ನವದೆಹಲಿ(ಆ.17): ಆತ್ಮನಿರ್ಭರ್ ಭಾರತ  ಹಾಗೂ ವೋಕಲ್ ಫಾರ್ ಲೋಕಲ್ ಸೇರಿದಂತೆ ಹಲವು ಪರಿಕಲ್ಪನೆಗಳಿಂದ ಭಾರತ ಇದೀಗ ಉತ್ಪಾದನೆಯಲ್ಲಿ ಸದೃಢವಾಗುತ್ತಿದೆ. ಚೀನಾ ಸೇರಿದಂತೆ ವಿದೇಶಿ ವಸ್ತುಗಳ ಆಮದು ಕಡಿಮೆಯಾಗುತ್ತಿದೆ. ಇದರಿಂದ ಚೀನಾ ಕಂಪನಿಗಳು ಆತಂಕಕ್ಕೆ ಒಳಗಾಗಿದೆ. ಪ್ರಧಾನಿ ಮೋದಿ ರತ್ನಗಂಬಳಿ ಸ್ವಾಗತ ಹಾಗೂ ವಿಶೇಷ ಸವಲತ್ತುಗಳಿಗೆ ವಿದೇಶದಲ್ಲಿ ಹಲವು ಕಂಪನಿಗಳು ಇದೀಗ ಭಾರತದಲ್ಲಿ ಘಟಕ ತೆರೆಯುತ್ತಿದೆ. ಇತ್ತ ಚೀನಾ ಕೂಡ ಇದೇ ನಿರ್ಧಾರ ಮಾಡಿದೆ.

ಕೇಂದ್ರಕ್ಕೆ ಮನಸೋತ ಸ್ಯಾಮ್ಸಂಗ್; ವಿಯೆಟ್ನಾಂನಿಂದ ಇಂಡಿಯಾ ಕಡೆಗೆ 3 ಲಕ್ಷ ಕೋಟಿ ರೂ. ಹೆಜ್ಜೆ

ವಿಯೇಟ್ನಾಂನಿಂದ ಸ್ಯಾಮ್ಸಂಗ್ ಇದೀಗ ತನ್ನ ಘಟಕವನ್ನು ಭಾರತಕ್ಕೆ ವರ್ಗಾಯಿಸುತ್ತಿದೆ. ಚೀನಾದಲ್ಲಿ ಹಲವು ಕಂಪನಿಗಳು ಭಾರತಕ್ಕೆ ವರ್ಗಾವಣೆಯಾಗುತ್ತಿದೆ. ಆ್ಯಪಲ್ ಭಾರತದಲ್ಲಿ ಉತ್ಪಾದನೆ ಆರಂಭಿಸಿದೆ. ಇದೀಗ ಚೀನಾದ 24 ಮೊಬೈಲ್ ಕಂಪನಿಗಳು ಮೇಡ್ ಇನ್ ಇಂಡಿಯಾ ಮೊಬೈಲ್ ನಿರ್ಮಾಣಕ್ಕೆ ಭಾರತದಲ್ಲೇ ಘಟಕ ತೆರೆಯಲು ಮುಂದಾಗಿದೆ.

ಹಾನ್ ಹೈ ಪ್ರಿಸಿಶನ್ ಇಂಡಸ್ಟ್ರಿ(Foxconn), ವಿಸ್ಟೋರ್ನ್ ಕಾರ್ಪ್, ಪೆಗಾಟ್ರಾನ್ ಕಾರ್ಪ್ ಸೇರಿದಂತೆ ಹಲವು ಕಂಪನಿಗಳು ಭಾರತದಲ್ಲಿ ಘಟಕ ತೆರೆಯುತ್ತಿದೆ. ಇತ್ತ ಅಮೆರಿಕ-ಚೀನಾ ಟ್ರೇಡ್ ತಲೆನೋವು ಕೂಡ ವಿದೇಶದಲ್ಲಿರುವ ಕಂಪನಿಗಳಿಗೆ ಕಾಡುತ್ತಿದೆ. ಹೀಗಾಗಿ ಭಾರತ ಅತ್ಯುತ್ತಮ ತಾಣವಾಗಿ ಮಾರ್ಪಟ್ಟಿದೆ. ಪ್ರಧಾನಿ ಮೋದಿ ವಿದೇಶಿ ಕಂಪನಿಗಳನ್ನು ಸೆಳೆಯಲು ಹಲವು ಯೋಜನೆ ಜಾರಿಗೆ ತಂದಿದ್ದಾರೆ.