Asianet Suvarna News Asianet Suvarna News

ಬ್ಯಾನರ್ ನಲ್ಲಿ ಶಾಸಕರ ಫೋಟೊ ಹಾಕದ ಜಗಳ ಕೊಲೆಯಲ್ಲಿ ಅಂತ್ಯ

ಸಕ್ಕರೆ ನಾಡು ಮಂಡ್ಯದಲ್ಲಿ ಚುನಾವಣಾ ಕಾವು ಜೋರಾಗಿದೆ. ಅಭ್ಯರ್ಥಿಗಳು, ಅವರ ಬೆಂಬಲಿಗರು ಮತ ಬೇಟೆಗೆ‌ ಮುಂದಾಗಿದ್ದಾರೆ. ಈ ನಡುವೆ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಶಾಸಕರ ಭಾವಚಿತ್ರ ಹಾಕದ ವಿಚಾರಕ್ಕೆ ಶುರುವಾದ ಯುವಕರ ಗಲಾಟೆ ಕೊಲೆಯಲ್ಲಿ ಅಂತ್ಯ ಕಂಡಿದೆ.

MLA non-posting fight ends in murder
Author
First Published Nov 21, 2022, 7:14 PM IST

ವರದಿ : ನಂದನ್ ರಾಮಕೃಷ್ಣ, ಏಷ್ಯಾನೆಟ್ ಸುವರ್ಣ ನ್ಯೂಸ್

ಮಂಡ್ಯ (ನ.21): ವಿಧಾನಸಭಾ ಚುನಾವಣೆ ಸನಿಹವಾಗುತ್ತಿದ್ದಂತೆ ಸಕ್ಕರೆ ನಾಡು ಮಂಡ್ಯದಲ್ಲಿ ಚುನಾವಣಾ ಕಾವು ಜೋರಾಗಿದೆ. ಅಭ್ಯರ್ಥಿಗಳು, ಅವರ ಬೆಂಬಲಿಗರು ಮತ ಬೇಟೆಗೆ‌ ಮುಂದಾಗಿದ್ದಾರೆ. ಈ ನಡುವೆ ಗ್ರಾಮಗಳಲ್ಲಿ ಪರಸ್ಪರ ರಾಜಕೀಯ ವೈಷಮ್ಯ ಭುಗಿಲೇಳುವುದು ಕೂಡ ಶುರುವಾಗಿದೆ. ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಶಾಸಕರ ಭಾವಚಿತ್ರ ಹಾಕದ ವಿಚಾರಕ್ಕೆ ಶುರುವಾದ ಯುವಕರ ಗಲಾಟೆ ಕೊಲೆಯಲ್ಲಿ ಅಂತ್ಯ ಕಂಡಿದೆ.

ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ದೊಡ್ಡರಸಿನಕೆರೆ ಗ್ರಾಮದಲ್ಲಿ ಈ ದುರ್ಘಟನೆ (Tragic) ಸಂಭವಿಸಿದ್ದು, ಗ್ರಾಮದ 22 ವರ್ಷ ವಯಸ್ಸಿನ ಅರಣ್ (Arun) ಅಲಿಯಾಸ್ ಕಪ್ಪೆ ಎಂಬುವನು ತನ್ನ ಸ್ನೇಹಿತರಿಂದಲೇ ಹತ್ಯೆಯಾಗಿದ್ದಾನೆ. ನ.19 ರಂದು ದೊಡ್ಡರಸಿನಕೆರೆ (Doddarasinakere) ಗ್ರಾಮದಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಮುಖಂಡ ಕದಲೂರು ಉದಯ್ ಧನಸಹಾಯ ಮಾಡಿದ್ದರಂತೆ. ಆದರೆ ಕಾರ್ಯಕ್ರಮದ ಫ್ಲೆಕ್ಸ್‌ಗಳಲ್ಲಿ ಮದ್ದೂರು ಶಾಸಕ ಡಿ.ಸಿ. ತಮ್ಮಣ್ಣ ಹಾಗೂ ಜೆಡಿಎಸ್ ವಕ್ತಾರ ಅರವಿಂದ್ ಫೋಟೊ ಹಾಕದ ವಿಚಾರಕ್ಕೆ ಯುವಕರ ನಡುವೆ ಗಲಾಟೆ ಶುರುವಾಗಿತ್ತು. ಶಾಸಕರ (MLA) ಫೋಟೋ ಹಾಕದನ್ನ ಮೃತ ಅರುಣ್ ಪ್ರಶ್ನೆ ಮಾಡಿದ್ದನು ಎನ್ನಲಾಗಿದೆ. ಇದೀಗ ಈ ವಿಚಾರವೇ ಕೊಲೆಗೆ ಕಾರಣವೆಂದು ಕುಟುಂಬಸ್ಥರು ಆರೋಪಿಸುತ್ತಿದ್ದಾರೆ. 

 

Mandya : ನರೇಗಾ ಹಿನ್ನೆಡೆಗೆ ಜನಪ್ರತಿನಿಧಿ, ಅಧಿಕಾರಿಗಳ ತಾತ್ಸಾರವೇ ಕಾರಣ

ಸದ್ಯ ಆರೋಪಿಗಳು (Accused) ತಲೆ ಮರೆಸಿಕೊಂಡಿದ್ದು, ನಾಪತ್ತೆಯಾದ ದೇವರಾಜ್, ದೊಡ್ಡಯ್ಯ, ಬೆಳ್ಳ, ಅಭಿ, ರಾಗೂಳಿ ಎಂಬುವರಿಗಾಗಿ ಶೋಧಕಾರ್ಯ ನಡೆಸಲಾಗುತ್ತಿದೆ. ಪ್ರಕರಣ ಸಂಬಂಧ ಕೆ.ಎಂ. ದೊಡ್ಡಿ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ (Murder case) ದಾಖಲಾಗಿದೆ. ಆದರೆ, ಕೊಲೆಯಾದ ಅರುಣ್ ತನ್ನ 18 ನೇ ವಯಸ್ಸಿಗೆ ರೌಡಿಶೀಟರ್ ಪಟ್ಟ ಕಟ್ಟಿಕೊಂಡಿದ್ದನು. ಸದಾ ಜಗಳ, ಹೊಡೆದಾಟ, ಬಡಿದಾಟಗಳಲ್ಲಿ ಭಾಗಿಯಾಗುತ್ತಿದ್ದ ಅರುಣ್, ಎರಡು ಮೂರು ಪ್ರಕರಣಗಳಲ್ಲಿ ಆರೋಪಿಯಾಗಿದ್ದನು. ಇದೀಗ ಕ್ಷುಲ್ಲಕ (Trivial) ಕಾರಣಕ್ಕೆ ಅರುಣ್ ಹತ್ಯೆ ನಡೆದಿದ್ದು, ಮಗನನ್ನು ಕಳೆದುಕೊಂಡ ಹೆತ್ತವರ ಆಕ್ರಂದನ (Jermiad) ಮುಗಿಲು ಮುಟ್ಟಿದೆ.

ಬೂದಿಮುಚ್ಚಿದ ಕೆಂಡದಂತಾದ ಗ್ರಾಮ :ಅರುಣ್ ಹತ್ಯೆ ಬಳಿಕ ದೊಡ್ಡರಸಿನಕೆರೆ ಗ್ರಾಮದಲ್ಲಿ ಉದ್ವಿಗ್ನ ವಾತಾವರಣ (Taut Situation) ನಿರ್ಮಾಣವಾಗಿದೆ. ಅರುಣ್ ಅವರನ್ನು ಆರೋಪಿಗಳ ಮನೆ ಮೇಲೆ ದಾಳಿ ನಡೆದಿದೆ. ರಾತ್ರೋ ರಾತ್ರಿ ಬೈಕ್ ನಲ್ಲಿ ಬಂದ ದುಷ್ಕರ್ಮಿಗಳು (criminals) ದಾಳಿ ನಡೆಸಿದ್ದಾರೆ. ಕಲ್ಲು, ದೊಣ್ಣೆ ಹಾಗೂ ಕಬ್ಬಿಣದ ಸರಳುಗಳಿಂದ ಮನೆ ಮೇಲೆ ದಾಳಿ ನಡೆಸಿ ಮನೆಯ ಬಾಗಿಲು, ಕಿಟಕಿ ಗಾಜುಗಳನ್ನು ಹೊಡೆದು ಹಾಕಿದ್ದಾರೆ. ಆರೋಪಿಗಳಾದ ದೇವರಾಜ್ ಹಾಗೂ ದೊಡ್ಡಯ್ಯನ ನಿವಾಸದ ಮೇಲೆ ದಾಳಿ ನಡೆದಿದೆ. ಇದೀಗ ಆರೋಪಿಗಳ ನಿವಾಸದ ಮುಂದೆ ಪೊಲೀಸ್ (Police) ಬಿಗಿ ಭದ್ರತೆ ಇದೆ‌. ಆದರೂ ದೊಡ್ಡರಸಿನಕೆರೆ ಗ್ರಾಮ ಸದ್ಯ ಬೂದಿ ಮುಚ್ಚಿದ ಕೆಂಡದಂತಿದೆ.

Follow Us:
Download App:
  • android
  • ios