ಆ್ಯಪಲ್ ಕಂಪನಿಗೆ ಮತ್ತೊಂದು ಹೊಡೆತ, ಐಫೋನ್ 12 ಮಾರಾಟ ನಿಷೇಧ!
2020ರಿಂದ ಐಫೋನ್ 12 ಮಾರಾಟವಾಗುತ್ತಿದೆ. ವಿಶ್ವಾದ್ಯಂತ ಕೋಟ್ಯಾಂತರ ಬಳಕೆದಾರರನ್ನು ಹೊಂದಿದೆ. ಆದರೆ ದಿಢೀರ್ ಆಗಿ ಐಫೋನ್ 12 ಮಾರಾಟ ನಿಷೇಧಿಸಿದೆ.
ಪ್ಯಾರಿಸ್(ಸೆ.13) ನೀವು ಐಫೋನ್ 12 ಬಳಕೆದಾರರೇ? ಹಾಗಾದರೆ ನಿಮ್ಮ ಮೊಬೈಲ್ ಫೋನ್ ಒಮ್ಮೆ ಪರಿಶೀಲಿಸಿಕೊಳ್ಳಿ. ಕಾರಣ ಫ್ರಾನ್ಸ್ ಸರ್ಕಾರ ರೆಡಿಯೇಶನ್ ಲೆವಲ್ ಮಿತಿಗಿಂತ ಹೆಚ್ಚಿರುವ ಕಾರಣ ಫ್ರಾನ್ಸ್‌ನಲ್ಲಿ ಐಫೋನ್ 12 ಮಾರಾಟ ನಿಷೇಧಿಸಿದೆ. ಇದರ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಆ್ಯಪಲ್ ಕಂಪನಿ, ಮಾರಾಟವಾಗಿರುವ, ಡೀಲರ್‌ಬಳಿ ಇರುವ ಐಫೋನ್ 12 ಹಿಂಪಡೆದು ಸಾಫ್ಟ್‌ವೇರ್ ಅಪ್‌ಗ್ರೇಡ್ ಮಾಡಲು ನಿರ್ಧರಿಸಿದೆ.
ಮೊಬೈಲ್ ಫೋನ್ ಸೇರಿದಂತೆ ಯಾವುದೇ ಗ್ಯಾಜೆಟ್ ರೇಡಿಯೇಶನ್ ಲೆವಲ್ ನಿರ್ದಿಷ್ಟ ಮಟ್ಟಕ್ಕಿಂತ ಹೆಚ್ಚಿದರೆ ಅಪಾಯ ಹೆಚ್ಚು. ಇದು ಗಂಭೀರ ಸಮಸ್ಯೆ ತಂದೊಡ್ಡಲಿದೆ. SAR(ಸ್ಪೆಸಿಫಿಕ್ ಅಬ್ಸಾರ್ಪಶನ್ ರೇಟ್) ಪ್ರಕಾರ ಪ್ರತಿ ಸ್ಮಾರ್ಟ್‌ಫೋನ್ ರೇಡಿಯೇಶನ್ ರೇಟ್ ಪ್ರತಿ ಕಿಲೋಗ್ರಾಂನಲ್ಲಿ 2 ವ್ಯಾಟ್ಸ್ ಮೀರಬಾರದು. ಆದರೆ ಫ್ರಾನ್ಸ್‌ನಲ್ಲಿ ಮಾರಾಟವಾಗಿರುವ ಐಫೋನ್ 12 ರೇಡಿಯೆಯನ್ ಲೆವಲ್ ಈ ಮಿತಿಯನ್ನು ಮೀರಿದೆ. ಹೀಗಾಗಿ ಫ್ರಾನ್ಸ್ ಸರ್ಕಾರ ಐಫೋನ್ 12 ಮಾರಾಟ ನಿಷೇಧಿಸಿದೆ.
ಆ್ಯಪಲ್ ಐಫೋನ್ ಸೆಪ್ಟೆಂಬರ್ ತಿಂಗಳಲ್ಲೇ ಬಿಡುಗಡೆ ಮಾಡುವುದೇಕೆ? ಸೀಕ್ರೆಟ್ ಬಹಿರಂಗ!
ಫ್ರಾನ್ಸ್ ಐಫೋನ್ 12 ನಿಷೇಧಿಸಿದ ಬಳಿಕ ಆ್ಯಪಲ್ ಅಧಿಕೃತ ಪ್ರಕಟಣೆ ಹೊರಡಿಸಿಲ್ಲ. ಈ ವಾರದಲ್ಲಿ ಆ್ಯಪಲ್ ತನ್ನ ಐಫೋನ್ 12 ಹಿಂಪಡೆಯುವ ಕುರಿತು ಅಧಿಕೃತ ಘೋಷಣೆ ಮಾಡುವ ಸಾಧ್ಯತೆ ಇದೆ. ಫೋನ್ ಬಳಕೆ ಮಾಡುವಾಗ ರೇಡಿಯೇಶನ್ ಲೆವಲ್ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ. ಲೆವಲ್ 2 ಗಿಂತ ಕಡಿಮೆ ಇದ್ದರೂ ಆರೋಗ್ಯದ ಮೇಲಿನ ಪರಿಣಾಮ ಹಾಗೂ ತೀವ್ರತೆ ಕಡಿಮೆ ಇರಲಿದೆ. ಹೀಗಾಗಿ ಫೋನ್ ರೇಡಿಯೇಶನ್ ಲೆವಲ್ ಲೆವಲ್ 2 ವ್ಯಾಟ್ಸ್ ಮೀರಬಾರದು ಅನ್ನೋ ನಿಯಮವಿದೆ.
ನಿನ್ನೆಯಷ್ಟೇ ಆ್ಯಪಲ್ ಐಫೋನ್ 15 ಲಾಂಚ್ ಮಾಡಿದೆ. ದೇಶ ವಿದೇಶದಲ್ಲಿ ಭಾರಿ ಬೇಡಿಕೆ ವ್ಯಕ್ತವಾಗುತ್ತಿದೆ. ಇದರ ನಡುವೆ ಆ್ಯಪಲ್ ಕಂಪನಿಗಳಿಗೆ ಹಲವು ಸಮಸ್ಯೆಗಳು ಎದುರಾಗುತ್ತಿದೆ. ಆ್ಯಪಲ್ ಕಂಪನಿಗೆ ಒಂದೊಂದು ದೇಶದಲ್ಲಿ ಒಂದೊಂದು ಸಮಸ್ಯೆ ಎದುರಾಗುತ್ತಿದೆ. ಇತ್ತೀಚೆಗೆ ಚೀನಾದಲ್ಲಿ ಆ್ಯಪಲ್ ಐಫೋನ್‌ಗೆ ನಿರ್ಬಂಧ ಹೇರಲಾಗಿದೆ. ಸರ್ಕಾರಿ ನೌಕರರು ಸರ್ಕಾರಕ್ಕೆ ಸಂಬಂಧಿಸಿದ ಯಾವುದೇ ಚಟುವಟಿಕೆಗಳಿಗೆ ಐಫೋನ್‌ಗಳನ್ನು ಬಳಸಬಾರದು ಎಂದು ಚೀನಾ ಸರ್ಕಾರ ನಿರ್ಬಂಧ ಹೇರಿರುವ ಬೆನ್ನಲ್ಲೇ ಆ್ಯಪಲ್ ಸಂಸ್ಥೆಯ ಷೇರು ಮೌಲ್ಯ ಒಂದೇ ದಿನ 1.6 ಲಕ್ಷ ಕೋಟಿ ರು. ಗಳಷ್ಟುಕುಸಿತಗೊಂಡಿದೆ. ಅಲ್ಲದೇ ಗುರುವಾರವೊಂದೇ ದಿನ ಆ್ಯಪಲ್ ಷೇರು ಶೇ.3ರಷ್ಟುಕುಸಿತ ಕಂಡಿದೆ. ಇದು ಚೀನಾ ಮತ್ತು ಅಮೆರಿಕಗಳ ನಡುವಿನ ಸಂಘರ್ಷದ ಉದ್ವಿಗ್ನತೆ ಎಂದು ವಿಶ್ಲೇಷಿಸಲಾಗಿದ್ದು ಇದರಿಂದ ಸಂಸ್ಥೆ ನಷ್ಟಅನುಭವಿಸುತ್ತಿದೆ. ಆ್ಯಪಲ್ ಸಂಸ್ಥೆಗೆ ಚೀನಾ ಅತದೊಡ್ಡ ಮಾರುಕಟ್ಟೆಯಾಗಿದ್ದು ಇದು ಆ್ಯಪಲ್ ಉತ್ಪನ್ನಗಳ ಶೇ.20ರಷ್ಟುಪಾಲನ್ನು ಹೊಂದಿದೆ.
ಕರ್ನಾಟಕದಲ್ಲಿ ಐಫೋನ್ ಉತ್ಪಾದನಾ ಘಟಕ, ಫಾಕ್ಸ್‌ಕಾನ್‌ಗೆ 100 ಏಕರೆ ಭೂಮಿ ನೀಡಿದ ಸರ್ಕಾರ!