ಲೆನೋವೋ ಒಡೆತನದ ಮೋಟೋರೋಲಾ ಕಂಪನಿಯು ಯುರೋಪಿಯನ್ ಮಾರುಕಟ್ಟೆಯಲ್ಲಿ ಮೋಟೋ ಇ30 (Moto E30) ಸ್ಮಾರ್ಟ್‌ಫೋನ್ ಲಾಂಚ್ ಮಾಡಿದೆ. ಭಾರತವು ಸೇರಿದಂತೆ ಇತರ ಮಾರುಕಟ್ಟೆಗಳಲ್ಲಿ ಇತ್ತೀಚೆಗಷ್ಟೇ ಕಂಪನಿಯು ಮೋಟೋ ಇ40(Moto E4) ಲಾಂಚ್ ಮಾಡಿತ್ತು. ಈ ಹೊಸ ಫೋನು ಬಜೆಟ್ ಫೋನ್ ಆಗಿದೆ. ಆದರೆ, ಭಾರತದಲ್ಲಿ ಯಾವಾಗ ಬಿಡುಗಡೆಯಾಗಲಿದೆ ಎಂಬ ಬಗ್ಗೆ ಮಾಹಿತಿ ಇಲ್ಲ.

ಸ್ಮಾರ್ಟ್‌ಫೋನ್ ಉತ್ಪದಾನೆಯ ಪ್ರಮುಖ ಬ್ರ್ಯಾಂಡುಗಳಲ್ಲಿ ಒಂದಾಗಿರುವ ಮೋಟೋರೋಲಾ (Motorola) ಇತ್ತೀಚೆಗಷ್ಟೇ ಮೋಟೋ ಇ40 ಸ್ಮಾರ್ಟ್‌ಫೋನ್ ಲಾಂಚ್ ಮಾಡಿತ್ತು. ಲೆನೋವೋ ಒಡೆತನದ ಈ ಕಂಪನಿ ಇದೀಗ ಮೋಟೋ 330 ಮೂಲಕ ಮಾರುಕಟ್ಟೆಗೆ ಲಗ್ಗೆ ಹಾಕಿದೆ. ಈ ಫೋನು ಯುರೋಪಿಯನ್ ಮಾರುಕಟ್ಟೆಯಲ್ಲಿ ಲಾಂಚ್ ಆಗಿದೆ.

ಮೋಟೋರೋಲಾ ಮೋಟೋ ಇ30 (Moto E30) ಸ್ಮಾರ್ಟ್‌ಫೋನ್ ಭಾರತೀಯ ಮಾರುಕಟ್ಟೆ ಸೇರಿದಂತೆ ಇತರೆ ಮಾರುಕಟ್ಟೆಗಳಿಗೆ ಯಾವಾಗ ಲಾಂಚ್ ಆಗಲಿದೆ ಎಂಬ ಬಗ್ಗೆ ಕಂಪನಿ ಯಾವುದೇ ಮಾಹಿತಿ ನೀಡಿಲ್ಲ. ಮೋಟೋ ಇ40 ಸ್ಮಾರ್ಟ್‌ಫೋನ್ ಭಾರತೀಯ ಮಾರುಕಟ್ಟೆಗೆ ಇತ್ತೀಚೆಗಷ್ಟೇ ಲಾಂಚ್ ಆಗಿತ್ತು.

ಮೋಟೋ ಇ40 ಹೊಂದಿರುವ ವಿಶೇಷತೆಗಳನ್ನು ಮೋಟಿ ಇ30 ಸ್ಮಾರ್ಟ್‌ಫೋನ್ ಹೊಂದಿರುವ ಸಾಧ್ಯತೆ ಇದೆ. ಅಂದರೆ, 6.5 ಇಂಚ್ ಎಚ್‌ಡಿ ಪ್ಲಸ್ ಡಿಸ್‌ಪ್ಲೇ, Unisoc T700 ಪ್ರೊಸೆಸರ್ ಇತ್ಯಾದಿ ಸಂಗತಿಗಳನ್ನು ನೀವ ಕಾಣಬಹುದು. ಈ ಎರಡೂ ಫೋನುಗಳ ಮಧ್ಯೆ ಇರುವ ವ್ಯತ್ಯಾಸ ಎಂದರೆ, ಆಪರೇಟಿಂಗ್ ಸಾಫ್ಟ್‌ವೇರ್ ಆಗಿದೆ. ಅಂದರೆ, ಇ40 ಸ್ಮಾರ್ಟ್‌ಫೋನ್ ಆಂಡ್ರಾಯಡ್ 11 (Android 11) ಒಎಸ್ ಆಧರಿತವಾಗಿದ್ದರೆ, ಈಗ ಬಿಡುಗಡೆಯಾಗಿರುವ ಮೋಟೋ ಇ30 ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ ಗೋ ಎಡಿಷನ್ (Go Edition) ಒಎಸ್ ಆಧಾರಿತವಾಗಿದೆ. ಇನ್ನುಳಿದಂತೆ ಸಾಕಷ್ಟು ಸಾಮ್ಯತೆಗಳನ್ನ ಗುರುತಿಸಬಹುದಾಗಿದೆ. 

ಶೀಘ್ರ ಮೋಟೋರೋಲಾದಿಂದ 3 ಫೀಚರ್ ಫೋನ್; 2000 ರೂ.ಗಿಂತ ಕಡಿಮೆ?

ವಿನ್ಯಾಸದಲ್ಲೂ ಅಂಥ ವ್ಯತ್ಯಾಸಗಳೇನೂ ಮೋಟೋ ಇ30 ವಿನ್ಯಾಸವು ಮೋಟೋ ಇ40 ಸ್ಮಾರ್ಟ್‌ಫೋನ್ ರೀತಿಯಲ್ಲೇ ಇದೆ. ಅಂದ ಹಾಗೆ, ಇದೊಂದು ಬಜೆಟ್ ಫೋನ್ ಎಂದು ಹೇಳಬಹುದು. ಅಂದರೆ, ಪ್ರೀಮಿಯಂ ಫೋನು ಎನಿಸಿಕೊಳ್ಳುವುದಿಲ್ಲ. ಈ ಫೋನು ನಿಮಗೆ 4 ಜಿಬಿ ರಾಮ್ (4GB RAM), ಯುನಿಸೋಕ್ 7000 ಪ್ರೊಸೆಸರ್ ನೊಂದಿಗೆ ಬರುತ್ತದೆ. 

ಯುರೋಪಿಯನ್ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿರುವ ಮೋಟೋ ಇ30 ಸ್ಮಾರ್ಟ್‌ಫೋನ್ ಬೆಲೆಯ ಬಗ್ಗೆ ಹೇಳುವುದಾದರೆ, ಅಂದಾಜು 100 ಯುರೋ ಇದೆ. ಅಂದರೆ, ಭಾರತೀಯ ರೂಪಾಯಿ ಲೆಕ್ಕಾಚಾರದಲ್ಲಿ ಅದು 8570 ರೂಪಾಯಿಯಾಗುತ್ತದೆ. ಅಂದರೆ, ಈ ಬೆಲೆ 2 ಜಿಬಿ ರಾಮ್ ಮತ್ತು 32 ಜಿಬಿ ಸ್ಟೋರೇಜ್ ವೆರಿಯಂಟ್‌ನದ್ದಾಗಿದೆ. ಈ ಸ್ಮಾರ್ಟ್‌ಫೋನ್ ಗ್ರಾಹಕರಿಗೆ ಮಿನರಲ್ ಗ್ರೇ ಮತ್ತು ಡಿಜಿಟಲ್ ಬ್ಲೂ ಬಣ್ಣಗಳ ಆಯ್ಕೆಯಲ್ಲಿ ಸಿಗಲಿದೆ.

ಮೋಟೋರೋಲಾ ಮೋಟಿ ಇ30 ಸ್ಮಾರ್ಟ್‌ಫೋನ್ ಡುಯಲ್ ಸಿಮ್ ಸೌಲಭ್ಯ ಹೊಂದಿದ್ದು ಆಂಡ್ರಾಯ್ಡ್ 11 ಗೋ ಎಡಿಷನ್ ಒಎಸ್ ಆಧರಿತವಾಗಿದೆ. 6.5 ಇಂಚ್ ಎಚ್‌ಡಿ ಪ್ಲಸ್ ಮ್ಯಾಕ್ಸ್ ವಿಷನ್ ಐಪಿಎಸ್ ಡಿಸ್‌ಪ್ಲೇಯನ್ನು ಒಳಗೊಂಡಿದೆ. ಅಕ್ಟಾಕೋರ್ ಯುನಿಸೋಕ್ ಟಿ700 ಪ್ರೊಸೆಸರ್ ಅನ್ನು ಒಳಗೊಂಡಿರುವ ಈ ಫೋನ್ 2 ಜಿಬಿ ರಾಮ್‌ನೊಂದಿಗೆ ಸಂಯೋಜಿತಗೊಂಡಿದೆ.

Deepavali Gift: ಈ 7 ಗ್ಯಾಜೆಟ್ ಕೊಡಬಹುದು, ಜೇಬಿಗೂ ಹೊರೆಯಿಲ್ಲ!

ಇನ್ನು ಮೋಟೋ ಇ30 ಸ್ಮಾರ್ಟ್‌ಫೋನ್ ಕ್ಯಾಮೆರಾ ಬಗ್ಗೆ ಹೇಳುವುದಾದರೆ, ಫೋನಿನ ಹಿಂಭಾಗದಲ್ಲಿ ಕಂಪನಿಯು ಮೂರು ಕ್ಯಾಮೆರಾಗಳ ಸೆಟ್‌ಅಪ್ ನೀಡಿದೆ. ಈ ಪೈಕಿ ಮೊದಲನೆಯ ಕ್ಯಾಮೆರಾ 48 ಮೆಗಾಪಿಕ್ಸೆಲ್ ಕ್ಯಾಮೆರಾ ಆಗಿದ್ದು, ಉಳಿದರೆಡು ಕ್ಯಾಮೆರಾಗಳು, 2 ಮೆಗಾ ಪಿಕ್ಸೆಲ್ ಕ್ಯಾಮೆರಾಗಳಾಗಿವೆ. ಸೆಲ್ಫಿ ಮತ್ತು ವಿಡಿಯೋ ಚಾಟ್‌ಗಳಿಗಾಗಿ ಕಂಪನಿಯು ಮುಂಭಾಗದಲ್ಲಿ 8 ಮೆಗಾ ಪಿಕ್ಸೆಲ್ ಕ್ಯಾಮೆರಾ ಒದಗಿಸಿದೆ.

ಮೋಟೋ ಇ30 ಸ್ಮಾರ್ಟ್‌ಫೋನಿನಲ್ಲಿ 32 ಜಿಬಿ ಸ್ಟೋರೇಜ್ ಇದ್ದು, ಗ್ರಾಹಕರನ್ನು ಈ ಸ್ಟೋರೇಜ್ ಸಾಮರ್ಥ್ಯವನ್ನು ಮೈಕ್ರೋ ಎಸ್‌ಡಿ ಕಾರ್ಡ್ ಮೂಲಕ 1ಟಿಬಿವರೆಗೂ ವಿಸ್ತರಿಸಿಕೊಳ್ಳಬಹುದಾಗಿದೆ. ಕನೆಕ್ಟಿವಿಟಿ ಬಗ್ಗೆ ಹೇಳುವುದಾದರೆ, 4G LTE, Wi-Fi 802, ಬ್ಲೂಟೂಥ್ ವಿ5, ಜಿಪಿಎಸ್, ಯುಎಸ್‌ಬಿ ಟೈಪ್ ಸಿ, 3.5 ಹೆಡ್‌ಫೋನ್ ಜಾಕ್ ಸೇರಿದಂತೆ ಇನ್ನಿತರ ಸೌಲಭ್ಯಗಳಿವೆ. 

ವಾಟ್ಸಾಪ್ ಮೂಲಕ ಪಾವತಿಸಿದರೆ 51 ರೂ. ಕ್ಯಾಶ್‌ಬ್ಯಾಕ್?

ಮೋಟೋರೋಲಾ ಕಂಪನಿಯ ಮೋಟೋ ಇ30 ಫೋನಿನಲ್ಲಿ 5000 ಎಂಎಚ್ ಸಾಮರ್ಥ್ಯದ ಬ್ಯಾಟರಿಯನ್ನು ಒದಗಿಸಿದೆ. ಈ ಬ್ಯಾಟರಿಯು 10 ವ್ಯಾಟ್ ಫಾಸ್ಟ್ ಚಾರ್ಜಿಂಗ್‌ಗೆ ಸಪೋರ್ಟ್ ಮಾಡುತ್ತದೆ. ಒಮ್ಮೆ ಚಾರ್ಜ್ ಮಾಡಿದರೆ ಸುಮಾರು 40 ಗಂಟೆಗಳ ಕಾಲ ಬಾಳಿಕೆ ಬರುತ್ತದೆ ಎಂದು ಕಂಪನಿಯು ಹೇಳಿಕೊಂಡಿದೆ.