ನವದೆಹಲಿ(ಜು.28): ಆ್ಯಪಲ್ iPhone‌ಗಳಿಗೆ ವಿಶ್ವದಲ್ಲೇ ಭಾರಿ ಬೇಡಿಕೆ ಇದೆ. ಇದಕ್ಕೆ ಭಾರತ ಕೂಡ ಹೊರತಾಗಿಲ್ಲ.  2019ರ ಸೆಪ್ಟೆಂಬರ್‌ನಲ್ಲಿ iPhone11 ಭಾರತದಲ್ಲಿ ಬಿಡುಗಡೆಯಾಗಿದೆ. ಈ ವರ್ಷ ಎಪ್ರಿಲ್ ತಿಂಗಳಲ್ಲಿ iPhone SE2020 ಫೋನ್ ಮಾರುಕಟ್ಟೆ ಪ್ರವೇಶಿಸಿದೆ. ಇದೀಗ ಹೊಚ್ಚ ಹೊಸ iPhone 12 ಬಿಡುಗಡೆಗೆ ಆ್ಯಪಲ್ ಸಜ್ಜಾಗಿದೆ.

iPhone 12 ಹಾಗೂ iPhone 11 ಸ್ಮಾರ್ಟ್ ಫೋನ್‌ಗಳಲ್ಲಿ ಗಮನಿಸಬೇಕಾದ ಪ್ರಮುಖ ಅಂಶ ಇದರ ಬೆಲೆ. iPhone11 ಗಿಂತ iPhone12 ಬೆಲೆ ಕಡಿಮೆ ಎಂದು ಹೇಳಲಾಗುತ್ತಿದೆ. ಇಷ್ಟೇ ಅಲ್ಲ ಗರಿಷ್ಠ ಫೀಚರ್ಸ್ ಕೂಡ ಈ ಫೋನ್‌ನಲ್ಲಿರಲಿದೆ. ಕೂಲ್ ಕಲರ್, ಲಾರ್ಜ್ ಸ್ಕ್ರೀನ್ ಹಾಗೂ ಆತ್ಯಾಧುನಿಕ ಕ್ಯಾಮರ ಸೇರಿದಂತೆ ಹಲವು ಫೀಚರ್ಸ್ ನೂತನ ಫೋನ್‌ನಲ್ಲಿರಲಿದೆ.

iPhone 12 ಸ್ಮಾರ್ಟ್ ಫೋನ್ 4 ಮಾಡೆಲ್‌ಗಳಲ್ಲಿ ಬಿಡುಗಡೆಯಾಗಲಿದೆ
iPhone 12
iPhone 12 Max
iPhone 12 Pro
iPhone 12 Max Pro

ನೂತನ iPhone 12 ಸ್ಮಾರ್ಟ್ ಫೋನ್ ಬೆಲೆ ವಿವರ:

iPhone 12
128 GB - U.S. $649 (48,558 ರೂಪಾಯಿ)
256 GB - U.S. $749 (56,040 ರೂಪಾಯಿ)

iPhone 12 Max
128 GB - U.S. $749 (56,040 ರೂಪಾಯಿ)
256 GB - U.S. $849 (63,519 ರೂಪಾಯಿ)

iPhone 12 Pro
128 GB - U.S. $999 (74,741 ರೂಪಾಯಿ)
256 GB - U.S. $,1099 (82,223 ರೂಪಾಯಿ)
512 GB - U.S. $1,299 (97,186 ರೂಪಾಯಿ)

iPhone 12 Pro Max
128 GB - U.S. $1,099 (82,232 ರೂಪಾಯಿ)
256 GB - U.S. $1,199 (89,715 ರೂಪಾಯಿ)
512 GB - U.S. $1,399 (1,04,680 ರೂಪಾಯಿ)