Apple iPhone 12 ಭಾರತದಲ್ಲಿ ಅತ್ಯಂತ ಜನಪ್ರಿಯ ಫೋನ್‌ ಬ್ರ್ಯಾಂಡ್ ಪಟ್ಟಿ ಪ್ರಕಟ, ಆ್ಯಪಲ್‌ಗೆ ಮೊದಲ ಸ್ಥಾನ!

* 2021ರ ನಾಲ್ಕನೇ ತ್ರೈಮಾಸಿಕದಲ್ಲಿ ಭಾರತದಲ್ಲಿ ಆಪಲ್ ಫೋನುಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟ
* ಭಾರತೀಯ ಮಾರುಕಟ್ಟೆಯಲ್ಲಿ ಆಪಲ್ ಐಫೋನ್ 12 ಬಾರೀ ಜನಪ್ರಿಯವಾಗಿರುವ ಸ್ಮಾರ್ಟ್‌ಫೋನ್
* ಆಪಲ್ ಇಡೀ ವರ್ಷದಲ್ಲಿ ಭಾರತಕ್ಕೆ ದಾಖಲೆಯ 5.4 ಮಿಲಿಯನ್ ಐಫೋನ್‌ಗಳನ್ನು ರಫ್ತು ಮಾಡಿದೆ

Apple most popular brand in India iPhone 12 achieved decent market growth

Tech Desk(ಜ.21): ಸ್ಮಾರ್ಟ್‌ಫೋನ್ ಉತ್ಪಾದನೆಯಲ್ಲಿ ಜಗತ್ತಿನ ಪ್ರಮುಖ ಕಂಪನಿಗಳ ಪೈಕಿ ಮುಂಚೂಣಿಯಲ್ಲಿರುವ ಆಪಲ್‌ (Apple) ಗೆ ಕಳೆದ ವರ್ಷ ಭಾರತ ಉತ್ತಮ ಸಂಗತಿಗಳನ್ನೇ ನೀಡಿದೆ. ತನ್ನ ಭಾರತೀಯ ಮಾರುಕಟ್ಟೆಯ ಪಾಲು ಹೆಚ್ಚಳದೊಂದಿಗೆ ಹೆಚ್ಚು ಗಮನ ಸಳೆದಿದೆ. ಇದೇ ವೇಳೆ,  CMR ನಲ್ಲಿನ ವರದಿಯ ಪ್ರಕಾರ, ಕ್ಯುಪರ್ಟಿನೊ ಮೂಲದ ಬೃಹತ್ ಕಂಪನಿಯಾಗಿರುವ ಆಪಲ್ ಇಡೀ ವರ್ಷದಲ್ಲಿ ಭಾರತಕ್ಕೆ ದಾಖಲೆಯ 5.4 ಮಿಲಿಯನ್ ಐಫೋನ್‌ಗಳನ್ನು ರಫ್ತು ಮಾಡಿದೆ! ಕಳೆದ ತ್ರೈಮಾಸಿಕ ಅವಧಿಯಲ್ಲಿ 2.2 ಮಿಲಿಯನ್ ಆಪಲ್ ಐಫೋನ್‌ಗಳು ರವಾನೆಯಾಗಿವೆ. ಇದರೊಂದಿಗೆ ಭಾರತೀಯ ಮಾರುಕಟ್ಟೆಯಲ್ಲಿ 2021ರ ನಾಲ್ಕನೈ ತ್ರೈಮಾಸಿಕ ಅವಧಿಯಲ್ಲಿ ಆಪಲ್ ಕಂಪನಿ ಅತ್ಯಂತ ಜನಪ್ರಿಯ  ಬ್ರ್ಯಾಂಡ್ ಎಂಬ ಅಗ್ಗಳಿಕೆಗೆ ಪಾತ್ರವಾಗಿದೆ. ಸಂಶೋಧನೆಯ ವರದಿಯ ಪ್ರಕಾರ, ಭಾರತೀಯ ಮಾರುಕಟ್ಟೆಯಲ್ಲಿ ಆಪಲ್ ಐಫೋನ್ 12 (Apple iPhone 12) ಅತ್ಯಂತ ಜನಪ್ರಿಯ ಐಫೋನ್ ಆಗಿತ್ತು, 40% ಮಾರುಕಟ್ಟೆ ಪಾಲನ್ನು ಹೊಂದಿದೆ. ಅಂದರೆ ಹೆಚ್ಚಿನ ಭಾರತೀಯರು ಐಫೋನ್ 12 ಸ್ಮಾರ್ಟ್ ಫೋನ್ ಅನ್ನ ಖರೀದಿಸಿದ್ದಾರೆ ಎಂದರ್ಥ.

ಇದೇ ವೇಳೆ, ಕ್ಯಾನಲಿಸ್ (Canalys) ಸಂಶೋಧನೆಯ ಪ್ರಕಾರ, 2021ರ ನಾಲ್ಕನೈ ತ್ರೈಮಾಸಿಕದಲ್ಲಿ ಆಪಲ್ ಕಂಪನಿಯು ವಿಶ್ವದ ಅತ್ಯಂತ ಜನಪ್ರಿಯ ಉತ್ಪಾದಕ ಕಂಪನಿಯಾಗಿದ್ದು, ಜಗತ್ತಿನಾದ್ಯಂತದ ಮಾರುಕಟ್ಟೆಯಲ್ಲಿ ಶೇಕಡಾ 22 ರಷ್ಟು ಮಾರುಕಟ್ಟೆ ಪಾಲನ್ನು ಹೊಂದಿದೆ. CMR ಸಂಶೋಧನೆಯ ಪ್ರಕಾರ, ಆಪಲ್ ಭಾರತದಲ್ಲಿ ಅಕ್ಟೋಬರ್-ಡಿಸೆಂಬರ್‌ನಲ್ಲಿ 34% ಹೆಚ್ಚಳವನ್ನು ಕಂಡಿದೆ, ಕಳೆದ ವರ್ಷ ಒಟ್ಟಾರೆಯಾಗಿ 48% ಹೆಚ್ಚಳವಾಗಿದೆ.

Xiaomi 11T Pro 5G ಫೋನ್ ಲಾಂಚ್, ಇದು 17 ನಿಮಿಷದಲ್ಲಿ ಪೂರ್ತಿ ಚಾರ್ಜ್!

ಸಂಶೋಧನಾ ಸಂಸ್ಥೆಯ ಪ್ರಕಾರ, ಆಪಲ್ 5 ಮಿಲಿಯನ್‌ಗಿಂತಲೂ ಹೆಚ್ಚು ಸಾಧನಗಳನ್ನು ವಿತರಿಸಿದೆ, ಇದು 4.4 ಶೇಕಡಾ ಮಾರುಕಟ್ಟೆ ಪಾಲನ್ನು ಹೊಂದಿದೆ. ಸಮೀಕ್ಷೆಯ ಪ್ರಕಾರ, 2021ರ ನಾಲ್ಕನೈ ತ್ರೈಮಾಸಿಕದ್ಲಲಿ ಐಫೋನ್ 12 ( iPhone 12) ದೇಶದಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್‌ಫೋನ್ ಆಗಿತ್ತು, ನಂತರ ಐಫೋನ್ 11 (iPhone 11), ಐಫೋನ್ ಎಸ್ಇ 2020 (iPhone SE- 2020),  ಐಫೋನ್ 13 (iPhone 13) ಮತ್ತು ಅಂತಿಮವಾಗಿ, ಐಫೋನ್ 12 ಪ್ರೋ ಮ್ಯಾಕ್ಸ್ (iPhone 12 Pro Max) ಆವೃತ್ತಿ ಫೋನುಗಳಿವೆ. CMR ಅಧ್ಯಯನದ ಪ್ರಕಾರ, ಆಪಲ್ ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ (Q3) ರಾಷ್ಟ್ರದಲ್ಲಿ ಸರಿಸುಮಾರು 1.53 ಮಿಲಿಯನ್ ಐಫೋನ್ ಹ್ಯಾಂಡ್‌ಸೆಟ್‌ಗಳನ್ನು ರವಾನಿಸಿದೆ.

ಕ್ಯಾನಲಿಸ್ ಸಂಶೋಧನೆಯ ಪ್ರಕಾರ, ಆಪಲ್  2021ರ ನಾಲ್ಕನೇ ತ್ರೈಮಾಸಿಕದಲ್ಲಿ ವಿಶ್ವದ ಅತ್ಯಂತ ಜನಪ್ರಿಯ ಬ್ರ್ಯಾಂಡ್ ಆಗಿತ್ತು. ಕಳೆದ ವರ್ಷ ಆಪಲ್ ಶೇ.22ರಷ್ಟು ಮಾರುಕಟ್ಟೆ ಪಾಲನ್ನು ಹೊಂದಿದ್ದು, ಸ್ಯಾಮ್ ಸಂಗ್ (Samsung) ಶೇ.20ರಷ್ಟು ಮಾರುಕಟ್ಟೆ ಪಾಲನ್ನು ಹೊಂದಿತ್ತು. 2020ರ ನಾಲ್ಕನೈ ತ್ರೈಮಾಸಿಕದಲ್ಲಿ ಆಪಲ್ (Apple) ನ ಮಾರುಕಟ್ಟೆ ಪಾಲು ಶೇಕಡಾ 23 ರಿಂದ 22ಕ್ಕೆ ಇಳಿದಿದ್ದರೆ, ಸ್ಯಾಮ್ಸಂಗ್ (Samsung) ನ ಮಾರುಕಟ್ಟೆ ಪಾಲು ಶೇಕಡಾ 17 ರಿಂದ  ಶೇಕಡಾ 20ಕ್ಕೆ ಏರಿಕೆಯಾಗಿತ್ತು. Apple ಮತ್ತು Samsung ಹೊರತುಪಡಿಸಿ, ಶಿಯೋಮಿ (Xiaomi) 12% ಜಾಗತಿಕ ಮಾರುಕಟ್ಟೆ ಪಾಲನ್ನು ಹೊಂದಿತ್ತು, ಹಿಂದಿನ ವರ್ಷದಂತೆಯೇ, ಒಪ್ಪೋ (Oppo) 9% ಮಾರುಕಟ್ಟೆ ಪಾಲನ್ನು ಪಡೆದುಕೊಂಡಿದ್ದು ಮತ್ತು ವಿವೋ (Vivo) 8% ಮಾರುಕಟ್ಟೆ ಪಾಲನ್ನು ಹೊಂದಿದ್ದು ಐದನೇ ಸ್ಥಾನದಲ್ಲಿತ್ತು.

ತನ್ನ ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಹೊಸ ಆವಿಷ್ಕಾರಗಳೊಂದಿಗೆ ಆಪಲ್ ಐಫೋನ್‌ಗಳನ್ನು ಇತರ ಸ್ಮಾರ್ಟ್‌ಫೋನ್‌ಗಳಿಗಿಂತಲೂ ಭಿನ್ನವಾಗಿ ನಿಲ್ಲಿಸಿವೆ. ಈ ಕಾರಣಕ್ಕಾಗಿಯೇ ಭಾರತವೂ ಸೇರಿದಂತೆ ಜಗತ್ತಿನಾದ್ಯಂತ ಆಪಲ್‌ ಕಂಪನಿಯ ಐಫೋನುಗಳು ಮಾತ್ರವಲ್ಲದೇ ಇತರ ಎಲ್ಲ ಸಾಧನಗಳಿಗೂ ತುಂಬಾ ಬೇಡಿಕೆ ಇದೆ. 

Moto Tab G70 LTE: ಭಾರತದಲ್ಲಿ ಹೊಸ ಮೊಟೊರೊಲಾ ಟ್ಯಾಬ್ ಬಿಡುಗಡೆ, ಬೆಲೆ ಎಷ್ಟು?

Latest Videos
Follow Us:
Download App:
  • android
  • ios