ಐಟೆಲ್ ಇತ್ತೀಚಿನ ದಿನಗಳಲ್ಲಿ ಹೊಸ ಫೋನನ್ನು ಮಾರುಕಟ್ಟೆಗೆ ತಂದಿರಲಿಲ್ಲ. ಮಾರುಕಟ್ಟೆಗೆ ದಿನಕ್ಕೊಂದರಂತೆ ಬರುತ್ತಿರುವ ಹೊಸ ಹೊಸ ಮೊಬೈಲುಗಳ ಭರಾಟೆಯಲ್ಲಿ ಹೊಸತನ್ನು ನೀಡುವುದು ಸುಲಭವೂ ಅಲ್ಲ. ಈ ಸವಾಲನ್ನು ಸ್ವೀಕರಿಸಲು ಇದೀಗ ಐಟೆಲ್ ಹೊಸ ಫೋನಿನೊಂದಿಗೆ ಬಂದಿದೆ. 

ಐಟೆಲ್ ಇತ್ತೀಚಿನ ದಿನಗಳಲ್ಲಿ ಹೊಸ ಫೋನನ್ನು ಮಾರುಕಟ್ಟೆಗೆ ತಂದಿರಲಿಲ್ಲ. ಮಾರುಕಟ್ಟೆಗೆ ದಿನಕ್ಕೊಂದರಂತೆ ಬರುತ್ತಿರುವ ಹೊಸ ಹೊಸ ಮೊಬೈಲುಗಳ ಭರಾಟೆಯಲ್ಲಿ ಹೊಸತನ್ನು ನೀಡುವುದು ಸುಲಭವೂ ಅಲ್ಲ. ಈ ಸವಾಲನ್ನು ಸ್ವೀಕರಿಸಲು ಇದೀಗ ಐಟೆಲ್ ಹೊಸ ಫೋನಿನೊಂದಿಗೆ ಬಂದಿದೆ. ಐಟೆಲ್ ಎ955ಜಿ ಹೊಸಕಾಲದ ಫೋನು. 5ಜಿ ಕನೆಕ್ಟಿವಿಟಿಯ ಜತೆಗೇ 5000 ಎಂಎಎಚ್ ಬ್ಯಾಟರಿ, 6.6 ಇಂಚ್ ಡಿಸ್‌ಪ್ಲೇ, 120 ಹರ್ಟ್ಸ್‌ ರಿಫ್ರೆಶ್ ರೇಟ್ ಮತ್ತು 50 ಮೆಗಾಪಿಕ್ಸೆಲ್ ಕ್ಯಾಮರಾದ ಜತೆ ತನ್ನ ಸಮೀಪ ಸ್ಪರ್ಧಿಗಳಿಗೆ ಸವಾಲು ಒಡ್ಡಲು ಸಿದ್ಧವಾಗಿದೆ. 

ಜತೆಗೇ ಫಾಸ್ಟ್ ಚಾರ್ಜಿಂಗ್, ಎಐ ಟೂಲ್‌ಗಳು, 8 ಮೆಗಾ ಪಿಕ್ಸೆಲ್ ಸೆಲ್ಫೀ ಕ್ಯಾಮರಾ ಮತ್ತು ಐಪಿಎಸ್ ಎಲ್‌ಸಿಡಿ ಡಿಸ್‌ಪ್ಲೇ ಇರುವ 128 ಜಿಬಿ ಸ್ಟೋರೇಜಿನ ಫೋನು 4 ಜಿಬಿ ರ್‍ಯಾಮ್‌ ಮತ್ತು 6 ಜಿಬಿ ರ್‍ಯಾಮ್ ಆಯ್ಕೆಯಲ್ಲಿ ದೊರೆಯುತ್ತದೆ. ಇವುಗಳ ಬೆಲೆ ಕ್ರಮವಾಗಿ ರೂ.9599 ಮತ್ತು ರೂ.9999. 4 ಜಿಬಿಯನ್ನು 8 ಜಿಬಿವರೆಗೆ, 6 ಜಿಬಿಯನ್ನು 12 ಜಿಬಿವರೆಗೂ ವಿಸ್ತರಿಸಬಹುದಾದದ್ದು ವಿಶೇಷ. 

ಇದರ ಫಿಂಗರ್‌ಪ್ರಿಂಟ್ ಸೆನ್ಸರ್‌ ಫೋನಿನ ಬದಿಯಲ್ಲಿದೆ. ಪ್ಲಾಸ್ಟಿಕ್ ಬಾಡಿ ಹೊಂದಿರುವ ಫೋನು ಇದು. ಹೆಚ್ಚು ಸೌಕರ್ಯ ನೀಡುವ ಸಲುವಾಗಿ ಐಟೆಲ್ ಸಣ್ಣಪುಟ್ಟ ರಾಜಿ ಮಾಡಿಕೊಂಡು ಈ ಫೋನನ್ನು ಮಾರುಕಟ್ಟೆಗೆ ತಂದಿದೆ. ಉದಾಹರಣೆಗೆ ಫಾಸ್ಟ್ ಚಾರ್ಜರ್ ಇದ್ದರೂ ಅದು 18 ವ್ಯಾಟ್ ಅಷ್ಟೇ. ಹೀಗಾಗಿ ನಿಜಕ್ಕೂ ಅದನ್ನು ಫಾಸ್ಟ್ ಚಾರ್ಜರ್ ಅನ್ನಬಹುದೇ ಗೊತ್ತಿಲ್ಲ. ಬೇರೆ ಫೋನುಗಳಲ್ಲಿ 80 ವ್ಯಾಟ್‌ ಫಾಸ್ಟ್ ಚಾರ್ಜರ್ ಇರುತ್ತದೆ.ಐಟೆಲ್ ಫೋನನ್ನೇ ಯಾಕೆ ಕೊಳ್ಳಬೇಕು ಅನ್ನುವ ಪ್ರಶ್ನೆಗೆ ಐಟೆಲ್ ಸಮರ್ಥವಾಗಿ ಉತ್ತರಿಸಲು ಕೆಲವು ಅಪ್‌ಗ್ರೇಡ್‌ಗಳನ್ನು ಮಾಡಿಕೊಂಡಿದೆ. 

ಮೊಬೈಲ್ ಕಳದುಹೋದರೆ ಚಿಂತೆ ಬೇಡ, CEIR ಮೂಲಕ ಸುಲಭವಾಗಿ ಮರಳಿ ಪಡೆಯಿರಿ

ಉದಾಹರಣೆಗೆ 128 ಜಿಬಿ ಸ್ಟೋರೇಜ್ ಜತೆಗೇ, ಆಂಡ್ರಾಯ್ಡ್ 14, ಮಿಡಿಯಾಟೆಕ್ ಡಿ6300 5ಜಿ ಪ್ರೊಸೆಸರ್, ಸೂಪರ್‌ ಪಾಂಡಾ ಗ್ಲಾಸ್‌ ಡಿಸ್‌ಪ್ಲೇ, ಫೇಸ್ ಅನ್‌ಲಾಕ್, ಧೂಳು ಮತ್ತು ತುಂತುರಿನಿಂದ ರಕ್ಷಣೆ, ಸ್ಕ್ರೀನ್ ಹಾಳಾದರೆ ಒಂದು ಸಲ ಉಚಿತ ರಿಪ್ಲೇಸ್‌ಮೆಂಟ್ ಹೀಗೆ ಕೆಲವು ಅನುಕೂಲಗಳಿವೆ. ಐಟೆಲ್ ಅಷ್ಟಾಗಿ ಅರ್ಬನ್ ಸ್ಯಾವಿ ಫೋನ್ ಅಲ್ಲ. ಆದರೆ 10 ಸಾವಿರ ರೂಪಾಯಿ ಕೆಳಗಿನ ಬಜೆಟ್‌ ಫೋನ್‌. ಹಾಗಾಗಿ ಗ್ರಾಮೀಣ ಪ್ರದೇಶಗಳಲ್ಲಿ ಇದರ ಬಳಕೆ ಹೆಚ್ಚು. ಸಾವಿರಕ್ಕೂ ಹೆಚ್ಚು ಸರ್ವೀಸ್ ಸೆಂಟರ್‌ಗಳನ್ನು ಐಟೆಲ್ ಆರಂಭಿಸುವ ಮೂಲಕ, ಮಾರಾಟದ ನಂತರದ ಸೇವೆಯನ್ನೂ ಬಲಪಡಿಸಿದೆ.