Asianet Suvarna News Asianet Suvarna News

Jio New Plan ಡಿಸ್ನಿ + ಹಾಟ್‌ಸ್ಟಾರ್ ಒಂದು ವರ್ಷ ಉಚಿತ, ಹೊಸ ಪ್ಲಾನ್ ಲಾಂಚ್ ಮಾಡಿದ ಜಿಯೋ!

  • ರೂ 499 ರೀಚಾರ್ಜ್ ಮಾಡಿದರೆ ಹತ್ತು ಹಲವು ಪ್ರಯೋಜನ
  • ಡಿಸ್ನಿ+ ಹಾಟ್‌ಸ್ಟಾರ್ ಮೊಬೈಲ್ ವಾರ್ಷಿಕ ಚಂದಾದಾರಿಕೆ
  • ಹೊಸ ಪ್ಲಾನ್ ಲಾಂಚ್ ಮಾಡಿದ ಜಿಯೋ
     
Jio launches New 499 Plan with Complimentary Disney plus Hotstar Mobile Annual Subscription ckm
Author
Bengaluru, First Published Jan 6, 2022, 7:49 PM IST | Last Updated Jan 6, 2022, 7:49 PM IST

ಮುಂಬೈ(ಜ.06):  ಗ್ರಾಹಕರಿಗೆ ಅನ್‌ಲಿಮಿಟೆಡ್ ಡೇಟಾ, ಅನ್‌ಲಿಮಿಟೆಡ್ ಕಾಲ್ ಸೇರಿದಂತೆ ಹಲವು ಉಚಿತ ಯೋಜನೆ ಪ್ರಕಟಿಸಿ ಗ್ರಾಹಕರ ಮನಗೆದ್ದಿರುವ ಜಿಯೋ ಇದೀಗ ಮತ್ತೊಂದು ಉಚಿತ ಪ್ಲಾನ್ ಪರಿಚಯಿಸಿದೆ. ಹೊಸ ರಿಚಾರ್ಚ್ ಪ್ಲಾನ್ ಘೋಷಿಸಿದ್ದು ಒಂದು ವರ್ಷ ಡಿಸ್ನಿ + ಹಾಟ್‌ಸ್ಟಾರ್ ಉಚಿತವಾಗಿ ನೀಡುತ್ತಿದೆ.

ಜಿಯೋ(Reliance Jio) ತನ್ನ ಬಳಕೆದಾರರಿಗೆ ಹೊಸದೊಂದು ರೀಚಾರ್ಜ್ ಪ್ಲಾನ್(recharge plan) ಅನ್ನು ಲಾಂಚ್ ಮಾಡಿದೆ.   ಪ್ರತಿ ಬಾರಿ ತನ್ನ  ಬಳಕೆದಾರರಿಗೆ ಹೆಚ್ಚಿನ ಲಾಭವನ್ನು ಮಾಡಿಕೊಡುವ ರಿಲಯನ್ಸ್ ಮಾಲೀಕತ್ವದ ಜಿಯೋ ಟೆಲಿಕಾಂ ಈ ಬಾರಿ ತನ್ನ ಹೊಸ ರೀಚಾರ್ಜ್ ಪ್ಲಾನ್‌ನೊಂದಿಗೆ ಡಿಸ್ನಿ + ಹಾಟ್‌ಸ್ಟಾರ್ ಮೊಬೈಲ್ ವಾರ್ಷಿಕ ಚಂದದಾರಿಕೆ (annual subscription)  ಯನ್ನು ಉಚಿತವಾಗಿ ನೀಡಲಿದೆ.

5G Launch in India: 13 ಮಹಾನಗರಗಳಲ್ಲಿ 2022ಕ್ಕೆ ಸೇವೆ ಆರಂಭ: 4Gಗಿಂತ 100 % ಹೆಚ್ಚು ವೇಗದ ಇಂಟರ್ನೆಟ್‌!

ಜಿಯೋ ಲಾಂಚ್ ಮಾಡಿರುವ ಹೊಸ ರೂ. Rs 499 ತಿಂಗಳ ರೀಚಾರ್ಜ್ ಪ್ಲಾನ್ ಗ್ರಾಹಕರಿಗೆ ಬಂಪರ್ ಆಫರ್ ಅನ್ನು ನೀಡಲಿದೆ. ಒಂದು ತಿಂಗಳ ಚಂದದಾರಿಕೆಯೊಂದಿಗೆ  ಡಿಸ್ನಿ + ಹಾಟ್‌ಸ್ಟಾರ್ ಮೊಬೈಲ್ ವಾರ್ಷಿಕ ಚಂದದಾರಿಕೆ (ಆನುಯಲ್ ಸಬ್‌ಸ್ಕ್ರಿಪ್ಷನ್)  ಉಚಿತವಾಗಿ ಸಿಗಲಿದೆ.

ಹೊಸ ರೂ. Rs 499 ತಿಂಗಳ ರೀಚಾರ್ಜ್ ಪ್ಲಾನ್:
ಈ ಪ್ಲಾನ್‌ ನಲ್ಲಿ ಜಿಯೋ ಗ್ರಾಹಕರಿಗೆ ಪ್ರತಿ ನಿತ್ಯ ಅತೀ ವೇಗದ 2GB ಡೇಟಾ ದೊರೆಯಲಿದ್ದು, ಅನಿಮಿಯತವಾಗಿ ವಾಯ್ಸ್ ಕರೆಗಳನ್ನು ಮಾಡಬಹುದಾಗಿದೆ. ಇದಲ್ಲದೆ ಪ್ರತಿ ನಿತ್ಯ 100 ಉಚಿತ ಮೇಸೆಜ್ ಗಳನ್ನು ಕಳುಹಿಸಬಹುದಾಗಿದೆ. ಈಗಾಗಲೇ ತಿಳಿಸಿದಂತೆ ಡಿಸ್ನಿ + ಹಾಟ್‌ಸ್ಟಾರ್ ಮೊಬೈಲ್ ವಾರ್ಷಿಕ ಚಂದದಾರಿಕೆ (ಆನುಯಲ್ ಸಬ್‌ಸ್ಕ್ರಿಪ್ಷನ್) ಜೊತೆಯಲ್ಲಿ ಎಲ್ಲಾ ಜಿಯೋ ಆಪ್‌ ಗಳನ್ನು ಉಚಿತವಾಗಿ ಬಳಸಬಹುದು. ಇದಲ್ಲದೆ ಹೊಸದಾಗಿ ಜಿಯೋ ಸಿಮ್ ಕರಿದಿಸುವವರು ಈ ಪ್ಲಾನ್ ಅನ್ನು ರೀಚಾರ್ಜ್ ಮಾಡಿಸಿಕೊಂಡಲ್ಲಿ ಜಿಯೋ ಪ್ರೈಮ್ ಗಾಗಿ ನೀಡಬೇಕಾಗಿದ್ದ 99 ರೂಗಳನ್ನು ಪಾವತಿಸುವ ಅಗತ್ಯವಿಲ್ಲ. ಈ  ರೀಚಾರ್ಜ್ ನೊಂದಿಗೆ ಹೊಸ ಬಳಕೆದಾರರಿಗೆ ಜಿಯೋ ಪ್ರೈಮ್ ಸದಸ್ಯತ್ವ ಉಚಿತವಾಗಿ ದೊರೆಯಲಿದೆ.ಈ ಪ್ಲಾನ್ 28 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ.

Mobile Service cost: ಹೊಸ ವರ್ಷದಲ್ಲಿ ಮೊಬೈಲ್ ಬಳಕೆದಾರರು ಹೆಚ್ಚು ದುಡ್ಡು ಕೊಡಬೇಕಾ?

ರೂ 499 ಪ್ಲಾನ್ :
·56 GB ಡೇಟಾ (2GB/ದಿನದ ಹೈ ಸ್ಪೀಡ್ ಡೇಟಾ, ನಂತರ 64Kbps ನಲ್ಲಿ ಅನಿಯಮಿತ)
·ಅನಿಯಮಿತ ಧ್ವನಿ ಕರೆಗಳು
·ನಿತ್ಯ ಉಚಿತ 100 SMS
·ಡಿಸ್ನಿ+ ಹಾಟ್‌ಸ್ಟಾರ್ ಮೊಬೈಲ್ ವಾರ್ಷಿಕ ಚಂದಾದಾರಿಕೆ
·ಊಚಿತ ಜಿಯೋ ಅಪ್ಲಿಕೇಶನ್ಗಳು
·28 ದಿನಗಳ ವ್ಯಾಲಿಡಿಟಿ

ಗ್ರಾಹಕರಿಗೆ ಅತ್ಯುತ್ತಮ ಸೌಲಭ್ಯ ನೀಡಲು ಜಿಯೋ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ಇತ್ತೀಚೆಗೆ ಸ್ಪೆಕ್ಟ್ರಮ್ ಟ್ರೇಡಿಂಗ್ ಮೂಲಕ ಆಂಧ್ರಪ್ರದೇಶ, ದೆಹಲಿ ಮತ್ತು ಮುಂಬೈ ಸರ್ಕಲ್‌ಗಳಲ್ಲಿನ 800 ಮೆಗಾಹರ್ಟ್ಸ್ ಬ್ಯಾಂಡ್‌ನಲ್ಲಿ ಸ್ಪೆಕ್ಟ್ರಮ್ ಬಳಸುವ ಹಕ್ಕನ್ನು ಪಡೆದುಕೊಳ್ಳಲು ಭಾರ್ತಿ ಏರ್‌ಟೆಲ್ ಲಿಮಿಟೆಡ್‌ನೊಂದಿಗೆ ಖಚಿತವಾದ ಒಪ್ಪಂದ ಮಾಡಿಕೊಂಡಿದೆ. ಈ ಸ್ಪೆಕ್ಟ್ರಮ್ ಅನ್ನು ಬಳಸುವ ಹಕ್ಕಿನ ಒಟ್ಟು ಮೌಲ್ಯ ರೂ. 1,497 ಕೋಟಿಗಳಾಗಿದ್ದು, ಯಾವುದೇ ವಹಿವಾಟು ಸಂಬಂಧಿ ಹೊಂದಾಣಿಕೆಗಳಿಗೆ ಒಳಪಟ್ಟಂತೆ ರೂ. 459 ಕೋಟಿಗಳ ಸಂಬಂಧಿತ ಮುಂದೂಡಲ್ಪಟ್ಟ ಪಾವತಿ ಹೊಣೆಗಾರಿಕೆಯ (deferred payment liability) ಪ್ರಸ್ತುತ ಮೌಲ್ಯವನ್ನೂ ಒಳಗೊಂಡಿದೆ.

ದೇಶದ ಮೂಲೆ ಮೂಲೆಗೂ ಜಿಯೋ ಸಂಪರ್ಕವನ್ನು ವಿಸ್ತರಿಸುತ್ತಿದೆ. ಕರ್ನಾಟಕ ಕುದುರೆಮುಖದ ಅರಣ್ಯದಲ್ಲಿನ ಹಳ್ಳಿಗೆ ಜಿಯೋ ಸಂಪರ್ಕ ಕಲ್ಪಿಸಿದೆ. ಈ ಹಳ್ಳಿಗೆ ಮೊಬೈಲ್ ನೆಟ್‌ವರ್ಕ್ ಒದಗಿಸಿದ ಮೊದಲ ಟೆಲಿಕಾಂ ಜಿಯೋ ಆಗಿದೆ. ಕರ್ನಾಟಕದ ಕುದುರೆಮುಖ ಅರಣ್ಯದೊಳಗೆ ನೆಲೆಸಿರುವ ಜಂಬಳೆ, ಪ್ರಪಂಚದ ಇತರ ಭಾಗಗಳಿಂದ ಮರೆಯಾಗಿರುವ ಒಂದು ಸಣ್ಣ, ಸುಂದರವಾದ ಹಳ್ಳಿಯಾಗಿದೆ.
ಜಿಯೋ ಇತ್ತೀಚೆಗೆ ಜಂಬಳೆಯನ್ನು ಡಿಜಿಟಲ್ ಲೈಫ್‍ಗೆ ಪರಿಚಯಿಸಿದ್ದು, ಸ್ಥಳೀಯ ಕುಟುಂಬಗಳಿಗೆ ಮತ್ತು ಇಡೀ ಸಮುದಾಯಕ್ಕೆ ಮೆರಗು ತಂದಿದೆ. ನೆಟ್‍ವರ್ಕ್ ಲಭ್ಯತೆಯಿಂದಾಗಿ  ತಮ್ಮ ಮಕ್ಕಳು ಪ್ರತಿದಿನ 8 ಕಿಲೋಮೀಟರ್ ದೂರ ಪ್ರಯಾಣಿಸದೆಯೇ ತಮ್ಮ ಶಿಕ್ಷಣವನ್ನು ಮುಂದುವರಿಸಲು ಸಮರ್ಥರಾಗಿದ್ದಾರೆ ಮತ್ತು ಯುವಕರು ಸುರಕ್ಷಿತ ವಾತಾವರಣದಲ್ಲಿ ಮನೆಯಿಂದಲೇ ಕೆಲಸ ಮಾಡಲು ಸಮರ್ಥರಾಗಿದ್ದಾರೆ ಎಂದು ಪೋಷಕರು ಜಿಯೋಗೆ ತಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಿದರು.

Latest Videos
Follow Us:
Download App:
  • android
  • ios