ಮಂಡ್ಯ(ಅ.27): ಬೆಳಕಿನ ಹಬ್ಬ ದೀಪಾವಳಿ ಆಚರಣೆ ಹಿನ್ನೆಲೆಯಲ್ಲಿ ಮಹಿಳೆಯರು, ಹೆಣ್ಣು ಮಕ್ಕಳು ಮಾರುಕಟ್ಟೆಯಲ್ಲಿ ಅಲಂಕಾರಿಕ ದೀಪಗಳನ್ನು ಕೊಳ್ಳಲು ಮುಂದಾದರೆ, ಮಕ್ಕಳು ಸೇರಿದಂತೆ ಎಲ್ಲಾ ವಯೋಮಾನದವರು ಪಟಾಕಿ ಖರೀದಿಯಲ್ಲಿ ತೊಡಗಿದ್ದ ದೃಶ್ಯ ಶನಿವಾರ ನಗರದಲ್ಲಿ ಕಂಡು ಬಂತು.

ನಗರದ ನೂರಡಿ ರಸ್ತೆ, ವಿಶ್ವೇಶ್ವರಯ್ಯ ರಸ್ತೆ, ಕೆ.ಆರ್‌.ರಸ್ತೆ, ಪೇಟೆ ಬೀದಿ ಸೇರಿದಂತೆ ಹಲವು ರಸ್ತೆಗಳಲ್ಲಿ ತಳ್ಳುವ ಗಾಡಿ, ಅಂಗಡಿಗಳಲ್ಲಿ ವಿವಿಧ ಬಗೆಯ ದೀಪಗಳನ್ನು ವ್ಯಾಪಾರಸ್ಥರು ಇಟ್ಟಿದ್ದರು. ಕಾರ್ತಿಕ ಮಾಸದ ಹಿನ್ನೆಲೆಯಲ್ಲಿ ದೀಪಗಳನ್ನು ಹಚ್ಚಬೇಕಿರುವುದರಿಂದ ಮಹಿಳೆಯರು, ಹೆಣ್ಣು ಮಕ್ಕಳು ದೀಪಗಳ ಖರೀದಿಯಲ್ಲಿ ನಿರತರಾಗಿದ್ದರು. ವ್ಯಾಪಾರಸ್ಥರು ಸ್ವಾಗತ ದೀಪ, ಗುಬ್ಬಿಗೂಡು ದೀಪ, ಕಾಸಗಲ ದೀಪ, ಬಟ್ಟಲು ದೀಪ, ಹಣಬೆ ಆಕಾರದ ದೀಪ ಸೇರಿದಂತೆ ವೈಶಿಷ್ಟ್ಯಪೂರ್ಣ ದೀಪಗಳನ್ನು ಮಾರಾಟಕ್ಕೆ ಇಟ್ಟು ಕೊಳ್ಳಲು ಆಕರ್ಷಿಸುತ್ತಿದ್ದವು.

ಪಟಾಕಿ ವ್ಯಾಪಾರದಲ್ಲಿ ಕುಸಿತ:

ಪಟಾಕಿ ಸಿಡಿತದಿಂದ ಪರಿಸರದ ಮೇಲೆ ಆಗುವ ಅನಾಹುತಗಳ ಬಗ್ಗೆ ವರ್ಷದಿಂದ ವರ್ಷಕ್ಕೆ ಜನರಲ್ಲಿ ಜಾಗೃತಿ ಮೂಡಿಸುತ್ತಿರುವ ಹಿನ್ನೆಲೆಯಲ್ಲಿ ಈ ವರ್ಷವೂ ಕೂಡ ಕಂಡಿದೆ. ಪಟಾಕಿ ಸಿಡಿಸುವುದರಿಂದ ಮನುಷ್ಯರಿಗೆ ಉಂಟಾಗುವ ಅಪಾಯದ ಬಗ್ಗೆ ಜನರು ಎಚ್ಚರಗೊಂಡಿದ್ದಾರೆ. ಹೀಗಾಗಿ ಹಬ್ಬದ ವೇಳೆ ಪಟಾಕಿ ಸದ್ದು ಕಡಿಮೆಯೇ ಕೇಳುತ್ತಿದೆ ಎಂದು ಹೇಳಬಹುದು. ನಗರದ ಒಳಾಂಗಣ ಕ್ರೀಡಾಂಗಣದ ಆವರಣದಲ್ಲಿ ಪಟಾಕಿ ಮಳಿಗೆಗಳನ್ನು ತೆರೆಯಲಾಗಿದೆ. ಈ ವರ್ಷವೂ ಕೂಡ ಪಟಾಕಿ ಕೊಳ್ಳುವವರ ಸಂಖ್ಯೆ ಇಳಿಮುಖವಾಗಿವೆ.

ಅನರ್ಹ ಶಾಸಕ ನಾರಾಯಣ ಗೌಡಗೆ ಕೆ.ಆರ್. ಪೇಟೆ BJP ಟಿಕೆಟ್ ಫಿಕ್ಸ್..?...

ಪಟಾಕಿ ವ್ಯಾಪಾರದಿಂದ ಸಿಗುವ ಲಾಭಾಂಶವೂ ಕಡಿಮೆಯಾಗುತ್ತಿರುವುದರಿಂದ ವ್ಯಾಪಾರಸ್ಥರೂ ಕಡಿಮೆಯಾಗುತ್ತಿದ್ದಾರೆ. ಸಣ್ಣ ಪಟಾಕಿಗಳಿಂದ ಹಿಡಿದು ದೊಡ್ಡ ಪಟಾಕಿಗಳ ವರೆಗೆ ಕನಿಷ್ಠ 30 ರು.ನಿಂದ 2ಸಾವಿರ ರು.ವರೆಗೆ ಮಾರಾಟಕ್ಕೆ ಇಡಲಾಗಿದೆ. ಮಕ್ಕಳು ಸಿಡಿಸುವ ಪಟಾಕಿಗಳಿಗೆ ಬೇಡಿಕೆ ಹೆಚ್ಚಾಗಿದೆ. ಬಾಕ್ಸ್‌ ರೂಪದಲ್ಲಿ ಪಟಾಕಿಗಳನ್ನು ಮಳಿಗೆಯಲ್ಲಿ ಮಾರಾಟಕ್ಕೆ ಇಡಲಾಗಿದೆ.

ಮಂಡ್ಯ: ಚಿರತೆ ದಾಳಿಗೆ 10 ಕುರಿ ಬಲಿ