ಲಾಕ್‌ಡೌನ್ ಸಡಿಲಿಕೆಯಾಗಿ ಇದೀಗ ಭಾರತ ಅನ್‌ಲಾಕ್ 1 ಹಂತ ಪ್ರವೇಶಿಸುತ್ತಿದೆ. ಇತ್ತ ಭಾರತೀಯ ದೂರ ಸಂಚಾರ ನಿಗಮ ಲಿಮಿಟೆಡ್(BSNL)ಭರ್ಜರಿ ಆಫರ್ ಘೋಷಿಸಿದೆ. 365 ರೂಪಾಯಿಗೆ ಒಂದು ವರ್ಷ ವ್ಯಾಲಿಟಡಿಟಿ, ಡಾಟಾ, ವಾಯ್ಸ್ ಕಾಲ್ ಸೇರಿದಂತೆ ಹಲವು ಆಫರ್ ಲಾಂಚ್ ಮಾಡಿದೆ. BSNL ನೂತನ ಆಫರ್ ವಿವರ ಇಲ್ಲಿದೆ. 

ನವದೆಹಲಿ(ಜೂ.04): ಲಾಕ್‌ಡೌನ್ ಸಮಯದಲ್ಲಿ ಬಹುತೇಕರಿಗೆ ಡಾಟಾ ಅವಶ್ಯಕತೆ ಹೆಚ್ಚಾಗಿತ್ತು. ಕಾರಣ ಮನೆಯಿಂದ ಕೆಲಸ, ಸೇರಿದಂತೆ ಹಲುವ ಕಾರಣಗಳಿಗೆ ಅತ್ಯುತ್ತಮ ಪ್ಯಾಕ್ ಮೊರೆ ಹೋಗಿದ್ದರು. ಈ ಸಮಯದಲ್ಲಿ BSNL ಹಲವು ಆಫರ್ ಮೂಲಕ ಗ್ರಾಹಕರ ಬೇಡಿಕೆಯನ್ನೂ ಪೂರೈಸಿದೆ. ಇದೀಗ ಅನ್‌ಲಾಕ್ 1 ಹಂತ ಪ್ರವೇಶಕ್ಕೆ ಮೊದಲು BSNL ಮತ್ತೆ ವಿಶೇಷ ಆಫರ್ ನೀಡುತ್ತಿದೆ. ಕೇವಲ 365 ರೂಪಾಯಿಗೆ 365 ದಿನ ವ್ಯಾಲಿಟಡಿಟಿ, ವಾಯ್ಸ್ ಕಾಲ್, ಹಾಗೂ ಡಾಟಾ ಆಫರ್ ಇದರ ಜೊತೆಗೆ 600 ದಿನಗಳ ಆಫರ್ ಕೂಡ ಘೋಷಿಸಿದೆ.

Add Asianetnews Kannada as a Preferred SourcegooglePreferred

ವಾಟ್ಸಾಪಿಗೆ BSNL ಠಕ್ಕರ್, ಅನ್‌ಲಿಮಿಟೆಡ್ ಕೊಡುಗೆಯ ಫೀಚರ್!

365 ರೂಪಾಯಿ ಪ್ರೀ ಪೇಯ್ಡ್ ರಿಚಾರ್ಜ್ ಆಫರ್:
BSNL ಗ್ರಾಹಕರು 365 ರೂಪಾಯಿ ಆಫರ್ ರಿಚಾರ್ಜ್ ಮಾಡಿಸಿಕೊಂಡರೆ 365 ದಿನ ಅಂದರೆ ಬರೋಬ್ಬರಿ 1 ವರ್ಷ ವ್ಯಾಲಿಡಿಟಿ ಸಿಗಲಿದೆ. ಇದರ ಜೊತೆಗೆ ಪ್ರತಿ ದಿನ 250 ನಿಮಿಷ ಫ್ರೀ ವಾಯ್ಸ್ ಕಾಲ್ ಹಾಗೂ ಪ್ರತಿ ದಿನ 2 GB ಹೈ ಸ್ಪೀಡ್ ಡಾಟಾ ಆಫರ್ ನೀಡಲಾಗಿದೆ.

BSNLನಿಂದ 1 ತಿಂಗಳು ಉಚಿತ ಬ್ರಾಡ್ ಬ್ಯಾಂಡ್!..

365 ರೂಪಾಯಿ ರಿಚಾರ್ಜ್ ಆಫರ್ ರಾಜ್ಯಗಳು:
ಕರ್ನಾಟಕ, ಆಂಧ್ರ ಪ್ರದೇಶ, ಅಸ್ಸಾಂ, ಬಿಹಾರ್, ಜಾರ್ಖಂಡ್, ಗುಜರಾತ್, ಹರ್ಯಾಣ, ಹಿಮಾಚಲ ಪ್ರದೇಶ, ಕೇರಳ, ಕೋಲ್ಕತಾ ಹಾಗೂ ವೆಸ್ಟ್ ಬೆಂಗಾಲ್ , ನಾರ್ತ್ ಈಸ್ಟ್, ಮಹಾರಾಷ್ಟ್ರ, ಮಧ್ಯ ಪ್ರದೇಶ, ಚತ್ತೀಸ್‌ಘಡ, ಒಡಿಶಾ, ಪಂಜಾಬ್, ರಾಜಸ್ಥಾನ, ತಮಿಳುನಾಡು, ಪೂರ್ವ ಉತ್ತರ ಪ್ರದೇಶ ಹಾಗೂ ಪಶ್ಚಿಮ ಉತ್ತರ ಪ್ರದೇಶ.

2,399 ರೂಪಾಯಿ ಆಫರ್:
BSNL 600 ದಿನಗಳ ಹೊಸ ಪ್ಲಾನ್ ಪರಿಚಯಿಸಿದೆ. 2,399 ರೂಪಾಯಿಗೆ ಬರೋಬ್ಬರಿ 600 ದಿನಗಳ ವ್ಯಾಲಿಟಿಡಿ ನೀಡುತ್ತಿದೆ. ಪ್ರತಿ ದಿನ 250 ನಿಮಿಷ ಫ್ರೀ ಔಟ್ ಗೋಯಿಂಗ್ ಕಾಲ್ಸ್ ನೀಡಲಾಗಿದೆ. ಆದರೆ ಈ ಆಫರ್‌ನಲ್ಲಿ ಉಚಿತ ಡಾಟಾ ಸೇವೆ ಲಭ್ಯವಿರುವುದಿಲ್ಲ.