Asianet Suvarna News Asianet Suvarna News

ರೀಚಾರ್ಜ್ ಮಾಡಿ ನಂತರ ಪಾವತಿಸಿ; ಜಿಯೋದಿಂದ ಎಮರ್ಜೆನ್ಸಿ ಡೇಟಾ ಲೋನ್!

  • ಜಿಯೋದಿಂದ ಮತ್ತೊಂದು ಕೊಡುಗೆ ಡೇಟಾ ಲೋನ್
  • ಕೂಡಲೇ ರೀಚಾರ್ಜ್ ಮಾಡಿ ನಂತರ ಪಾವತಿಸುವ ಅವಕಾಶ
  • ಸುಲಭ ಪ್ರಕ್ರಿಯೆ ಮೂಲಕ ಡೇಟಾ ಲೋನ್ ಸೌಲಭ್ಯ
     
Jio launches emergency data loan facility Recharge now pay later ckm
Author
Bengaluru, First Published Jul 4, 2021, 3:18 PM IST | Last Updated Jul 4, 2021, 3:18 PM IST

ನವದೆಹಲಿ, ಜುಲೈ 03: ಕೋಟ್ಯಧಿಪತಿ ಉದ್ಯಮಿ ಮುಕೇಶ್ ಅಂಬಾನಿ ಅವರ ರಿಲಯನ್ಸ್ ಜಿಯೊ ಕಂಪನಿ ಇದೀಗ ತನ್ನ ಬಳಕೆದಾರರಿಗೆ ತಕ್ಷಣವೇ ರೀಚಾರ್ಜ್ ಮಾಡಿ ನಂತರ ಪಾವತಿ ಮಾಡಬಹುದಾದ 'ಎಮರ್ಜೆನ್ಸಿ ಡೇಟಾ ಲೋನ್' ಸೌಲಭ್ಯ ಪರಿಚಯಿಸುತ್ತಿದೆ. ಡೇಟಾ ಟಾಪ್‌ಅಪ್‌ ಅನ್ನು ತಕ್ಷಣವೇ ಖರೀದಿಸುವ ಪರಿಸ್ಥಿತಿಯಲ್ಲಿ,  ಎಲ್ಲ ಬಳಕೆದಾರರೂ ಇರುವುದಿಲ್ಲ ಎಂಬುದು ಭಾರತದ ಕಿರಿಯ, ಆದರೆ ಅತಿದೊಡ್ಡ ಟೆಲಿಕಾಂ ಆಪರೇಟರ್‌ ಆಗಿರುವ ಜಿಯೊಗೆ ತಿಳಿದಿದೆ.

ಗಣೇಶ ಹಬ್ಬಕ್ಕೆ ಜಿಯೋ ಕೂಡುಗೆ ; ಗೂಗಲ್-ಜಿಯೋ ಅಭಿವೃದ್ಧಿಪಡಿಸಿದ ಅಗ್ಗದ ಸ್ಮಾರ್ಟ್‌ಫೋನ್ ಬಿಡುಗಡೆ!.

ಜಿಯೊದ ಬಳಕೆದಾರರು ತಮ್ಮ ಹೈಸ್ಪೀಡ್ ಡೇಟಾದ ಕೋಟಾ ಮುಗಿದು ಹೋದಾಗ, ತಕ್ಷಣವೇ ರಿಜಾರ್ಜ್ ಮಾಡಿಕೊಳ್ಳಲು ಸಾಧ್ಯವಾಗದಿರುವ ಪರಿಸ್ಥಿತಿಯಲ್ಲಿ 'ಈಗಲೇ ರೀಚಾರ್ಜ್ ಮಾಡಿಕೊಳ್ಳಿ ಮತ್ತು ನಂತರ ಪಾವತಿಸಿ' ಅನುಕೂಲತೆಯನ್ನು ತುರ್ತು ಡೇಟಾ ಸಾಲ ಸೌಲಭ್ಯ ಒದಗಿಸುತ್ತದೆ.

ಈ ಸೌಲಭ್ಯದಡಿಯಲ್ಲಿ, ಜಿಯೊ ತನ್ನ ಪ್ರೀಪೇಯ್ಡ್ ಬಳಕೆದಾರರಿಗೆ 1 ಜಿಬಿಯ (ಪ್ರತಿ ಪ್ಯಾಕ್‌ಗೆ ₹11 ಮೌಲ್ಯ) ಐದು ತುರ್ತು ಡೇಟಾವರೆಗಿನ ಸಾಲ ಪಡೆಯಲು ಅವಕಾಶ ನೀಡುತ್ತದೆ. ತುರ್ತು ಡೇಟಾ ಸೌಲಭ್ಯವನ್ನು ಮೈ ಜಿಯೊ ಆಪ್ (MyJio App) ಮೂಲಕ ಪಡೆದುಕೊಳ್ಳಬಹುದಾಗಿದೆ. 'ತುರ್ತು ಡೇಟಾ ಸಾಲ' ಸೌಲಭ್ಯವು, ತನ್ನ ಬಳಕೆದಾರರಿಗೆ ನಿರಂತರ ಮತ್ತು ತಡೆರಹಿತ ಹೈಸ್ಪೀಡ್ ಡೇಟಾ ಬಳಕೆಯ ಅನುಭವವನ್ನು ಪಡೆಯಲು ಜಿಯೊ ನೀಡಿದ ಸರಳ ಮತ್ತು ಅಷ್ಟೇ ಪರಿಣಾಮಕಾರಿ ದಾರಿಯಾಗಿದೆ.

ಗ್ರಾಹಕರ ಅಪೇಕ್ಷೆಗಳಿಗೆ ಅನುಗುಣವಾಗಿ ಮರುರೂಪಿಸಿದ ಉತ್ಪನ್ನಗಳನ್ನು ಆವಿಷ್ಕರಿಸುವಲ್ಲಿ ಮತ್ತು ತಲುಪಿಸುವಲ್ಲಿ ಜಿಯೊ ಯಾವತ್ತೂ ಮುಂಚೂಣಿಯಲ್ಲಿದೆ. ಇತ್ತೀಚೆಗೆ ಜಿಯೊ ತನ್ನ ನೆಟ್‌ವರ್ಕ್‌ನ ಡೇಟಾ ಸಾಮರ್ಥ್ಯ ಮತ್ತು ವೇಗವನ್ನು ಬಹುತೇಕ ದ್ವಿಗುಣಗೊಳಿಸಿಕೊಂಡಿದೆ.

ಟ್ರಾಯ್ ವರದಿ ಪ್ರಕಟ; 4G ಡೌನ್ಲೋಡ್ ವೇಗದಲ್ಲಿ ಜಿಯೋಗೆ ಮೊದಲ ಸ್ಥಾನ!

ಜಿಯೊ ಬಳಕೆದಾರರು ಈಗಾಗಲೇ ಉತ್ತಮ ನೆಟ್‌ವರ್ಕ್ ಸಂಪರ್ಕ ಮತ್ತು ಹೈ ಸ್ಪೀಡ್‌ಗಳನ್ನು ಅನುಭವಿಸಲು ಶುರುಮಾಡಿದ್ದಾರೆ. ಹಲವು ಬಳಕೆದಾರರು ದಿನದಲ್ಲಿ ಬಹುಬೇಗನೇ ತಮ್ಮ ಹೈ ಸ್ಪೀಡ್‌ ಡೇಟಾ ಕೋಟಾವನ್ನು ಬಳಸಿ ಮುಗಿಸಿಬಿಡುತ್ತಾರೆ. ಅವರು ದಿನದ ಉಳಿದ ಸಮಯದಲ್ಲಿ ಹೈ ಸ್ಪೀಡ್‌ ಡೇಟಾ ಬಳಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಎಲ್ಲ ಬಳಕೆದಾರರೂ ತಮ್ಮ ದೈನಂದಿನ ಕೋಟಾ ಖಾಲಿಯಾದ ತಕ್ಷಣವೇ ಹೊಸ ಡೇಟಾ ಟಾಪ್‌–ಅಪ್‌ ಖರೀದಿಸುವ ಪರಿಸ್ಥಿತಿಯಲ್ಲಿ ಇರುವುದಿಲ್ಲ ಎಂದು ಜಿಯೊ ಅರಿತಿದೆ. ಅವರಿಗಾಗಿಯೇ ಈ ಹೊಸ ಸೌಲಭ್ಯವನ್ನು ಪರಿಚಯಿಸಲಾಗುತ್ತಿದೆ.

ಎಮರ್ಜೆನ್ಸಿ ಡೇಟಾ ಲೋನ್ ಸೌಲಭ್ಯ ಪಡೆಯುವುದು ಹೇಗೆ?
1) ಮೈ ಜಿಯೊ (Myjio) ಆಪ್ ಓಪನ್ ಮಾಡಿ. ಪುಟದ ಎಡತುದಿಯಲ್ಲಿರುವ 'ಮೆನು'ಗೆ ಹೋಗಿ.
2) ಮೊಬೈಲ್‌ ಸರ್ವಿಸ್ ಅಡಿಯಲ್ಲಿರುವ 'ಎಮರ್ಜೆನ್ಸಿ ಡೇಟಾ ಲೋನ್' ಆಯ್ಕೆ ಮಾಡಿ.
3) ಎಮರ್ಜೆನ್ಸಿ ಡೇಟಾ ಲೋನ್ ಬ್ಯಾನರ್‌ ಮೇಲಿರುವ 'ಪ್ರೊಸೀಡ್' ಆಯ್ಕೆ ಕ್ಲಿಕ್ ಮಾಡಿ
4) 'ಗೆಟ್ ಎಮರ್ಜೆನ್ಸಿ ಡೇಟಾ' ಆಯ್ಕೆಯನ್ನು ಆಯ್ದುಕೊಳ್ಳಿ
5) 'ಆಕ್ಟೀವ್ ನೌ' ಆಯ್ಕೆಯ ಮೇಲೆ ಕ್ಲಿಕ್ ಮಾಡಿ,
6) ಎಮರ್ಜೆನ್ಸಿ ಡೇಟಾ ಲೋನ್‌ ಸೌಲಭ್ಯ ಆಕ್ಟಿವೇಟ್ ಆಗಿರುತ್ತದೆ.

Latest Videos
Follow Us:
Download App:
  • android
  • ios