Make in India ಮತ್ತೊಂದು ಕ್ರಾಂತಿ, ಭಾರತದಲ್ಲಿ ಆ್ಯಪಲ್ ಐಫೋನ್ 13 ಉತ್ಪಾದನೆ!

  • ಭಾರತದ ಇದೀಗ ಜಾಗತಿಕ ಉತ್ಪದನಾ ಕೇಂದ್ರವಾಗಿ ಮಾರ್ಪಾಡು
  • ಪ್ರತಿಷ್ಠಿತ ಆ್ಯಪಲ್ ಐಫೋನ್ 13 ಸಂಪೂರ್ಣವಾಗಿ ಭಾರತದಲ್ಲೇ ತಯಾರಿ
  • ಚೆನ್ನೈಯಲ್ಲಿ ಉತ್ಪಾದನೆಯಾಗಲಿದೆ ಐಫೋನ್ 13
Apple iPhone 13 to be manufactured in Chennai plant under make in india scheme ckm

ನವದೆಹಲಿ(ಏ.11): ಮೇಕ್ ಇನ್ ಇಇಂಡಿಯಾ ಯೋಜನೆಯಡಿ ಭಾರತದಲ್ಲೇ ಉತ್ಪಾದನೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಈ ಮೂಲಕ ಭಾರತವನ್ನು ಜಾಗತಿಕ ಉತ್ಪಾದನಾ ಕೇಂದ್ರವಾಗಿಸಲು ಕೇಂದ್ರ ಸರ್ಕಾರ ಸತತ ಪ್ರಯತ್ನಿಸುತ್ತಿದೆ. ಇದೀಗ ಭಾರತದ ಮೇಕ್ ಇನ್ ಇಂಡಿಯಾಗೆ ಮತ್ತಷ್ಟು ವೇಗ ಸಿಕ್ಕಿದೆ. ಪ್ರತಿಷ್ಠಿತ ಆ್ಯಪಲ್ ಐಫೋನ್ ಇದೀಗ ಭಾರತದಲ್ಲೇ ಸಂಪೂರ್ಣ ಉತ್ಪಾದನೆ ಮಾಡಲು ಮುಂದಾಗಿದೆ.

ಆ್ಯಪಲ್ ಐಫೋನ್ 13 ಚೆನ್ನೈನಲ್ಲಿ ಉತ್ಪಾದನೆಯಾಗಲಿದೆ. ಉತ್ಪಾದನಾ ಪಾಲುದಾರಿಕೆ ಹೊಂದಿರುವ ಫಾಕ್ಸ್‌ಕಾನ್ ಜೊತೆ ಮಾತುಕತೆ ನಡೆಸಲಾಗಿದೆ. ಫಾಕ್ಸ್‌ಕಾನ್, ವಿಸ್ಟ್ರಾನ್ ಹಾಗೂ ಪೆಗೆಟ್ರಾನ್ ಕಂಪನಿಗಳ ಒಪ್ಪಂದ ಮಾಡಿಕೊಂಡಿದ್ದು ಶೀಘ್ರದಲ್ಲೇ ಚೆನ್ನೈನಲ್ಲಿರುವ ಉತ್ಪಾದನಾ ಘಟಕದಲ್ಲಿ ಐಫೋನ್ 13 ಉತ್ಪಾದನೆಯಾಗಲಿದೆ.

ಐಫೋನ್ ಎಸ್ಇ 2022 ಲಾಂಚ್, ಏನೆಲ್ಲ ವಿಶೇಷತೆ, ಬೆಲೆ ಎಷ್ಟಿದೆ?

ವಿಶ್ವದ ಎರಡನೇ ಅತೀ ದೊಡ್ಡ ಮೊಬೈಲ್ ಮಾರುಕಟ್ಟೆ ಹೊಂದಿರುವ ಭಾರತದಲ್ಲಿ ಆ್ಯಪಲ್ ಮೇಕ್ ಇನ್ ಇಂಡಿಯಾ ಅಡಿಯಲ್ಲಿ ಫೋನ್ ಉತ್ಪಾದನೆ ಮಾಡಲಿದೆ. ಭಾರತದ ಗ್ರಾಹಕರಿಗೆ ಭಾರತದಲ್ಲೇ ಉತ್ಪಾದನೆಯಾಗುವ ಫೋನ್ ನೀಡಲಿದ್ದೇವೆ. ಉತ್ಪಾದನೆ ಆರಂಭಿಸಲು ಉತ್ಸುಕರಾಗಿದ್ದೇವೆ ಎಂದು ಭಾರತದ ಆ್ಯಪಲ್ ಐಫೋನ್ ಘಟಕ ಹೇಳಿದೆ.

2017ರಲ್ಲಿ ಆ್ಯಪಲ್ ಐಫೋನ್ ಉತ್ಪಾದನೆಯನ್ನು ಭಾರತದಲ್ಲಿ ಆರಂಭಿಸಿತ್ತು. ಆದರೆ ಕೆಲ ಬಿಡಿ ಭಾಗಗಳು ವಿದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತಿತ್ತು. ಇದರ ಅಡಿ ಐಫೋನ್ SE, ಐಫೋನ್ 11, ಐಫೋನ್ 12 ಕೂಡ ಉತ್ಪಾದನೆಯಾಗಿದೆ. ಇಲ್ಲಿ ಜೋಡಣೆ ಕೆಲಸಗಳು ಮಾಡಲಾಗುತ್ತಿತ್ತು. ಆದರೆ ಪ್ರೋ ಮಾಡೆಲ್ ಫೋನ್ ಇದೀಗ ಭಾರತದಲ್ಲೇ ಉತ್ಪಾದನೆಯಾಗುತತಿದೆ.  ಐಫೋನ್ 13 ಚೆನ್ನೈ ಘಟಕದಲ್ಲಿ ಉತ್ಪಾದನೆಯಾಗಲಿದೆ.

ಅತೀ ಕಡಿಮೆ ಮೊಬೈಲ್ ಡೇಟಾದಲ್ಲಿ ಮಾಡಬಹುದು WhatsApp ಕಾಲ್, ಇಲ್ಲಿದೆ 5 ಟಿಪ್ಸ್!

ಮಾಸ್ಕ್‌ ಧರಿಸಿಯೂ ಮುಖ ಗುರುತಿಸುವ ಐಫೋನ್‌ ಬಿಡುಗಡೆ!
ಆ್ಯಪಲ್‌ ಕಂಪನಿಯ ಫೇಸ್‌ ಐಡಿ ಸೌಲಭ್ಯವುಳ್ಳ ಐಫೋನ್‌ ಅನ್ನು ಇನ್ನು ಮುಂದೆ ಮಾಸ್ಕ್‌ ಧರಿಸಿಯೇ ಅನ್‌ಲಾಕ್‌ ಮಾಡಬಹುದಾಗಿದೆ. ಈವರೆಗೆ ಫೋನ್‌ಗಳು ಮಾಸ್ಕ್‌ ಧರಿಸಿದ್ದರೆ ಗುರುತಿಸುತ್ತಿರಲಿಲ್ಲ ಆದರೆ, ಹೊಸ ಆವೃತ್ತಿಯ ಫೋನ್‌ಗಳಲ್ಲಿ ಮಾಸ್ಕ್‌ ಧರಿಸಿಯೇ ಫೇಸ್‌ಐಡಿಯನ್ನು ಬಳಸುವ ಆಯ್ಕೆಯನ್ನು ನೀಡಲಾಗುತ್ತದೆ. ಈ ಆಯ್ಕೆಯನ್ನು ಒತ್ತಿದಾಗ ಮತ್ತೊಮ್ಮೆ ಮಾಸ್ಕ್‌ ಧರಿಸದೇ ಮುಖವನ್ನು ಸ್ಕಾ್ಯನ್‌ ಮಾಡಿಕೊಳ್ಳಬೇಕು. ಇದರ ನಂತರ ವ್ಯಕ್ತಿ ಮಾಸ್ಕ್‌ ಧರಿಸಿದ್ದರೂ ಫೋನನ್ನು ಅನ್‌ಲಾಕ್‌ ಮಾಡಬಹುದು.

ಇದೇ ರೀತಿ ‘ಆಡ್‌ ಗ್ಲಾಸಸ್‌’ ಎಂಬ ಆಯ್ಕೆ ನೀಡಲಾಗಿದ್ದು, ಮೊಬೈಲ್‌ನ್ನು ಕನ್ನಡಕ ಧರಿಸಿಯೂ ಅನ್‌ಲಾಕ್‌ ಮಾಡಬಹುದಾಗಿದೆ. ಈ ಹೊಸ ಸೌಲಭ್ಯ ಐಫೋನ್‌12, ಐಫೋನ್‌ 13ರ ಸಿರೀಸ್‌ನಲ್ಲೂ ಕಾರ್ಯನಿರ್ವಹಿಸಲಿದೆ. ಕೋವಿಡ್‌ ಸಾಂಕ್ರಾಮಿಕದ ದಿನಗಳಲ್ಲಿ ಮಾಸ್ಕ್‌ ಜನಜೀವನದ ಅವಿಭಾಜ್ಯ ಅಂಗವಾಗಿರುವುದರಿಂದ ಈ ಹೊಸ ಫೀಚರ್‌ ಅಳವಡಿಸಲಾಗಿದೆ ಎಂದು ಕಂಪನಿ ತಿಳಿಸಿದೆ.

ಪಲ್‌ ಹೊಸ ಐಫೋನ್‌ ಮಾದರಿಯಲ್ಲಿ ಸಿಮ್‌ ಕಾರ್ಡ್‌ ಸ್ಲಾಟೇ ಇರೋಲ್ಲ!
ಆ್ಯಪಲ್‌ ಕಂಪನಿಯ ಐಫೋನ್‌ 15 ಪ್ರೋ ಮೊಬೈಲ್‌ನಲ್ಲಿ ಸಿಮ್‌ ಕಾರ್ಡ್‌ ಸ್ಲಾಟ್‌ ಇರುವುದಿಲ್ಲ. ಇದರ ಬದಲಾಗಿ ಎರಡು ಇ-ಸಿಮ್‌ಗೆ ಅವಕಾಶ ನೀಡಲಾಗುತ್ತಿದೆ ಎಂದು ಬ್ರೆಜಿಲ್‌ ಮೂಲದ ಬ್ಲಾಗ್‌ ಡು ಐಫೋನ್‌ ಹೇಳಿದೆ. ತನ್ನ ಇಯರ್‌ಬಡ್‌ ಅನ್ನು ಪ್ರಚುರ ಪಡಿಸಲು ಹೆಡ್‌ಫೋನ್‌ ಜಾಕ್‌ ಅನ್ನು ತೆಗೆದುಹಾಕಿದ್ದ ನಂತರ ಇದು ಅತಿ ದೊಡ್ಡ ಆವಿಷ್ಕಾರವಾಗಿದೆ. ಐಫೋನ್‌ 15 ಪ್ರೋ 2023ಕ್ಕೆ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ. ಈ ಫೋನಿಗೆ ಸಿಮ್‌ಕಾರ್ಡ್‌ಗಳನ್ನು ಅಳವಡಿಸಲು ಸಾಧ್ಯವಿರುವುದಿಲ್ಲ. ಸಿಮ್‌ ಕಾರ್ಡ್‌ಗಳ ಸೇವೆಯನ್ನು ನೀಡುವ ಇಂಟಿಗ್ರೇಟೆಡ್‌ ಎಲೆಕ್ಟ್ರಾನಿಕ್‌ ಸಕ್ರ್ಯೂಟ್‌ ಕಾರ್ಡ್‌ ಅನ್ನು ಅಳವಡಿಸಲಾಗಿರುತ್ತದೆ. ಈ ಎಲೆಕ್ಟ್ರಾನಿಕ್‌ ಡಿವೈಸ್‌ ಸಿಮ್‌ ಕಾರ್ಡ್‌ನಂತೆಯೇ ಕಾರ್ಯನಿರ್ವಹಿಸುತ್ತದೆ. ಇ-ಸಿಮ್‌ನೊಂದಿಗೆ ಪೆರಿಸ್ಕೋಪ್‌ ಆಕಾರದ ಲೆನ್ಸ್‌ ಅನ್ನು ಈ ಫೋನಿನ ಕ್ಯಾಮೆರಾಗೆ ಅಳವಡಿಸಲಾಗುತ್ತದೆ.

Latest Videos
Follow Us:
Download App:
  • android
  • ios