20 ಅಡಿಗಳಷ್ಟು ಕುಸಿದ ಚಾಮುಂಡಿ ಬೆಟ್ಟ ರಸ್ತೆ: ಸಂಚಾರ ನಿರ್ಬಂಧ

ಮೈಸೂರಿನಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಚಾಮುಂಡಿ ಬೆಟ್ಟ ರಸ್ತೆಯಲ್ಲಿ ಕುಸಿತ ಉಂಟಾಗಿದೆ. ಇದರಿಂದಾಗಿ ರಸ್ತೆ ಸಂಚಾರ ಬ್ಲಾಕ್ ಮಾಡಿರುವ ಪೊಲೀಸ್ ಸಿಬ್ಬಂದಿ ಸಂಚಾರ ನಿರ್ಬಂಧ ಹೇರಿದ್ದಾರೆ. 20 ಅಡಿಗಳಷ್ಟು ಆಳಕ್ಕೆ ರಸ್ತೆಯ ಮಣ್ಣು ಬಿದ್ದಿದ್ದು, ರಸ್ತೆ ಮಗ್ಗುಲಿನ ತಡೆಗೋಡೆ ಸಂಪೂರ್ಣ ಹಾನಿಯಾಗಿದೆ.

Landslide in Chamundi hills road police block transportation

ಮೈಸೂರು(ಅ.23): ಮೈಸೂರಿನಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಚಾಮುಂಡಿ ಬೆಟ್ಟ ರಸ್ತೆಯಲ್ಲಿ ಕುಸಿತ ಉಂಟಾಗಿದೆ. ಇದರಿಂದಾಗಿ ರಸ್ತೆ ಸಂಚಾರ ಬ್ಲಾಕ್ ಮಾಡಿರುವ ಪೊಲೀಸ್ ಸಿಬ್ಬಂದಿ ಸಂಚಾರ ನಿರ್ಬಂಧ ಹೇರಿದ್ದಾರೆ.

ಮೈಸೂರಿನ ಚಾಮುಂಡಿ ಬೆಟ್ಟದ ರಸ್ತೆ ಕುಸಿತಕ್ಕೊಳಗಾಗಿದ್ದು, ಈ ರಸ್ತೆ ನಂದಿ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಾಗಿದೆ. ಹಾಗಾಗಿಯೇ ವಾಹನ ಸಂಚಾರವೂ ಅಧಿಕವಾಗಿರುವ ಈ ರಸ್ತೆಯಲ್ಲಿ ಸದ್ಯದ ಮಟ್ಟಿಗೆ ಸಂಪೂರ್ಣವಾಗಿ ರಸ್ತೆ ಬ್ಲಾಕ್ ಮಾಡಲಾಗಿದೆ.

ಮೈಸೂರು: ಅಕ್ರಮ ಪ್ಲಾಸ್ಟಿಕ್‌ ವಶ, 36 ಸಾವಿರ ರೂಪಾಯಿ ದಂಡ

ಮೂರು ದಿನಗಳಿಂದ ಸುರಿಯುತ್ತಿರುವ ಸತತ ಮಳೆಯ ಪರಿಣಾಮ ರಸ್ತೆ ಕುಸಿದಿದ್ದು, ದೊಡ್ಡ ನಂದಿ ರಸ್ತೆಯ ವ್ಯೂಪಾಯಿಂಟ್ ಬಳಿ ಕುಸಿತ ಉಂಟಾಗಿದೆ. 

ಮೈಸೂರು ನಗರ - ಚಾಮುಂಡೇಶ್ವರಿ ದೇವಸ್ಥಾನ - ನಂದಿದೇವಸ್ಥಾ - ಉತ್ತನಹಳ್ಳಿ ಗ್ರಾಮಗಳ ನಡುವೆ ಸಂಚರಿಸಬೇಕಾದರೆ ಈ ರಸ್ತೆಯಲ್ಲೇ ಓಡಾಡಬೇಕಾಗಿದ್ದು, ಸಂಚಾರ ನಿರ್ಬಂಧ ಹೇರಿರುವುದರಿಂದ ಪ್ರವಾಸಿಗರು ನಂದಿ ವೀಕ್ಷಣೆಗೆ ಬಂದಿಲ್ಲ. 20 ಅಡಿಗಳಷ್ಟು ಆಳಕ್ಕೆ ರಸ್ತೆಯ ಮಣ್ಣು ಬಿದ್ದಿದ್ದು, ರಸ್ತೆ ಮಗ್ಗುಲಿನ ತಡೆಗೋಡೆ ಸಂಪೂರ್ಣ ಹಾನಿಯಾಗಿದೆ.

ಏಕಾಏಕಿ ಸುರಿದ ಮಳೆಗೆ ಭತ್ತದ ಗದ್ದೆ ಸಂಪೂರ್ಣ ನಾಶ..!

Latest Videos
Follow Us:
Download App:
  • android
  • ios