iphone 14 Features Leaked: 48MP ವೈಡ್ ಕ್ಯಾಮೆರಾದೊಂದಿಗೆ ಬಿಡುಗಡೆಯಾಗಲಿದೆ ಹೊಸ ಐಫೋನ್?

*ಕ್ಯಾಮೆರಾ ಅಪಗ್ರೇಡ್‌ ನೊಂದಿಗೆ iphone 14 ಸರಣಿ
*ಇದುವರೆಗಿನ ಅತಿ ಹೆಚ್ಚು RAM ನೀಡುವ ಸಾಧ್ಯತೆ
*ಹೊಸ ಮಾದರಿಗಳ ಬಗ್ಗೆ ವಿಶ್ಲೇಷಕ ಜೆಫ್ ಪು ಮಾಹಿತಿ

iPhone 14 Pro Models May Come With Upgraded 48 Megapixel Wide Cameras mnj

ಯುಎಸ್‌ಎ (ಡಿ. 15): ಇತ್ತಿಚೇಗೆ ಬಿಡುಗಡೆಯಾದ ಹೊಸ ವರದಿ ಪ್ರಕಾರ  ಐಫೋನ್‌ 14 ಪ್ರೋ ಮತ್ತು ಐಫೋನ್‌ 14 ಪ್ರೋ ಮ್ಯಾಕ್ಸ್ ಕ್ಯಾಮೆರಾ ಅಪ್‌ಗ್ರೇಡ್ ನೊಂದಿಗೆ ಬಿಡುಗಡೆಯಾಗಲಿವೆ. ಜತೆಗೆ ಹೆಚ್ಚು ಮುಖ್ಯವಾಗಿ, ಮುಂಬರುವ ಐಫೋನ್‌ನಲ್ಲಿ ಇದುವರೆಗಿನ ಅತಿ ಹೆಚ್ಚು RAM ಇರಲಿದೆ ಎಂದು ತಿಳಿದು ಬಂದಿದೆ. ಮಾರುಕಟ್ಟೆ ವಿಶ್ಲೇಷಕರ ಪ್ರಕಾರ, ಐಫೋನ್ 14 ಪ್ರೊ ಮಾದರಿಗಳು ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್‌ನೊಂದಿಗೆ ಬರಲಿವೆ. ಅಲ್ಲದೇ ನವೀಕರಿಸಿದ 48-ಮೆಗಾಪಿಕ್ಸೆಲ್ ವೈಡ್-ಆಂಗಲ್ ಶೂಟರ್ ಮತ್ತು 12-ಮೆಗಾಪಿಕ್ಸೆಲ್  ಅಲ್ಟ್ರಾ-ವೈಡ್ ಮತ್ತು ಟೆಲಿಫೋಟೋ ಕ್ಯಾಮೆರಾವನ್ನು ಹೊಂದಿರುತ್ತವೆ.

ಈ ಪ್ರೊ ಮಾದರಿಗಳಲ್ಲಿ 8GB RAM ಇರಲಿದೆ ಎಂದು ಊಹಿಸಲಾಗಿದೆ. ಐಫೋನ್ 14 ಶ್ರೇಣಿಯು ನಾಲ್ಕು ಹೊಸ ಮಾದರಿಗಳಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಇದರಲ್ಲಿ iPhone 14 Pro ಮತ್ತು iPhone 14 Pro Max ಅನ್ನು ಎರಡು ಪ್ರೀಮಿಯಂ ಮಾಡೆಲ್‌ಗಳಾಗಿ ಮತ್ತು iPhone 14 ಮತ್ತು iPhone 14 Max ಎರಡು ಕೈಗೆಟುಕುವ ಮಾಡೆಲ್‌ಗಳಾಗಿ ಬಿಡುಗಡೆ ಮಾಡುವ ಸಾಧ್ಯತೆ ಇದೆ. 

 

 

iPhone 14 Pro Specifications:

ಮ್ಯಾಕ್‌ರೂಮರ್ಸ್ ವರದಿ ಪ್ರಕಾರ, ವಿಶ್ಲೇಷಕ ಜೆಫ್ ಪು (Analyst Jeff Pu) ಐಫೋನ್ 14 ಪ್ರೊ ಮಾದರಿಗಳ ಕ್ಯಾಮೆರಾ ಸೆಟಪ್ ಮತ್ತು RAM ವಿವರಗಳನ್ನು ಹೈಟಾಂಗ್ ಇಂಟರ್‌ನ್ಯಾಷನಲ ಸೆಕ್ಯುರಿಟೀಸ್‌ನೊಂದಿಗಿನ ಹಂಚಿಕೊಂಡಿದ್ದಾರೆ. ಈ ಶ್ರೇಣಿಯಲ್ಲಿರುವ ಎರಡು ಪ್ರೊ ಮಾದರಿಗಳು 48 ಮೆಗಾಪಿಕ್ಸೆಲ್ ವೈಡ್-ಆಂಗಲ್ ಶೂಟರ್ ಜೊತೆಗೆ 12 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಮತ್ತು ಟೆಲಿಫೋಟೋ ಕ್ಯಾಮೆರಾಗಳನ್ನು ಹೊಂದಿರುತ್ತದೆ ಎಂದು ವಿಶ್ಲೇಷಕ ಪು ಹೇಳಿದ್ದಾರೆ. 

ಇದು ಐಫೋನ್ 13 ಪ್ರೊ ಮತ್ತು ಐಫೋನ್ 13 ಪ್ರೊ  ಮ್ಯಾಕ್ಸ್ ಗಳ  ಅಪ್‌ಗ್ರೇಡ್ ವರ್ಷನ್ ಆಗಿದೆ.  ಐಫೋನ್ 13 ಪ್ರೊ ಮತ್ತು ಮ್ಯಾಕ್ಸ್ ಎರಡೂ ಒಂದೇ‌ ರೀತಿಯ ಮೆಗಾಪಿಕ್ಸೆಲ್ ಕ್ಯಾಮೆರಾ  ಹೊಂದಿರುವ ಅಲ್ಟ್ರಾ-ವೈಡ್ ಮತ್ತು ಟೆಲಿಫೋಟೋ ಶೂಟರ್‌ಗಳ ಜೊತೆಗೆ  12-ಮೆಗಾಪಿಕ್ಸೆಲ್ ವೈಡ್-ಆಂಗಲ್ ಕ್ಯಾಮೆರಾದೊಂದಿಗೆ ಬರುತ್ತದೆ.

ಐಫೋನ್ 14 ಮಾದರಿಗಳಲ್ಲಿ 120Hz ಡಿಸ್ಪ್ಲೇ!

ಐಫೋನ್ 14 ಪ್ರೊ ಮತ್ತು ಐಫೋನ್ 14 ಪ್ರೊ ಮ್ಯಾಕ್ಸ್ 8 ಜಿಬಿ RAM ನೊಂದಿಗೆ ಬರಲಿದೆ ಎಂದು ಪೂ ಉಲ್ಲೇಖಿಸಿದ್ದಾರೆ. ಇವರ ಪ್ರಕಾರ 6GB RAM ಹೊಂದಿರುವ ಐಫೋನ್ 13 ಪ್ರೊ ಮಾಡೆಲ್‌ಗಳಿಗೆ ಇದು ಅಪ್‌ಗ್ರೇಡ್ ಆಗಿದೆ. ಪ್ರೊ ಮಾದರಿಗಳ ಜೊತೆಗೆ, ಎಲ್ಲಾ ಹೊಸ ಐಫೋನ್ 14 ಮಾದರಿಗಳು 120Hz ಡಿಸ್ಪ್ಲೇಗಳೊಂದಿಗೆ  ಬರುತ್ತವೆ ಎಂದು ಪು ಸುಳಿವು ನೀಡಿದ್ದಾರೆ. ಇದು ಡಿಸ್ಪ್ಲೇ ಉದ್ಯಮದ ವಿಶ್ಲೇಷಕ ರಾಸ್ ಯಂಗ್‌ (Ross Young) ಅವರ ಇತ್ತೀಚಿನ ಸಲಹೆಗೆ ವ್ಯತಿರಿಕ್ತವಾಗಿದೆ. ಅವರು ಪ್ರೋ ಶ್ರೇಣಿಯಲ್ಲಿನ  ಮಾದರಿಗಳು 60Hz ಡಿಸ್ಪ್ಲೇಗಳನ್ನು ಹೊಂದುವುದನ್ನು ಮುಂದುವರಿಸುತ್ತವೆ ಎಂದು ಹೇಳಿದ್ದರು. ಸ್ಟ್ಯಾಂಡರ್ಡ್ ಐಫೋನ್ 14 ಮಾದರಿಗಳು 64 ಜಿಬಿ ಸಂಗ್ರಹವನ್ನು ಹೊಂದಿರುತ್ತದೆ ಎಂದು ಪು ಹೇಳಿದ್ದಾರೆ. ಇದು 128GB ಸಂಗ್ರಹಣೆಯನ್ನು ಆಧಾರವಾಗಿ ಹೊಂದಿರುವ iPhone 13 ಮಾದರಿಗಳಿಗಿಂತ ಭಿನ್ನವಾಗಿದೆ.

ಸಾಧನಗಳನ್ನು ಊಹಿಸುವಲ್ಲಿ ಪು ಮಿಶ್ರ ದಾಖಲೆ!

ಇಲ್ಲಿಯವರೆಗೆ, ಪು   ಆಪಲ್ ಸಾಧನಗಳನ್ನು ಊಹಿಸುವಲ್ಲಿ ಮಿಶ್ರ ದಾಖಲೆಯನ್ನು ಹೊಂದಿದ್ದಾರೆ. ಈ ವರ್ಷದ 16-ಇಂಚಿನ ಮ್ಯಾಕ್‌ಬುಕ್ ಪ್ರೊ ಮತ್ತು ಐಪ್ಯಾಡ್ ಪ್ರೊ ಮಾದರಿಗಳಲ್ಲಿ ಮಿನಿ- ಎಲ್‌ಇಡಿ ಡಿಸ್ಪ್ಲೇಗಳ ಉಪಸ್ಥಿತಿಯನ್ನು ಅವರು ಸರಿಯಾಗಿ ಊಹಿಸಿದ್ದರು. ಆದಾಗ್ಯೂ, ಆಪಲ್ ತನ್ನ ಹೊಸ ಹೋಮ್‌ಪಾಡ್ ಮಾದರಿಗಳನ್ನು 3D-ಸೆನ್ಸಿಂಗ್ ಕ್ಯಾಮೆರಾಗಳೊಂದಿಗೆ 2019 ರಲ್ಲಿ ಬಿಡುಗಡೆ ಮಾಡಲಿದೆ ಎಂದು ಅವರು ಹೇಳಿದ್ದರು. ಆದರೆ ಅದು ಹಾಗಾಗಲಿಲ್ಲ. ಈ ಹೊಸ ಮಾದರಿಗಳಲ್ಲಿ ಕೆಲವು ಪೇಟೆಂಟ್‌ಗಳ  ಅಭಿವೃದ್ಧಿಯನ್ನು ಸೂಚಿಸಿದ್ದಾರೆ  ಆದರೆ ಈ ಬಗ್ಗೆ ಸ್ಪಷ್ಟವಾದ ಟೈಮ್‌ಲೈನ್‌ಗಳನ್ನು ಪೂ ನೀಡಿಲ್ಲ

Latest Videos
Follow Us:
Download App:
  • android
  • ios