Global Smartphone Shipments : Q4 2021ರಲ್ಲಿ ಸ್ಯಾಮಸಂಗ್ ಹಿಂದಿಕ್ಕಿ ಮೊದಲ ಸ್ಥಾನಕ್ಕೇರಿದ ಆ್ಯಪಲ್
ಸಪ್ಲೈ ಚೈನ್ ಸಮಸ್ಯೆಗಳು ಮತ್ತು ಪ್ರಪಂಚದಾದ್ಯಂತ ಹೆಚ್ಚುತ್ತಿರುವ ಕರೋನವೈರಸ್ ಪ್ರಕರಣಗಳ ಹೊರತಾಗಿಯೂ ಕಳೆದ ತ್ರೈಮಾಸಿಕದಲ್ಲಿ ಜಾಗತಿಕ ಸ್ಮಾರ್ಟ್‌ಫೋನ್ ಮಾರಾಟ 22 ಪ್ರತಿಶತವನ್ನು ಬೆಳವಣಿಗೆ ಕಂಡಿದೆ
Tech Desk: ಮಾರುಕಟ್ಟೆ ವಿಶ್ಲೇಷಕ ಸಂಸ್ಥೆ ಕ್ಯಾನಲಿಸ್ ವರದಿಯಯು 2021ರ ನಾಲ್ಕನೇ ತ್ರೈಮಾಸಿಕದಲ್ಲಿ ವಿಶ್ವದಾದ್ಯಂತ ಸ್ಮಾರ್ಟ್‌ಫೋನ್ ಸಾಗಣೆಗೆ ಸಂಬಂಧಿಸಿದಂತೆ ಆ್ಯಪಲ್ ಅತ್ಯಂತ ಜನಪ್ರಿಯ ಸ್ಮಾರ್ಟ್‌ಫೋನ್ ತಯಾರಕ ಎಂದು ಹೇಳಿದೆ. ಕ್ಯುಪರ್ಟಿನೊ ಮೂಲದ ಸ್ಮಾರ್ಟ್‌ಫೋನ್ ಆ್ಯಪಲ್ ಪ್ರತಿಸ್ಪರ್ಧಿ ಸ್ಯಾಮಸಂಗ್ ಹಿಂದಿಕ್ಕಿ ಮೊದಲ ಸ್ಥಾನವನ್ನು ಪಡೆದಿದೆ. ಪೂರೈಕೆ ಸರಪಳಿ ಸಮಸ್ಯೆಗಳು (Supply Chain) ಮತ್ತು ಪ್ರಪಂಚದಾದ್ಯಂತ ಹೆಚ್ಚುತ್ತಿರುವ ಕರೋನವೈರಸ್ ಪ್ರಕರಣಗಳ ಹೊರತಾಗಿಯೂ ಕಳೆದ ತ್ರೈಮಾಸಿಕದಲ್ಲಿ ಜಾಗತಿಕ ಸ್ಮಾರ್ಟ್‌ಫೋನ್ ಮಾರಾಟದಲ್ಲಿ 22 ಪ್ರತಿಶತವನ್ನು ಬೆಳವಣಿಗೆ ಕಂಡಿದೆ.
ಏತನ್ಮಧ್ಯೆ, ಚೀನಾದ ಸ್ಮಾರ್ಟ್‌ಫೋನ್ ತಯಾರಕರಾದ ಶಾಓಮಿ (Xiaomi), ಓಪ್ಪೋ (Oppo) ಮತ್ತು ವಿವೋ (Vivo) ಕ್ರಮವಾಗಿ 12 ಶೇಕಡಾ, 9 ಶೇಕಡಾ ಮತ್ತು 8 ಶೇಕಡಾ ಮಾರುಕಟ್ಟೆ ಪಾಲನ್ನು ಪಡೆಯುವ ಮೂಲಕ ಮೂರು, ನಾಲ್ಕು ಮತ್ತು ಐದನೇ ಸ್ಥಾನಗಳಲ್ಲಿವೆ.
ಇದನ್ನೂ ಓದಿ: Mobile Screen Damage: ಸರಿ ಮಾಡಲು ಇಲ್ಲಿದೆ ಸುಲಭ ಉಪಾಯ
ಐಫೋನ್ 13 ಸರಣಿಗೆ ಹೆಚ್ಚಿದ ಬೇಡಿಕೆ: ಕ್ಯಾನಲಿಸ್‌ನ ವರದಿಯ ಪ್ರಕಾರ, ಐಫೋನ್ 13 ಸರಣಿಯ ಹೆಚ್ಚಿದ ಬೇಡಿಕೆಯಿಂದಾಗಿ ಆ್ಯಪಲ್ ಅಂತಿಮವಾಗಿ ಸ್ಮಾರ್ಟ್‌ಫೋನ್ ಸಾಗಣೆಯ ಸ್ಪರ್ಧೆಯಲ್ಲಿ ಸ್ಯಾಮ್‌ಸಂಗನ್ನು ಸೋಲಿಸುವಲ್ಲಿ ಯಶಸ್ವಿಯಾಗಿದೆ. "ಆ್ಯಪಲ್ ಚೀನಾದ ಮೇನ್‌ಲ್ಯಾಂಡ್‌ನಲ್ಲಿ ಅಭೂತಪೂರ್ವ ಐಫೋನ್ ಬೆಳವಣಿಗೆ ಕಂಡಿದೆ, ಅದರ ಪ್ರಮುಖ ಸಾಧನಗಳಿಗೆ ಉತ್ತಮ ಬೆಲೆಗಳು ಮೌಲ್ಯವನ್ನು ಬಲವಾಗಿರಿಸುತ್ತವೆ" ಎಂದು ವರದಿ ಹೇಳಿದೆ. ಕೊರೋನಾ ಸಾಂಕ್ರಾಮಿಕ ರೋಗದಿಂದಾಗಿ ಕಂಪನಿಯ ಪೂರೈಕೆ ಸರಪಳಿಯು ಮತ್ತು ಉತ್ಪಾದನಾ ಸಾಮರ್ಥ್ಯದ ಮೇಲೂ ಪರಿಣಾಮ ಬೀರಿತು (ಮತ್ತು ಕೆಲವು ಮಾರುಕಟ್ಟೆಗಳಲ್ಲಿ ಕಾಯುವ ಸಮಯ ಹೆಚ್ಚಾಗಿದೆ) ಆದರೆ ಈಗ ಅದು ಚೇತರಿಸಿಕೊಳ್ಳುತ್ತಿದೆ ಎಂದು ವರದಿ ತಿಳಿಸಿದೆ.
ಸ್ಯಾಮಸಂಗ್‌ಗೆ ಎರಡನೇ ಸ್ಥಾನ: ವರದಿಯ ಪ್ರಕಾರ, ಸ್ಯಾಮಸಂಗ್ ಎರಡನೇ ಸ್ಥಾನದಲ್ಲಿದೆ ಮತ್ತು Q4 2021 ರಲ್ಲಿ ಪ್ರಪಂಚದಾದ್ಯಂತದ ಸ್ಮಾರ್ಟ್‌ಫೋನ್ ಸಾಗಣೆಗಳಲ್ಲಿ 20 ಪ್ರತಿಶತ ಪಾಲನ್ನು ಹೊಂದಿದೆ. ದಕ್ಷಿಣ ಕೊರಿಯಾದ ಸ್ಮಾರ್ಟ್‌ಫೋನ್ ತಯಾರಕರು Q4 2020 ಕ್ಕೆ ಹೋಲಿಸಿದರೆ ಬೆಳವಣಿಗೆ ಕಂಡಿದೆ. 2020ರಲ್ಲಿ ಇದು ಜಾಗತಿಕ ಸ್ಮಾರ್ಟ್‌ಫೋನ್ ಸಾಗಣೆಯಲ್ಲಿ 17 ಪ್ರತಿಶತ ಪಾಲನ್ನು ಹೊಂದಿತ್ತು. ಶಾಓಮಿ ವಿಶ್ವದಾದ್ಯಂತ ಮಾರಾಟವಾದ 12 ಶೇಕಡಾ ಹ್ಯಾಂಡ್‌ಸೆಟ್‌ಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ವರದಿಯ ಪ್ರಕಾರ ಓಪ್ಪೋ ಮತ್ತು ವಿವೋ ಕ್ರಮವಾಗಿ 9 ಪ್ರತಿಶತ ಮತ್ತು 8 ಪ್ರತಿಶತದೊಂದಿಗೆ ನಾಲ್ಕು ಮತ್ತು ಐದನೇ ಸ್ಥಾನವನ್ನು ಪಡೆದುಕೊಂಡಿವೆ.
ಇದ್ನನೂ ಓದಿ: Flipkart Big Saving Days Sale 2022: ರಿಪಬ್ಲಿಕ್ ಡೇ ಸೇಲ್‌ನಲ್ಲಿ ಸ್ಮಾರ್ಟ್‌ಫೋನ್ ಮೇಲೆ ಭರ್ಜರಿ ರಿಯಾಯಿತಿ!
ಜಾಗತಿಕ ಚಿಪ್ ಕೊರತೆ : ಕಂಪನಿಯ ಇತ್ತೀಚಿನ ಐಫೋನ್ 13 ಸರಣಿಗಾಗಿ ದೀರ್ಘಾವಧಿಯ ಕಾಯುವಿಕೆಯ ನಂತರ ಗ್ರಾಹಕರು ಆಸಕ್ತಿಯನ್ನು ಕಳೆದುಕೊಳ್ಳುತ್ತಾರೆ ಎಂದು ಆ್ಯಪಲ್ ಪೂರೈಕೆದಾರರಿಗೆ ತಿಳಿಸಿದೆ ಎಂದು ಡಿಸೆಂಬರ್‌ನಲ್ಲಿ ಬ್ಲೂಮ್‌ಬರ್ಗ್ ವರದಿ ಮಾಡಿದೆ. ಆ್ಯಪಲ್ 2022 ರಲ್ಲಿ ಪೂರೈಕೆಯನ್ನು ಸುಧಾರಿಸುತ್ತದೆ ಎಂದು ವರದಿ ಸೂಚಿಸಿದೆ. ಆ್ಯಪಲ್ ಈ ಹಿಂದೆ ಜಾಗತಿಕ ಚಿಪ್ ಕೊರತೆ ಹಾಗೂ ಐಫೋನ್ ಕಂಪೋನೆಂಟ್ ಕೊರತೆಯಿಂದಾಗಿ ಐಫೋನ್ 13 ಉತ್ಪಾದನಾ ಯೋಜನೆಗಳನ್ನು 10 ಮಿಲಿಯನ್ ಯುನಿಟ್‌ಗಳಷ್ಟು ಕಡಿತಗೊಳಿಸಿತು ಎಂದು ಬ್ಲೂಮ್‌ಬರ್ಗ್ ಹಳೆಯ ವರದಿ ತಿಳಿಸಿದೆ.
ಉತ್ಪನ್ನ ಬಿಡುಗಡೆ ಸಮಯನ್ನು ವಿಸ್ತರಣೆ: ಜಾಗತಿಕ ಸೆಮಿಕಂಡಕ್ಟರ್ ಕೊರತೆಯು ಆ್ಯಪಲ್ ಜತೆಗೆ ಇತರ ಕಂಪನಿಗಳ ಮೇಲೆ ಪರಿಣಾಮ ಬೀರುತ್ತಿದೆ ಎಂದು ಕ್ಯಾನಲಿಸ್ ವರದಿ ಹೇಳುತ್ತದೆ ಮತ್ತು 2022 ರ ದ್ವಿತೀಯಾರ್ಧದವರೆಗೆ ಸುಧಾರಿಸುವ ನಿರೀಕ್ಷೆಯಿಲ್ಲದ ಘಟಕಗಳ ಕೊರತೆಯಿಂದ ಉಂಟಾದ ತೊಂದರೆಗಳಿಗೆ ಸ್ಮಾರ್ಟ್‌ಫೋನ್ ತಯಾರಕರು ಹೊಂದಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದೆ. ಲಭ್ಯವಿರುವ ಘಟಕಗಳಿಗೆ ಹೊಂದಿಕೊಳ್ಳಲು ಸ್ಮಾರ್ಟ್‌ಫೋನ್ ತಯಾರಕರು ತಮ್ಮ ಸಾಧನದ ವಿಶೇಷಣಗಳನ್ನು ಮಾರ್ಪಡಿಸುತ್ತಿದ್ದಾರೆ ಎಂದು ವರದಿಯಾಗಿದೆ. ಹೆಚ್ಚು ಮಾರಾಟವಾಗುವ ಸ್ಮಾರ್ಟ್‌ಫೋನ್‌ಗಳಿಗೆ ಆದ್ಯತೆ ನೀಡುವುದು ಮತ್ತು ಉತ್ಪನ್ನ ಬಿಡುಗಡೆ ಸಮಯನ್ನು ವಿಸ್ತರಿಸುವುದು ದೊಡ್ಡ ಸಂಸ್ಥೆಗಳಿಗೆ ಸೆಮಿಕಂಡಕ್ಟರ್ ಕೊರತೆಯಿಂದ ಎದುರಾಗುವ ಸವಾಲುಗಳನ್ನು ಎದುರಿಸಲು ಸಹಾಯ ಮಾಡುತ್ತದೆ ಎಂದು ವರದಿ ತಿಳಿಸಿದೆ.