Asianet Suvarna News Asianet Suvarna News

ಮಂಡ್ಯ: 'ಕೆರೆ ನಾಪತ್ತೆಯಾಗಿದೆ, ಹುಡುಕಿ ಕೊಡಿ', ಎಸ್‌ಪಿಗೆ ದೂರು

ನಾಪತ್ತೆಯಾದ ವ್ಯಕ್ತಿಯನ್ನು ಹುಡುಕಿಕೊಡಿ ಎಂದು ಜನ ದೂರು ದಾಖಲಿಸುತ್ತಾರೆ. ಹಸು, ಕರು, ಚಿನ್ನ ಕಾಣೆಯಾದಗಲೂ ದೂರು ದಾಖಲಿಸುತ್ತಾರೆ. ಆದರೆ ಮಂಡ್ಯದಲ್ಲೊಬ್ಬರು ಕಾಣೆಯಾದ ಕೆರೆಗಳನ್ನು ಹುಡುಕಿಕೊಡಿ ಎಂದು ಎಸ್‌ಪಿಗೆ ದೂರು ದಾಖಲಿಸಿದ್ದಾರೆ.

man files a complaint against illegal lake acquisition
Author
Bangalore, First Published Nov 5, 2019, 2:32 PM IST

ಮಂಡ್ಯ(ನ.05): ನಾಪತ್ತೆಯಾದ ವ್ಯಕ್ತಿಯನ್ನು ಹುಡುಕಿಕೊಡಿ ಎಂದು ಜನ ದೂರು ದಾಖಲಿಸುತ್ತಾರೆ. ಹಸು, ಕರು, ಚಿನ್ನ ಕಾಣೆಯಾದಗಲೂ ದೂರು ದಾಖಲಿಸುತ್ತಾರೆ. ಆದರೆ ಮಂಡ್ಯದಲ್ಲೊಬ್ಬರು ಕಾಣೆಯಾದ ಕೆರೆಗಳನ್ನು ಹುಡುಕಿಕೊಡಿ ಎಂದು ಎಸ್‌ಪಿಗೆ ದೂರು ದಾಖಲಿಸಿದ್ದಾರೆ.

ನಾಪತ್ತೆಯಾದ ಕೆರೆಗಳನ್ನು ದಯವಿಟ್ಟು ಹುಡುಕಿಕೊಡಿ ಎಂದು ಮಂಡ್ಯ ಎಸ್ಪಿಗೆ RTI ಕಾರ್ಯಕರ್ತ ರವೀಂದ್ರ ದೂರು ನೀಡಿದ್ದಾರೆ. ಪ್ರಭಾವಿಗಳ ಕೈಚಳಕದಿಂದ ಊರಿನ 1240 ಎಕರೆ ಕೆರೆ ಜಾಗ ಕಾಣೆಯಾಗಿದೆ. ಆ ಜಾಗವನ್ನು ಹುಡುಕಿಕೊಡುವಂತೆ ಅವರು ದೂರಿನಲ್ಲಿ ತಿಳಿಸಿದ್ದಾರೆ.

‘ಡಿಕೆಶಿ ವಿರುದ್ಧ ಇಡಿಗೆ ಅರ್ಜಿ ಬರೆದಿದ್ದೆ ದೇವೇಗೌಡರು’

ಗುಳುಂಆಗಿರುವ 1,240 ಎಕರೆ ಕೆರೆ ಜಾಗ ಹುಡುಕಿಕೊಡುವಂತೆ ಮನವಿ ಮಾಡಿದ್ದು, ಮೈಸೂರು ಮಹಾರಾಜರ ಕಾಲದಲ್ಲಿ ಕಾಣೆಯಾಗಿರುವ ಕೆರೆಗಳು ನಿರ್ಮಿಸಲ್ಪಟ್ಟಿದ್ದವು. ಪಾಂಡವಪುರ ತಾಲೂಕು ವದೇಸಮುದ್ರದಲ್ಲಿ 1200 ಎಕರೆ ವೀಸ್ತೀರ್ಣದ ಕೆರೆ, ಶ್ರೀರಂಗಪಟ್ಟಣ ತಾಲೂಕಿನ ಗಣಂಗೂರು ಬಳಿ 40 ಎಕರೆ ಭೂಮಿಯಲ್ಲಿ ನಿರ್ಮಾಣವಾಗಿದ್ದ ಕೆರೆ, ಈ ಕೆರೆಗಳು ಇನ್ನೂ ಇವೆ ಎಂದು ನೀರಾವರಿ ಇಲಾಖೆಯ ಟ್ಯಾಂಕ್ ರಿಜಿಸ್ಟರ್ ನಲ್ಲಿ ದಾಖಲಿಸಲಾಗಿದೆ ಎಂದಿದ್ದಾರೆ.

ಸರ್ಕಾರಿ ದಾಖಲೆಗಳಲ್ಲಿರುವ ಕೆರೆಗಳು ಸ್ಥಳದಲ್ಲಿ ಮಾತ್ರ ನಾಪತ್ತೆಯಾಗಿವೆ. ಕೆರೆ ಇದ್ದ ಜಾಗ ಇದೀಗ ಕೃಷಿ ಜಮೀನಾಗಿ ಮಾರ್ಪಾಡು ಮಾಡಲಾಗಿದ್ದು, ಕೆಲವೆಡೆ ಕಟ್ಟಡಗಳು ತಲೆ ಎತ್ತಿವೆ. ಕೋಟ್ಯಾಂತರ ಮೌಲ್ಯದ ಕೆರೆ ಜಮೀನು ಗುಳುಂ ಮಾಡಲಾಗಿದೆ ಎಂದು RTI ಕಾರ್ಯಕರ್ತ ದಾಖಲೆ ಸಮೇತ ಎಸ್ಪಿ, ಡಿಸಿಗೆ ದೂರು ನೀಡಿದ್ದಾರೆ. ಕೆರೆ ಕಬಳಿಸಿರುವ ಭೂಗಳ್ಳರ ವಿರುದ್ದ ಕ್ರಮಕ್ಕೆ ಒತ್ತಾಯಸಿದ್ದಾರೆ.

JDSನಲ್ಲಿದ್ದ ಅನರ್ಹ ಶಾಸಕರ ಬೆಂಬಲಿಗ ಬಿಜೆಪಿಗೆ ಸೇರ್ಪಡೆ

Follow Us:
Download App:
  • android
  • ios