ಮಂಡ್ಯ(ನ.06): ಕೆ. ಆರ್. ಪೇಟೆ ಬೈ ಎಲೆಕ್ಷನ್ ಅಖಾಡ ರಂಗೇರಿದೆ. ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ಉಪಚುನಾವಣೆಯಲ್ಲಿ ಗೆಲ್ಲಲು ದೊಡ್ಡಗೌಡ್ರು ದೊಡ್ಡ ರಣತಂತ್ರವನ್ನೇ ಹೆಣೆದಿದ್ದಾರೆ. ಬಿಜೆಪಿ, ಕಾಂಗ್ರೆಸ್‌ನ ಪ್ರಭಾವಿ ಮುಖಂಡರಿಗೆ ದಳಪತಿಗಳು ಗಾಳ ಹಾಕಿದ್ಧಾರೆ ಎಂಬ ಸುದ್ದಿಗಳು ಕೇಳಿ ಬರುತ್ತಿವೆ.

ಸಮರ್ಥ ಅಭ್ಯರ್ಥಿ ಇಲ್ಲದೇ ಕ್ಷೇತ್ರದಲ್ಲಿ ಗೆಲುವು ಸಾಧಿಸುವುದು ಅಸಾಧ್ಯವಾಗಿದ್ದು, ದಳಪತಿಗಳಿಂದ ಈ ಹೊಸ ತಂತ್ರಗಾರಿಕೆ ಶುರುವಾಗಿದೆ. ವಿಶೇಷವಾಗಿ ಒಕ್ಕಲಿಗೇತರ ಮತಗಳ ಮೇಲೆ ಕಣ್ಣಿಟ್ಟು ಜೆಡಿಎಸ್ ತಂತ್ರ ರೂಪಿಸುತ್ತಿದೆ.

ಪಕ್ಷದ ನಿರ್ಲಕ್ಷ್ಯ: ಕಾಂಗ್ರೆಸ್ ಮುಖಂಡ ರಾಜೀನಾಮೆ

ಅನ್ಯ ಪಕ್ಷಗಳ ಒಕ್ಕಲಿಗೇತರ ಪ್ರಭಾವಿ ಮುಖಂಡರನ್ನು ಪಕ್ಷಕ್ಕೆ ಕರೆತರಲು ಕೆ. ಆರ್. ಪೇಟೆಯಲ್ಲಿ ಪ್ರಯತ್ನ ನಡೆದಿದ್ದು, ಈ ಮೂಲಕ ಒಕ್ಕಲಿಗೇತರ ಮತಗಳನ್ನು ಪಡೆಯಲು ಸಂಚು ನಡೆದಿದೆ. 

ಬಿಜೆಪಿ ತಾಲೂಕು ಅಧ್ಯಕ್ಷ ಬೂಕಹಳ್ಳಿ ಮಂಜುಗೆ ಗಾಳ..?

ಬಿಜೆಪಿಯ ತಾಲೂಕು ಮುಖಂಡ ಬೂಕಹಳ್ಳಿ ಮಂಜು ಅವರು ಲಿಂಗಾಯತ ಮುಖಂಡರಾಗಿದ್ದು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಸೋತಿದ್ದರು. ಉಪ ಚುನಾವಣೆಯಲ್ಲೂ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಇದೀಗ ಕೆ. ಆರ್. ಪೇಟೆ ಉಪಚುನಾವಣೆ ಎದುರಿಸಲಿದ್ದು, ಜೆಡಿಎಸ್ ಮುಖಂಡರು ಮಂಜುಗೆ ಗಾಳ ಹಾಕಿದ್ದಾರೆ.

ತಂದೆ ಸಾವಿನ ಸುದ್ದಿ ಮುಚ್ಚಿಟ್ಟು ಮಗಳ ಮದುವೆ ಮಾಡಿದರು!.

ಬೂಕಹಳ್ಳಿ ಮಂಜು ಬಿಜೆಪಿಯ ಪ್ರಭಾವಿ ನಾಯಕನಾಗಿದ್ದು, ಪ್ರಮುಖವಾಗಿ ಲಿಂಗಾಯತ ಮುಖಂಡರಾಗಿದ್ದಾರೆ. ಒಕ್ಕಲಿಗೇತರ ಮತಗಳ ಮೇಲೆಯೇ ಕಣ್ಣಿಟ್ಟಿರುವ ಜೆಡಿಎಸ್ ವಿಶೇಷವಾಗಿ ಮಂಜುವನ್ನು ಸೆಳೆದುಕೊಳ್ಳಲು ಪ್ರಯತ್ನ ನಡೆಸಿದೆ. ಮಂಜುಗೆ ರಾಜಕೀಯ ಭವಿಷ್ಯ ಕಟ್ಟಿಕೊಡುವ ಭರವಸೆಯನ್ನು ನೀಡಿ, ಮಂಜು ಸೇರಿದಂತೆ ಕಾಂಗ್ರೆಸ್‌ನ ಹಲವು ಮುಖಂಡರನ್ನು ಪಕ್ಷಕ್ಕೆ ಕರೆತರಲು ಪ್ರಯತ್ನಗಳು ನಡೆಯುತ್ತಿದೆ.