ಬೆಂಗಳೂರು :  ಅತ್ಯಾಧುನಿಕ ತಂತ್ರಜ್ಞಾನದ ‘ಒನ್‌ ಪ್ಲಸ್‌ ಸವೆನ್‌’ ಆ್ಯಂಡ್ರಾಯಿಡ್‌ ಸ್ಮಾರ್ಟ್‌ ಫೋನ್‌ ಭಾರತದ ಮಾರುಕಟ್ಟಿಗೆ ಲಗ್ಗೆಯಿಟ್ಟಿದೆ.

ಬೆಂಗಳೂರಿನ ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ಒನ್‌ ಪ್ಲಸ್‌ ಕಂಪನಿಯ ಸಂಸ್ಥಾಪಕ ಕಾಲ್‌ರ್‍ ಪೇ, ನಾಲ್ಕನೇ ತಲೆಮಾರಿನ ‘ಒನ್‌ ಪ್ಲಸ್‌ ಸವೆನ್‌‘ ಹಾಗೂ 5ನೇ ತಲೆಮಾರಿನ ‘ಒನ್‌ ಪ್ಲಸ್‌ ಸವೆನ್‌ ಪ್ರೊ’ ನೂತನ ಆವೃತ್ತಿಯನ್ನು ಬಿಡುಗಡೆ ಮಾಡಿದರು.

ಬಳಿಕ ಮಾತನಾಡಿದ ಅವರು, ಮೊಬೈಲ್‌ ಫೋನನ್ನು ಬಳಸುವವರಿಗೆ ಹೊಸ ಅನುಭವವನ್ನು ನೀಡುವುದಕ್ಕಾಗಿ ಕಂಪನಿಯಿಂದ ನಿರಂತರವಾಗಿ ಶ್ರಮಿಸಲಾಗುತ್ತಿದ್ದು, ನೂತನ ಮೊಬೈಲ್‌ ಫೋನನ್ನು ಸಾರ್ವಜನಿಕರಿಗೆ ಒದಗಿಸುತ್ತಿದೆ ಎಂದು ಹೇಳಿದರು.

‘ಒನ್‌ ಪ್ಲಸ್‌ ಸೆವನ್‌ನ ವಿಶೇಷತೆಗಳು:

ಒನ್‌ ಪ್ಲಸ್‌ ಸೆವನ್‌ ಪ್ರೊ ಅತ್ಯಂತ ಹೆಚ್ಚು ಸಾಮರ್ಥ್ಯವುಳ್ಳ ಮೂರು ಕ್ಯಾಮರಾಗಳನ್ನು ಹೊಂದಿದೆ. ಅತಿ ದೂರದ ವಸ್ತುಗಳನ್ನು ಸೂಕ್ಷ್ಮ ಮತ್ತು ವಾಗಿ ಸೆರೆಯಿಡಿಯಲು ನೆರವಾಗಲಿದೆ. ಅಲ್ಲದೆ, ಅತ್ಯಂತ ಸರಳವಾಗಿ ಬಳಸಬಲ್ಲ ಹೆಚ್ಚು ಪ್ರಖರವಾದ ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ ಎಚ್‌ಡಿ ಗುಣಮಟ್ಟದ್ದಾಗಿದ್ದು ಪ್ರತಿ ಸೆಕೆಂಡಿಗೆ 19 ಬಾರಿ ರೀಫ್ರೆಶ್‌ ಆಗಲಿದೆ. ಆಲ್ಟಾ್ರ ಸ್ಲಿಮ್‌ ತಂತ್ರಜ್ಞಾನವನ್ನು ಹೊಂದಿದೆ. ಅಲ್ಲದೆ, 12 ಜಿಬಿ ರಾರ‍ಯಮ್‌, ದತ್ತಾಂಶದ ಸ್ಟೋರೇಜ್‌ (128 ಮತ್ತು 256 ಜಿಬಿ) ಯುಎಫ್‌ಎಸ್‌ 3.0 ಸಾಮರ್ಥ್ಯ ಹೊಂದಿದೆ. ಅದ್ಭುತವಾದ ಗೇಮಿಂಗ್‌ ಅನುಭವ ನೀಡಲಿದೆ ಎಂದು ಅವರು ವಿವರಿಸಿದರು.

‘ಒನ್‌ ಪ್ಲಸ್‌ ಸೆವನ್‌ ಪ್ರೊನ ವಿಶೇಷತೆಗಳು:

ಒನ್‌ ಪ್ಲಸ್‌ ಸೆವನ್‌ನ ಎಲ್ಲ ಸೌಲಭ್ಯಗಳೊಂದಿಗೆ ಐದು ಮೆಗಾಫಿಕ್ಸೆಲ್‌ ಕ್ಯಾಮರಾ ಇದ್ದು ನೂತನವಾಗಿ ಆವಿಷ್ಕರಿಸಿರುವ ಆಲ್ಟಾ್ರಶೂಟ್‌ ಯಂತ್ರದ ಸಹಾಯದಿಂದ ಕಾರ್ಯನಿರ್ವಹಿಸಲಿದೆ. 5.0 ಸಾಮರ್ಥ್ಯದ ಬ್ಲೂಟೂತ್‌ ಸಂಪರ್ಕ ಇದೆ. 8 ಜಿಬಿ ರಾರ‍ಯಮ್‌ ಮತ್ತು 256 ಜಿಬಿ ದತ್ತಾಂಶ ಸಂಗ್ರಹ ಸಾಮರ್ಥ್ಯವನ್ನು ಹೊಂದಿದೆ. ಆನ್‌ಲೈನ್‌ ವಹಿವಾಟು ಜಾಲಗಳಾದ ಅಮೆಜಾನ್‌, ಒನ್‌ಪ್ಲಸ್‌ ಸ್ಟೋರ್‌, ರಿಲಯಾನ್ಸ್‌ ಔಟ್‌ಲೆಟ್‌ಗಳಲ್ಲಿ ಲಭ್ಯವಿದ್ದು, ಎಸ್‌ಬಿಐ ಡೆಬಿಟ್‌ ಮತ್ತು ಕ್ರೆಡಿಟ್‌ ಕಾರ್ಡ್‌ಗಳಿಗೆ 2000 ವರೆಗೂ ಕ್ಯಾಶ್‌ಬ್ಯಾಕ್‌ ಲಭ್ಯವಿದೆ. ಜೊತೆಗೆ ಆರು ತಿಂಗಳ ಕಾಲ ಬಡ್ಡಿ ರಹಿತ ಇಎಂಐ ಲಭ್ಯವಿದೆ ಎಂದು ಅವರು ವಿವರಿಸಿದರು.

ಬೆಂಗಳೂರಿನ ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ‘ಒನ್‌ ಪ್ಲಸ್‌ ಸವೆನ್‌’ 4ಜಿ ಹಾಗೂ ‘ಒನ್‌ ಪ್ಲಸ್‌ ಸವೆನ್‌ ಪ್ರೊ’ 5ಜಿಯ ನೂತನ ಆವೃತ್ತಿಯ ಎರಡು ಆ್ಯಂಡ್ರಾಯಡ್‌ ಫೋನ್‌ಗಳನ್ನು ಒನ್‌ ಪ್ಲಸ್‌ ಕಂಪೆನಿಯ ಸಂಸ್ಥಾಪಕ ಕಾಲ್‌ರ್‍ ಪೇ ಬಿಡುಗಡೆ ಮಾಡಿದರು.