Asianet Suvarna News Asianet Suvarna News

ಶುಭ ಸುದ್ದಿ: ಬೆಳೆಗಳಿಗೆ KRS ನಿಂದ ನೀರು ಬಿಡುಗಡೆ

ಮಂಡ್ಯ ರೈತರಿಗೆ ಶುಭ ಸುದ್ದಿಯೊಂದಿದೆ.  ಕೆಆರ್‌ಎಸ್ ಅಣೆಕಟ್ಟೆಯಿಂದ ಬೆಳೆಗಳಿಗೆ ನೀರು ಬಿಡಲು ತೀರ್ಮಾನ ತೆಗೆದುಕೊಳ್ಳಲಾಗಿದೆ.  ಮಂಡ್ಯ  ಜಿಲ್ಲಾ ಉಸ್ತುವಾರಿ ಸಚಿವ ಪುಟ್ಟರಾಜು ನೇತೃತ್ವದಲ್ಲಿ ನಡೆದ ಐಸಿಸಿ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ.

Mandya Farmers To Get Cauvery Water From KRS
Author
Bengaluru, First Published Jul 15, 2019, 9:37 PM IST

ಮಂಡ್ಯ[ಜು. 15]  ಇದು ರೈತರ ಪಾಲಿಗೆ ಶುಭ ಸುದ್ದಿ. ಕೆಆರ್‌ಎಸ್ ಅಣೆಕಟ್ಟೆಯಿಂದ ಬೆಳೆಗಳಿಗೆ ನೀರು ಬಿಡಲು ತೀರ್ಮಾನ ತೆಗೆದುಕೊಳ್ಳಲಾಗಿದೆ.  ಮಂಡ್ಯ  ಜಿಲ್ಲಾ ಉಸ್ತುವಾರಿ ಸಚಿವ ಪುಟ್ಟರಾಜು ನೇತೃತ್ವದಲ್ಲಿ ನಡೆದ ಐಸಿಸಿ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ.

ಸಚಿವರಾದ ಡಿಸಿ.ತಮ್ಮಣ್ಣ, ಸಾರಾ ಮಹೇಶ್ ಸೇರಿದಂತೆ ಮಂಡ್ಯ ಜಿಲ್ಲೆಯ ಶಾಸಕರು, ಟಿ.ನರಸೀಪುರ, ಪಿರಿಯಾಪಟ್ಟಣ ಶಾಸಕರು ಸಭೆಯಲ್ಲಿ ಭಾಗಿಯಾಗಿದ್ದು. ಕಾವೇರಿ ನದಿ ನೀರು ಹಂಚಿಕೆ ಪ್ರಾಧಿಕಾರದ ಸದಸ್ಯರೂ ಕೂಡ ಸಭೆಯಲ್ಲಿ ಭಾಗಿಯಾಗಿ ಬೆಳೆಗಳಿಗೆ ನೀರು ಬಿಡಬಹುದು ಎಂದರು.

ಬೆಂಗಳೂರು ನೀರಿನ ಸದ್ಯದ ಸ್ಥಿತಿ ಗತಿ ಹೇಗಿದೆ?

ಬೆಳೆದು ನಿಂತಿರುವ ಬೆಳೆಗಳಿಗೆ ನೀರು ನೀಡುವ ಉದ್ದೇಶದಿಂದ ಹಾಗೂ ಕುಡಿಯುವ ನೀರಿಗೆ ಅನುಕೂಲ ಒದಗಿಸಲು ನೀರು ಬಿಡಲು ನಿರ್ಧಾರ ತೆಗೆದುಕೊಳ್ಳಲಾಯಿತು. ನಾಳೆ ಅಂದರೆ ನು. 16 ರ ಮಧ್ಯರಾತ್ರಿಯಿಂದ ನಾಲೆಗಳ ಮೂಲಕ ನೀರು ಹರಿಸಲು ತೀರ್ಮಾನ ಮಾಡಿರುವುದನ್ನು ಸಚಿವ  ಸಿ. ಎಸ್ . ಪುಟ್ಟರಾಜು ತಿಳಿಸಿದರು. ಈ ಮೂಲಕ ನೀರು ಹರಿಸುವಂತೆ ನಿರಂತರವಾಗಿ ಪ್ರತಿಭಟನೆ ನಡೆಸಿದ್ದ ರೈತರಿಗೆ ಜಯಸಿಕ್ಕಿದೆ. ರೈತರು ಅಹೋರಾತ್ರಿ ಧರಣಿ ನಡೆಸಿ ನೀರು ಬಿಡಲು ಕೋರಿಕೊಂಡಿದ್ದರು.

Follow Us:
Download App:
  • android
  • ios