ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿರುವ ಹುವೈ ಕಂಪನಿಯು ಇತ್ತೀಚೆಗೆ ಹೊಸ ಟ್ಯಾಬ್ಲೆಟನ್ನು ಮಾರುಕಟ್ಟೆಗೆ ಪರಿಚಯಿಸಿದೆ.

ಅದರ ಹೆಸರು ಹುವೈ ಮೀಡಿಯಾ ಪ್ಯಾಡ್‌ M5 ಲೈಟ್‌. ಲುಕ್‌, ಸ್ಟೈಲ್‌ನಲ್ಲಿ ಗ್ರಾಹಕರನ್ನು ಸೆಳೆಯುತ್ತಿರುವ ಈ ಮೀಡಿಯಾ ಪ್ಯಾಡ್‌ M5 ಲೈಟ್‌ ತನ್ನ ಬಣ್ಣದಿಂದಲೇ ಗ್ರಾಹಕರನ್ನು ಸೆಳೆಯುತ್ತಿದೆ. 

10.1 ಇಂಚಸ್‌ನ 1080ಪಿ ರೆಸಲ್ಯೂಷನ್‌ನ ಫುಲ್‌ ಎಚ್‌ಡಿ ಐಪಿಎಸ್‌ ಸ್ಕ್ರೀನ್‌ ಇರುವ ಈ ಟ್ಯಾಬ್‌ ಹಲವು ವಿಶೇಷತೆಗೆ ಸಾಕ್ಷಿಯಾಗಿದೆ. ಇದರಲ್ಲಿ ಕ್ವಾಡ್‌ ಸ್ಪೀಕರ್‌ ಇದ್ದು, ಥಿಯೇಟರ್‌ ಎಫೆಕ್ಟ್ ನೀಡುತ್ತೆ. 

ಇದನ್ನೂ ಓದಿ: ಮೊಬೈಲ್ ಇಂಟರ್ನೆಟ್ ಸ್ಪೀಡ್ ಚಾರ್ಟ್ ಪ್ರಕಟ; ಯಾರು ಟಾಪ್?...

ಇದರಲ್ಲಿ 8 ಕೋರ್‌ ಪ್ರೊಸೆಸರ್‌ ಬಳಸಲಾಗಿದೆ. ಸ್ವಿಲ್ವರ್‌ ಗೋಲ್ಡನ್‌ ಬಣ್ಣದಲ್ಲಿರುವ ಈ ಟ್ಯಾಬ್‌ 7,500ಎಂಎಎಚ್‌ ಸಾಮರ್ಥ್ಯದ ಬ್ಯಾಟರಿ ಹೊಂದಿದೆ. 

ಫ್ಲಿಪ್‌ಕಾರ್ಟ್‌ನಲ್ಲಿ ಇದು ಲಭ್ಯವಿದ್ದು, ಆರಂಭಿಕ ಬೆಲೆ 21,990 ಆಗಿದೆ.