ಮುಂದಿನ ವಾರ iQoo Neo 6 ಭಾರತದಲ್ಲಿ ಲಾಂಚ್: ಫೀಚರ್ಸ್‌ ಬಹಿರಂಗ!

ಸ್ಮಾರ್ಟ್‌ಫೋನ್ ಬ್ರಾಂಡ್ ಬಿಡುಗಡೆ ದಿನಾಂಕವನ್ನು ಇನ್ನೂ ಘೋಷಿಸದಿದ್ದರೂ, ಟಿಪ್‌ಸ್ಟರ್ ದೇಶದಲ್ಲಿ iQoo Neo 6 ನ ನಿರೀಕ್ಷಿತ ಬಿಡುಗಡೆ ಸಮಯ ಮತ್ತು ಪ್ರಮುಖ ವಿಶೇಷಣಗಳನ್ನು ಬಹಿರಂಗಪಡಿಸಿದ್ದಾರೆ

iQoo Neo 6 May launch Soon In India Expected price features specifications mnj

iQoo Neo 6 Launch: iQoo Neo 6  ಮುಂದಿನ ವಾರದಲ್ಲಿ ಬಿಡುಗಡೆಯಾಗಲಿದೆ ಎಂದು ಟಿಪ್‌ಸ್ಟರ್ ಮಾಹಿತಿ ನೀಡಿದ್ದಾರೆ. ಸ್ಮಾರ್ಟ್‌ಫೋನ್ ಬ್ರಾಂಡ್ ಬಿಡುಗಡೆ ದಿನಾಂಕವನ್ನು ಇನ್ನೂ ಘೋಷಿಸದಿದ್ದರೂ, ಟಿಪ್‌ಸ್ಟರ್ ದೇಶದಲ್ಲಿ iQoo Neo 6 ನ ನಿರೀಕ್ಷಿತ ಬಿಡುಗಡೆ ಸಮಯ ಮತ್ತು ಪ್ರಮುಖ ವಿಶೇಷಣಗಳನ್ನು ಬಹಿರಂಗಪಡಿಸಿದ್ದಾರೆ. ಹೊಸ ಐಕ್ಯೂ ಫೋನ್‌ನ ಭಾರತೀಯ ರೂಪಾಂತರವು ಎರಡು ವಿಭಿನ್ನ ಮಾದರಿಗಳಲ್ಲಿ ಲಭ್ಯವಿದೆ ಎಂದು ಹೇಳಲಾಗುತ್ತದೆ - ಒಂದು Snapdragon 870 SoC ಮತ್ತು ಇನ್ನೊಂದು Snapdragon 870+ ಚಿಪ್  ಹೊಂದಿದೆ.  

iQoo Neo 6 ಮೂಲತಃ ಕಳೆದ ತಿಂಗಳು ಚೀನಾದಲ್ಲಿ ಅನಾವರಣಗೊಳಿಸಲಾಗಿತ್ತು. ಟಿಪ್‌ಸ್ಟರ್ ಪರಾಸ್ ಗುಗ್ಲಾನಿ iQoo Neo 6 ನ ಸೋರಿಕೆಯಾದ ವಿಶೇಷಣಗಳಿಗೆ ಸಂಬಂಧಿಸಿದ ಟ್ವೀಟನ್ನು ಹಂಚಿಕೊಂಡಿದ್ದಾರೆ ಮತ್ತು ಮುಂದಿನ ವಾರದಲ್ಲಿ ಫೋನ್ ಭಾರತದಲ್ಲಿ ಬಿಡುಗಡೆಯಾಗಬಹುದು ಎಂದು ಹೇಳಿಕೊಂಡಿದ್ದಾರೆ.

iQoo Neo 6 Price (ಬಹಿರಂಗಗೊಂಡ ಬೆಲೆ): iQoo Neo 6 ರ ಭಾರತೀಯ ರೂಪಾಂತರವು ಅದರ ಮೂಲ ಮಾದರಿಗೆ ರೂ. 29,000 ಮತ್ತು ಅದರ ಹೈ ಎಂಡ್ ರೂಪಾಂತರವು 31,000  ರೂ. ಗಿಂತ ಹೆಚ್ಚಿನ ಬೆಲೆಯನ್ನು ಹೊಂದಿರಬಹುದು ಎಂದು ಟಿಪ್‌ಸ್ಟರ್ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ಟ್ರಿಪಲ್ ಕ್ಯಾಮೆರಾ ಸೆಟಪ್‌ನೊಂದಿಗೆ iQoo Neo 6 SE ಚೀನಾದಲ್ಲಿ ಲಾಂಚ್‌: ಬೆಲೆ ಎಷ್ಟು?

ಐಕ್ಯೂ ಹ್ಯಾಂಡ್‌ಸೆಟ್ ಮುಂದಿನ ವಾರ ಭಾರತದಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಲಾಗಿದ್ದರೂ, ಮುಂಬರುವ ಸ್ಮಾರ್ಟ್‌ಫೋನ್ ಮಾರಾಟವು ಜೂನ್ ಮೊದಲ ವಾರದಲ್ಲಿ ನಡೆಯಲಿದೆ ಎಂದು ಹೇಳಲಾಗುತ್ತದೆ. ಮತ್ತೊಂದೆಡೆ, ಹ್ಯಾಂಡ್‌ಸೆಟ್ ಇಂಟರ್‌ಸ್ಟೆಲ್ಲರ್ ಮತ್ತು ಡಾರ್ಕ್ ನೋವಾ ಎಂಬ ಎರಡು ಬಣ್ಣ ಆಯ್ಕೆಗಳಲ್ಲಿ ಲಭ್ಯವಿರುತ್ತದೆ.

iQoo Neo 6 specifications (ಬಹಿರಂಗಗೊಂಡ ಫೀಚರ್ಸ್):‌ iQoo Neo 6 ನ ಭಾರತೀಯ ರೂಪಾಂತರವು 6.62-ಇಂಚಿನ E4 AMOLED ಡಿಸ್ಪ್ಲೇಯನ್ನು 120Hz ರಿಫ್ರೆಶ್ ದರದೊಂದಿಗೆ ಹೊಂದಿರುತ್ತದೆ ಎಂದು ಟಿಪ್ಸ್ಟರ್ ಹೇಳಿದ್ದಾರೆ. ಹ್ಯಾಂಡ್‌ಸೆಟ್ Android 12 ನಲ್ಲಿ ಕಾರ್ಯನಿರ್ವಹಿಸುತ್ತದೆ ಎಂದು ಹೇಳಲಾಗುತ್ತದೆ.  

ಮೇಲೆ ತಿಳಿಸಿದಂತೆ ಭಾರತದಲ್ಲಿ iQoo Neo 6ನ ಎರಡು ಮಾದರಿಗಳು ಇರುತ್ತವೆ ಎಂದು ತಿಳಿದುಬಂದಿದೆ. Snapdragon 870 ಮತ್ತು Snapdragon 870+ SoC. iQoo Neo 6ನ ಚೀನಾ ರೂಪಾಂತರವನ್ನು ಏಪ್ರಿಲ್ ಮಧ್ಯದಲ್ಲಿ ಪ್ರಾರಂಭಿಸಲಾಯಿತು ಮತ್ತು ಇದು Snapdragon 8 Gen 1 SoC  ಒಳಗೊಂಡಿದೆ.

ಇದನ್ನೂ ಓದಿ: iQoo Z6 5G ಸ್ಮಾರ್ಟ್‌ಫೋನ್ ಲಾಂಚ್, ಬೆಲೆ ಎಷ್ಟಿದೆ? ಕ್ಯಾಮೆರಾ ಹೇಗಿದೆ? ಏನೆಲ್ಲ ಫೀಚರ್ಸ್?

ಟಿಪ್‌ಸ್ಟರ್ ಪ್ರಕಾರ, iQoo Neo 6 ರ ಭಾರತೀಯ ರೂಪಾಂತರವು 8GB RAM ಮತ್ತು 128GBಯ ಅಂತರ್ಗತ ಸಂಗ್ರಹಣೆಯನ್ನು ಹೊಂದಿರುತ್ತದೆ. ಏತನ್ಮಧ್ಯೆ, ಸ್ಮಾರ್ಟ್‌ಫೋನ್ 64-ಮೆಗಾಪಿಕ್ಸೆಲ್ (OIS), 8-ಮೆಗಾಪಿಕ್ಸೆಲ್ ಮತ್ತು 2-ಮೆಗಾಪಿಕ್ಸೆಲ್ ಸಂವೇದಕಗಳೊಂದಿಗೆ ಟ್ರಿಪಲ್ ಕ್ಯಾಮೆರಾ ಸೆಟಪನ್ನು ಹೊಂದಿರಬಹದು. ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ 16-ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾವನ್ನು ಒಳಗೊಂಡಿರುತ್ತದೆ ಎಂದು ಹೇಳಲಾಗುತ್ತದೆ.

ಇದಲ್ಲದೆ, iQoo Neo 6 ನ ಭಾರತೀಯ ರೂಪಾಂತರವು 4,700mAh ಬ್ಯಾಟರಿಯನ್ನು ಹೊಂದಿದ್ದು ಅದು ಸೋರಿಕೆಯ ಪ್ರಕಾರ 80W ವೇಗದ ಚಾರ್ಜಿಂಗ್  ಬೆಂಬಲಿಸುತ್ತದೆ. ಅಮೆಜಾನ್ ಇಂಡಿಯಾ ತನ್ನ ವೆಬ್‌ಸೈಟ್‌ನಲ್ಲಿ ಇತ್ತೀಚಿಗೆ iQoo Neo 6 ರ ಭಾರತ ಬಿಡುಗಡೆಗಾಗಿ ಮೀಸಲಾದ ಲ್ಯಾಂಡಿಂಗ್ ಪುಟವನ್ನು ರಚಿಸಿದೆ.  ಐಕ್ಯೂ ಯಾವುದೇ ನಿರ್ದಿಷ್ಟ ವಿವರಗಳನ್ನು ಬಹಿರಂಗಪಡಿಸದೆ ಮುಂಬರುವ ಫೋನ್‌ಗಾಗಿ ಪ್ರತ್ಯೇಕವಾಗಿ ವೆಬ್‌ಪುಟವನ್ನು ರಚಿಸಿದೆ.

Latest Videos
Follow Us:
Download App:
  • android
  • ios