ದೀಪಾವಳಿಗೆ ಆಫರ್ ಕೊಟ್ಟರೂ ಚೀನಾ ಫೋನ್‌ಗಿಲ್ಲ ಬೇಡಿಕೆ!

ದೀಪಾವಳಿ ಹಬ್ಬಕ್ಕೆ ಆಫರ್ ಮೇಲೆ ಆಫರ್ ಕೊಟ್ಟರು ಚೀನಾ ಸ್ಮಾರ್ಟ್‍‌ಫೋನ್‌ಗೆ ಬೇಡಿಕೆ ಇಲ್ಲದಾಗಿದೆ. ಕೇಂದ್ರ ಸರ್ಕಾರ ನೂತನ ವರದಿ ಬಿಡುಗಡೆ ಮಾಡಿದ್ದು, ಚೀನಾ ಫೋನ್‌ಗಳ ಬೇಡಿಕೆ ಮಾಹಿತಿ ಬಹಿರಂಗವಾಗಿದೆ.

China Smartphone demand is weak in India despite diwali offers ckm

ನವದೆಹಲಿ(ನ.13): ನವರಾತ್ರಿ, ದೀಪಾವಳಿ ಸೇರಿದಂತೆ ಸಾಲು ಸಾಲು ಹಬ್ಬಕ್ಕೆ ಪ್ರತಿ ವರ್ಷ ಚೀನಾ ಕಂಪನಿಗಳು ಕೋಟಿ ಕೋಟಿ ಆದಾಯ ಎಣಿಸುತ್ತಿತ್ತು. ಆಫರ್ ಮೇಲೆ ಆಫರ್ ಮೂಲಕ ಭಾರತೀಯರನ್ನು ಮೋಡಿ ಮಾಡುತ್ತಿದ್ದ ಚೀನಾ ಸ್ಮಾರ್ಟ್‌ಫೋನ್ ಕಂಪನಿಗಳು ದಾಖಲೆ ಪ್ರಮಾಣದ ಮಾರಾಟ ಕಾಣುತ್ತಿತ್ತು. ಆದರೆ ಈ ಬಾರಿಯ ಹಬ್ಬದಲ್ಲಿ ಚೀನಾ ವಸ್ತುಗಳಿಗೆ ಬೇಡಿಕೆ ಇಲ್ಲದಾಗಿದೆ.

ಒಟಿಟಿ ಪ್ಲಾಟ್‌ಫಾರಂಗೆ ಅಂಕುಶ: ಕೇಂದ್ರಕ್ಕೆ ಹ್ಯಾಟ್ಸಾಫ್‌

ದೀಪಾವಳಿ ಹಬ್ಬಕ್ಕೆ ವಿಶೇಷ ಆಫರ್, ರಿಯಾಯಿತಿ, ವೋಚರ್ ಸೇರಿದಂತ ಹಲವು ಗಿಫ್ಟ್‌ಗಳನ್ನು ನೀಡಲಾಗಿದೆ. ಆದರೆ ಕಳೆದ ವರ್ಷಕ್ಕೆ ಹೋಲಿಸಿದರೆ, ಈ ಬಾರಿ ಬರೋಬ್ಬರಿ 27% ಆಮದು ಕುಸಿತ ಕಂಡಿದೆ. ಈ ಬಾರಿ ಅಕ್ಟೋಬರ್ ತಿಂಗಳಲ್ಲಿ 25 ಮಿಲಿಯನ್ ಫೋನ್‌ಗಳು ಭಾರತಕ್ಕೆ ಆಮದು ಮಾಡಲಾಗಿದೆ. 2019ರಲ್ಲಿ ಈ ಸಂಖ್ಯೆ 34.6 ಮಿಲಿಯನ್ ಆಗಿತ್ತು.

ಸೆಪ್ಟೆಂಬರ್ ತಿಂಗಳಲ್ಲೂ ಭಾರಿ ಕುಸಿತ ಕಂಡಿದೆ. ಶೇಕಡಾ 36% ರಷ್ಟು ಕುಸಿತ ಕಂಡಿದೆ. 2020ರ ಸೆಪ್ಟೆಂಬರ್ ತಿಂಗಳಲ್ಲಿ 22 ಮಿಲಿಯನ್ ಚೀನಾ ಫೋನ್‌ಗಳು ಭಾರತಕ್ಕೆ ಆಮದು ಮಾಡಲಾಗಿದೆ. ಆದರೆ ಈ ಸಂಖ್ಯೆ 2019ರ ಸೆಪ್ಟೆಂಬರ್ ತಿಂಗಳಲ್ಲಿ 36.7 ಮಿಲಿಯನ್ ಆಗಿತ್ತು.
 

Latest Videos
Follow Us:
Download App:
  • android
  • ios