ಮಂಡ್ಯ(ಅ.23): ಶ್ರೀರಂಗಪಟ್ಟಣ ತಾಲೂಕಿನಾದ್ಯಂತ ಕಳೆದ ಸತತ ಮೂರು ದಿನಗಳಿಂದ ಧಾರಾಕಾರವಾಗಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಮನೆಗಳ ಗೋಡೆ ಕುಸಿದಿದೆ. ರೈತರು ಬೆಳೆದ ಬೆಳೆಗಳಿಗೆ ಹಾನಿಯಾಗಿರುವ ಘಟನೆ ಘಟನೆ ನಡೆದಿದೆ.

ತಾಲೂಕಿನ ಪಾಲಹಳ್ಳಿ ಗ್ರಾಮದ ಗಾಂಧಿ ನಗರ ಬಡಾವಣೆಯ ನಿವಾಸಿ ಆಹಮದ್‌ ಎಂಬುವರ ಮನೆ ಮನೆ ಗೋಡೆ ಕುಸಿದಿದೆ. ಸ್ಥಳಕ್ಕೆ ಗ್ರಾಪಂ ಅಧ್ಯಕ್ಷ ಸುನೀಲ್ ಭೇಟಿ ನೀಡಿ ಹಾನಿಗೊಳಗಾದ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.

ತಾಲೂಕಿನ ಅರಕೆರೆ ಪೊಲೀಸ್‌ ಠಾಣಾ ವ್ಯಾಪ್ತಿಯ ಚಿಕ್ಕಅಂಕನಹಳ್ಳಿ ಗ್ರಾಮದ ಸಿ.ಜೆ.ಅಣ್ಣೇಗೌಡರ ಮನೆ ಗೋಡೆ ಮಳೆಯಿಂದಾಗಿ ಕುಸಿದು ಬಿದ್ದಿದೆ. ಅದೃಷ್ಟವಶಾತ್‌ ಮನೆಯಲ್ಲಿ ವಾಸವಿದ್ದ ಯಾರಿಗೂ ಯಾವುದೇ ಪ್ರಾಣಾಪಾಯ ಸಂಭವಿಸಲ್ಲ. ಮನೆಯಲ್ಲಿನ ಪಾತ್ರೆ, ಬಟ್ಟೆಗಳು ಗೋಡೆ ಕುಸಿದು ಬಿದ್ದ ಪರಿಣಾಮ ಮಣ್ಣಿನಲ್ಲಿ ಸಿಕ್ಕಿಕೊಂಡಿದೆ. ಅರಕೆರೆ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

'ಜಾಕ್‌ವೆಲ್ ನನ್ನ ಸಮಾಧಿ ಮೇಲೆ ಅಳವಡಿಸಿ': ಕುಡಿಯುವ ನೀರಿನಲ್ಲೂ ಕೈ ಶಾಸಕನ ರಾಜಕೀಯ..!

ಬಾರಿ ಮಳೆಯಿಂದಾಗಿ ಜಮೀನುಗಳಿಗೆ ನೀರು ನುಗ್ಗಿದ ಪರಿಣಾಮ ಬೆಳೆಗಳು ಮಳೆ ನೀರಲ್ಲಿ ಮುಳುಗಿ ಸಂಪೂರ್ಣವಾಗಿ ಬೆಳೆ ನಷ್ಟವಾಗುತ್ತಿದೆ. ನದಿ ತೀರ ಪ್ರದೇಶದಲ್ಲಿರುವ ಕಟಾವು ಹಂತದಲ್ಲಿದ್ದ ಕಬ್ಬು, ಭತ್ತ ತೆಂಗು, ಬಾಳೆ, ಸೇರಿದಂತೆ ಹೂವಿನ ಗಿಡಗಳು ನೀರಲ್ಲಿ ಕೊಚ್ಚಿ ಹೋಗಿದೆ. ರೈತರು ಭಾರಿ ನಷ್ಟಅನುಭವಿಸಿದ್ದಾರೆ. ಪಟ್ಟಣ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಮಳೆ ಪ್ರಮಾಣ ಹೆಚ್ಚಾಗಿ ರಸ್ತೆಯಲ್ಲಿನ ಗುಂಡಿಗಳಲ್ಲಿ ನೀರು ನಿಂತು ರಸ್ತೆಯಲ್ಲಿ ವಾಹನಗಳನ್ನು ಚಲಾಯಿಸಲು ಸಾಧ್ಯವಾಗದೆ ಜನರ ಪರದಾಡಿದ ಪರಿಸ್ಥಿತಿ ನಿರ್ಮಾಣವಾಗಿದೆ.

ವರ್ಷಧಾರೆಗೆ ಪವಿತ್ರ ಲೋಕಪಾವನಿ ನದಿ ಉಕ್ಕಿ ಹರಿಯುತ್ತಿದ್ದು ನದಿ ತೀರದ ಜಮೀನುಗಳು ಜಲಾವೃತಗೊಂಡಿವೆ. ನಾಗಮಂಗಳ, ಪಾಂಡವಪುರ ಹಾಗೂ ಶ್ರೀರಂಗಟಪ್ಟಣ ತಾಲೂಕಿನ ರೈತರ ಜಮೀನುಗಳಿಗೆ ನೀರುಣಿಸುವ ಲೋಕಪಾವನಿ ನದಿಯಲ್ಲಿ ಹಲವು ದಿನಗಳಿಂದ ನೀರಿಲ್ಲದೆ ಒಣಗುತ್ತಿತ್ತು. ಈ ಬಾರಿ ಮಳೆಯ ಪ್ರಮಾಣ ಹೆಚ್ಚಾಗಿ ಕೋಡಿ ಹಳ್ಳಗಳು ನೀರು ತುಂಬಿ ಹರಿಯುತ್ತಿರುವುದರಿಂದ ಲೋಕಪಾವನಿ ನದಿಯಲ್ಲಿ ನೀರು ಹರಿದು ಬರುತ್ತಿದೆ. ನದಿ ತೀರದ ಅಕ್ಕ ಪಕ್ಕದ ಜಮೀನುಗಳು ನೀರಲ್ಲಿ ಮುಳುಗಡೆಗೊಳ್ಳುತ್ತಿವೆ.

20 ಅಡಿಗಳಷ್ಟು ಕುಸಿದ ಚಾಮುಂಡಿ ಬೆಟ್ಟ ರಸ್ತೆ: ಸಂಚಾರ ನಿರ್ಬಂಧ