ಐಫೋನ್ ಬಳಕೆದಾರರಿಗೆ ಗುಡ್ ನ್ಯೂಸ್, ಉಚಿತ ರಿಪೇರಿ ಘೋಷಿಸಿದ ಆ್ಯಪಲ್!

ಭಾರತದಲ್ಲಿ ಐಫೋನ್ 16 ಭರ್ಜರಿ ಮಾರಾಟದ ಬಳಿಕ ಆ್ಯಪಲ್ ತನ್ನ ಬಳಕೆದಾರರಿಗೆ ಮತ್ತೊಂದು ಗುಡ್ ನ್ಯೂಸ್ ನೀಡಿದೆ. ಐಫೋನ್ ರಿಪೇರಿಯನ್ನು ಉಚಿತವಾಗಿ ಮಾಡಿಕೊಡುವುದಾಗಿ ಘೋಷಿಸಿದೆ. 

Apple announces free repair for users of iphone 14 plus model camera issues ckm

ನವದೆಹಲಿ(ನ.05) ಭಾರತದಲ್ಲಿ ಐಫೋನ್ 16 ಸಿರೀಸ್ ದಾಖಲೆಯ ಮಾರಾಟ ಕಂಡಿದೆ. ಭಾರತದಲ್ಲಿ ಸಿಕ್ಕ ಭರ್ಜರಿ ಸ್ಪಂದನೆಯಿಂದ ಈಗಾಗಲೇ ಆ್ಯಪಲ್ ಕೆಲ ನಗರದಲ್ಲಿ ಆ್ಯಪಲ್ ಸ್ಟೋರ್ ತೆರೆಯಲು ಸಿದ್ಧತೆ ನಡೆಸಿದೆ. ಇದೀಗ ಮತ್ತೊಂದು ಗುಡ್ ನ್ಯೂಸ್ ನೀಡಿದೆ. ಕೆಲ ಐಫೋನ್ ಬಳಕೆದಾರರು ಮಾಡಿದ ದೂರಿನಿಂದ ಇದೀಗ ತನ್ನ ಗ್ರಾಹಕರಿಗೆ ಉಚಿತ ರಿಪೇರಿಯನ್ನು ಆ್ಯಪಲ್ ಘೋಷಿಸಿದೆ. ಐಫೋನ್ ಬಳಕೆದಾರರಿಗೆ ಆ್ಯಪಲ್ ಉಚಿತವಾಗಿ ಫೋನ್ ರಿಪೇರಿ ಮಾಡಿಕೊಡಲಿದೆ. ಹೌದು, ಐಫೋನ್ 14 ಪ್ಲಸ್ ಮಾಡೆಲ್ ಬಳಕೆದಾರರಿಗೆ ಈ ಆಫರ್ ನೀಡಿದೆ.

2022ರಲ್ಲಿ ಭಾರತದಲ್ಲಿ ಐಫೋನ್ 14 ಸೀರಿಸ್ ಬಿಡುಗಡೆ ಮಾಡಲಾಗಿತ್ತು. ಐಫೋನ್ 14, ಐಫೋನ್ 14 ಪ್ಲಸ್, 14 ಪ್ರೋ, 14 ಪ್ರೋ ಮ್ಯಾಕ್ಸ್ ಮಾಡೆಲ್ ಭರ್ಜರಿಯಾಗಿ ಮಾರಾಟಗೊಂಡಿತ್ತು. 2015ರಲ್ಲಿ ಐಫೋನ್ 15 ಸಿರೀಸ್ ಬಿಡುಗಡೆಯಾದ ಬಳಿಕ ಐಫೋನ್ 14 ಪ್ರೋ ಸಿರೀಸ್ ಮಾರಾಟ ಸ್ಥಗಿತಗೊಳಿಸಲಾಗಿತ್ತು. ಆದರೆ ಇತರ ಐಫೋನ್ 14 ಮಾರಾಟಕ್ಕೆ ಯಾವುದೇ ಅಡೆ ತಡೆ ಇರಲಿಲ್ಲ. ಈ ಪೈಕಿ ಐಫೋನ್ 14 ಪ್ಲಸ್ ಮಾಡೆಲ್ ಖರೀದಿಸಿದ ಕೆಲ ಗ್ರಾಹಕರಿಗೆ ಕ್ಯಾಮೆರಾ ಸಮಸ್ಯೆ ಎದುರಾಗಿದೆ. ರೇರ್ ಕ್ಯಾಮೆರಾ ಮೂಲಕ ಫೋಟೋ ತೆಗೆಯುವಾಗ ಪ್ರಿವ್ಯೂವ್ ಲಭ್ಯವಾಗುತ್ತಿಲ್ಲ ಎಂದು ಹಲವರು ದೂರು ನೀಡಿದ್ದರು. 

ಇಂಡೋನೇಷಿಯಾದಲ್ಲಿ ಐಫೋನ್ 16 ಬ್ಯಾನ್, ಬಳಸುವುದು ಅಕ್ರಮಕ್ಕೆ ಸಮ!

ದೂರಿಗೆ ಸ್ಪಂದಿಸಿದ ಆ್ಯಪಲ್ ಕ್ಯಾಮೆರಾದಲ್ಲಿ ಸಮಸ್ಯೆ ಇರುವುದನ್ನು ಒಪ್ಪಿಕೊಂಡಿದೆ. ಎಪ್ರಿಲ್ 10, 2023ರಿಂದ ಎಪ್ರಿಲ್ 28, 2024ರ ಒಳಗೆ ಉತ್ಪಾದನೆಯಾಗಿರುವ ಆ್ಯಪಲ್ 14 ಪ್ಲಸ್ ಮಾಡೆಲ್‌ನಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ ಎಂದು ಆ್ಯಪಲ್ ಹೇಳಿದೆ. ಹೀಗಾಗಿ ಈ ಗ್ರಾಹಕರ ಕ್ಯಾಮೆರಾ ಸಮಸ್ಯೆಯನ್ನು ಉಚಿತವಾಗಿ ಆ್ಯಪಲ್ ರಿಪೇರಿ ಮಾಡಿಕೊಡಲಿದೆ ಎಂದು ಘೋಷಿಸಿದೆ.   ಐಫೋನ್ ವೆಬ್‌ಸೈಟ್ ಮೂಲಕ ಐಫೋನ್ 14 ಪ್ಲಸ್ ಗ್ರಾಹಕರು ಸೀರಿಯಲ್ ನಂಬರ್ ನಮೂದಿಸಿ ತಮ್ಮ ತಮ್ಮ ಫೋನ್ ಯಾವ ವರ್ಷದಲ್ಲಿ ಉತ್ಪಾದನೆ ಮಾಡಲಾಗಿದೆ ಅನ್ನೋದು ತಿಳಿದುಕೊಳ್ಳಬಹುದು. ಇಷ್ಟೇ ಅಲ್ಲ ಉಚಿತ ರಿಪೇರಿಗೆ ಅರ್ಹರೇ ಅನ್ನೋದು ಗೊತ್ತಾಗಲಿದೆ.

ಸೀರಿಯಲ್ ನಂಬರ್ ಪಡೆಯುವುದು ಹೇಗೆ?
ಐಫೋನ್ ಸೆಟ್ಟಿಂಗ್ಸ್‌ಗೆ ತೆರಳಿ,ಜನರಲ್ ಸೆಟ್ಟಿಂಗ್ ಆಯ್ಕೆ ಮಾಡಿಕೊಳ್ಳಬೇಕು. 
ಬಳಿಕ ಸ್ಕ್ರಾಲ್ ಡೌನ್ ಮಾಡಿದರೆ ಸೀರಿಯಲ್ ನಂಬರ್ ತಿಳಿಯಲಿದೆ.

ಈ ಸೀರಿಯಲ್ ನಂಬರ್‌ನ್ನು ಆ್ಯಪಲ್ ವೆಬ್‌ಸೈಟ್‌ನಲ್ಲಿ ದಾಖಲಿಸಿದರೆ ನಿಮ್ಮ ಫೋನ್ ಯಾವ ವರ್ಷದಲ್ಲಿ ಉತ್ಪಾದನೆಯಾಗಿದೆ ಅನ್ನೋದು ಸ್ಪಷ್ಟವಾಗಲಿದೆ. ಬಳಿಕ ನಿಮ್ಮ ಐಫೋನ್ 14 ಪ್ಲಸ್ ಮಾಡೆಲ್ ಫೋನ್ 2023ರ ಎಪ್ರಿಲ್ 10 ಹಾಗೂ 2024ರ ಎಪ್ರಿಲ್ 28ರ ಒಳಗೆ ಉತ್ಪಾದನೆಯಾಗಿದ್ದರೆ, ಉಚಿತ ರಿಪೇರಿಗೆ ಅರ್ಹರಾಗಿರುತ್ತೀರಿ. ಆದರೆ ಉಚಿತ ರಿಪೇರಿಗೆ ಐಫೋನ್ ಡ್ಯಾಮೇಜ್ ಆಗಿರಬಾರದು. ಫೋನ್ ಡ್ಯಾಮೇಜ್ ಆಗಿದ್ದರೆ ಈ ಆಫರ್‌ನಿಂದ ವಂಚಿತರಾಗಲಿದ್ದೀರಿ.

2024ರ ಸೆಪ್ಟೆಂಬರ್ ತಿಂಗಳಲ್ಲಿ ಐಫೋನ್ 16 ಸಿರೀಸ್ ಬಿಡುಗಡೆಯಾಗಿದೆ. ಮೊದಲ ದಿನವೇ ಫೋನ್ ಖರೀದಿಸಲು ಜನ ಮುಗಿಬಿದ್ದಿದ್ದರು. ಆ್ಯಪಲ್ ಸ್ಟೋರ್, ಆನ್‌ಲೈನ್ ಮೂಲಕ ಐಫೋನ್ ಭರಾಟೆ ಆರಂಭಗೊಂಡಿತ್ತು. ಆ್ಯಪಲ್ ಸ್ಟೋರ್ ಮುಂಭಾಗ ರಾತ್ರಿಯಿಡಿ ಕ್ಯೂ ನಿಂತು ಐಫೋನ್ ಖರೀದಿಸಿದ್ದರು. ಹಲವರು ಬೆಳಗ್ಗೆ 5 ಗಂಟೆಯಿಂದ ಆ್ಯಪಲ್ ಸ್ಟೋರ್ ಮುಂಭಾಗದಲ್ಲಿ ಸರದಿ ಸಾಲಲ್ಲಿ ನಿಂತು ಐಫೋನ್ ಪಡೆದು ಸಂಭ್ರಮಿಸಿದ್ದರು. ಇದೀಗ ಬೆಂಗಳೂರು ಸೇರಿದಂತೆ ಹಲವು ನಗರದಲ್ಲಿ ಹೊಸ ಐಫೋನ್ ಮಳಿಗೆ ಆರಂಭಗೊಳ್ಳುತ್ತಿದೆ. ಈ ಮೂಲಕ ಆ್ಯಪಲ್ ವಹಿವಾಟು ಭಾರತದಲ್ಲಿ ವಿಸ್ತರಣೆಯಾಗುತ್ತಿದೆ. ದೇಶದ ಮೂಲ ಮೂಲೆಯಲ್ಲಿ ಆ್ಯಪಲ್ ಮಳಿಗೆ ತೆರೆಯಲು ಮುಂದಾಗಿದೆ.
ಬೆಂಗಳೂರಿನ ಹೊಸ ಆ್ಯಪಲ್ ಸ್ಟೋರ್‌ನಲ್ಲಿ ಉದ್ಯೋಗ, ಲಕ್ಷ ರೂ ಸಂಬಳದ 400 ಹುದ್ದೆಗೆ ನೇಮಕಾತಿ!
 

Latest Videos
Follow Us:
Download App:
  • android
  • ios