೀಸಲಾದ ಮೈಕ್ರೋಸೈಟ್ ಹೊಸ ಮೊಟೊರೊಲಾ ಎಡ್ಜ್ ಸರಣಿಯ ಸ್ಮಾರ್ಟ್‌ಫೋನಿನ ವಿಶೇಷಣಗಳ ಬಗ್ಗೆ ದೇಶದಲ್ಲಿ ಬಿಡುಗಡೆ ಮಾಡುವ ಮೊದಲು ಬಹಿರಂಗಗೊಳಿಸಿದೆ. ಮೊಟೊರೊಲಾ ಎಡ್ಜ್ 30 ಭಾರತದ ರೂಪಾಂತರವು ಮೈಕ್ರೋಸೈಟ್ ಪ್ರಕಾರ ಪೋಲ್ಇಡಿ ಪ್ಯಾನೆಲನ್ನು ( pOLED) ಹೊಂದಿರುತ್ತದೆ. ಕಳೆದ ವಾರ ಏಪ್ರಿಲ್‌ನಲ್ಲಿ ಈ ಸ್ಮಾರ್ಟ್‌ಫೋನ್ ಜಾಗತಿಕ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿತ್ತು. 5G ಹ್ಯಾಂಡ್‌ಸೆಟ್ ಸ್ನಾಪ್‌ಡ್ರಾಗನ್ 778G+ ನಿಂದ ಚಾಲಿತವಾಗಿದೆ. ಇದು 6.5-ಇಂಚಿನ OLED ಡಿಸ್ಪ್ಲೇ ಜೊತೆಗೆ 144Hz ರಿಫ್ರೆಶ್ ದರವನ್ನು ಹೊಂದಿದೆ.

ಟ್ವೀಟ್‌ನಲ್ಲಿ, ಮೊಟೊರೊಲಾ ಇಂಡಿಯಾ ದೇಶದಲ್ಲಿ ಮೊಟೊರೊಲಾ ಎಡ್ಜ್ 30 ರ ಅಧಿಕೃತ ಬಿಡುಗಡೆ ದಿನಾಂಕವನ್ನು ಪ್ರಕಟಿಸಿದೆ. ಸ್ಮಾರ್ಟ್‌ಫೋನನ್ನು ಮೇ 12 ರಂದು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ ಮತ್ತು ಫ್ಲಿಪ್‌ಕಾರ್ಟ್, ರಿಲಯನ್ಸ್ ಡಿಜಿಟಲ್ ಮತ್ತು ಇತರ ಪ್ರಮುಖ ಚಿಲ್ಲರೆ ಅಂಗಡಿಗಳ ಮೂಲಕ ಮಾರಾಟವಾಗಲಿದೆ. 

ಇದನ್ನೂ ಓದಿMotorola Moto G52 ಬಿಡುಗಡೆ; ಕೈಗೆಟುಕುವ ಬೆಲೆ, ಸೂಪರ್ ಫೀಚರ್ಸ್

ಮೊಟೊರೊಲಾದ ಪೋಸ್ಟರ್  "ವಿಶ್ವದ ಅತ್ಯಂತ ತೆಳುವಾದ 5G ಸ್ಮಾರ್ಟ್‌ಫೋನ್" ಎಂಬ  ಕ್ಯಾಪ್ಶನನ್ನು ಹೊಂದಿದೆ. ಫ್ಲಿಪ್‌ಕಾರ್ಟ್ ತನ್ನ ವೆಬ್‌ಸೈಟ್‌ನಲ್ಲಿ ಸ್ಮಾರ್ಟ್‌ಫೋನ್ ಆಗಮನವನ್ನು ತಿಳಿಸಲು ಮಾಡಲು ಮೀಸಲಾದ ಲ್ಯಾಂಡಿಂಗ್ ಪುಟವನ್ನು ರಚಿಸಿದೆ. ಆಸಕ್ತ ಜನರು ವೆಬ್‌ಸೈಟ್‌ನಲ್ಲಿನ "Notify Me" ಬಟನನ್ನು ಕ್ಲಿಕ್ ಮಾಡಬಹುದು ಮತ್ತು ಅದರ ಬಿಡುಗಡೆ ಮತ್ತು ಲಭ್ಯತೆಗೆ ಸಂಬಂಧಿಸಿದ ಮಾಹಿತಿ ಪಡೆಯಬಹುದು. ಆದಾಗ್ಯೂ, ಬಿಡುಗಡೆ ಕಾರ್ಯಕ್ರಮದ ಸಮಯ ಮತ್ತು ಸ್ಮಾರ್ಟ್‌ಫೋನ್‌ನ ಭಾರತದ ಬೆಲೆ ವಿವರಗಳು ಸದ್ಯಕ್ಕೆ ತಿಳಿದಿಲ್ಲ.

ಭಾರತದಲ್ಲಿ Motorola Edge 30 ನಿರೀಕ್ಷಿತ ಬೆಲೆ: Motorola Edge 30 ಯುರೋಪ್ ಮಾರುಕಟ್ಟೆಗಳಲ್ಲಿ ಇತ್ತೀಚಿಗೆ ಬೇಸ್ 8GB RAM + 128GB ಸ್ಟೋರೇಜ್ ರೂಪಾಂತರಕ್ಕಾಗಿ  EUR 449.99 (ಸುಮಾರು ರೂ. 36,300)  ಬೆಲೆಯಲ್ಲಿ ಬಿಡುಗಡೆಯಾಗಿದೆ. ಸಾಧನದ ಭಾರತದ ಬೆಲೆಯು ಯುರೋಪಿಯನ್ ಬೆಲೆಯೊಂದಿಗೆ ಹೊಂದಿಕೆಯಾಗುವ ನಿರೀಕ್ಷೆಯಿದೆ. ಇದು ಅರೋರಾ ಗ್ರೀನ್, ಮೆಟಿಯರ್ ಗ್ರೇ ಮತ್ತು ಸೂಪರ್‌ಮೂನ್ ಸಿಲ್ವರ್ ಬಣ್ಣದ ಆಯ್ಕೆಗಳಲ್ಲಿ ಲಭ್ಯವಿದೆ. ಮತ್ತೊಂದು ಎಡ್ಜ್ ಸರಣಿಯ ಫೋನ್, Motorola Edge 30 Pro ಭಾರತದಲ್ಲಿ ಏಕೈಕ 8GB RAM + 128GB ಸ್ಟೋರೇಜ್ ರೂ.49,999 ಬೆಲೆಯಲ್ಲಿ ಲಭ್ಯವಿದೆ. 

Motorola Edge 30 ಫೀಚರ್ಸ್:‌ ಮೊಟೊರೊಲಾ ಎಡ್ಜ್ 30 ರ ಭಾರತೀಯ ರೂಪಾಂತರವು ಜಾಗತಿಕವಾಗಿ ಬಿಡುಗಡೆ ಮಾಡಲಾದ ಮಾದರಿಯ ಅದೇ ವಿಶೇಷಣಗಳೊಂದಿಗೆ ಬಿಡುಗಡೆಯಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಫ್ಲಿಪ್‌ಕಾರ್ಟ್ ಪಟ್ಟಿಯು ಇದು 5G ಸಂಪರ್ಕವನ್ನು ಮತ್ತು 144Hz ರಿಫ್ರೆಶ್ ದರದೊಂದಿಗೆ ಪೋಲ್ಇಡಿ ಡಿಸ್ಪ್ಲೇಯನ್ನು ಹೊಂದಿರುತ್ತದೆ ಎಂದು ಸೂಚಿಸುತ್ತದೆ. ಮುಂಬರುವ ಮೊಟೊರೊಲಾ ಸ್ಮಾರ್ಟ್‌ಫೋನ್‌ಗೆ  155 ಗ್ರಾಂ ತೂಕ ಮತ್ತು 6.79 ಮಿಮೀ ದಪ್ಪವನ್ನು ಸೂಚಿಸುತ್ತದೆ.

ಇದನ್ನೂ ಓದಿ: ಕ್ವಾಡ್ ರಿಯರ್ ಕ್ಯಾಮೆರಾ, 5,000mAh ಬ್ಯಾಟರಿ: ಅತೀ ಅಗ್ಗದ Moto G22 ಭಾರತದಲ್ಲಿ ಲಾಂಚ್!‌

ಜಾಗತಿಕವಾಗಿ ಬಿಡುಗಡೆಯಾದ ಡ್ಯುಯಲ್-ಸಿಮ್ (ನ್ಯಾನೋ) ಮೊಟೊರೊಲಾ ಎಡ್ಜ್ 30 ಆಂಡ್ರಾಯ್ಡ್ 12-ಆಧಾರಿತ ಮೈ ಯುಎಕ್ಸ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದು 6.7-ಇಂಚಿನ Full-HD+ (1,080x2,400) ಪಿಕ್ಸೆಲ್‌ಗಳ OLED ಡಿಸ್ಪ್ಲೇ ಜೊತೆಗೆ 144Hz ರಿಫ್ರೆಶ್ ದರವನ್ನು ಹೊಂದಿದೆ. 

Motorola Edge 30 ಆಕ್ಟಾ-ಕೋರ್ ಸ್ನಾಪ್‌ಡ್ರಾಗನ್ 778G+ ಪ್ರೊಸೆಸರ್  ಪ್ಯಾಕ್ ಮಾಡುತ್ತದೆ, ಜೊತೆಗೆ 8GB RAM ಹೊಂದಿದೆ. Motorola Edge 30 33W ಟರ್ಬೋಪವರ್ ಚಾರ್ಜಿಂಗ್ ಬೆಂಬಲದೊಂದಿಗೆ 4,020mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ.

ಮೊಟೊರೊಲಾ ಎಡ್ಜ್ 30 50-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾದದೊಂದಿಗೆ ಟ್ರಿಪಲ್ ಹಿಂಬದಿಯ ಕ್ಯಾಮೆರಾ ಸೆಟಪನ್ನು ಹೊಂದಿದೆ. ಕ್ಯಾಮೆರಾ ಘಟಕವು 50-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್-ಆಂಗಲ್ ಕ್ಯಾಮೆರಾ ಮತ್ತು 2-ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರನ್ನು ಸಹ ಒಳಗೊಂಡಿದೆ.

ಇದು ಸೆಲ್ಫಿಗಳು ಮತ್ತು ವೀಡಿಯೊ ಚಾಟ್‌ಗಳಿಗಾಗಿ 32-ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾವನ್ನು ಹೊಂದಿದೆ. ಸ್ಮಾರ್ಟ್ಫೋನ್ 256GB ವರೆಗೆ ಅಂತರ್ಗತ ಸಂಗ್ರಹಣೆಯನ್ನು ಹೊಂದಿದೆ. ಇದು ಬಯೋಮೆಟ್ರಿಕ್ ದೃಢೀಕರಣಕ್ಕಾಗಿ ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸಂವೇದಕವನ್ನು ಹೊಂದಿದೆ.

Latest Videos
Follow Us:
Download App:
  • android
  • ios