'ಸಿಎಂಗೆ ಏನ್ ಕೇಳಿದ್ರೂ ನನ್ನಲ್ಲಿ ಹಣ ಇಲ್ಲಾ ಅಂತಾರೆ, ಇವ್ರಿಗೇನ್ ಹೇಳ್ಬೇಕು'..?
ಸಿಎಂಗೆ ಏನ್ ಕೇಳಿದ್ರೂ ನನ್ನತ್ರ ದುಡ್ಡಿಲ್ಲ ಅಂತಾರೆ, ಇವ್ರಿಗೇನು ಹೇಳ್ಬೇಕು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸಿಎಂ ಬಿ. ಎಸ್ ಯಡಿಯೂರಪ್ಪ ಅವರಿಗೆ ವ್ಯಂಗ್ಯ ಮಾಡಿದ್ದಾರೆ. ಅಧಿಕಾರ ನಡೆಸೋಕಾಗ್ತಿಲ್ಲ ಅಂತಿದ್ದಾರಲ್ಲ ಏನ್ ಹೇಳ್ಬೇಕು ಎಂದು ಪ್ರಶ್ನಿಸಿದ್ದಾರೆ.
ಮಂಡ್ಯ(ಅ.19): ಸಿಎಂಗೆ ಏನ್ ಕೇಳಿದ್ರೂ ನನ್ನತ್ರ ದುಡ್ಡಿಲ್ಲ ಅಂತಾರೆ, ಇವ್ರಿಗೇನು ಹೇಳ್ಬೇಕು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸಿಎಂ ಬಿ. ಎಸ್ ಯಡಿಯೂರಪ್ಪ ಅವರಿಗೆ ವ್ಯಂಗ್ಯ ಮಾಡಿದ್ದಾರೆ.
ಮಂಡ್ಯದಲ್ಲಿ ಮಾತನಾಡಿ, ಯಡಿಯೂರಪ್ಪ ಅವರು ಅಧಿಕಾರ ನಡೆಸೋಕಾಗ್ತಿಲ್ಲ ಅಂತಿದ್ದಾರಲ್ಲ ಏನ್ ಹೇಳ್ಬೇಕು ಎಂದು ಪ್ರಶ್ನಿಸಿದ್ದಾರೆ. ಉಪ ಚುನಾವಣೆಯಾಗಲಿ, ಸಾರ್ವತ್ರಿಕ ಚುನಾವಣೆ ಬರಲಿ ನಾವು ಚುನಾವಣೆ ಎದುರಿಸಲು ಸಿದ್ದರಿದ್ದೇವೆ. ಕಾಂಗ್ರೆಸ್ ಕಟ್ಟಲು ನಾವೆಲ್ಲಾ ಕೆಲಸ ಮಾಡ್ತಿದ್ದೀವಿ ಎಂದು ಹೇಳಿದ್ದಾರೆ.
ಬಿಜೆಪಿಯಿಂದ ಭ್ರಮನಿರಸನ:
ರಾಜ್ಯ ಬಿಜೆಪಿ ಸರ್ಕಾರದಿಂದ ಜನರಲ್ಲಿ ಭ್ರಮ ನಿರಸನ ಆಗಿದೆ. ರಾಜ್ಯದಲ್ಲಿ ಆಡಳಿತ ಸಂಪೂರ್ಣ ಕುಸಿದಿದೆ. ಚುನಾವಣೆ ಬಂದ್ರೆ ಎದುರಿಸ್ತೇವೆ, ಇಲ್ಲಾಂದ್ರೆ ಪಕ್ಷ ಕಟ್ಟಿ ಸಂಘಟನೆ ಮಾಡ್ತೀವಿ. ಇವತ್ತಿನ ಬೆಳವಣಿಗೆಗಳನ್ನ ನೋಡುದ್ರೆ ರಾಜ್ಯದಲ್ಲಿ ಏನು ಬೇಕಾದರೂ ಆಗಬಹುದು. ಉಪ ಚುನಾವಣೆ ಸಂಬಂಧ 22 ರಂದು ಏನಾಗುತ್ತೆ ನೋಡೋಣ ಎಂದಿದ್ದಾರೆ.
‘ಡಿಕೆಶಿ ಎಂತಹ ಸನ್ನಿವೇಶ, ಸವಾಲುಗಳನ್ನು ಎದುರಿಸಲೂ ಸದೃಢ’
ನಾವು ಫುಲ್ ತಯಾರಿದ್ದೇವೆ:
ನಾವು ಎಲ್ಲರೂ ತಯಾರಾಗಿದ್ದೇವೆ. ಯಾರನ್ನ ಅಭ್ಯರ್ಥಿ ಮಾಡ್ಬೇಕು ಅನ್ನೋನ್ನೂ ಡಿಸೈಡ್ ಮಾಡಿ ಆಗಿದೆ. ಕಾಂಗ್ರೆಸ್ ಕಾರ್ಯಕರ್ತರು ಸಪೋರ್ಟ್ ಮಾಡಿದ್ದಾರೆ, ಕಾಂಗ್ರೆಸ್ ಪಕ್ಷ ಸಪೋರ್ಟ್ ಮಾಡಿಲ್ಲ ಎಂಬ ಸುಮಲತಾ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ, ನಾನು ಸುಮಲತಾ ಬಗ್ಗೆ ಮಾತನಾಡಲ್ಲ. ಅವತ್ತಿನ ವಾತವರಣ ಹೇಗಿತ್ತು ಜನರಿಗೆ ತಿಳಿದಿದೆ. ಪ್ರತಿ ಕ್ಷೇತ್ರದಲ್ಲಿ ಯಾರು ಏನು ಮಾಡಿದ್ರು, ಏನಾಯ್ತು ಅಂತ ತಿಳಿದಿದೆ ಎಂದಿದ್ದಾರೆ.
ಯಾರ ಜೊತೆಗೂ ಹೊಂದಾಣಿಕೆ ಇಲ್ಲ:
ಕಾಂಗ್ರೆಸ್ ಇನ್ನು ಮುಂದೆ ಯಾರ ಜೊತೆ ಹೊಂದಾಣಿಕೆ ಮಾಡೋದಿಲ್ಲ. ನಗರಸಭೆ ಆಗಲಿ ಪಂಚಾಯ್ತಿ ಚುನಾವಣೆ ಆಗಲಿ ಸ್ವತಂತ್ರವಾಗಿ ಎದುರಿಸುತ್ತೇವೆ. ಕೇಂದ್ರ ಬಿಜೆಪಿ ನಾಯಕರ ವಿರುದ್ದ ಜೆಡಿಎಸ್ ಮೃಧು ಧೋರಣೆ ತೋರಿಸುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ಸಿದ್ಧಾಂತಗಳನ್ನ, ನಡವಳಿಕೆಗಳನ್ನ ನಾವು ಯಾವತ್ತೂ ವಿರೋಧಿಸುತ್ತಲೇ ಬಂದಿದ್ದೇವೆ. ಬಿಜೆಪಿ ಪಕ್ಷದ ಜೊತೆ ಹೊಂದಾಣಿಕೆ ಇಲ್ಲ, ಕಟುವಾಗಿ ವಿರೋಧಿ ಮಾಡ್ತೀವಿ ಎಂದಿದ್ದಾರೆ.
ನಮ್ಮ ಸಿದ್ಧಾಂತ ಮೇಲೆ ನಂಬಿಕೆ ಇದೆ:
ಜೆಡಿಎಸ್ ಬಿಜೆಪಿ ಜೊತೆ ಸಖ್ಯನೂ ಮಾಡಿದ್ದಾರೆ, ವಿರೋಧನೂ ಮಾಡಿದ್ದಾರೆ. ಅದು ಅವರಿಗೆ ಬಿಟ್ಟ ವಿಚಾರ. ನಮ್ಮ ಸಿದ್ದಾಂತದ ಮೇಲೆ ನಮಗೆ ನಂಬಿಕೆ ಇದೆ. ಹಿಂಸೆಯಿಂದ, ಭಯದಿಂದ ದೇಶ ಕಟ್ಟುವ ಕೆಲಸ ಬಿಜೆಪಿಯದ್ದು. ನಾವು ಅವರ ಜೊತೆ ಹೊಂದಾಣಿಕೆ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ. ವರಿಷ್ಠರು ಇದ್ದಾರಲ್ಲಾ ಅದು ಅವರಿಗೆ ಬಿಟ್ಟ ವಿಚಾರ. ಈಗ ನಾವು ಇದ್ದೀವಿ, ಒಕ್ಷ ಕಟ್ತೀವಿ, ಹೋರಾಟ ಮಾಡ್ತೀವಿ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಚುನಾವಣೆಗೆ ಅಗ್ರೆಸಿವ್ ಪ್ರಚಾರ ಮಾಡಿ ಎಂದ ಸಿದ್ದು...