ಆ್ಯಪಲ್ ಐಫೋನ್  ಬಹುತೇಕ ದೇಶಗಳಲ್ಲಿ ಮಾರಾಟದಲ್ಲಿ ಮೊದಲ ಸ್ಥಾನದಲ್ಲಿದೆ. ಆದರೆ ಈ ಬಾರಿ ಐಫೋನ್ ಹಿಂದಿಕ್ಕಿರುವ ಚೀನಾದ ಈ ಫೋನ್ ಮೊದಲ ಸ್ಥಾನ ಪಡೆದಿದೆ. ನಂ.1 ಸ್ಥಾನಕ್ಕೇರಿದೆ ಫೋನ್ ಯಾವುದು?

ಬೀಜಿಂಗ್(ಜ.18) ಭಾರತದಲ್ಲಿ ಎಲ್ಲರೂ ಆ್ಯಪಲ್ ಐಫೋನ್ ಖರೀದಿಸಲು ಬಯಸುತ್ತಾರೆ. ಫೋನ್ ಗುಣಮಟ್ಟ, ಡೇಟಾ ಸುರಕ್ಷತೆ, ಇಮೇಜ್ ಕ್ಲಾರಿಟಿ ಸೇರಿದಂತೆ ಹಲವು ಕಾರಣಗಳಿಂದ ಬಹುತೇಕರ ಮೊದಲ ಆಯ್ಕೆ ಐಫೋನ್. ಹಲವು ದೇಶಗಳಲ್ಲಿ ಐಫೋನ್ ಅಗ್ರಸ್ಥಾನದಲ್ಲಿದೆ. ಬಹುತೇಕ ದೇಶಗಳ ಫೋನ್ ಮಾರುಕಟ್ಟೆಯನ್ನು ಆ್ಯಪಲ್ ಐಫೋನ್ ಆಕ್ರಮಿಸಿಕೊಂಡಿದೆ. ಆದರೆ ಇದೀಗ ಐಫೋನ್ ಕ್ರೇಜ್ ಕಡಿಮೆಯಾಗುತ್ತಿದೆಯಾ ಅನ್ನೋ ಚರ್ಚೆಗಳಿಗೆ ಪುಷ್ಠಿ ನೀಡುವ ಬೆಳವಣಿಗೆ ನಡೆದಿದೆ. ಚೀನಾದಲ್ಲಿ ಇದೀಗ ಐಫೋನ್ ಮಾರಾಟದಲ್ಲಿ ಕುಸಿತ ಕಂಡಿದ್ದಾರೆ. ಚೀನಾದ ವಿವೋ ಫೋನ್ ಗರಿಷ್ಠ ಮಾರಾಟ ಕಾಣುವ ಮೂಲಕ ಮೊದಲ ಸ್ಥಾನಕ್ಕೇರಿದೆ.

2024ರಲ್ಲಿ ಚೀನಾ ಫೋನ್ ಮಾರುಕಟ್ಟೆಯಲ್ಲಿ ಹಲವು ಬದಲಾವಣೆಯಾಗಿದೆ. ಆ್ಯಪಲ್ ಐಫೋನ್ ಮಾರಾಟದಲ್ಲಿ ಕುಸಿತ ಕಂಡಿದೆ. ಚೀನಾದಲ್ಲಿ ಸ್ಥಳೀಯ ಫೋನ್‌ ಬ್ರ್ಯಾಂಡ್‌ಗಳಿಗೆ ಹೆಚ್ಚಿನ ಬೇಡಿಕೆ ವ್ಯಕ್ತವಾಗಿದೆ. ವೀವೋ ವರ್ಷದ ಮಾರುಕಟ್ಟೆ ಪಾಲಿನಲ್ಲಿ ಶೇಕಡಾಾ 11ರಷ್ಟು ಏರಿಕೆ ಕಂಡಿದೆ. 2024ರಲ್ಲಿ ಐಫೋನ್ ಹಿಂದಿಕ್ಕಿ ವಿವೋ ಫೋನ್ ಮೊದಲ ಸ್ಥಾನ ಪಡೆದುಕೊಂಡಿದೆ. ಸದ್ಯ ಚೀನಾದ ವಿವೋ ಫೋನ್ ತನ್ನ ದೇಶದಲ್ಲಿ ಶೇಕಡಾ 17 ರಷ್ಟು ಮಾರುಕಟ್ಟೆ ಪಾಲು ಹೊಂದಿದೆ. 2024ರಲ್ಲಿ ಬರೋಬ್ಬರಿ 49.3 ಮಿಲಿಯನ್ ಫೋನ್‌ಗಳು ಮಾರಾಟವಾಗಿದೆ. 

ಕೇವಲ ₹20,000ಕ್ಕೆ ಖರೀದಿಸಿ ಆ್ಯಪಲ್ ಐಫೋನ್ 13 , ಅಮೆಜಾನ್ ಮೆಘಾ ಆಫರ್!

ವಿವೋ ಫೋನ್‌ಗಳಲ್ಲಿ ಅಮೂಲಾಗ್ರ ಬದಲಾವಣೆ ಮಾಡಿದೆ. ಪ್ರಮುವಾಗಿ ಬ್ಯಾಟರಿ ಬಾಳಿಕೆ, ಕ್ಯಾಮೆರಾ ಗುಣಮಟ್ಟ, ಫೀಚರ್ಸ್, ಅತ್ಯಾಧುನಿಕ ತಂತ್ರಜ್ಞಾನ, ಎಐ ಸೇರಿದಂತ ಹಲವು ಫೀಚರ್ಸ್‌ಗಳಿಂದ ವಿವೋ ಇದೀಗ ಜನರ ನೆಚ್ಚಿನ ಫೋನ್ ಆಗಿ ಹೊರಹೊಮ್ಮಿದೆ. ಪ್ರಮುಖವಾಗಿ ವಿವೋ ಫೋನ್ ಈ ಎಲ್ಲಾ ಫೀಚರ್ಸ್‌ಗಳನ್ನು ಕೈಗೆಟುಕುವ ದರದಲ್ಲಿ ನೀಡುತ್ತಿದೆ. ಆ್ಯಪಲ್ ಐಫೋನ್‌ಗೆ ಹೋಲಿಕೆ ಮಾಡಿದರೆ ವಿವೋ ಬೆಲೆಗಳು ಅಗ್ಗವಾಗಿದೆ. ಹೀಗಾಗಿ ಜನರು ವಿವೋ ಫೋನ್‌ಗಳತ್ತ ವಾಲಿದ್ದಾರೆ ಎಂದು ಚೀನಾದ ಮಾರುಕಟ್ಟೆ ವರದಿ ಹೇಳುತ್ತಿದೆ.

2023ರಲ್ಲಿ ಚೀನಾದಲ್ಲಿ ಆ್ಯಪಲ್ ನಂ.1 ಸ್ಥಾನದಲ್ಲಿತ್ತು. ಆದರೆ 2024ರ ವೇಳೆಗೆ ಆ್ಯಪಲ್ ಚೀನಾದ ಮಾರುಕಟ್ಟೆಯಲ್ಲಿ 3ನೇ ಸ್ಥಾನಕ್ಕೆಕುಸಿದಿದೆ. 2024ರಲ್ಲಿ ಐಫೋನ್ 42.9 ಮಿಲಿಯನ್ ಫೋನ್ ಮಾರಾಟವಾಗಿದೆ. ಚೀನಾದಲ್ಲಿ ಐಫೋನ್ ಸ್ಥಳೀಯ ಮಾರುಕಟ್ಟೆ ಪೈಪೋಟಿ ಎದುರಿಸುವಲ್ಲಿ ವಿಫಲವಾಗಿದೆ. ಇದರ ಪರಿಣಾಮ ದಿಡೀರ್ 3ನೇ ಸ್ಥಾನಕ್ಕೆ ಕುಸಿದಿದೆ. ಮೊದಲ ಸ್ಥಾನ ವಿವೋ ಪಾಲಾಗಿದ್ದರೆ, ಎರಡನೇ ಸ್ಥಾನ ಚೀನಾದ ಮತ್ತೊಂದು ಎಲೆಕ್ಟ್ರಾನಿಕ್ ಗ್ಯಾಜೆಟ್ಸ್ ಬ್ರ್ಯಾಂಡ್ ಹುವೈ ಪಡೆದುಕೊಂಡಿದೆ.

ಚೀನಾದಲ್ಲಿ ಗರಿಷ್ಠ ಮಾರಾಟವಾಗುತ್ತಿರುವ ಫೋನ್(2024)
ವಿವೋ: 49.3 ಮಿಲಿಯನ್ ಮಾರಾಟ, ಮಾರುಕಟ್ಟೆ ಪಾಲು; ಶೇ.17
ಹುವೈ:46 ಮಿಲಿಯನ್ ಮಾರಾಟ, ಮಾರುಕಟ್ಟೆ ಪಾಲು;ಶೇ.16
ಆ್ಯಪಲ್ : 42.9 ಮಿಲಿಯನ್ ಮಾರಾಟ, ಮಾರುಕಟ್ಟೆ ಪಾಲು; ಶೇ.15
ಒಪ್ಪೊ: 42.7 ಮಿಲಿಯನ್ ಮಾರಾಟ, ಮಾರುಕಟ್ಟೆ ಪಾಲು;ಶೇ.15
ಹಾನರ್: 42..2 ಮಿಲಿಯನ್ ಮರಾಾಟ, ಮಾರುಕಟ್ಟೆ ಪಾಲು;ಶೇ. 15

ಗಣರಾಜ್ಯೋತ್ಸವ ಸೇಲ್ ಆಫರ್, ಐಫೋನ್ 16 vs ಒನ್‌ಪ್ಲಸ್ 13 ಯಾವುದೇ ಬೆಸ್ಟ್