itel A27: Android 11 Go ಆವೃತ್ತಿಯೊಂದಿಗೆ ಕೈಗೆಟುಕುವ ಬೆಲೆಯಲ್ಲಿ ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆ!

itel A27 ಅನ್ನು ಭಾರತದಲ್ಲಿ ಕೈಗೆಟುಕುವ ವಿಭಾಗದಲ್ಲಿ ಶೀಘ್ರದಲ್ಲೇ ಬಿಡುಗಡೆ ಮಾಡಬಹುದು. ಈ ಬಗ್ಗೆ ಹಲವು ಮಾಹಿತಿ ಹೊರಬಿದ್ದಿದ್ದು ಐಟೆಲ್‌ನ ಪ್ರವೇಶ ಮಟ್ಟದ A ಸರಣಿಯಯಲ್ಲಿ ಇದನ್ನು ಪ್ರಾರಂಭಿಸಲಾಗುವುದು ಎಂದು ತಿಳಿದು ಬಂದಿದೆ. 

itel A27 confirmed to launch in India Soon Android 11 Go affordable price mnj

Tech Desk: ಐಟೆಲ್‌ನ ಲೇಟೆಸಾ ಮೊಬೈಲ್ itel A27 ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ. ಈ ಫೋನ್ ಬಗ್ಗೆ ಹಲವು ಮಾಹಿತಿ ಹೊರಬಿದ್ದಿದ್ದು ಐಟೆಲ್‌ನ ಪ್ರವೇಶ ಮಟ್ಟದ A ಸರಣಿಯಯಲ್ಲಿ ಇದನ್ನು ಪ್ರಾರಂಭಿಸಲಾಗುವುದು. ಐಟೆಲ್ ಇಂಡಿಯಾ ತನ್ನ ಅಧಿಕೃತ ಸಾಮಾಜಿಕ ಖಾತೆಯಲ್ಲಿ itel A27 ಬಿಡುಗಡೆಯ ಸುಳಿವು ನೀಡಿದೆ. ಹೊಸ itel A27 ಫೇಸ್ ಅನ್ಲಾಕ್ ಸೇರಿದಂತೆ ದೊಡ್ಡ ಬ್ಯಾಟರಿ ಮತ್ತು ಫಿಂಗರ್ಪ್ರಿಂಟ್ ಸಂವೇದಕವನ್ನು ನೀಡಬಹುದು. ಇದರೊಂದಿಗೆ, ಬಜೆಟ್ ಬಳಕೆದಾರರಿಗೆ ತುಂಬಾ ಇಷ್ಟವಾಗುವಂತಹ ಹಲವು ವೈಶಿಷ್ಟ್ಯಗಳನ್ನು ಇದರಲ್ಲಿ ನೀಡಲಾಗುವುದು ಎಂದು ನಿರೀಕ್ಷಿಸಲಾಗಿದೆ.

itel A27 ಭಾರತದಲ್ಲಿ ಬೆಲೆ ಮತ್ತು ಲಭ್ಯತೆ: itel A27 ಕೈಗೆಟುಕುವ ಬೆಲೆಯಲ್ಲಿ ಫೋನಾಗಿದ್ದು  6,000 ರೂ.ಗಿಂತ ಕಡಿಮೆ ಬೆಲೆಯಲ್ಲಿ ಬಿಡುಗಡೆ ಮಾಡಬಹುದು ಎಂದು ನಿರೀಕ್ಷಸಲಾಗಿದೆ. ಇಲ್ಲಿಯವರೆಗೆ ಕಂಪನಿಯು ಅದರ ಬೆಲೆಯ ಬಗ್ಗೆ ಯಾವುದೇ ಖಚಿತ ಮಾಹಿತಿ ನೀಡಿಲ್ಲ. ಆದರೆ ಶೀಘ್ರದಲ್ಲೇ ಕೈಗೆಟುಕುವ ಬೆಲೆಯ ಜತೆಗೆ ಇತರ ವಿವರವನ್ನು ಕಂಪನಿ ಬಿಡುಗಡೆ ಮಾಡುವ ಸಾಧ್ಯತೆ ಇದೆ. 

itel A27 Specifications: ಹೊಸ itel A27  5.45-ಇಂಚಿನ IPS full screen ಡಿಸ್ಪ್ಲೇಯನ್ನು ಹೊಂದುವ ನಿರೀಕ್ಷೆಯಿದೆ. ಇದರ ಪಿಕ್ಸೆಲ್ ರೆಸಲ್ಯೂಶನ್ 960 x 480 ಆಗಿದೆ. ಇದು Android 11 (ಗೋ ಆವೃತ್ತಿ) ಜೊತೆಗೆ ಬರಬಹುದು. ಇದು 2 GB RAM ಮತ್ತು 32 GB ಸಂಗ್ರಹಣೆಯನ್ನು ನೀಡಬಹುದು. ಇದರೊಂದಿಗೆ ಕಂಪನಿಯು ಒಂದು ಬಾರಿ ಸ್ಕ್ರೀನ್ ರಿಪ್ಲೇಸ್ಮೆಂಟನ್ನು ಒದಗಿಸಬಹುದು ಎಂದು ಹೇಳಲಾಗುತ್ತಿದೆ. ಪ್ರವೇಶ ವಿಭಾಗದ ಫೋನ್‌ಗಳಲ್ಲಿ, ಇದು ಬ್ರ್ಯಾಂಡ್ ನೀಡುತ್ತಿರುವ ದೊಡ್ಡ ಕೊಡುಗಡಯಾಗಿರಲಿದೆ. 

ಐಟೆಲ್ A27 ದೊಡ್ಡ ಬ್ಯಾಟರಿ ಮತ್ತು ಫೇಸ್ ಅನ್‌ಲಾಕ್ ಮತ್ತು ಫಿಂಗರ್‌ಪ್ರಿಂಟ್ ಸೆನ್ಸಾರ್‌ನಂತಹ ಡ್ಯುಯಲ್ ಸೆಕ್ಯುರಿಟಿ ವೈಶಿಷ್ಟ್ಯಗಳೊಂದಿಗೆ ಬರಲಿದೆ ಎಂದು ಹೇಳಲಾಗಿದ್ದು, ಲೀಕ್ ಬಹಿರಂಗಪಡಿಸಿದಂತೆ ಸ್ಪರ್ಧಾತ್ಮಕವಾಗಿ ಬೆಲೆಯಿದ್ದರೆ ಇದು ಬಜೆಟ್‌ ವಿಭಾಗದಲ್ಲಿಅತ್ಯುತ್ತಮ ಫೋನಾಗುವು ಸಾಧ್ಯತೆ ಇದೆ. 

ಕೈಗೆಟುಕುವ ಮೊಬೈಲ್: ಅಲ್ಲದೆ ಐಟೆಲ್ ಕಂಪನಿಯು ಯಾವಾಗಲೂ ತನ್ನ ಗ್ರಾಹಕರಿಗೆ ಕೈಗೆಟುಕುವ ಬೆಲೆಯಲ್ಲಿ ಟ್ರೆಂಡಿ ಮತ್ತು ಶಕ್ತಿಯುತ ತಂತ್ರಜ್ಞಾನವನ್ನು ಒದಗಿಸುತ್ತಿದೆ ಎಂದು ಹೇಳಿದೆ. ಗ್ರಾಮೀಣ ಪ್ರದೇಶಗಳ ಬಗ್ಗೆ ಮಾತನಾಡುತ್ತಾ, ಭಾರತದಲ್ಲಿ ಸ್ಮಾರ್ಟ್‌ಫೋನ್‌ಗಳ ಬಳಕೆಯಲ್ಲಿ ಸ್ಥಿರವಾದ ಏರಿಕೆ ಕಂಡುಬಂದಿದೆ. ಅಂತಹ ಪರಿಸ್ಥಿತಿಯಲ್ಲಿ, ಈ ಫೋನ್ ಫೀಚರ್ ಫೋನ್ ಬಳಕೆದಾರರನ್ನು ಅಪ್‌ಗ್ರೇಡ್ ಮಾಡಲು ಸಹಾಯ ಮಾಡುತ್ತದೆ.

ಬ್ರಾಂಡ್‌ನ ನಿರಂತರ ಪ್ರಯತ್ನದಿಂದ  ಲಕ್ಷಾಂತರ ಭಾರತೀಯರು ಶಕ್ತಿಯುತವಾದ ಸ್ಮಾರ್ಟ್‌ಫೋನ್ ಮೂಲಕ ಕೈಗೆಟುಕುವ ಡಿಜಿಟಲ್ ಸಂಪರ್ಕವನ್ನು ಉತ್ತಮ ಬೆಲೆಯಲ್ಲಿ ಪಡೆಯುವುದನ್ನು ಖಚಿತಪಡಿಸಿಕೊಳ್ಳಲು, ಐಟೆಲ್ 7,000 ವಿಭಾಗದಲ್ಲಿ ಭಾರತದ ಅತ್ಯಂತ ವಿಶ್ವಾಸಾರ್ಹ ಮತ್ತು ಜನಪ್ರಿಯ ಬ್ರ್ಯಾಂಡ್‌ಗಳಲ್ಲಿ ಒಂದಾಗಿದೆ.‌ ಪ್ರಸ್ತುತ  ಐಟೆಲ್ ಭಾರತದಲ್ಲಿ 80 ಮಿಲಿಯನ್ ಬಳಕೆದಾರರನ್ನು ಹೊಂದಿದೆ. 

Latest Videos
Follow Us:
Download App:
  • android
  • ios