Asianet Suvarna News Asianet Suvarna News

ಕೃಷಿವಲಯದಲ್ಲೂ ವೃತ್ತಿಪರರಾಗಬೇಕೆ?

ದೇಶದ ಜಿಡಿಪಿಯಲ್ಲಿ ಶೇ.18 ರಷ್ಟು ಕೊಡುಗೆ ನೀಡುವ ಕೃಷಿ ಕ್ಷೇತ್ರವು ಭಾರತೀಯ ಆರ್ಥಿಕತೆಯ ಪ್ರಮುಖ ಕ್ಷೇತ್ರ. ಇದು ಶೇ.58 ರಷ್ಟು ಮಂದಿಯ ಜೀವನೋಪಾಯದ ಮೂಲವಾಗಿದೆ. ದೇಶದ ಆಹಾರ ಮಾರುಕಟ್ಟೆಯಲ್ಲಿ ಶೇಕಡಾ 32 ರಷ್ಟು ಪಾಲನ್ನು ಹೊಂದಿರುವ ಭಾರತೀಯ ಆಹಾರ ಸಂಸ್ಕರಣಾ ಉದ್ಯಮವು ಉತ್ಪಾದನೆ, ಬಳಕೆ, ರಫ್ತು, ಬೆಳವಣಿಗೆಯಲ್ಲಿ ಐದನೇ ಸ್ಥಾನದಲ್ಲಿದೆ ಎಂದು ಇಂಡಿಯಾ ಬ್ರಾಂಡ್ ಇಕ್ವಿಟಿ ಫೌಂಡೇಶನ್ ವರದಿ ತಿಳಿಸಿದೆ. ಇಷ್ಟೆಲ್ಲಾ ಪ್ರಾಮುಖ್ಯತೆಯನ್ನು ಹೊಂದಿರುವ ಕೃಷಿ ಕ್ಷೇತ್ರದಿಂದ ಹಿಮ್ಮುಖಗೊಳ್ಳುತ್ತಿರುವ ಯುವಜನತೆಯನ್ನು ಮತ್ತೆ ಕೃಷಿಯತ್ತ ಕರೆದೊಯ್ಯಲು ಮುಂಬರುವ ದಿನಗಳಲ್ಲಿ ಕೃಷಿ ಸಂಬಂಧಿತ ಕೋರ್ಸ್‌ಗಳು, ಉದ್ಯೋಗಾವಕಾಶ ಕಲ್ಪಿಸಲು ಹಲವು ವಿಭಾಗಗಳನ್ನು ಸೃಷ್ಟಿಸಲಾಗುತ್ತಿದೆ. ಕೃಷಿ ಕ್ಷೇತ್ರದಿಂದ ವೃತ್ತಿಜೀವನ ಕಂಡುಕೊಳ್ಳುವವರಿಗಾಗಿ ಈ ಮಾಹಿತಿ.
 

Tips to be agriculturist by profession
Author
Bangalore, First Published Dec 25, 2019, 11:32 AM IST

1. ಕೃಷಿ-ವ್ಯವಹಾರ ನಿರ್ವಹಣೆ

ಈಕ್ಷೇತ್ರವು ಎಲ್ಲಾ ಕೃಷಿ ವ್ಯವಹಾರ ಅಂಶಗಳ ನಿರ್ವಹಣಾ ಅಧ್ಯಯನವನ್ನು ಒಳಗೊಂಡಿದೆ. ಇದು ಕೃಷಿ ಉಪಕರಣಗಳು ಮತ್ತುಸರಬರಾಜುಗಳ ಉತ್ಪಾದನೆ ಮತ್ತು ವಿತರಣೆ, ಕೃಷಿ ಉತ್ಪನ್ನಗಳಿಗೆ ಸಂಬಂಧಿಸಿದ ಆಹಾರ ಮತ್ತು ನಾರಿನ ಸಂಸ್ಕರಣೆ, ಸಂಗ್ರಹಣೆ ಮತ್ತು ಪ್ರಚಾರ ಇತ್ಯಾದಿಗಳನ್ನು ನಿರ್ವಹಿಸುವುದಾಗಿದೆ.

2. ಕೃಷಿ ಜೈವಿಕ ತಂತ್ರಜ್ಞಾನ

ಸಸ್ಯಗಳು, ಸೂಕ್ಷ್ಮ ಜೀವಿಗಳು ಮತ್ತು ಪ್ರಾಣಿಗಳನ್ನು ಮಾರ್ಪ ಡಿಸಲು ಅನುವಂಶಿಕ ಎಂಜಿನಿಯರಿಂಗ್, ಲಸಿಕೆಗಳು ಮತ್ತು ಅಂಗಾಂಶ ಸಂಸ್ಕೃತಿಯಂತಹ ವೈಜ್ಞಾನಿಕ ತಂತ್ರಗಳ ತಿಳಿವಳಿಕೆ ಮತ್ತು ಅನ್ವಯದ ಅಧ್ಯಯನವನ್ನು ಇದು ಒಳಗೊಂಡಿದೆ.

ಹೊರರಾಜ್ಯದ ಆಡು ಸಾಕಿದರೆ ಲಕ್ಷಾಂತರ ರು. ಆದಾಯ ಪಡೆಯಬಹುದು!

3. ಕೃಷಿ ಅರ್ಥಶಾಸ್ತ್ರ

ಅರ್ಥಶಾಸ್ತ್ರದ ತತ್ವಗಳನ್ನು ಅನ್ವಯಿಸಿಕೊಂಡು ಕೃಷಿಯಲ್ಲಿನ ಸಮಸ್ಯೆಗಳನ್ನು ಪರಿಹರಿಸುವ ವಿಧಾನಗಳನ್ನು ಇದರಿಂದ ತಿಳಿಯಬಹುದು. ವೃತ್ತಿಪರರು ವ್ಯಾಪಾರ (ಆಮದು ಮತ್ತು ರಫ್ತು) ಮಾದರಿಗಳನ್ನು ಮೇಲ್ವಿಚಾರಣೆ ಮಾಡಲು ಅನುವು ಮಾಡುತ್ತದೆ. ಮಾರುಕಟ್ಟೆ ಪ್ರವೃತ್ತಿಗಳು, ಗ್ರಾಹಕರ ಆದ್ಯತೆ ತಿಳಿಸುವುದು ಹಾಗೂ ಕೃಷಿ ಉತ್ಪನ್ನಗಳಿಗೆ ಉತ್ಪಾದನಾ ವಿಧಾನಗಳನ್ನು ವಿಶ್ಲೇಷಿಸುವುದು ಇದರ ಉದ್ದೇಶ.

4. ಕೃಷಿ ಎಂಜಿನಿಯರಿಂಗ್

ಕೃಷಿ ದಕ್ಷತೆಯನ್ನು ಹೆಚ್ಚಿ ಸಲು ಕೃಷಿ ಉಪಕರಣಗಳು, ಯಂತ್ರಗಳು ಮತ್ತು ಪ್ರಕ್ರಿಯೆಗಳ ವಿನ್ಯಾಸ, ಅಭಿವೃದ್ಧಿ ಮತ್ತು ಸುಧಾರಣೆಗಳ ಮೇಲೆ ಈ ಕ್ಷೇತ್ರ ಕೇಂದ್ರೀಕರಿಸುತ್ತದೆ. ಇದು ಕೃಷಿ ಉಪಕರಣಗಳು, ಮಣ್ಣಿನ ಸಂರಕ್ಷಣೆ, ಗ್ರಾಮೀಣ ರಚನೆಗಳು, ಗ್ರಾಮೀಣ ವಿದ್ಯುತ್ ಮತ್ತು ಒಳಚರಂಡಿ ಮತ್ತು ನೀರಾವರಿ ಬಗ್ಗೆಯೂ ಗಮನಹರಿಸುತ್ತದೆ.

5. ಕೃಷಿ ವಿಜ್ಞಾನ

ಇದು ಕೃಷಿ ವಿಜ್ಞಾನದ ಒಂದು ಶಾಖೆಯಾಗಿದ್ದು, ಅವು ಬೆಳೆಗಳು ಮತ್ತು ಮಣ್ಣಿನ ಅಧ್ಯಯನವನ್ನು ಮಾಡುವುದಾಗಿದೆ. ಕೃಷಿ ವಿಜ್ಞಾನಿಗಳು ವಿಧಾನಗಳನ್ನು ಅಭಿವೃದ್ಧಿಪಡಿಸಲು ಮತ್ತು ಮಣ್ಣಿನ ಬಳಕೆಯನ್ನು ಸುಧಾರಿ ಸಲು ಸಹಾಯ ಮಾಡುತ್ತಾರೆ. ಮಣ್ಣಿನ ಫಲವತ್ತತೆ ಮತ್ತು ಬಿತ್ತನೆ ಸಮಯ, ಸಂರಕ್ಷಣಾ ವಿಧಾನಗಳು ಮತ್ತು ಮಣ್ಣಿನ ತೇವಾಂಶದ ನಿರ್ವಹಣೆ ಮುಂತಾದ ಕ್ಷೇತ್ರದಲ್ಲಿ ಸಂಶೋಧನೆ ಮಾಡುವುದು ಈ ಕ್ಷೇತ್ರದ ಪ್ರಮುಖ ಕೆಲಸವಾಗಿದೆ.

ಪಂಚಗವ್ಯ: ಬೆಳೆಗಳಿಗೆ ಔಷಧಯುಕ್ತ ಆಹಾರ!

6. ತೋಟಗಾರಿಕೆ

ಇದು ತರಕಾರಿಗಳು, ಹಣ್ಣುಗಳು, ಗಿಡಮೂಲಿಕೆಗಳು, ಅಲಂಕಾರಿಕ ಹೂವುಗಳು ಮತ್ತು ಅಲಂಕಾರಿಕ ಮರಗಳನ್ನು ಬೆಳೆಸುವ ವಿಧಾನಗಳನ್ನೊಳಗೊಂಡಿದೆ. ಈ ವೃತ್ತಿಪರರು ಕೃಷಿ ಉತ್ಪನ್ನಗಳ ಗುಣಮಟ್ಟ, ಪೌಷ್ಠಿಕಾಂಶದ ಮೌಲ್ಯ, ಬೆಳವಣಿಗೆ ಮತ್ತು ಇಳುವರಿಯನ್ನು ಸುಧಾರಿಸುವಲ್ಲಿ ಕೆಲಸ ಮಾಡುತ್ತಾರೆ. ಅವರು ನರ್ಸರಿಗಳು, ತೋಟಗಳು, ಹಸಿರುಮನೆಗಳು, ತೋಟಗಳು ಇತ್ಯಾದಿಗಳನ್ನು ಸಹ ನಿರ್ವಹಿಸುತ್ತಾರೆ.

7. ಡೇರಿ ತಂತ್ರಜ್ಞಾನ

ಇದು ಮುಖ್ಯವಾಗಿ ಹಾಲಿನ ಉತ್ಪಾದನೆ ಮತ್ತು ಸಂಸ್ಕರಣೆಗೆ ಕೇಂದ್ರೀಕರಿಸುತ್ತದೆ. ಈ ತಜ್ಞರು ಹಾಲಿನ ಉತ್ಪಾದನೆಯ ಸಂಗ್ರಹಣೆ ಮತ್ತು ನಿರ್ವಹಣೆ ಮಾಡುವುದಾಗಿದೆ. ಹಾಲು ಬಳಕೆಗೆ ಸೂಕ್ತವೆಂದು ಖಚಿತಪಡಿಸಿಕೊಳ್ಳುವ ಪ್ರಕ್ರಿಯೆಯನ್ನು ಮೇಲ್ವಿಚಾರಣೆ ಮಾಡುತ್ತಾರೆ. ಹಾಲಿನ ಪ್ಯಾಕೇಜಿಂಗ್, ಸಂಗ್ರಹಣೆ ಮತ್ತು ವಿತರಣೆ ಈ ಕ್ಷೇತ್ರದ ವೃತ್ತಿಪರರ ಪ್ರಮುಖ ಕೆಲಸ.

8. ಕೋಳಿ ಸಾಕಾಣಿಕೆ

ಮಾಂಸ ಮತ್ತು ಮೊಟ್ಟೆಗಳನ್ನು ಸಂಗ್ರಹಿಸಲು ಬಾತುಕೋಳಿಗಳು ಮತ್ತು ಕೋಳಿಗಳಂತಹ ದೇಶೀಯ ಪಕ್ಷಿಗಳನ್ನು ಸಾಕುವುದು ಕೋಳಿ ಸಾಕಣೆ. ಈ ವಲಯದ ವೃತ್ತಿಪರರು ಫೀಡ್ ಪೂರೈಕೆ, ಶೆಡ್ ನಿರ್ವಹಣೆ, ಉತ್ಪಾದನೆಯ ಪೌಷ್ಠಿಕಾಂಶದ ಗುಣಮಟ್ಟ, ಸಾರಿಗೆ ಮುಂತಾದ ವೈವಿಧ್ಯಮಯ ಚಟುವಟಿಕೆಗಳನ್ನು ನಿರ್ವಹಿಸುತ್ತಾರೆ.

ಅತ್ಯಂತ ಕಡಿಮೆ ನೀರು ಬಳಸಿ ಬಂಪರ್ ಭತ್ತ ಪಡೆದ ಮೈಸೂರು ರೈತ!

9. ಮೀನುಗಾರಿಕೆ ವಿಜ್ಞಾನ

ಇದು ಕೃಷಿ ತತ್ವಗಳನ್ನು ಅರ್ಥಮಾಡಿಕೊಳ್ಳುವುದು ಮತ್ತು ಸಿಹಿನೀರು, ಉಪ್ಪುನೀರಿನಲ್ಲಿ ಅಥವಾ ಯಾವುದೇ ಸಮುದ್ರ ಪರಿಸರದಲ್ಲಿ ವಾಣಿಜ್ಯ ಆಧಾರದ ಮೇಲೆ ಮೀನುಗಳನ್ನು ಸಾಕುವುದು ಈ ಕ್ಷೇತ್ರದ ಪ್ರಮುಖ ಉದ್ದೇಶ. ಜೊತೆಗೆ ಹಲವಾರು ಮೀನು ಪ್ರಭೇದಗಳು ಮತ್ತು ಅಭ್ಯಾಸಗಳ ಅಧ್ಯಯನಕ್ಕೂ ಈ ಕ್ಷೇತ್ರ ಹೆಚ್ಚು ಒತ್ತು ನೀಡುತ್ತದೆ. 

Follow Us:
Download App:
  • android
  • ios