Asianet Suvarna News Asianet Suvarna News

ಮಂಡ್ಯ: ಬಾಗಿನ ಅರ್ಪಿಸಲು ಶಾಸಕರೆದುರೇ ಬಣಗಳ ಕಿತ್ತಾಟ..!

ಕ್ಷುಲ್ಲಕ ಕಾರಣಕ್ಕೆ ಶಾಕರೆದುರೇ ಎರಡು ಬಣಗಳು ಪರಸ್ಪರ ಜಗಳ ಮಾಡಿಕೊಂಡಿರುವ ಘಟನೆ ಮಂಡ್ಯದಲ್ಲಿ ನಡೆದಿದೆ. ಶಾಸಕರು ಪಕ್ಕದಲ್ಲೇ ನಿಂತಿದ್ರೂ ಕ್ಯಾರೇ ಇಲ್ಲದೆ ಎರಡೂ ಬಣಗಳು ಜಗಳ ಮಾಡಿಕೊಂಡಿವೆ.

two groups of people fight infront of mla
Author
Bangalore, First Published Oct 15, 2019, 3:20 PM IST

ಮಂಡ್ಯ(ಅ.15): ಎರಡು ಬಣಗಳು ಶಾಸಕರನ್ನು ಕ್ಯಾರೇ ಅನ್ನದೆ ಜಗಳ ಮಾಡಿದ ಘಟನೆ ಮಂಡ್ಯದಲ್ಲಿ ನಡೆದಿದೆ. ಬಾಗಿನ ಅರ್ಪಿಸುವ ವಿಚಾರದಲ್ಲಿ ಆರಂಭವಾದ ಭಿನ್ನಾಭಿಪ್ರಾಯ ಜಗಳದ ರೂಪ ಪಡೆದಿದೆ.

ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಕಂಚುಗಹಳ್ಳಿ ಗ್ರಾಮದ ಬದಗನ ಕೆರೆ ಬಳಿ ಘಟನೆ ನಡೆದಿದೆ. ಬದಗನಕೆರೆಗೆ ಬಾಗಿನ ಅರ್ಪಣೆಗೆ ಶಾಸಕರು ಹಾಗೂ ಬೆಂಬಲಿಗರು ಬಂದಿದ್ದರು. ಅದೇ ಸಮಯದಲ್ಲಿ ಬೀಜಿಪುರ ನಾಲಾ ಹಿತರಕ್ಷಾಣ ಸಮಿತಿ ಸದಸ್ಯರೂ ಬಾಗಿನ ಅರ್ಪಿಸಲು ಬಂದಿದ್ದಾರೆ.

ನಾ ಮುಂದು, ತಾ ಮುಂದು..!

ಕೆರೆಗೆ ಬಾಗಿನ ಅರ್ಪಿಸಲು ಬಂದ ಎರಡೂ ಗುಂಪುಗಳ ನಡುವೆ ಮಾತಿನ ಚಕಮಕಿ ಶುರುವಾಗಿದ್ದು ಕ್ಷುಲ್ಲಕ ಕಾರಣಕ್ಕೆ. ಮೊದಲು ಬಾಗಿನ ಅರ್ಪಿಸುವ ವಿಚಾರದಲ್ಲಿ ಎರಡೂ ಬಣಗಳಿಗೆ ಭಿನ್ನಾಭಿಪ್ರಾಯ ಉಂಟಾಗಿದೆ. ಶಾಸಕರೆದುರೇ ಮಾತಿಗೆ ಮಾತು ಬೆಳೆಸಿದ ಎರಡು ಗುಂಪು ಬಾಗಿನ ಅರ್ಪಿಸಲು ಕಿತ್ತಾಟ ನಡೆಸಿದ್ದಾರೆ.

‘ಮನಸ್ಸಲ್ಲಿ ನೋವಿದ್ದರೂ ನಿವೃತ್ತಿ ಪಡೆಯಲ್ಲ’

ಭರ್ತಿಯಾಗಿದ್ದ ಬದಗನಕೆರೆಗೆ ಅರ್ಪಿಸಲು ಶಾಸಕ ಅನ್ನದಾನಿ ತಮ್ಮ ಬೆಂಬಲಿಗರೊಂದಿಗೆ ಬಂದಿದ್ದರು. ಮೊದಲು ಬಾಗಿನ ಅರ್ಪಿಸುವ ವಿಚಾರದಲ್ಲಿ ಮಾತಿನ ಯುದ್ಧ ಶುರುವಾಗಿದೆ. ಆದ್ರೆ ಶಾಸಕರಿಗೂ ಮೊದಲು ಬಾಗಿನ ಅರ್ಪಣೆಗೆ ಸಿದ್ದತೆ ಮಾಡಿಕೊಂಡಿದ್ದ ಬೀಜಿಪುರ ನಾಲಾ ಹಿತರಕ್ಷಾಣ ಸಮಿತಿ ಸದಸ್ಯರು ಬಾಗಿನ ಅರ್ಪಿಸುವಲ್ಲಿ ತಕರಾರು ಮಾಡಿದ್ದಾರೆ.

ಇದ್ರಿಂದ ಆಕ್ರೋಶಗೊಂಡ ಶಾಸಕರ ಬೆಂಬಲಿಗರು ಪ್ರೋಟೋಕಾಲ್‌ ಪ್ರಕಾರ ಶಾಸಕರೇ ಮೊದಲು ಬಾಗಿನ ಅರ್ಪಿಸಲಿ ಎಂದು ಪಟ್ಟು ಹಿಡಿದಿದ್ದಾರೆ. ಶಾಸಕರ ಬೆಂಬಲಿಗರ ವಾದಕ್ಕೆ ವಿರೋಧ ವ್ಯಕ್ತಪಡಿಸಿದ ಸಮಿತಿ ಸದಸ್ಯರು ತಾವೇ ಮೊದಲು ಬಾಗಿನ ಅರ್ಪಿಸುವುದಾಗಿ ಪಟ್ಟು ಹಿಡಿದಿದ್ದಾರೆ.

ಬಸ್‌ ಓಡಿದರೂ ಮಸ್ಕಿ ಸಾರಿಗೆ ಘಟಕಕ್ಕೆ ಆದಾಯವೇ ಬರ್ತಿಲ್ಲ!

ಈ ಬೆಳವಣಿಗೆಗಳನ್ನು ಕಂಡ ಶಾಸಕ ಅನ್ನದಾನಿ ನಾವು ಬಾಗಿನ ಬಿಡುವವರೆಗೂ ಬೇರೆಯವರಿಗೆ ಅವಕಾಶ ನೀಡದಂತೆ ಪೋಲಿಸರಿಗೆ ಸೂಚನೆ ನೀಡಿದ್ದಾರೆ. ಇದರಿಂದ ಕೆರಳಿದ ಸಮಿತಿ ಸದಸ್ಯರು ಪೋಲಿಸರು, ಶಾಸಕರ ಮಾತಿಗೆ ಕ್ಯಾರೆ ಎನ್ನದೆ ಮೊದಲು ಬಾಗಿನ ಅರ್ಪಣೆ ಮಾಡಿದ್ದಾರೆ. ಅನಿವಾರ್ಯವಾಗಿ ಶಾಸಕ ಅನ್ನದಾನಿ ನಂತರ ಬಾಗಿನ ಅರ್ಪಿಸಿದ್ದಾರೆ.

ಮಂಡ್ಯದಲ್ಲಿ ಅಕ್ರಮವಾಗಿ ಮಾರಾಟವಾಗ್ತಿದೆ ಕೇರಳದ ಲಾಟರಿ ಟಿಕೆಟ್..!

Follow Us:
Download App:
  • android
  • ios