ಬಿಡುಗಡೆಗೂ ಮುನ್ನ ಹಾರ್ದಿಕ್ ಪಾಂಡ್ಯ ಕೈಯಲ್ಲಿ ಪೋಕೋ X5 Pro ಫೋನ್!

ಹಾರ್ದಿಕ್ ಪಾಂಡ್ಯ ಹಳದಿ ಬಣ್ಣದ ಸ್ಮಾರ್ಟ್ ಫೋನ್ ಮೂಲಕ ಕಾಣಿಸಿಕೊಂಡಿದ್ದೇ ತಡ, ಇದೀಗ ಈ ಫೋನ್ ಯಾವುದು ಅನ್ನೋ ಕುತೂಹಲ ಹಾಗೂ ಚರ್ಚೆಗೆ ಉತ್ತರ ಸಿಕ್ಕಿದೆ. ಭಾರತದಲ್ಲಿ ಈ ನೂತನ ಸ್ಮಾರ್ಟ್‌ಫೋನ್ ಬಿಡುಗಡೆಗೂ ಮುನ್ನವೇ ಪಾಂಡ್ಯ ಕೈಯಲ್ಲಿ ಈ ಫೋನ್ ಮಿಂಚುತ್ತಿದೆ.
 

Captain Hardik pandy holds poco x5 pro smartphone ahead of launch in India sensation creates in Mobile market ckm

ಅಹಮ್ಮದಾಬಾದ್(ಜ.31):  ಹಾರ್ದಿಕ್ ಪಾಂಡ್ಯ ನೇತೃತ್ವದ ಟೀಂ ಇಂಡಿಯಾ ಅಂತಿಮ ಟಿ20 ಪಂದ್ಯಕ್ಕಾಗಿ ಅಹಮ್ಮದಾಬಾದ್ ತಲುಪಿದೆ. ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿ 1-1 ಅಂತರದಲ್ಲಿ ಸಮಬಲಗೊಂಡಿದೆ. ದ್ವಿತೀಯ ಪಂದ್ಯ ಗೆದ್ದ ಟೀಂ ಇಂಡಿಯಾ ಇದೀಗ ಸರಣಿ ಕೈವಶಕ್ಕೆ ಸಜ್ಜಾಗಿದೆ. ಆದರೆ ಎರಡನೇ ಪಂದ್ಯದ ಬಳಿಕ ಕಾಣಿಸಿಕೊಂಡ ಹಾರ್ದಿಕ್ ಪಾಂಡ್ಯ ಹಲವರಿಗೆ ಸರ್ಪ್ರೈಸ್ ನೀಡಿದ್ದಾರೆ.  ಭಾರತದಲ್ಲಿ ಪೋಕೋ ಫೋನ್ ಫೆಬ್ರವರಿ 6 ರಂದು ಬಿಡುಗಡೆಯಾಗುತ್ತಿದೆ. ಆದರೆ ಇದಕ್ಕೂ ಮುನ್ನ ಹಾರ್ದಿಕ್ ಪಾಂಡ್ಯ ಪೋಕೋ X5 Pro ಫೋನ್ ಮೂಲಕ ಮಿಂಚಿದ್ದಾರೆ. ಹಳದಿ ಬಣ್ಣದ ಫೋನ್ ಎಲ್ಲರ ಗಮನಸೆಳೆದಿದೆ. ಇದೀಗ ಪಾಂಡ್ಯ ಫೋಟೋ ಎಲ್ಲೆಡೆ ವೈರಲ್ ಆಗಿದೆ.

ಭಾರತದಲ್ಲಿ ಸದ್ಯ ಪೋಕೋ X5 Pro ಫೋನ್ ಬಿಡುಗಡೆಯಾಗಿಲ್ಲ. ಫೆಬ್ರವರಿ 6 ರಂದು ಅದ್ದೂರಿಯಾಗಿ ಬಿಡುಗಡೆಯಾಗಲಿದೆ. ಆದರೆ ಅದಕ್ಕೂ ಮುನ್ನವೇ ಹಾರ್ದಿಕ್ ಪಾಂಡ್ಯ ಕೈಯಲ್ಲಿ ಪೋಕೋ X5 Pro ಫೋನ್ ಮಿಂಚುತ್ತಿದೆ. ಇದಕ್ಕೆ ಮುಖ್ಯ ಕಾರಣ ಟಿ20 ನಾಯಕ ಹಾರ್ದಿಕ್ ಪಾಂಡ್ಯ ಭಾರತದಲ್ಲಿ ಪೋಕೋ ಫೋನ್ ರಾಯಭಾರಿಯಾಗಿದ್ದಾರೆ. ಹೀಗಾಗಿ ಕಂಪನಿ ಬಿಡುಗಡೆಗೂ ಮುನ್ನವೇ ಹಾರ್ದಿಕ್ ಪಾಂಡ್ಯಗೆ ಫೋನ್ ನೀಡಿದೆ.

 

ಕೈಗೆಟುಕುವ ಬೆಲೆಯ Poco M4 5G ಸ್ಮಾರ್ಟ್‌ಫೋನ್ ಲಾಂಚ್

ಫೆಬ್ರವರಿ 6 ರಂದು ಪೋಕೋ X5 Pro ಫೋನ್ ಲಾಂಚ್ ಆಗುತ್ತಿದೆ. ಈ ಫೋನ್ ಕೇವಲ ಫ್ಲಿಪ್‌ಕಾರ್ಟ್‌ನಲ್ಲಿ ಮಾತ್ರ ಲಭ್ಯವಿದೆ. ಪೋಕೋ ಫೋನ್ ಇದೇ ಮೊದಲ ಬಾರಿಗೆ ಭಾರತಕ್ಕೆ ಕಾಲಿಡುತ್ತಿದೆ. ಮೂಲತಹಃ ಇದು ಚೀನಾ ಕಂಪನಿಯ. ಶಿಓಮಿ ಕಂಪನಿ ಸಹೋರದ ಕಂಪನಿಯಾಗಿತ್ತು. 2018ರಲ್ಲಿ ಪೋಕೋ ಶಿಓಮಿ ಕಂಪನಿಯ ನೆರಳಲ್ಲಿ ಆರಂಭಗೊಂಡಿತ್ತು. ಆದರೆ 2020ರಲ್ಲಿ ಪೋಕೋ ಸ್ವತಂತ್ರ ಕಂಪನಿಯಾಗಿ ಫೋನ್ ಉತ್ಪಾದನೆ ಆರಂಭಿಸಿತು. 

ಪೋಕೋ ಸ್ಮಾರ್ಟ್‌ಫೋನ್ ಹಲವು ವಿಶೇಷತೆ ಹೊಂದಿದೆ. ಇದು ಕೈಗೆಟುಕುವ ದರದಲ್ಲಿ ಲಭ್ಯವಿರುವ ಗರಿಷ್ಠ ಫೀಚರ್ಸ್ ಫೋನ್. ಗುಣಮಟ್ಟ ಅತ್ಯುತ್ತಮವಾಗಿದೆ. ಒನ್ ಪ್ಲಸ್ ಫೋನ್‌ಗಳಿಗೆ ಪ್ರತಿಸ್ಪರ್ಧಿಯಾಗಿ ಈ ಪೋಕೋ ಫೋನ್ ಆರಂಭಗೊಂಡಿದೆ. ಇದೀಗ ಭಾರತದಲ್ಲಿ ಬಿಡುಗಡೆಯಾಗುತ್ತಿರುವ ಪೋಕೋ X5 Pro ಫೋನ್, ಲಾರ್ಜ್ ಕ್ಯಾಮೆರಾ ಸೇರಿದಂತೆ ಹಲವು ಫೀಚರ್ಸ್ ಹೊಂದಿದೆ. 108MP ಪ್ರೈಮರಿ ಸೆನ್ಸಾರ್ ಸೇರಿದಂತೆ ಡ್ಯುಯೆಲ್ ಕ್ಯಾಮೆರಾ ಹೊಂದಿದೆ.

Poco X4 Pro 5G ಭಾರತದಲ್ಲಿ ಇಂದು ಮೊದಲ ಸೇಲ್:‌ ಬೆಲೆ ಎಷ್ಟು? ಫೀಚರ್‌ಗಳೇನು?

ಹಾರ್ದಿಕ್ ಪಾಂಡ್ಯ ಕೈಯಲ್ಲಿ ಈ ಹಳದಿ ಬಣ್ಣದ ಫೋನ್ ಎಲ್ಲರ ಗಮನಸೆಳೆದಿದೆ. ಈ ಮೂಲಕ ಪೋಕೋ ಬ್ರ್ಯಾಂಡ್ ಬಿಡುಗಡೆಗೂ ಮುನ್ನವೇ ಭಾರಿ ಸದ್ದು ಮಾಡುತ್ತಿದೆ. ಹಾರ್ದಿಕ್ ಪಾಂಡ್ಯರನ್ನು ಬ್ರಾಂಡ್ ಅಂಬಾಸಿಡರ್ ಆಗಿ ನೇಮಕ ಮಾಡುವ ಮೂಲಕ ಪೋಕೋ ಭಾರತ  ಸ್ಮಾರ್ಟ್‌ಫೋನ್ ಮಾರುಕಟ್ಟೆ ಆಕ್ರಮಿಸುವ ಲೆಕ್ಕಾಚಾರದಲ್ಲಿದೆ. ಇದಕ್ಕೆ ಪೂರಕವಾಗಿ ಪೋಕೋ ಭಾರತದಲ್ಲೇ ಭಾರಿ ಸದ್ದು ಮಾಡುತ್ತಿದೆ. ಹೊಸ ಬ್ರ್ಯಾಂಡ್ ಕುರಿತು ಕ್ರಿಕೆಟ್ ಅಭಿಮಾನಿಗಳು ಮಾತ್ರವಲ್ಲ,ಭಾರತೀಯರು ತಿಳಿದುಕೊಂಡಿದ್ದಾರೆ. ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಅಂತಿಮ ಪಂದ್ಯ ಅಹಮ್ಮದಾಬಾದ್‌ನಲ್ಲಿ ನಾಳೆ(ಫೆ.1)ಕ್ಕೆ ನಡೆಯಲಿದೆ. ಈ ಪಂದ್ಯ ಗೆೆದ್ದು ಸರಣಿ ಕೈವಶ ಮಾಡಲು ಟೀಂ ಇಂಡಿಯಾ ಸಜ್ಜಾಗಿದೆ.
 

Latest Videos
Follow Us:
Download App:
  • android
  • ios