Asianet Suvarna News Asianet Suvarna News

ಆ್ಯಪಲ್‌ನಲ್ಲಿ ಕೆಲಸ ಬೇಕೆ? 1+1=3 ಕೌಶಲ್ಯ ಕಡ್ಡಾಯ: ಟಿಮ್‌ ಕುಕ್‌

ಜಗತ್ತಿನ ಖ್ಯಾತ ಮೊಬೈಲ್‌ ತಯಾರಕ ಆ್ಯಪಲ್‌ನಲ್ಲಿ ಕೆಲಸ ಗಿಟ್ಟಿಸಿಕೊಳ್ಳಬೇಕಾದರೆ ಅವರಿಗೆ ಇರಬೇಕಾದ ಮನಸ್ಥಿತಿ ಬಗ್ಗೆ ಸಂಸ್ಥಾಪಕ ಟಿಮ್‌ ಕುಕ್ ವಿಶ್ಲೇಶಿಸಿದ್ದಾರೆ.

Apple Founder Tim Cook said Want a job at Apple 1 plus 1 equal to 3 Skills Mandatory akb
Author
First Published Nov 28, 2023, 8:45 AM IST

ನ್ಯೂಯಾರ್ಕ್‌: ಜಗತ್ತಿನ ಖ್ಯಾತ ಮೊಬೈಲ್‌ ತಯಾರಕ ಆ್ಯಪಲ್‌ನಲ್ಲಿ ಕೆಲಸ ಗಿಟ್ಟಿಸಿಕೊಳ್ಳಬೇಕಾದರೆ ಅವರಿಗೆ ಇರಬೇಕಾದ ಮನಸ್ಥಿತಿ ಬಗ್ಗೆ ಸಂಸ್ಥಾಪಕ ಟಿಮ್‌ ಕುಕ್ ವಿಶ್ಲೇಶಿಸಿದ್ದಾರೆ. ಗಾಯಕಿ ದುವಾ ಲಿಪಾ ಜೊತೆ ಪೋಡ್ಕಾಸ್ಟ್‌ನಲ್ಲಿ ಮಾತನಾಡಿದ ಟಿಮ್‌,‘ ಆ್ಯಪಲ್‌ 1+1= 3 ತಂತ್ರವನ್ನು ಅನುಸರಿಸುತ್ತದೆ. ಇದರರ್ಥ, ಮೂವರು ಮಾಡುವ ಕೆಲಸವನ್ನು ಇಬ್ಬರು ಮಾಡಬೇಕು. ಜೊತೆಗೆ ಹೆಚ್ಚು ಕ್ರಿಯಾತ್ಮಕ ಗುಣಗಳನ್ನು ಹೊಂದಿರಬೇಕು. ನಮ್ಮಲ್ಲಿಗೆ ಬರುವವರಿಂದ ನಾವು ಯಾವುದೇ ತರಹದ ಡಿಗ್ರಿಗಳನ್ನು ಬಯಸುವುದಿಲ್ಲ. ಆದರೆ ಅವರ ಕೌಶಲ್ಯ ಹಾಗೂ ಹಿಂಜರಿಕೆ ಇಲ್ಲದೆ ಪ್ರಶ್ನೆ ಕೇಳುವ ಅಂಶ ಇರಬೇಕು ಎಂದು ನಿರೀಕ್ಷಿಸುತ್ತೇವೆ’ ಎಂದರು.

ಆಲಿಯಾ ಭಟ್‌ ಡೀಪ್‌ಫೇಕ್‌ ವಿಡಿಯೋ ವೈರಲ್‌

ನವದೆಹಲಿ: ಕೆಲವು ದಿನಗಳ ಹಿಂದೆ ಹಲವು ಗಣ್ಯರನ್ನು ಇಕ್ಕಟ್ಟಿಗೆ ಸಿಲುಕಿಸಿದ್ದ ಡೀಪ್‌ಫೇಕ್‌ ದೃಶ್ಯಾವಳಿಗೆ ಕಠಿಣ ಶಿಕ್ಷೆ ಜಾರಿಗೊಳಿಸಿದ್ದರೂ ಅದನ್ನು ಸಡ್ಡುಹೊಡೆಯುವಂತೆ ಇದೀಗ ಖ್ಯಾತ ಬಾಲಿವುಡ್‌ ನಟಿ ಆಲಿಯಾ ಭಟ್‌ ಅವರ ಡೀಪ್‌ಫೇಕ್‌ ವಿಡಿಯೋ ವೈರಲ್ ಆಗಿದೆ. ದೃಶ್ಯಾವಳಿಯಲ್ಲಿ ಯಾವುದೋ ಮಹಿಳೆಗೆ ಆಲಿಯಾ ಭಟ್‌ ಅವರ ಮುಖವನ್ನು ಕೃತಕ ಬುದ್ಧಿಮತ್ತೆಯ ಮೂಲಕ ಲೇಪಿಸಿ ಅಶ್ಲೀಲ ದೃಶ್ಯಗಳನ್ನು ಹೆಣೆಯಲಾಗಿದೆ. ದೃಶ್ಯದಲ್ಲಿ ಆಲಿಯಾ ಅವರು ಅರೆಬರೆ ಬಟ್ಟೆ ತೊಟ್ಟು, ಮಂಚದ ಮೇಲೆ ಹೊರಳಾಡುತ್ತಿರುತ್ತಾರೆ.

ಪ್ರತಿ ವರ್ಷ ಹೊಸ ಐಫೋನ್ ಬಿಡುಗಡೆ ಮಾಡೋದ್ಯಾಕೆ? ರಹಸ್ಯ ಬಯಲು ಮಾಡಿದ ಆ್ಯಪಲ್ ಸಿಇಒ..

ರಶ್ಮಿಕಾ, ಕತ್ರಿನಾ, ಕಾಜೋಲ್‌, ಸಾರಾ ತೆಂಡೂಲ್ಕರ್ ಅವರ ಡೀಪ್‌ಫೇಕ್‌ ವಿಡಿಯೋ ವೈರಲ್‌ ಆದ ಬಳಿಕ ನರೇಂದ್ರ ಮೋದಿ ಸೇರಿದಂತೆ ಅನೇಕರು, ಇಂಥ ಕುಚೇಷ್ಟೆಯ ಮೂಲೋಚ್ಛಾಟನೆ ಮಾಡಬೇಕೆಂದು ಆಗ್ರಹಿಸುತ್ತಿದ್ದಾರೆ. ಇದರ ಬೆನ್ನಲ್ಲೇ ಮಾಹಿತಿ ತಂತ್ರಜ್ಞಾನ ಸಚಿವಾಲಯ ಡೀಪ್‌ಫೇಕ್‌ ವಿಡಿಯೋ ಮಾಡಿ ಹರಿಬಿಟ್ಟವರಿಗೆ 1 ಲಕ್ಷ ರು. ದಂಡ ಹಾಗೂ 3ವರ್ಷ ಜೈಲು ಶಿಕ್ಷೆ ವಿಧಿಸುವ ನಿಯಮ ರೂಪಿಸುವ ಘೋಷಣೆ ಮಾಡಿದೆ. ಅದರ ಜೊತೆಗೆ ಸಂತ್ರಸ್ತು ಸ್ವತಃ ದೂರು ದಾಖಲಿಸಲು ಜಾಲತಾಣ ರೂಪಿಸುತ್ತಿದೆ.

 ಹಂದಿಜ್ವರ ಮಾದರಿಯ ಫ್ಲೂ ಮಾನವನಲ್ಲಿ ಪತ್ತೆ

ಲಂಡನ್‌: ಹಂದಿಗಳಲ್ಲಿ ವ್ಯಾಪಕವಾಗಿ ಕಾಣಿಸಿಕೊಳ್ಳುತ್ತಿರುವ ರೀತಿಯ ‘ಎ(ಹೆಚ್‌1ಎನ್‌2)ವಿ’ ಸೋಂಕು ಮಾನವನಿಗೆ ಕಾಣಿಸಿಕೊಂಡ ಮೊದಲ ಪ್ರಕರಣ ಬ್ರಿಟನ್‌ನಲ್ಲಿ ವರದಿಯಾಗಿದೆ. ಅಲ್ಲಿನ ಆರೋಗ್ಯ ಸುರಕ್ಷತಾ ಸಂಸ್ಥೆಯವರು ತಿಳಿಸಿದಂತೆ ಸೋಂಕಿತನಿಗೆ ಸಣ್ಣ ಪ್ರಮಾಣದಲ್ಲಿ ಜ್ವರ ಕಾಣಿಸಿಕೊಂಡಿದ್ದು ಪ್ರಸ್ತುತ ಸಂಪೂರ್ಣ ಗುಣಮುಖನಾಗಿದ್ದಾನೆ. ಇದು ಮಾನವನಿಗೆ ಹೇಗೆ ತಾಗಿದೆ ಎಂಬುದನ್ನು ಇನ್ನೂ ಪತ್ತೆಹಚ್ಚಲಾಗಿಲ್ಲ.

ಆ್ಯಪಲ್‌ ಷೇರು ಮಾರಾಟ ಮಾಡಿದ್ದಕ್ಕೇ ನೂರಾರು ಕೋಟಿ ರೂ. ಸಂಪಾದಿಸಿದ ಸಿಇಒ ಟಿಮ್ ಕುಕ್!

ಈ ಕುರಿತು ಮಾತನಾಡಿದ ಯುನೈಟೆಡ್‌ ಕಿಂಗ್‌ಡಮ್ ಆರೋಗ್ಯ ಸುರಕ್ಷಾ ಸಂಸ್ಥೆಯ ನಿರ್ದೇಶಕರಾದ ಮೀರಾ ಚಾಂದ್‌, ‘ಇದೇ ಮೊದಲ ಬಾರಿಗೆ ಮಾನವರಲ್ಲಿ ಈ ಸೋಂಕು ಕಾಣಿಸಿಕೊಂಡಿದೆ. ಇದು ಹಂದಿಗಳಲ್ಲಿ ಇತ್ತೀಚೆಗೆ ಕಾಣಿಸಿಕೊಳ್ಳುತ್ತಿರುವ ಸೋಂಕಿಗೆ ಬಹಳಷ್ಟು ಸಾಮ್ಯತೆ ಹೊಂದಿದ್ದು, ವ್ಯಕ್ತಿಯಿಂದ ವ್ಯಕ್ತಿಗೆ ಸೋಂಕು ಹರಡಿದ ಯಾವುದೇ ಪ್ರಕರಣ ಇನ್ನೂ ವರದಿಯಾಗಿಲ್ಲ ಎಂದು ತಿಳಿಸಿದ್ದಾರೆ.

Follow Us:
Download App:
  • android
  • ios