Asianet Suvarna News Asianet Suvarna News

ಆ್ಯಂಡ್ರಾಯ್ಡ್ ಬಳಕೆದಾರರೇ ಎಚ್ಚರ: ಮೊಬೈಲ್‌ ಫೋನ್‌ಗೆ ಹ್ಯಾಕಿಂಗ್‌ ಭೀತಿ..!

ಮಾಹಿತಿ ಲಭಿಸುತ್ತಿದ್ದಂತೆ ಮೊಬೈಲ್ ಕಂಪನಿಗಳಾದ ಸ್ಯಾಮ್‌ಸಂಗ್, ರಿಯಲ್‌ಮಿ, ಒನ್‌ಪ್ಲಸ್, ಶಿಯೋಮಿ ಹಾಗೂ ವಿವೋಗಳಿಗೂ ಕೇಂದ್ರ ಸರ್ಕಾರ ಈಗಾಗಲೇ ಮಾಹಿತಿ ನೀಡಿದೆ. ಹೀಗಾಗಿ ಆ ಕಂಪನಿಗಳು ಹ್ಯಾಕಿಂಗ್ ತಡೆಯಲು ಸೆಕ್ಯುರಿಟಿ ಪ್ಯಾಚ್ ಗಳ ಬಿಡುಗಡೆ ಆರಂಭಿಸಿವೆ. ಈಗಾಗಲೇ ಕೆಲವು ಮೊಬೈಲ್‌ಗಳಿಗೆ ಈ ಪ್ಯಾಚ್‌ಗಳು ಬರುತ್ತಿದ್ದು, ಮುಂಬರುವ ವಾರಗಳಲ್ಲಿ ಉಳಿದ ಮೊಬೈಲ್ ಫೋನ್‌ಗಳಿಗೂ ಬರಲಿವೆ.
 

hackers conducting code attacks to steal sensitive information on android mobile phones in india grg
Author
First Published Jul 14, 2024, 10:23 AM IST | Last Updated Jul 14, 2024, 10:56 AM IST

ನವದೆಹಲಿ(ಜು.14):  ದೇಶದ ಕೋಟ್ಯಂತರ ಆ್ಯಂಡ್ರಾಯ್ಡ್ ಮೊಬೈಲ್ ಫೋನ್‌ಗಳಿಗೆ ಈಗ ಹ್ಯಾಕ್ ಆತಂಕೆ ಎದುರಾಗಿದೆ. ಮೊಬೈಲ್ ಬಳಕೆದಾರರಿಗೆ ಗೊತ್ತಾಗದ ಹಾಗೆ ಸೂಕ್ಷ್ಮ ಮಾಹಿತಿಗಳಿಗೆ ಕನ್ನ ಹಾಕುವ ಹಾಗೂ ಅವರ ಮೊಬೈಲ್‌ಗಳಿಗೆ ದುರುದ್ದೇಶದ ಕೋಡ್ ಅನ್ನು ತೂರಿಸುವ ಸಾಧ್ಯತೆ ಕುರಿತು ಕೇಂದ್ರ ಸರ್ಕಾರದ ಭಾರತೀಯ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಂ (ಸರ್ಟ್ -ಇನ್) ಎಚ್ಚರಿಕೆ ನೀಡಿದೆ.

ಈ ಮಾಹಿತಿ ಲಭಿಸುತ್ತಿದ್ದಂತೆ ಮೊಬೈಲ್ ಕಂಪನಿಗಳಾದ ಸ್ಯಾಮ್‌ಸಂಗ್, ರಿಯಲ್‌ಮಿ, ಒನ್‌ಪ್ಲಸ್, ಶಿಯೋಮಿ ಹಾಗೂ ವಿವೋಗಳಿಗೂ ಕೇಂದ್ರ ಸರ್ಕಾರ ಈಗಾಗಲೇ ಮಾಹಿತಿ ನೀಡಿದೆ. ಹೀಗಾಗಿ ಆ ಕಂಪನಿಗಳು ಹ್ಯಾಕಿಂಗ್ ತಡೆಯಲು ಸೆಕ್ಯುರಿಟಿ ಪ್ಯಾಚ್ ಗಳ ಬಿಡುಗಡೆ ಆರಂಭಿಸಿವೆ. ಈಗಾಗಲೇ ಕೆಲವು ಮೊಬೈಲ್‌ಗಳಿಗೆ ಈ ಪ್ಯಾಚ್‌ಗಳು ಬರುತ್ತಿದ್ದು, ಮುಂಬರುವ ವಾರಗಳಲ್ಲಿ ಉಳಿದ ಮೊಬೈಲ್ ಫೋನ್‌ಗಳಿಗೂ ಬರಲಿವೆ.

ಬಡವರ ಬದುಕಿಗೆ ಮತ್ತೊಂದು ಹೊರೆ; ಹಾಲು, ಪೆಟ್ರೋಲ್‌ ಆಯ್ತು.. ಮೊಬೈಲ್‌ ರಿಚಾರ್ಜ್‌ ಕೂಡ ಈಗ ದುಬಾರಿ!

ಸೆಕ್ಯುರಿಟಿ ಪ್ಯಾಚ್‌ಗಾಗಿ ಬಳಕೆದಾರರು ತಮ್ಮ ಮೊಬೈಲ್ ನಲ್ಲಿ ಸೆಟ್ಟಿಂಗ್ಸ್ ಹೋಗಿ, ಸಿಸ್ಟಮ್ ಅಪ್‌ಡೇಟ್ ಕ್ಲಿಕ್ ಮಾಡಿ, ಸಾಫ್ಟ್‌ವೇ‌ರ್ ಮೇಲೆ ಒತ್ತುವ ಮೂಲಕ ಭದ್ರತಾ ಪ್ಯಾಚ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. ಅಲ್ಲಿವರೆಗೂ ಅಪಾಯಕಾರಿ ವೆಬ್‌ಸೈಟ್‌ಗಳಿಗೆ ಭೇಟಿ ನೀಡುವುದು ಅಥವಾ ಗೊತ್ತಿಲ್ಲದವರಿಂದ ಬರುವ ಲಿಂಕ್ ಗಳ ಮೇಲೆ ಕ್ಲಿಕ್ ಮಾಡುವುದನ್ನು ಮಾಡಬಾರದು ಎಂದು ಸೈಬ‌ರ್ ತಂತ್ರಜ್ಞರು ಸಲಹೆ ಮಾಡಿದ್ದಾರೆ. ಮೊಬೈಲ್ ಸಿಸ್ಟಮ್, ಗೂಗಲ್ ಪ್ಲೇ ಸಿಸ್ಟಮ್ ಅಪ್‌ಡೇಟ್‌ಗಳು, ಆರ್ಮ್ ಕಾಂಪೋನೆಂಟ್‌ಗಳು, ಮೀಡಿಯಾ ಟೆಕ್, ಇಮಾಜಿನೇಷನ್‌, ಕ್ವಾಲ್‌ಕಾಂ ಕಾಂಪೋಂನೆಂಟ್‌ಗಳಲ್ಲಿ ಕೆಲವೊಂದು ಲೋಪದೋಷಗಳು ಪತ್ತೆಯಾಗಿವೆ.

ಇದರಿಂದಾಗಿ ಆ್ಯಂಡ್ರಾಯ್ಡ್ 12, 12ಎಲ್, 13 ಹಾಗೂ 14ನೇ ಆವೃತ್ತಿಯನ್ನು ಬಳಸುತ್ತಿರುವ ಗ್ರಾಹಕರ ಮೊಬೈಲ್ ಗಳು ಅಪಾಯಕ್ಕೆ ತುತ್ತಾಗಬಹುದು ಎಂದು ಸರ್ಕಾರ ಎಚ್ಚರಿಕೆ ನೀಡಿದೆ. ಈ ಆವೃತ್ತಿಗಳ ಆ್ಯಂಡ್ರಾಯ್ಡ್ ಫೋನ್ ಗಳು ದೇಶದಲ್ಲಿ ಕಮ್ಮಿ ಎಂದರೂ 1 ಕೋಟಿಗೂ ಅಧಿಕ ಸಂಖ್ಯೆಯಲ್ಲಿವೆ.

Latest Videos
Follow Us:
Download App:
  • android
  • ios