Asianet Suvarna News Asianet Suvarna News

ಕರ್ನಾಟಕದಲ್ಲಿ 15 ಮೆಗಾಹರ್ಟ್ಸ್ ತರಂಗಾಂತರ ಅಳವಡಿಕೆ; ಜಿಯೋ ನೆಟ್‌ವರ್ಕ್‌ಗೆ ಮಿಂಚಿನ ವೇಗ!

  • ಹೆಚ್ಚುವರಿ 15 ಮೆಗಾಹರ್ಟ್ಸ್ ತರಂಗಾಂತರ ಅಳವಡಿಸಿದ ಜಿಯೋ
  • ಕರ್ನಾಟಕದ ಬಳಕೆದಾರರಿಗೆ ತಡೆರಹಿತ, ಮಿಂಚಿನ ವೇಗದ ನೆಟ್‌ವರ್ಕ್
  • ಡೇಟಾ, ನೆಟ್‌ವರ್ಕ್ ಸ್ಪೀಡ್‌ನಲ್ಲಿ ಜೀಯೋಗೆ ಅಗ್ರಸ್ಥಾನ
Jio implements additional 15 MHz spectrum across Karnataka to enhance subscriber experience ckm
Author
Bengaluru, First Published May 21, 2021, 6:57 PM IST

ನವದೆಹಲಿ(ಮೇ.21):  ಭಾರತ ಸರ್ಕಾರದ ದೂರಸಂಪರ್ಕ ಇಲಾಖೆ ಇತ್ತೀಚೆಗೆ ನಡೆಸಿದ ತರಂಗಾಂತರ (ಸ್ಪೆಕ್ಟ್ರಂ) ಹರಾಜಿನಲ್ಲಿ ದೇಶಾದ್ಯಂತ ಎಲ್ಲಾ 22 ವಲಯಗಳಲ್ಲಿ ತರಂಗಾಂತರ ಬಳಸುವ ಹಕ್ಕನ್ನು ರಿಲಾಯನ್ಸ್ ಜಿಯೋ ಪಡೆದುಕೊಂಡಿದೆ.  ಪರಿಣಾಣ ಕರ್ನಾಟಕದಲ್ಲಿನ ಜಿಯೋ ಬಳಕೆದಾರರಿಗೆ ಅತ್ಯಧಿಕ ವೇಗದ ನೆಟ್‌ವರ್ಕ್ ಲಭ್ಯವಾಗಲಿದೆ.

4G ಡೌನ್‌ಲೋಡ್ ಸ್ಪೀಡ್: ಮೊದಲ ಸ್ಥಾನದಲ್ಲಿ ರಿಲಯನ್ಸ್ ಜಿಯೋ! 

ಕಂಪನಿಯು ಕ್ರಮವಾಗಿ 850MHZ, 1800MHZ ಮತ್ತು 2300MHZ ಬ್ಯಾಂಡ್‌ಗಳಲ್ಲಿ ತರಂಗಾಂತರಗಳನ್ನು ತನ್ನದಾಗಿಸಿಕೊಂಡಿದೆ. ಕರ್ನಾಟಕದಲ್ಲಿ, ಜಿಯೋ 850MHz ಬ್ಯಾಂಡ್‌ನಲ್ಲಿ ಹೆಚ್ಚುವರಿ 5 MHz, 1800MHz ಬ್ಯಾಂಡ್‌ನಲ್ಲಿ ಹೆಚ್ಚುವರಿಯಾಗಿ 5MHz; ಮತ್ತು 2300 MHz ಬ್ಯಾಂಡ್ ನಲ್ಲಿ ಹೆಚ್ಚುವರಿಯಾಗಿ 10 MHz ಗಳನ್ನು ಪಡೆದುಕೊಂಡಿದೆ. 

ಈ ದಿನದ ತನಕ ಜಿಯೋ, ರಾಜ್ಯಾದ್ಯಂತ ವ್ಯಾಪಿಸಿರುವ ತನ್ನ ಎಲ್ಲ 22,300 ಸೈಟ್‌ಗಳಲ್ಲಿ ಈ ಎಲ್ಲ ಮೂರು ತರಂಗಾಂತರಗಳ ನಿಯೋಜನೆಯೊಂದಿಗೆ ಮುಂದುವರಿದಿದೆ. ಇದರ ಜತೆಗೆ, 850 MHz ನಲ್ಲಿ ಬಳಕೆಗೆ ಲಭ್ಯವಿರುವ ಒಟ್ಟು ಬ್ಯಾಂಡ್‌ವಿಡ್ತ್ ದ್ವಿಗುಣಗೊಳ್ಳಲಿದೆ ಮತ್ತು 2300 MHz ಅನ್ನು ಶೇಕಡಾ 25ರಷ್ಟು ಹೆಚ್ಚಿಸಲಾಗುವುದು. ತರಂಗಾಂತರದಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಏರಿಕೆಯಾಗುವುದರಿಂದ, ಕರ್ನಾಟಕದಲ್ಲಿನ ಸಂಪೂರ್ಣ ಚಂದಾದಾರರಿಗೆ ಹಲವು ಪಟ್ಟು ಉತ್ತಮ ನೆಟ್‌ವರ್ಕ್ ಅನುಭವ ದೊರೆಯಲಿದೆ.  ಅಲ್ಲದೆ ರಾಜ್ಯಾದ್ಯಂತ ಇರುವ ನಿಯೋಜಿತ ನೆಟ್‌ವರ್ಕ್‌ ಸೈಟ್‌ಗಳ ಪೈಕಿ ಜಿಯೋ ರಾಜ್ಯದ ನಾಯಕನಾಗಿ ಮುಂದುವರಿಯಲಿದೆ.

ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡುತ್ತಿದೆ ಜಿಯೋ!

ಈಗಿನ ಸಾಂಕ್ರಾಮಿಕ ರೋಗ, ನಿರ್ಬಂಧಿತ ಸಂಚಾರ ಮತ್ತು ಲಾಕ್‌ಡೌನ್ ಸನ್ನಿವೇಶಗಳನ್ನು ಪರಿಗಣಿಸಿ, ಈ ಸಮಯದಲ್ಲಿ ಎ) ಮನೆಯಿಂದ ಕೆಲಸ ಮಾಡುವ ವೃತ್ತಿಪರರು, ಬಿ) ಆನ್‌ಲೈನ್ ತರಗತಿಗಳಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು, ಸಿ) ಮನೆಯಿಂದಲೇ ನಡೆಸುವ ಉದ್ಯಮಗಳು, ಇವುಗಳ ಜತೆಗೆ ತಮ್ಮ ಚಟುವಟಿಕೆಗಳನ್ನು ಸುರಕ್ಷಿತವಾಗಿ ಮನೆಯಿಂದಲೇ ನಿರ್ವಹಿಸಲು ಸಾಧ್ಯವಾಗುವಂತೆ ಮಾಡುವುದು ಇದರ ಮುಖ್ಯ ಉದ್ದೇಶ.

ಕರ್ನಾಟಕದಲ್ಲಿ ಜಿಯೋ 2.1 ಕೋಟಿಗೂ ಅಧಿಕ ಗ್ರಾಹಕರ ನೆಲೆಯನ್ನು ಹೊಂದಿದೆ. ಮತ್ತಷ್ಟು 4ಜಿ ಟವರ್‌ಗಳ ಬೇಡಿಕೆಯನ್ನು ಈಡೇರಿಸಲು, ಜಿಯೋ ಕರ್ನಾಟಕ 2021ರಲ್ಲಿ ತನ್ನ 4ಜಿ ನೆಟ್‌ವರ್ಕ್ಅನ್ನು ಶೇ 28ರಷ್ಟು ವಿಸ್ತರಿಸಲಿದೆ. ಪ್ರಸ್ತುತ ಜಿಯೋ ರಾಜ್ಯದಲ್ಲಿ 22,300ಕ್ಕಿಂತ ಹೆಚ್ಚು 4ಜಿ ನೆಟ್‌ವರ್ಕ್ ಸ್ಥಳಗಳನ್ನು ಹೊಂದಿದ್ದು, ಇದು ಅತಿ ದೊಡ್ಡ 4ಜಿ ಹೆಜ್ಜೆಗುರುತಾಗಿದೆ. ಕಳೆದ ಒಂದು ವರ್ಷದಲ್ಲಿ ಜಿಯೋದ ವಿಎಲ್‌ಆರ್ ಕೂಡ ಶೇ 9.2ರಷ್ಟು ಹೆಚ್ಚಳವಾಗಿದೆ.

ರಿಲಯನ್ಸ್ ಜಿಯೋ, ಇತ್ತೀಚಿನ ತರಂಗಾಂತರ ಹರಾಜಿನಲ್ಲಿ 20 ವರ್ಷಗಳ ಅವಧಿಗೆ 57,123 ಕೋಟಿ ರೂಪಾಯಿ ವೆಚ್ಚದಲ್ಲಿ 22 ವಲಯಗಳಿಗೆ ಒಟ್ಟು 488.35 MHZ (850 MHZ, 1800 MHZ ಮತ್ತು 2300 MHZ ಒಳಗೊಂಡಂತೆ) ತರಂಗಾಂತರಗಳನ್ನು ಪಡೆದುಕೊಂಡಿದೆ. ಇದರೊಂದಿಗೆ ಜಿಯೋ ತನ್ನ ಹೆಜ್ಜೆಗುರುತನ್ನು ಶೇ 55ರಷ್ಟು ಏರಿಕೆಯೊಂದಿಗೆ ಒಟ್ಟು 1717 MHZಗೆ ಹೆಚ್ಚಿಸಿಕೊಂಡಿದೆ. ಜಿಯೋ ಪ್ರಸ್ತುತ 426 ಮಿಲಿಯನ್ ಗ್ರಾಹಕರನ್ನು ಹೊಂದಿದೆ. ತನ್ನ ವೃದ್ಧಿಸಿದ ತರಂಗಾಂತರ ಹೆಜ್ಜೆಗುರುತಿನೊಂದಿಗೆ ಆರ್‌ಜೆಐಎಲ್, ತನ್ನ ಹಾಲಿ ಬಳಕೆದಾರರಿಗೆ ಸೇವೆ ಒದಗಿಸಲು ನೆಟ್‌ವರ್ಕ್ ಸಾಮರ್ಥ್ಯವನ್ನು ಹೆಚ್ಚಿಸಲಿದೆ. ಈ ವೃದ್ಧಿಯು ಮುಂದೆ 300 ಮಿಲಿಯನ್ ಬಳಕೆದಾರರನ್ನು ಸೇರ್ಪಡೆಗೊಳಿಸುವ ಮೂಲಕ ಡಿಜಿಟಲ್ ಸೇವೆಗಳತ್ತ ಹಾಗೂ 5ಜಿ ಸೇವೆಗಳ ಪರಿವರ್ತನೆಗೆ ಸಾಗಲು ಕೂಡ ನೆರವಾಗಲಿದೆ.

Follow Us:
Download App:
  • android
  • ios