iQOO Neo 6 ಭಾರತದಲ್ಲಿ ಶೀಘ್ರದಲ್ಲೇ ಲಾಂಚ್, ಫೀಚರ್ಸ ಬಹಿರಂಗ: OnePlus 10Rಗೆ ಪ್ರತಿಸ್ಪರ್ಧಿ?
iQOO Neo 6 ಭಾರತದಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಮತ್ತು ಇದರ ಬೆಲೆ 30,000 ರಿಂದ 35,000 ರೂಪಾಯಿಗಳವರೆಗೆ ಇರುತ್ತದೆ ಎಂದು ಟಿಪ್‌ಸ್ಟರ್‌ರೊಬ್ಬರು ಹೇಳಿದ್ದಾರೆ. ಐಕ್ಯೂದ ಹೊಸ ಸ್ಮಾರ್ಟ್‌ಫೋನ್, OnePlus 10R ಮತ್ತು ಇತರ ಫೋನ್‌ಗಳ ಜತೆ ಸ್ಪರ್ಧಿಸಲಿದೆ.
iQOO Neo 6 Launch: iQOO Neo 6 ಶೀಘ್ರದಲ್ಲೇ ಭಾರತಕ್ಕೆ ಬರಲಿದೆ. ಕಂಪನಿಯು ಇನ್ನೂ ಅಧಿಕೃತ ಪ್ರಕಟಣೆಯನ್ನು ಮಾಡಿಲ್ಲವಾದರೂ, ಐಕ್ಯೂ ಇದನ್ನು ಭಾರತೀಯ ಮಾರುಕಟ್ಟೆಗೆ ತರಲು ಯೋಜಿಸುತ್ತಿದೆ ಎಂದು ಟಿಪ್‌ಸ್ಟರ್ ಮುಕುಲ್ ಶರ್ಮಾ ಹೇಳಿಕೊಳ್ಳುತ್ತಿದ್ದಾರೆ. OnePlus ತನ್ನ 10R ಸ್ಮಾರ್ಟ್‌ಫೋನನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದ ಕೇವಲ ಒಂದು ವಾರದ ನಂತರ ಈ ಸುದ್ದಿ ಬಂದಿದೆ.
ಸಾಧನವು ಈಗಾಗಲೇ ಚೀನಾದಲ್ಲಿ ಲಭ್ಯವಿದೆ ಮತ್ತು ಅದು ಈಗ ಇತರ ಮಾರುಕಟ್ಟೆಗಳಿಗೆ ದಾರಿ ಮಾಡಿಕೊಡುತ್ತಿದೆ. iQOO Neo 6 ಭಾರತದಲ್ಲಿ ರೂ 30,000 ಮತ್ತು ರೂ 35,000 ರ ನಡುವೆ ಬೆಲೆಯಿರುತ್ತದೆ ಎಂದು ಟಿಪ್‌ಸ್ಟರ್ ಹೇಳಿದ್ದಾರೆ. ಕುತೂಹಲಕಾರಿಯಾಗಿ, ಕಂಪನಿಯು ಈಗಾಗಲೇ ಇತ್ತೀಚೆಗೆ ಬಿಡುಗಡೆಯಾದ iQOO 9 SEಯನ್ನು ಕೂಡ ಅದೇ ಬೆಲೆ ಶ್ರೇಣಿಯಲ್ಲಿ ಮಾರಾಟ ಮಾಡುತ್ತಿದೆ. ಸಾಧನವು 33,990 ರೂಗಳ ಆರಂಭಿಕ ಬೆಲೆಯೊಂದಿಗೆ ಲಭ್ಯವಿದೆ.
OnePlus 10Rಗೆ ಕಠಿಣ ಸ್ಪರ್ಧೆಯನ್ನು ನೀಡಲು iQOO ಹೆಚ್ಚು ಶಕ್ತಿಶಾಲಿ ಚಿಪ್ ಮತ್ತು ವೇಗದ ಚಾರ್ಜಿಂಗ್ ವೇಗವನ್ನು ಹೊಂದಿರುವ ಫೋನ್ ಬಿಡುಗಡೆ ಮಾಡುವ ಸಾಧ್ಯತೆ ಇದೆ. OnePlus 10R Rs 38,999 ಬೆಲೆಯಲ್ಲಿ ಲಭ್ಯವಿದೆ. ಬಳಕೆದಾರರಿಗೆ ಕೈಗೆಟುಕುವ ಬೆಲೆಯಲ್ಲಿ "ಆಲ್ ರೌಂಡರ್ ಫ್ಲ್ಯಾಗ್‌ಹಿಪ್ ಅನುಭವ" ನೀಡಲು iQOO ಯೋಜಿಸಿದೆ ಎಂದು ಟಿಪ್‌ಸ್ಟರ್ ತಿಳಿಸಿದ್ದಾರೆ.
iQOO Neo 6 ಫೀಚರ್ಸ್: ಚೀನಾದಲ್ಲಿ, iQOO Neo 6 ಫ್ಲ್ಯಾಗಶಿಪ್ Qualcomm Snapdragon 8 Gen 1 ಚಿಪ್ ಮತ್ತು 80W ವೇಗದ ಚಾರ್ಜರ್‌ನೊಂದಿಗೆ ಬಿಡುಗಡೆಯಾಗಬಹುದು. ಆದರೆ, iQOO Neo 6 ಚೈನೀಸ್ ರೂಪಾಂತರಕ್ಕಿಂತ ಭಿನ್ನವಾಗಿರುತ್ತದೆ ಎಂದು ಟಿಪ್‌ಸ್ಟರ್ ಹೇಳಿಕೊಳ್ಳುವುದರಿಂದ ಭಾರತೀಯ ರೂಪಾಂತರವು ಸ್ವಲ್ಪ ವಿಭಿನ್ನ ವೈಶಿಷ್ಟ್ಯಗಳನ್ನು ಹೊಂದಿರುತ್ತದೆ ಎಂದು ನಿರೀಕ್ಷಿಸಲಾಗಿದೆ.
ಈ ಸಮಯದಲ್ಲಿ, ಭಾರತೀಯ ರೂಪಾಂತರದ ವಿಶೇಷಣಗಳು ಏನಾಗಿರಬಹುದು ಎಂಬುದು ತಿಳಿದಿಲ್ಲ. ಚೀನಾದಲ್ಲಿ, iQOO Neo 6 6.62-ಇಂಚಿನ AMOLED ಡಿಸ್ಪ್ಲೇಯೊಂದಿಗೆ ಬರುತ್ತದೆ ಅದು 120Hz ನಲ್ಲಿ ರಿಫ್ರೆಶ್ ಆಗುತ್ತದೆ. ಹ್ಯಾಂಡ್‌ಸೆಟ್ Full HD+ ರೆಸಲ್ಯೂಶನ್‌ನಲ್ಲಿ ಕಾರ್ಯನಿರ್ವಹಿಸುವ AMOLED ಪ್ಯಾನೆಲನ್ನು ಹೊಂದಿದೆ.
iQOO Neo 6 ಕ್ಯಾಮೆರಾ: ಛಾಯಾಗ್ರಹಣಕ್ಕಾಗಿ, ಟ್ರಿಪಲ್ ಹಿಂಬದಿಯ ಕ್ಯಾಮೆರಾ ಸೆಟಪ್ ಇದೆ. ಇದು 64-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ, 12-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್-ಆಂಗಲ್ ಸಂವೇದಕ ಮತ್ತು 2-ಮೆಗಾಪಿಕ್ಸೆಲ್ ಪೋರ್ಟ್ರೇಟ್ ಸಂವೇದಕವನ್ನು ಒಳಗೊಂಡಿದೆ. ಸೆಲ್ಫಿಗಾಗಿ, ಮುಂಭಾಗದಲ್ಲಿ 16 ಮೆಗಾಪಿಕ್ಸೆಲ್ ಕ್ಯಾಮೆರಾ ಇದೆ.
ಸ್ಮಾರ್ಟ್‌ಫೋನ್ 80W ಚಾರ್ಜಿಂಗ್ ಬೆಂಬಲದೊಂದಿಗೆ 4,700mAh ಬ್ಯಾಟರಿ ಇದೆ. ಸಾಧನವ Android 12 ಔಟ್ ಆಫ್ ದಿ ಬಾಕ್ಸ್ ರನ್ ಮಾಡುತ್ತದೆ. ಐಕ್ಯೂ ಹೆಚ್ಚಿನ ಫೀಚರ್ಸನ್ನು ಇರಿಸಬಹುದು ಮತ್ತು ಚಿಪ್‌ಸೆಟ್ ಬದಲಾಯಿಸಬಹುದು. ಮುಂಬರುವ iQOO Neo 6 ಸ್ಮಾರ್ಟ್‌ಫೋನ್ ಕುರಿತು ಇನ್ನಷ್ಟು ತಿಳಿದುಕೊಳ್ಳಲು ನಾವು ಸ್ವಲ್ಪ ಸಮಯ ಕಾಯಬೇಕಾಗಿದೆ.
ಇನ್ನು ಹೊಸ್ ಐಕ್ಯೂ ಜತೆ ಸ್ಪರ್ಧಿಸಲಿದೆ ಎಂದು ಹೇಳಲಾಗಿರುವ OnePlus 10Rನ 80W ಮಾದರಿಯು 5,000mAh ಬ್ಯಾಟರಿ, ಮೀಡಿಯಾಟೆಕ್ ಡೈಮೆನ್ಸಿಟಿ 8100 SoC, 120Hz AMOLED ಡಿಸ್ಪ್ಲೇ, 50-ಮೆಗಾಪಿಕ್ಸೆಲ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಮತ್ತು ಹೆಚ್ಚಿನ ವೈಶಿಷ್ಟ್ಯಗಳೊಂದಿಗೆ ಬರುತ್ತದೆ.