ನವ​ದೆ​ಹ​ಲಿ[ಮಾ.15]: ಮೊಬೈಲ್‌ ಫೋನ್‌​ ಹಾಗೂ ಫೋನ್‌ಗೆ ಬಳ​ಸುವ ಕೆಲವು ಬಿಡಿ ಭಾಗ​ಗಳ ಮೇಲಿನ ಜಿಎ​ಸ್‌ಟಿ ದರ​ಗ​ಳನ್ನು ಶೇ.12ರಿಂದ ಶೇ.18ಕ್ಕೆ ಏರಿಕೆ ಮಾಡಲು ಜಿಎ​ಸ್‌ಟಿ ಮಂಡಳಿ ಶನಿ​ವಾರ ತೀರ್ಮಾನ ಕೈಗೊಂಡಿದೆ. ಪರಿ​ಷ್ಕೃತ ದರ ಏ.1ರಿಂದ ಜಾರಿ ಆಗ​ಲಿ​ದೆ ಎಂದು ಹಣ​ಕಾಸು ಸಚಿವೆ ನಿರ್ಮಲಾ ಸೀತಾ​ರಾ​ಮನ್‌ ತಿಳಿ​ಸಿ​ದ್ದಾ​ರೆ.

ಇದೇ ವೇಳೆ, 2018-19ನೇ ಸಾಲಿ​ನಲ್ಲಿ 2 ಕೋಟಿ​ಗಿಂತ ಕಡಿಮೆ ವಹಿ​ವಾಟು ನಡೆ​ಸುವ ಕಂಪ​ನಿ​ಗಳು ವಿಳಂಬ​ವಾಗಿ ವಾರ್ಷಿಕ ತೆರಿಗೆ ಪಾವತಿ ವಿವರ ಸಲ್ಲಿ​ಕೆ ಮಾಡಿ​ದ್ದ​ಕ್ಕೆ ವಿಧಿ​ಸಿ​ರು​ವ ದಂಡ​ವನ್ನು ಮನ್ನಾ ಮಾಡ​ಲು ಜಿಎ​ಸ್‌ಟಿ ಮಂಡಳಿ ನಿರ್ಧ​ರಿ​ಸಿದೆ.

ಇದೇ ವೇಳೆ ಜಿಎ​ಸ್‌ಟಿ ನೆಟ್‌​ವರ್ಕ್ ಸಮ​ರ್ಥ್ಯ​ವನ್ನು ಹೆಚ್ಚಿ​ಸುವ ನಿಟ್ಟಿ​ನಿಂದ ಹೆಚ್ಚಿನ ಮಾನವ ಸಂಪ​ನ್ಮೂಲ ಬಳಕೆ ಮಾಡು​ವಂತೆ ಜಿಎ​ಸ್‌ಟಿ ಮಂಡಳಿ ಜಿಎ​ಸ್‌ಟಿ ಸಾಫ್ಟ್‌​ವೇರ್‌ ಅಭಿ​ವೃ​ದ್ಧಿ​ಪ​ಡಿ​ಸಿದ ಇಸ್ಫೋ​ಸಿ​ಸ್‌ಗೆ ಸೂಚನೆ ನೀಡಿದೆ.