Asianet Suvarna News Asianet Suvarna News

S23 ಸೇರಿ Samsung ಫೋನ್ ಬಳಕೆದಾರರಿಗೆ ಕೇಂದ್ರ ಸರ್ಕಾರದ ಎಚ್ಚರಿಕೆ, ಡೇಟಾ ಕಳವು ಆತಂಕ!

ಸ್ಮಾರ್ಟ್‌ಫೋನ್ ಬಳಕೆ ಸುಲಭ ಆದರೆ ಅಪಾಯವೂ ಹೆಚ್ಚು. ಮಾಹಿತಿ ಕದಿಯುವಿಕೆ, ಡೇಟಾ ಸೋರಿಕೆ ಸೇರಿದಂತೆ ಹಲವು ಅಪಾಯ ಸ್ಮಾರ್ಟ್‌ಫೋನ್ ಬಳಕೆದಾರರು ಎದುರಿಸುತ್ತಾರೆ. ಇದೀಗ  ಕೇಂದ್ರ ಸರ್ಕಾರದ ಮಹತ್ವದ ಎಚ್ಚರಿಕೆ ನೀಡಿದೆ. ಪ್ರಮುಖವಾಗಿ ಸ್ಯಾಮ್ಸಂಗ್ S23 ಸೇರಿದಂತೆ ಸ್ಯಾಮ್‌ಸಂಗ್ ಮೊಬೈಲ್ ಫೋನ್ ಬಳಕೆದಾರರು ತಕ್ಷಣವೇ ಫೋನ್ ಪರಿಶೀಲಿಸಿ ಸಲಹೆ ಪಾಲಿಸುವಂತೆ ಸೂಚಿಸಿದೆ

Government of India warns Samsung Mobile users on high risk security ask immediate update ckm
Author
First Published Dec 14, 2023, 5:19 PM IST

ಭಾರತದ ವಿಶ್ವದಲ್ಲೇ ಅತೀ ದೊಡ್ಡ ಮೊಬೈಲ್ ಮಾರುಕಟ್ಟೆ ಹೊಂದಿದೆ. ಸ್ಮಾರ್ಟ್‌ಫೋನ್ ಬಳಕೆ, ಮಾರಾಟದಲ್ಲೂ ಭಾರತ ದಾಖಲೆ ಬರೆದಿದೆ. ಸ್ಮಾರ್ಟ್‌ಫೋನ್ ಬಳಕೆಯಿಂದ ಗ್ರಾಹಕರು ಡೇಟಾ ಸೋರಿಕೆ ಸೇರಿದಂತೆ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇದೀಗ ಸ್ಯಾಮ್‌ಸಂಗ್‌ ಬಳಕೆದಾರರಿಗೆ ಭಾರತ ಸರ್ಕಾರವು (Government of India) ಮಹತ್ವದ ಎಚ್ಚರಿಕೆ ನೀಡಿದೆ. ಸ್ಯಾಮ್‌ಸಂಗ್(Samsung) ಕೆಲ ಸೀರಿಸ್ ಫೋನ್‌ಗಳಲ್ಲಿ ಡೇಟಾ ಕಳುವು ಅಪಾಯವಿದೆ ಎಂದಿದೆ. ಇಷ್ಟೇ ಅಲ್ಲ ಈ ಬಳಕೆದಾರರು ತಮ್ಮ ಫೋನ್ ತಕ್ಷಣ ಅಪ್‌ಡೇಟ್ ಮಾಡುವಂತೆ ಸೂಚಿಸಿದೆ.

ಸ್ಯಾಮ್‌ಸಂಗ್ S23 ಸೇರಿದಂತೆ ಗ್ಯಾಲಕ್ಸಿ ಸೀರಿಸ್ ಫೋನ್‌ಗಳ   Android 11, 12, 13 ಮತ್ತು 14 ಆಪರೇಟಿಂಗ್ ಸಿಸ್ಟಮ್‌ನಲ್ಲಿ(Os) ಕೆಲ ದೋಷಗಳಿವೆ. ಈ ದೋಷವನ್ನೇ ಸದುಪಯೋಗ ಪಡಿಸಿಕೊಂಡ ಹ್ಯಾಕರ್ಸ್, ನಿಮ್ಮ ಫೋನ್‌ಗಳಿಂದ ಮಹತ್ವದ ಮಾಹಿತಿ ಕದಿಯುವ ಸಾಧ್ಯತೆ ಹೆಚ್ಚಿದೆ.ಹೀಗಾಗಿ ತಕ್ಷಣವೇ ಸಾಫ್ಟ್‌ವೇರ್ ಅಪ್‌ಡೇಟ್ ಮಾಡುವಂತೆ ಕೇಂದ್ರ ಸರ್ಕಾರ ಸೂಚಿಸಿದೆ. 

ಕೇವಲ 11,699 ರೂ.ಗೆ ಸ್ಯಾಮ್‌ಸಂಗ್‌ ಫೋಲ್ಡಬಲ್ ಫೋನ್, ಫ್ಲಿಪ್‌ಕಾರ್ಟ್‌ ಸೇಲ್‌ನಲ್ಲಿ ಸೂಪರ್‌ ಆಫರ್‌!

ಭಾರತೀಯ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್ (CERT-In) ಈ ಕುರಿತು ಮಹತ್ವದ ಸೂಚನೆ ನೀಡಿದೆ. ಹೆಚ್ಚು ಬಳಕೆಯಲ್ಲಿರುವ ಈ Android ಆವೃತ್ತಿಯ ಫೋನ್ ಗಳು ಮುಂದಿನ ದಿನಗಳಲ್ಲಿ  ಇತರ ಸಂಭಾವ್ಯ ಸಮಸ್ಯೆಗಳನ್ನು ಉಂಟು ಮಾಡಬಹುದು ಎಂದು ತಿಳಿಸಿದೆ. 

ಸ್ಯಾಮ್‌ಸಂಗ್ ಫೋನ್‌ಗಳಲ್ಲಿ ಸ್ಯಾಮ್‌ಸಂಗ್ ಸೆಕ್ಯೂರಿಟಿ ಮ್ಯಾನೇಜ್ಮೆಂಟ್( Samsung Knox)ಇನ್‌ಸ್ಟಾಲ್ ಮಾಡಲಾಗಿರುತ್ತದೆ. ಆದರೆ  ಈ ಸೆಕ್ಯೂರಿಟಿ ಮ್ಯಾನೇಜ್ಮೆಂಟ್‌ನಲ್ಲಿ ಕೆಲ ದೋಷಗಳಿಂದ ಅಸಮರ್ಪಕ ಪ್ರವೇಶ ನಿಯಂತ್ರ, ಫೇಶಿಯಲ್ ರೆಕಗ್ನೀಶನ್ ಸಾಫ್ಟ್‌ವೇರ್, ಕಂಪ್ಯೂಟರ್ ಪ್ರೋಗಾಮಿಂಗ್ ಮೇಲೆ ಅತಿಯಾದ ನ್ಯೂಮರಿಟ್ ಡೇಟಾ ಫ್ಲೋ,  AR ಎಮೋಜಿ ಅಪ್ಲಿಕೇಶನ್‌ನೊಂದಿಗೆ ದೃಢೀಕರಣ ಸಮಸ್ಯೆ ಸೇರಿದಂತೆ ಹಲವು ಸಮಸ್ಯೆಗಳು ಎದುರಾಗಿದೆ. 

 Samsung Knox ದೋಷಗಳಿಂದ ಫೋನ್ ನಿರ್ವಹಣೆಯಲ್ಲಿ ಸಮಸ್ಯೆ ಎದುರಾಗಲಿದೆ. ಮೆಮೊರಿ ಕರಪ್ಶನ್ (Corruption) ಸೇರಿದಂತೆ ಹಲವು ತಾಂತ್ರಿಕ ಸಮಸ್ಯಗಳು ಬಳಕೆದಾರರಿಗೆ ಎದುರಾಗಲಿದೆ. ಇದೇ ವೇಳೆ ಡೇಟಾ ಸೋರಿಕೆ, ಮಾಹಿತಿ ಕಳುವು ಸಮಸ್ಯೆಗಳನ್ನು ಬಳಕೆದಾರರು ಗಂಭೀರವಾಗಿ ಎದುರಿಸಬೇಕಾಗುತ್ತದೆ.  

15,000 ರೂಪಾಯಿ ಒಳಗೆ ಲಭ್ಯವಿರುವ ಅತ್ಯುತ್ತಮ ಸ್ಮಾರ್ಟ್‌ಫೋನ್, ಇಲ್ಲಿದೆ ಲಿಸ್ಟ್

ಆಕ್ರಮಣಕಾರರಿಗೆ ಹೀಪ್ ಓವರ್‌ಫ್ಲೋ ಮತ್ತು ಸ್ಟಾಕ್-ಆಧಾರಿತ ಬಫರ್ ಓವರ್‌ಫ್ಲೋ ಮಾಡುವುದು, ಮೊಬೈಲ್ ಸಿಮ್ ಪಿನ್ ಪ್ರವೇಶಿಸಲು,  AR ಎಮೋಜಿಯ ಸ್ಯಾಂಡ್‌ಬಾಕ್ಸ್ ಡೇಟಾವನ್ನು ಓದಲು, ಸಿಸ್ಟಮ್ ಸಮಯವನ್ನು ಬದಲಾಯಿಸುವ ಮೂಲಕ ನಾಕ್ಸ್ ಗಾರ್ಡ್ ಲಾಕ್ ಅನ್ನು ಬೈಪಾಸ್ ಮಾಡಲು, ಅನಿಯಂತ್ರಿತ ಫೈಲ್‌ಗಳನ್ನು ಪ್ರವೇಶಿಸುವುದು, ಸೂಕ್ಷ್ಮ ಮಾಹಿತಿಗೆ ಪ್ರವೇಶ ಪಡೆದು ಸುಲಭವಾಗಿ ಸೋರಿಕೆ ಮಾಡುವ ಸಾಧ್ಯತೆ ಹೆಚ್ಚಿದೆ. ಈ ಭದ್ರತಾ ಸಮಸ್ಯೆಗಳನ್ನು ಪರಿಹರಿಸಲು ಸ್ಯಾಮ್‌ಸಂಗ್ ಈಗಾಗಲೇ ಸಾಫ್ಟ್‌ವೇರ್ ಪ್ಯಾಚ್ ಅನ್ನು ಬಿಡುಗಡೆ ಮಾಡಿದೆ. ಜೊತೆಗೆ Samsung ಬಳಕೆದಾರರು ತಮ್ಮ ಫೋನ್‌ನ OS ಅಥವಾ ಫರ್ಮ್‌ವೇರ್ ಅನ್ನು ಆಪ್ ಡೇಟ್  ಮಾಡುವುದು ಮುಖ್ಯವಾಗಿದೆ.

ಸಿಂಧು ಕೆ ಟಿ, ಕುವೆಂಪು ವಿಶ್ವವಿದ್ಯಾಲಯ
 

Follow Us:
Download App:
  • android
  • ios