ಅನರ್ಹ ಶಾಸಕ ನಾರಾಯಣ ಗೌಡಗೆ ಕೆ.ಆರ್. ಪೇಟೆ BJP ಟಿಕೆಟ್ ಫಿಕ್ಸ್..?
ಕೆ.ಆರ್. ಪೇಟೆ ಅನರ್ಹ ಶಾಸಕ ನಾರಾಯಣಗೌಡ ಬಿಜೆಪಿಯಿಂದ ಸ್ಪರ್ಧೆ ಮಾಡೋದು ಬಹುತೇಕ ಫಿಕ್ಸ್ ಆಗಿದೆ. ಈ ಬಗ್ಗೆ ಈ ಹಿಂದೆ ಮಂಡ್ಯ ಜಿಲ್ಲೆಯ ಬಿಜೆಪಿ ಪಕ್ಷ ಸಂಘಟನೆ ಹೊಣೆ ಹೊತ್ತುಕೊಂಡಿದ್ದ ಮಾರುತಿರಾವ್ ಪವಾರ್ ಅವರೇ ಹೇಳಿಕೆ ನೀಡಿದ್ದಾರೆ.
ಮಂಡ್ಯ(ಅ.26): ಕೆ.ಆರ್. ಪೇಟೆ ಅನರ್ಹ ಶಾಸಕ ನಾರಾಯಣಗೌಡ ಬಿಜೆಪಿಯಿಂದ ಸ್ಪರ್ಧೆ ಮಾಡೋದು ಬಹುತೇಕ ಫಿಕ್ಸ್ ಆಗಿದೆ. ಉಪಚುನಾವಣೆಯಲ್ಲಿ ಕೆ. ಆರ್. ಪೇಟೆ ಕ್ಷೇತ್ರದಿಂದ ಅನರ್ಹ ಶಾಸಕ ನಾರಾಯನ ಗೌಡ ಅವರು ಕೆ. ಆರ್. ಪೇಟೆಯಿಂದ ಸ್ಪರ್ಧಿಸ್ತಾರೆ ಅನ್ನೋ ಮಾತು ಕೇಳಿ ಬರ್ತಿದೆ.
ಕೆಆರ್‌ಪೇಟೆ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಲಿದ್ದಾರೆ ನಾರಾಯಣಗೌಡ.? ಇಂತಹದೊಂದು ಪ್ರಶ್ನೆ ಜನರನ್ನು ಕಾಡತೊಡಗಿದೆ. ಇದಕ್ಕೆ ಪೂರಕವೆಂಬಂತೆ ಬಿಜೆಪಿ ಮುಖಂಡರು ನಾರಾಯಣ ಗೌಡ ಅವರ ಜೊತೆ ಕಾಣಿಸಿಕೊಳ್ಳುತ್ತಿದ್ದಾರೆ. ಇಷ್ಟೇ ಅಲ್ಲದೆ ಕೆ. ಆರ್. ಪೇಟೆ ಕ್ಷೇತ್ರದಲ್ಲಿ ನಡೆಯುವಂತಹ ಕಾರ್ಯಕ್ರಮಗಳಲ್ಲಿಯೂ ಅನರ್ಹ ಶಾಸಕ ನಾರಾಯಣ ಗೌಡ ಹಾಜರಿರುತ್ತಾರೆ. ಬಿಜೆಪಿ ಮುಖಂಡರ ಜೊತೆಗೇ ಪ್ರಮುಖ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಿರುವುದು ಜನರಲ್ಲಿ ಹಲವು ಕುತೂಹಲಗಳನ್ನು ಮೂಡಿಸಿದೆ.
ಮಂಡ್ಯ: ಚಿರತೆ ದಾಳಿಗೆ 10 ಕುರಿ ಬಲಿ
ಕೆಆರ್ ಪೇಟೆ ತಾಲೂಕಿನ ಶೀಳನೆರೆಯಲ್ಲಿ ನಾರಾಯಣಗೌಡ ಅಭಿಮಾನಿ ಬಳಗದಿಂದ ನಡೆದ ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡರೊಬ್ಬರು ಭಾಗವಹಿಸಿದ್ದಾರೆ. ಮಾಜಿ ಶಾಸಕ ಹಾಗೂ ಬಿಜೆಪಿ ಮುಖಂಡ ಮಾರುತಿರಾವ್ ಪವಾರ್ ಅನರ್ಹ ಶಾಸಕ ನಾರಾಯಣಗೌಡರೊಂದಿಗೆ ಕಾಣಿಸಿಕೊಂಡಿರುವುದು ಹಲವು ಕುತೂಹಲಗಳಿಗೆ ಕಾರಣವಾಗಿದೆ.
ಈ ಹಿಂದೆ ಮಂಡ್ಯ ಜಿಲ್ಲೆಯ ಬಿಜೆಪಿ ಪಕ್ಷ ಸಂಘಟನೆ ಹೊಣೆ ಹೊತ್ತುಕೊಂಡಿದ್ದ ಮಾರುತಿರಾವ್ ಪವಾರ್ ಕೆ. ಆರ್. ಪೇಟೆಯಲ್ಲಿ ನೀಡಿರುವ ಹೇಳಿಕೆ ನಾರಾಯಣ ಗೌಡ ಬಿಜೆಪಿಯಿಂದ ಸ್ಪರ್ಧಿಸುವ ಸುಳಿವು ನೀಡಿದೆ. ಕೆಆರ್ ಪೇಟೆ ಮೂಲಕ ಮಂಡ್ಯದಲ್ಲಿ ಕಮಲ ಅರಳಲಿದೆ. ರಾಷ್ಟ್ರೀಯ ನಾಯಕರು ಕೆ.ಆರ್. ಪೇಟೆಗೆ ವಿಶೇಷ ಆಸಕ್ತಿವಹಿಸಿದ್ದಾರೆ. ಮಂಡ್ಯದಲ್ಲಿ ಬಿಜೆಪಿ ಬಾವುಟ ಹಾರಿಸಬೇಕೆಂದು ವಿಶೇಷ ಆದ್ಯತೆ ನೀಡಲಾಗಿದೆ ಎಂದಿದ್ದಾರೆ.
'ಡಿಕೆಶಿ ಬಿಡುಗಡೆಯಿಂದ ರಾಜ್ಯ ರಾಜಕಾರಣದಲ್ಲಿ ಹೊಸ ಸಂಚಲನ
ಕೆಆರ್ ಪೇಟೆ ಜನ ಇನ್ನೊಮ್ಮೆ ನಾರಾಯಣಗೌಡರ ಕೈ ಹಿಡಿಯುತ್ತಾರೆ ಎಂದಿದ್ದಾರೆ. ನಾರಾಯಣಗೌಡ ಅವರು ಉಪಚುನಾವಣೆಯಲ್ಲಿ ಗೆಲುವು ಪಡೆಯುತ್ತಾರೆ ಎನ್ನುವ ಮೂಲಕ ಮಾರುತಿರಾವ್ ಪವಾರ್ ಬಿಜೆಪಿ ಅಭ್ಯರ್ಥಿ ನಾರಾಯಣಗೌಡ ಎಂಬ ಸುಳಿವು ನೀಡಿದ ನೀಡಿದ್ದಾರೆ.