ನವದೆಹಲಿ, (ಜೂನ್.02): ದೇಶದಲ್ಲಿ ಗರಿಷ್ಠ ಸಂಖ್ಯೆಯ ಬಳಕೆದಾರರನ್ನು ಹೊಂದಿರುವ ಹೊಂದಿರುವ ರಿಲಯನ್ಸ್ ಜಿಯೋ, ಜೂನ್ ತಿಂಗಳ ಸ್ಪೇಷಲ್ ರಿಚಾರ್ಜ್ ಪ್ಯಾಕ್ ಆಫರ್ ಪ್ರಕಟಿಸಿದೆ. ಬಳಕೆದಾರರಿಗೆ ಬೆಸ್ಟ್ ಆಫರ್ ನೀಡಲಿದ್ದು ಗರಿಷ್ಠ ಡೇಟಾ ಮತ್ತು ಕರೆ ಪ್ರಯೋಜನದೊಂದಿಗೆ ರಿಲಯನ್ಸ್ ಇತರೆ ಉತ್ಪನ್ನಗಳ ಲಾಭವನ್ನು ರೀಚಾರ್ಜ್ ಮಾಡಿಸಿಕೊಂಡವರು ಪಡೆಯಬಹುದಾಗಿದೆ. ರಿಲಯನ್ಸ್ ಜಿಯೋದ 4X ಆಫರ್ ಬಗ್ಗೆ ಇಲ್ಲಿ ವಿವರವಿದೆ.

 ಜಿಯೋ ತನ್ನ ಬಳಕೆದಾರರಿಗೆ ಹೊಸ ಮಾದರಿಯ ರೀಚಾಜ್ ಆಫರ್ ಗಳನ್ನು ನೀಡಲು ಮುಂದಾಗಿದೆ. ಒಮ್ಮೆ ರೀಚಾರ್ಜ್ ಮಾಡಿಸಿದರೆ ಅದಕ್ಕಿಂತ ನಾಲ್ಕು ಪಟ್ಟು ಲಾಭವನ್ನು ಮಾಡಿಕೊಡಲು ಮುಂದಾಗಿದೆ. ಜಿಯೋ ಬಳಕೆದಾರರು ಜೂನ್‌ನಲ್ಲಿ ರೀಚಾರ್ಜ್ ಮಾಡಿಸಿಕೊಂಡರೆ ರಿಲಯನ್ಸ್ ಡಿಜಿಟಲ್, ಎಜಿಯೊ, ಟ್ರೆಂಡ್ಸ್ ಮತ್ತು ಟ್ರೆಂಡ್ಸ್ ಪಾದರಕ್ಷೆಗಳ ತಲಾ ಒಂದು ರಿಯಾಯಿತಿ ಕೂಪನ್ ಪಡೆಯಲಿದ್ದಾರೆ.

 ಜಿಯೋ ಬಳಕೆದಾರರು ಜೂನ್‌ನಲ್ಲಿ ರೂ.249 ಮತ್ತು ಅದಕ್ಕಿಂತ ಹೆಚ್ಚಿನ ರೀಚಾರ್ಜ್‌ಗಳನ್ನು ಮಾಡಿಸಿಕೊಂಡಲ್ಲಿ 4X ಹೆಚ್ಚು ಲಾಭದ ಈ ಕೊಡುಗೆ ಅನ್ವಯವಾಗುತ್ತದೆ. ಜಿಯೋ ಬಳಕೆದಾರರು ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಲು ಮೈಜಿಯೊ, ಜಿಯೋ.ಕಾಮ್, ಜಿಯೋ ಪೋಸ್‌ಲೈಟ್, ಹತ್ತಿರದ ಜಿಯೋ ಸ್ಟೋರ್, ಫೋನ್‌ಪೇ / ಗೂಗಲ್‌ಪೇ / ಪೇಟಿಎಂ / ಅಮೆಜಾನ್ ಪೇ / ಜಿಯೋಮನಿ ಇತ್ಯಾದಿಗಳಿಂದ ರೀಚಾರ್ಜ್ ಮಾಡಿಕೊಳ್ಳಬಹುದು.

ಯಾರಿಗೆ ಈ ಯೋಜನೆ
ಮೈಜಿಯೋ ಅಪ್ಲಿಕೇಶನ್‌ನಲ್ಲಿ 'ಕೂಪನ್' ವಿಭಾಗದ ಅಡಿಯಲ್ಲಿ ನೀವು ಕೂಪನ್‌ಗಳ ಸ್ಥಿತಿಯನ್ನು ಪರಿಶೀಲಿಸಬಹುದು. ಕೂಪನ್ ಅನ್ನು 72 ಗಂಟೆಗಳ ಒಳಗೆ ಜಮಾ ಮಾಡಲಾಗುತ್ತದೆ. ರೂ. 249 ಮತ್ತು ಅದಕ್ಕಿಂತ ಹೆಚ್ಚಿನ ಯೋಜನೆಯನ್ನು ಯಶಸ್ವಿಯಾಗಿ ರೀಚಾರ್ಜ್ ಮಾಡಿದವರಿಗೆ ಮಾತ್ರ ದೊರೆಯಲಿದೆ.

ಈ ಜಿಯೋ ಹೊಸ ಯೋಜನೆ ಎಲ್ಲಾ ಜಿಯೋ ಬಳಕೆದಾರರಿಗೆ ಲಭ್ಯವಿದೆ, ಈಗಾಗಲೇ ಜಿಯೋ ಬಳಕೆ ಮಾಡುತ್ತಿರುವವರಿಗೆ ಮತ್ತು ಹೊಸದಾಗಿ ಜಿಯೋ ಬಳಕೆಯನ್ನು ಆರಂಭಿಸುವವರಿಗೂ ಈ ಯೋಜನೆ ಲಭ್ಯವಿರಲಿದೆ.

 ಜಿಯೋ ಬಳಕೆದಾರರು ಜೂನ್ 1 ರಿಂದ 2020 ರ ಜೂನ್ 30ರ ವರೆಗೆ ರೀಚಾರ್ಜ್ ಮಾಡಿಸಿಕೊಂಡರೆ ಮಾತ್ರ ಈ ಆಫರ್ ಅನ್ವಯವಾಗುತ್ತದೆ. ಮೈಜಿಯೊದ ಕೂಪನ್ ವಿಭಾಗದಲ್ಲಿ ಕೂಪನ್‌ಗಳು ಲಭ್ಯವಿರುತ್ತವೆ.

ವಿವರ ಈ ಕೆಳಗಿನಂತಿದೆ ನೋಡಿ