ಏ. 27ಕ್ಕೆ iQoo Z6 Pro 5G ಭಾರತದಲ್ಲಿ ಬಿಡುಗಡೆ, ಏನೆಲ್ಲ ವಿಶೇಷತೆ? ಬೆಲೆ ಎಷ್ಟು?

*ಭಾರತೀಯ ಮಾರುಕಟ್ಟೆ ಮತ್ತೊಂದು ಹೊಸ ಸ್ಮಾರ್ಟ್‌ಫೋನ್ ಬಿಡುಗಡೆಯಾಗಲಿದೆ
*ಐಕ್ಯೂ ಜೆಡ್ 6 ಪ್ರೋ 5ಜಿ ಸ್ಮಾರ್ಟ್‌ಫೋನ್ ತನ್ನ ವಿಶಿಷ್ಟ ಫೀಚರ್‌ಗಳಿಂದ ಗಮನ ಸೆಳೆಯುತ್ತದೆ
*ಈ ಸ್ಮಾರ್ಟ್‌ಫೋನಿನಲ್ಲಿ 64 ಮೆಗಾ ಪಿಕ್ಸೆಲ್ ಮುಖ್ಯ ಕ್ಯಾಮೆರಾವನ್ನು ನಿರೀಕ್ಷಿಸಬಹುದಾಗಿದೆ.

iQoo Z6 pro 5G smartphone will be launched on 2022 April 27 price specifications features

 iQoo Z6 Pro 5G  Launch: ಭಾರತೀಯ ಮಾರುಕಟ್ಟೆಯಲ್ಲಿ ತನ್ನ ವಿಶಿಷ್ಟ ಫೋನುಗಳಿಂದಾಗಿ ಹೆಚ್ಚು ಗಮನ ಸೆಳೆಯುತ್ತಿರುವ ಐಕ್ಯೂ ಮತ್ತೊಂದು ಸ್ಮಾರ್ಟ್‌ಫೋನ್ ಅನ್ನು ಲಾಂಚ್ ಮಾಡಲು ಮುಂದಾಗಿದೆ. ಈಗಾಗಲೇ ಐಕ್ಯೂ ಬ್ರ್ಯಾಂಡ್ ಫೋನುಗಳಿಗೆ ತನ್ನದೇ ಗ್ರಾಹಕವಲಯವು ಸೃಷ್ಟಿಯಾಗಿದೆ. ಸಂಸ್ಥೆಯ ಪ್ರಕಾರ, ಐಕ್ಯೂ ಜೆಡ್6 ಪ್ರೋ 5ಜಿ (iQoo Z6 Pro 5G) ಭಾರತದಲ್ಲಿ ಏಪ್ರಿಲ್ 27 ರಂದು ಬಿಡುಗಡೆಯಾಗಲಿದೆ. iQoo ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ ಚಿಪ್‌ಸೆಟ್, 66W ಕ್ಷಿಪ್ರ ಚಾರ್ಜಿಂಗ್ ಮತ್ತು ಇತರ ವೈಶಿಷ್ಟ್ಯಗಳನ್ನು ಒಳಗೊಂಡಂತೆ ಭವಿಷ್ಯದ ಸ್ಮಾರ್ಟ್‌ಫೋನ್ ಕುರಿತು ಕೆಲವು ವಿವರಗಳನ್ನು ಬಿಡುಗಡೆ ಮಾಡಿದೆ.

ಐಕ್ಯೂ (iQoo) ಪ್ರಕಾರ ಈ ಸ್ಮಾರ್ಟ್‌ಫೋನ್ ಸುಮಾರು 25,000 ರೂ.ಗಳ ಬೆಲೆ ಶ್ರೇಣಿಯಲ್ಲಿ ಬಿಡುಗಡೆಯಾಗಲಿದೆ ಮತ್ತು ಕಂಪನಿಯ ಸ್ವಂತ ವೆಬ್‌ಸೈಟ್ ಮತ್ತು  ದೈತ್ಯ ಇ ಕಾಮರರ್ಸ್ ತಾಣವಾಗಿರುವ Amazon ಈ ಫೋನ್ ಮಾರಾಟಕ್ಕೆ ಸಿಗಲಿದೆ. ಬೆಲೆಯನ್ನ ಗಮನಿಸಿದರೆ, ಇದು ತೀರಾ ಪ್ರೀಮಿಯಂ ಆಗಲೀ, ಅಥವಾ ಬಜೆಟ್ ಫೋನ್ ಆಗಲಿಗೆ ಅಲ್ಲ ಎಂಬುದು ತಿಳಿದುಬರುತ್ತದೆ. ಮಧ್ಯಮವ್ಯಾಪ್ತಿಯ ಫೋನ್ ಇದಾಗಿದೆ ಎಂದು ಹೇಳಬಹುದು. ಈ ಸ್ಮಾರ್ಟ್‌ಫೋನ್  ಇತರ ವಿಷಯಗಳ ಜೊತೆಗೆ iQoo ನ VC ಲಿಕ್ವಿಡ್ ಕೂಲಿಂಗ್ ತಂತ್ರಜ್ಞಾನವನ್ನು ಸಹ ಬಳಸುತ್ತದೆ.

ಇದನ್ನೂ ಓದಿ: Oppo Find N ರೀತಿಯಲ್ಲೇ ಇದೆಯಾ OnePlus ಫೋಲ್ಡಬಲ್ ಫೋನ್?

ಹಿಂದಿನ ವದಂತಿಗಳ ಪ್ರಕಾರ, iQoo Z6 Pro 5G ಭಾರತದಲ್ಲಿ ಸುಮಾರು 25,000 ರೂ. ಬೆಲೆ ಸಿಗಲಿದೆ ಎನ್ನಲಾಗುತ್ತಿದೆ. ಮೊದಲೇ ಹೇಳಿದಂತೆ, ಸ್ಮಾರ್ಟ್‌ಫೋನ್ ಕಂಪನಿಯ ವೆಬ್‌ಸೈಟ್ ಮತ್ತು ಅಮೆಜಾನ್‌ನಲ್ಲಿ ಖರೀದಿಗೆ ಲಭ್ಯವಿರುತ್ತದೆ. ಐಕ್ಯೂ ಸ್ಮಾರ್ಟ್‌ಫೋನ್ ಇಷ್ಟಪಡುವವರಿಗೆ ಮತ್ತೊಂದು ಆಯ್ಕೆಯ ಅವಕಾಶವನ್ನು ಕಂಪನಿಯು ಒದಗಿಸಿಕೊಟ್ಟಿದೆ ಎನ್ನಲಬಹುದು.

iQoo Z6 Pro 5G 90Hz OLED ಡಿಸ್ಪ್ಲೇಯನ್ನು 1,300 nits ನ ಗರಿಷ್ಠ ಹೊಳಪನ್ನು ಒಳಗೊಂಡಿರುತ್ತದೆ ಎಂದು ಹೇಳಲಾಗುತ್ತದೆ. ಕೆಲವು ಮೂಲಗಳ ಪ್ರಕಾರ ಕ್ವಾಲಕಾಮ್ ಸ್ನ್ಯಾಪ್‌ಡ್ರಾಗ್ 778ಜಿ (Qualcomm Snapdragon 778G) ಪ್ರೊಸೆಸರ್‌ನಿಂದ ಚಾಲಿತವಾಗುತ್ತದೆ, ಆದರೆ ಎಷ್ಟು ಜಿಬಿ RAM ಮತ್ತು ಎಷ್ಟು ಜಿಬಿ ಸ್ಟೋರೇಜ್ ಸಾಮರ್ಥ್ಯ ಎಷ್ಟಿದೆ ಎಂಬ ಮಾಹಿತಿಯನ್ನು ಕಂಪನಿಯು ಇನ್ನೂ ಬಿಟ್ಟುಕೊಟ್ಟಿಲ್ಲ. ಈ ಬಗ್ಗೆ ಎಲ್ಲ ಮಾಹಿತಿಯು ಏಪ್ರಿಲ್ 27 ರಂದು ತಿಳಿಯಲಿದೆ ಎಂದು ಹೇಳಬಹುದು. ತಯಾರಕರ ಪ್ರಕಾರ, iQOO Z6 Pro 5G ಸ್ಮಾರ್ಟ್‌ಫೋನ್‌ಗಳಲ್ಲಿ ಸುಮಾರು 5,50,000 ಅತ್ಯಧಿಕ AnTuTu ಬೆಂಚ್‌ಮಾರ್ಕ್ ಸ್ಕೋರ್ ಅನ್ನು ಹೊಂದಿದೆ.

ಕ್ಯಾಮೆರಾ ಬಗ್ಗೆ ಹೇಳುವುದಾದರೆ, ಈ ಸ್ಮಾರ್ಟ್‌ಫೋನ್ 64 ಮೆಗಾ ಪಿಕ್ಸೆಲ್ ಮುಖ್ಯ ಕ್ಯಾಮೆರಾದೊಂದಿಗೆ ಟ್ರಿಪಲ್ ಬ್ಯಾಕ್ ಕ್ಯಾಮೆರಾ ಕಾನ್ಫಿಗರೇಶನ್ ಅನ್ನು ಒಳಗೊಂಡಿರಬಹುದು ಎನ್ನಲಾಗುತ್ತಿದೆ. ಸ್ಮಾರ್ಟ್‌ಫೋನ್ 66W ಫ್ಲ್ಯಾಶ್‌ಚಾರ್ಜ್ ಅನ್ನು ಒಳಗೊಂಡಿರುತ್ತದೆ ಎಂದು ತಿಳಿದುಬಂದಿದೆ. ಈ ಹಿಂದಿನ ಕೆಲವು ಮಾಹಿತಿಗಳ ಪ್ರಕಾರ, iQoo Z6 Pro 5G ಭಾರತದಲ್ಲಿ ಸುಮಾರು 25,000 ರೂ. ಬೆಲೆ ಸಿಗಲಿದೆ ಎನ್ನಲಾಗುತ್ತಿದೆ. ಮೊದಲೇ ಹೇಳಿದಂತೆ, ಸ್ಮಾರ್ಟ್‌ಫೋನ್ ಕಂಪನಿಯ ವೆಬ್‌ಸೈಟ್ ಮತ್ತು ಅಮೆಜಾನ್‌ನಲ್ಲಿ ಖರೀದಿಗೆ ಲಭ್ಯವಿರುತ್ತದೆ.

ಇದನ್ನೂ ಓದಿiPhone 14 ಸೀರೀಸ್ ಫೋನ್ ಗಳು ಜೇಬಿಗೆ ಹೊರೆನಾ?

ಈಗಾಗಲೇ ಭಾರತೀಯ ಮಾರುಕಟ್ಟೆಯಲ್ಲಿ ಸಾಕಷ್ಟು ಸ್ಮಾರ್ಟ್‌ಫೋನ್ ಕಂಪನಿಗಳು ತಮ್ಮ ಅದೃಷ್ಟ ಪರೀಕ್ಷೆಯನ್ನು ಮಾಡುತ್ತಿವೆ. ಈ ಪೈಕಿ ಚೀನಾ ಮೂಲದ ಕಂಪನಿಗಳು ಪ್ರಾಬಲ್ಯವು ಹೆಚ್ಚಿದೆ. ಅದೇ ಹಾದಿಯಲ್ಲಿ ಐಕ್ಯೂ ಕೂಡ ಇದೆ. ಜಗತ್ತಿನ ಬಹುದೊಡ್ಡ ಸ್ಮಾರ್ಟ್‌ಫೋನ್ ಮಾರುಕಟ್ಟೆಯಾಗಿರುವ ಭಾರತದಲ್ಲಿ ತಮ್ಮ ಪಾಲು ಪಡೆಯಲು ಎಲ್ಲ ಕಂಪನಿಗಳು ಪ್ರಯತ್ನಿಸುತ್ತಲೇ ಇರುತ್ತವೆ. ಈ ಹಿನ್ನೆಲೆಯಲ್ಲಿ ಐಕ್ಯೂ ಕೂಡ ತನ್ನ ಫೋನುಗಳ ಮೂಲಕ ಮಾರುಕಟ್ಟೆಯಲ್ಲಿ ತನ್ನ ಪ್ರಭಾವ ಬೀರಲು ಪ್ರಯತ್ನಿಸುತ್ತಿದೆ.

Latest Videos
Follow Us:
Download App:
  • android
  • ios