ನೋಕಿಯಾ ಇದೀಗ  105 ಕ್ಲಾಸಿಕ್ ಫೋನ್ ಬಿಡುಗಡೆ ಮಾಡಿದೆ. ಯುಪಿಐ ಪಾವತಿ ಸೇರಿದಂತೆ ಹಲವು ಫೀಚರ್ ಲಭ್ಯವಿರುವ ಈ ಫೋನ್ ಬೆಲೆ ಕೇವಲ 999 ರೂಪಾಯಿ ಮಾತ್ರ. 

ನವದೆಹಲಿ(ಅ.28) ನೋಕಿಯಾ ಫೋನ್‌ಗಳ ಮಾತೃ ಸಂಸ್ಥೆಯಾದ ʻಎಚ್‌ಎಂಡಿ ಗ್ಲೋಬಲ್ʼ, ಇಂದು ಫೀಚರ್ ಫೋನ್‌ಗಳ ಪಟ್ಟಿಗೆ ಅತ್ಯಾಕರ್ಷಕ ಹೊಸ ʻನೋಕಿಯಾ 105 ಕ್ಲಾಸಿಕ್ʼ ಸೇರ್ಪಡೆ ಮಾಡಿದೆ. ಇದರ ಬೆಲೆ ಕೇವಲ 999 ರೂಪಾಯಿಂದ ಆರಂಭಗೊಳ್ಳುತ್ತಿದೆ.ಯುಪಿಐ ಅಪ್ಲಿಕೇಶನ್ ಹೊಂದಿರುವ ಈ ಫೋನ್‌, ನೋಕಿಯಾ ಫೋನ್‌ಗಳ ವಿಶ್ವಾಸಾರ್ಹತೆಯನ್ನು ʻಯುಪಿಐʼನ ಅನುಕೂಲತೆ ಮತ್ತು ಲಭ್ಯತೆಯೊಂದಿಗೆ ಸಂಯೋಜಿಸುತ್ತದೆ. ಸ್ಮಾರ್ಟ್‌ಫೋನ್‌ ಇಲ್ಲದೆಯೂ ʻಯುಪಿಐʼ ಪಾವತಿ ವಹಿವಾಟುಗಳನ್ನು ಸುರಕ್ಷಿತವಾಗಿ ಮತ್ತು ತಡೆರಹಿತವಾಗಿ ಮಾಡಲು ಬಳಕೆದಾರರಿಗೆ ಅನುವು ಮಾಡಿಕೊಡುತ್ತದೆ.

ʻನೋಕಿಯಾ 105 ಕ್ಲಾಸಿಕ್ʼ ಒಂದು ವರ್ಷದ ಬದಲಿ ಗ್ಯಾರಂಟಿ ಲಭ್ಯವಿದೆ. ವೈರ್‌ಲೆಸ್ ರೇಡಿಯೋ, ಅತ್ಯುತ್ತಮ ಬ್ಯಾಟರಿ ಬಾಳಿಕೆ, ಸರಳತೆ ಮತ್ತು ಕೈಗೆಟುಕುವ ಬೆಲೆಯ ಅಂಶಗಳನ್ನು ಒಳಗೊಂಡಿರುವ ಈ ಸಾಧನವು ನೋಕಿಯಾ ಫೋನ್‌ನಿಂದ ನಿರೀಕ್ಷಿಸುವ ಭರವಸೆ ಮತ್ತು ವಿಶ್ವಾಸಾರ್ಹತೆಯನ್ನು ಒದಗಿಸುತ್ತದೆ.

ಭಾರತದಲ್ಲಿ ಮೊದಲು ಬಳಕೆಯಾದ ಮೊಬೈಲ್ ನೋಕಿಯಾ, ಸ್ಯಾಮ್‌ಸಂಗ್ ಅಲ್ಲ; ಮತ್ಯಾವುದು?

ನಿಮ್ಮನ್ನು ಸದಾ ಸಂಪರ್ಕದಲ್ಲಿಡಲು ವಿನ್ಯಾಸಗೊಳಿಸಲಾಗಿದೆ
ʻನೋಕಿಯಾ 105 ಕ್ಲಾಸಿಕ್ʼ ಫೋನ್‌ ಅನ್ನು ಕಠಿಣ ಪರಿಸರವನ್ನು ಸಹ ತಡೆದುಕೊಳ್ಳುವಂತಾಗಲು ಕಠಿಣ ಬಾಳಿಕೆ ಪರೀಕ್ಷೆಗೆ ಒಳಪಡಿಸಲಾಗಿದೆ. ಪರಿಸ್ಥಿತಿಗಳು ಏನೇ ಇರಲಿ ನಿರಂತರ ಸಂಪರ್ಕವನ್ನು ಇದು ಖಚಿತಪಡಿಸುತ್ತದೆ. ʻಕೀಮ್ಯಾಟ್ʼನಲ್ಲಿರುವ ಪ್ರತಿಯೊಂದು ಬಟನ್‌ನ ನಡುವೆ ಕರಾರುವಕ್ಕಾದ ಅಂತರವು, ಕತ್ತಲೆಯಲ್ಲಿಯೂ ಡಯಲ್ ಮಾಡುವುದನ್ನು ಮತ್ತು ಮೆಸೇಜ್‌ ಟೈಪ್‌ ಮಾಡುವುದನ್ನು ಸುಲಭವಾಗಿಸುತ್ತದೆ.

ಸುಧಾರಿತ ಬಳಕೆದಾರರ ಅನುಭವ ಮತ್ತು ಸುಧಾರಿತ ಆಡಿಯೊ
ಕೈಯಲ್ಲಿ ಹಿಡಿದಾಗ ಉತ್ತಮ ಅನುಭವ ಪಡೆಯಲು ಮತ್ತು ನೀವು ಪ್ರಯಾಣದಲ್ಲಿರುವಾಗ ಸುಲಭವಾಗಿ ನಿಮ್ಮ ಜೇಬಿಗೆ ಜಾರಲು ʻನೋಕಿಯಾ 105 ಕ್ಲಾಸಿಕ್ʼನ ಎರ್ಗೊನಾಮಿಕ್ ವಿನ್ಯಾಸ ಮತ್ತು ಪುಟ್ಟ ಆಕಾರವನ್ನು ವಿಶೇಷವಾಗಿ ರೂಪಿಸಲಾಗಿದೆ.

ದಿನಗಟ್ಟಲೆ ಬ್ಯಾಟರಿ ಲೈಫ್‌
ʻನೋಕಿಯಾ 105 ಕ್ಲಾಸಿಕ್ʼ ಫೋನ್‌ 800 ಎಂಎಎಚ್ ಬ್ಯಾಟರಿಯನ್ನು ಹೊಂದಿದ್ದು, ವಿಸ್ತೃತ ಸ್ಟ್ಯಾಂಡ್ ಬೈ ಸಮಯವನ್ನು ಒದಗಿಸುತ್ತದೆ. ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ತಡೆರಹಿತ ಸಂಭಾಷಣೆಗಳಿಗೆ ಅನುವು ಮಾಡಿಕೊಡುತ್ತದೆ.

ನೋಕಿಯಾ 130 ಮ್ಯೂಸಿಕ್, ನೋಕಿಯಾ 150 ಪ್ರಿಮಿಯಂ ಫೋನ್ ಭಾರತದಲ್ಲಿ ಬಿಡುಗಡೆ!

ಮನರಂಜನೆ ಮತ್ತು ಕ್ರಿಯಾತ್ಮಕತೆ:
ಬಳಕೆದಾರರ ಮನರಂಜನೆ ಮತ್ತು ಉತ್ಪಾದಕತೆಗೆ ನೆರವಾಗುವಂತಹ ವೈಶಿಷ್ಟ್ಯಗ ಗುಚ್ಛದೊಂದಿಗೆ ʻನೋಕಿಯಾ 105 ಕ್ಲಾಸಿಕ್ʼ ಅನ್ನು ವಿನ್ಯಾಸಗೊಳಿಸಲಾದ. ಇದು ವೈರ್‌ಲೆಸ್ ಎಫ್‌ಎಂ ರೇಡಿಯೋವನ್ನು ಒಳಗೊಂಡಿದೆ. ಬಳಕೆದಾರರಿಗೆ ಹೆಡ್ ಸೆಟ್ ಅಗತ್ಯವಿಲ್ಲದೆ ತಮ್ಮ ನೆಚ್ಚಿನ ಬಾನುಲಿ ಕೇಂದ್ರಗಳನ್ನು ಕೇಳಲು ಅನುವು ಮಾಡಿಕೊಡುತ್ತದೆ.