ಯೋಗದಲ್ಲಿ ಅಡಗಿದೆ ನಮ್ಮ ಆರೋಗ್ಯ

Yoga is good for health
Highlights

‘ಯೋಗಶ್ಚಿತ್ತವೃತ್ತಿನಿರೋಧಃ’ ಎಂದಿದ್ದಾರೆ. ಅಂದರೆ ಮನೋವ್ಯಾಪರಗಳನ್ನು ನಿಗ್ರಹಿಸುವುದು, ಮನಸ್ಸನ್ನು ಸಮಸ್ಥಿತಿಗೆ ತರುವುದು ಯೋಗ. ‘ತಾಂ ಯೋಗಮಿತಿ ಮನ್ಯಂತೇ ಸ್ಥಿರಾಮ್ ಇಂದ್ರಿಯ ಧಾರಣಾಮ್’ ಎಂದು  ವಿವರಿಸಿದ್ದಾರೆ. ಯಾವುದು ಇಂದ್ರಿಯಗಳನ್ನು ಸ್ಥಿರವಾಗಿರಿಸುವುದೋ ಅದು ಯೋಗ. ಯೋಗ ಎಂದಾಕ್ಷಣ -ಅದು ದೇಹದ ವ್ಯಾಯಾಮ. ಅದು ಉಸಿರಾಟದ ವ್ಯಾಯಾಮ. ಅದು ಧ್ಯಾನ. - ಹೀಗೆ ವಿವಿಧ ರೀತಿಯಲ್ಲಿ  ನಾವು ಅದನ್ನು ವಿವರಿಸುತ್ತೇವೆ. 

ಎಲ್ಲವೂ ಸರಿಯಿದೆಯೇ? ಸರಿಯಿದ್ದರೂ ಸರಿ ಇಲ್ಲ ಎನಿಸುವುದೇಕೆ? ಹಾಗಾದರೆ ಎಲ್ಲೋ ಏನೋ ಸರಿ ಇಲ್ಲದಾಗಿರಬೇಕು. ಓಡುತ್ತಲೋ, ನಡೆಯುತ್ತಲೋ, ಕುಂಟುತ್ತಲೋ ಸಾಗುತ್ತಿರುವ ನಮ್ಮ ಪಯಣದ ಎಡೆಯಲ್ಲೆಲ್ಲೋ ಎಡವಿದ್ದೇವೆಯೇ ನಾವು? ಬಿದ್ದಲ್ಲಿಂದ ಏಳಲಾರದೇ ಇದ್ದಲ್ಲೇ ಪರಿಭ್ರಮಿಸುತ್ತಾ ಬದುಕುತ್ತಿದ್ದೇವೆಯೇ? ಅಥವಾ ದಿಕ್ಕುಗಾಣದೇ ತಪ್ಪುಹಾದಿಯೊಂದನ್ನು ಹಿಡಿದಿದ್ದೇವೆಯೇ? ಹೀಗೆಲ್ಲ ಯೋಚಿಸುವಾಗ ಸರಿ ಇಲ್ಲವಾದದ್ದು ನಿಜ ಎನಿಸುತ್ತದೆ. ಆದರೆ ಆಗಿದ್ದೇನು? ನಾವು ಜಾಗತೀಕರಣಗೊಂಡಿದ್ದೇವೆ. ಅದು ಜಗತ್ತನ್ನು ಹತ್ತಿರ ತಂದಿದೆ. ಆದರೂ, ಜೀವ-ಜೀವಗಳನ್ನು ಬೆಸೆಯಲೇ ಇಲ್ಲ.

ನಾನು-ನೀನು ಎನ್ನುವುದಿನ್ನೂ ನಾವಾಗಲೇ ಇಲ್ಲ. ಹಿಂದೊಮ್ಮೆ  ಎಲ್ಲರೊಳಗೂ ಇದ್ದ ಸಮಾಧಾನ, ಸಾಮರಸ್ಯಗಳು ಇಂದು ಕಾಣಿಸುತ್ತಿಲ್ಲ. ಒಂದೊಮ್ಮೆ ಸಹಜವೆನಿಸಿದ್ದ ಶಾಂತಿ, ತೃಪ್ತಿ, ಪ್ರೀತಿಗಳಿಂದು ವಿಶೇಷ ಗುಣಗಳೆನಿಸಿವೆ. ಊರಾಚೆಗಿಡುತ್ತಿದ್ದ  ಅಸಂತುಷ್ಟಿ, ದ್ವೇಷ, ಅಸೂಯೆ, ಕ್ರೌರ್ಯಗಳನ್ನು ನಾವು ಮನೆ ಹಿತ್ತಿಲಲ್ಲಿ ಸಾಕಿ ಸಲಹುತ್ತಿದ್ದೇವೆ. ಪ್ರಕ್ಷುಬ್ಧ ಮನಸ್ಸನ್ನು ಶಾಂತಗೊಳಿಸುವ ಬದಲು ಅದನ್ನಿನ್ನೂ ಪ್ರಚೋದಿಸುತ್ತಿದ್ದೇವೆ, ಮನರಂಜನೆಯ ಹೆಸರಲ್ಲಿ. ಸಹಜವಾಗಿ ನಮ್ಮ ದೇಹಕ್ಕೆ ಬೇಕಾದ  ಅಗತ್ಯ ಆಹಾರಗಳನ್ನು ನಾವು ನೀಡದೇ ರಸಹೀನ ಕಸಗಳನ್ನು, ಅವುಗಳ ರುಚಿ-ಬಣ್ಣಗಳಿಗಾಗಿ ಸೇವಿಸುತ್ತಿದ್ದೇವೆ.

ಪ್ರಕೃತಿ ನಿಯಮಿಸಿದ ನಿಯಮಗಳನ್ನು ನಮ್ಮ ಧಾವಂತದ ಬದುಕಿಗೆ ಬಲಿಕೊಟ್ಟಿದ್ದೇವೆ. ಸರಳವಾಗಿ ಹೇಳಬೇಕೆಂದರೆ ಬೆಳೆಯನ್ನು ಕಡೆಗಣಿಸಿ, ಕಳೆಯನ್ನು ಪೋಷಿಸುತ್ತಿದ್ದೇವೆ ನಾವಿಂದು. ಇದೆಲ್ಲದರ ಪರಿಣಾಮ ನಮ್ಮ ಮನಸ್ಸಿನ ಮೇಲೆ, ನಮ್ಮ ದೇಹದ ಮೇಲೆ, ಪರಸ್ಪರರ ಬಾಂಧ್ಯವ್ಯದ ಮೇಲೆ, ಸಮಗ್ರ ಮಾನವಕುಲದ ಮೇಲೆ ಆಗಿರುವುದನ್ನು, ಆಗುತ್ತಿರುವುದನ್ನು ಕಂಡಿದ್ದೇವೆ. ಕಾಣುತ್ತಿದ್ದೇವೆ. ಇದಕ್ಕೊಂದು ಪರಿಹಾರಬೇಕಿದೆ. ಅದು ನಾನು-ನೀನು ಎನ್ನುವುದನ್ನು ನಾವಾಗಿಸಬೇಕು. ಕಳೆಗಳನ್ನು ಕಳೆದು ಬೆಳೆಗಳನ್ನು ಬೆಳೆಸಬೇಕು.

ಅದು ಮನುಷ್ಯನ ದೇಹದ, ಮನಸ್ಸಿನ, ಸಮಾಜದ ಸ್ವಾಸ್ಥ್ಯವನ್ನು ರಕ್ಷಿಸಿ ಪೋಷಿಸಬೇಕು. ಬದುಕಿಗೊಂದು ಅರ್ಥಕೊಡಬೇಕು. ನಡೆಯಲೊಂದು ಹಾದಿ ತೋರಬೇಕು. ಇಂದಿನ ನಮ್ಮ ನೂರಾರು ಸಮಸ್ಯೆಗಳಿಗೊಂದು ಸಮಗ್ರ ಮತ್ತು  ಸಮರ್ಥ ಉತ್ತರ ಬೇಕಿದೆ. ಆ ಉತ್ತರ ಕಾಲಾತೀತವಾದದ್ದಾಗಿರಬೇಕು. ಅದಕ್ಕೆ ದೇಶ-ಭಾಷೆಗಳ ಮಿತಿಯಿರಬಾರದು. ಅದು ಸರ್ವಮಾನ್ಯವೂ, ಸರ್ವಯೋಗ್ಯವೂ  ಆಗಿರಬೇಕು. ಇದೆಯೇ ಅಂತದ್ದೊಂದು? ಮಗು ಓಡುತ್ತದೆ, ಓಡಿ ಬೀಳುತ್ತದೆ ಎನ್ನುವುದು ಹಿರಿಯರಿಗೆ ತಿಳಿದಿರುತ್ತದೆ. 

ಅದಕ್ಕಾಗಿಯೇ ಅವರು ಅದಕ್ಕೆ ಪರಿಹಾರಗಳನ್ನೂ ಮೊದಲೇ ಸಿದ್ಧಪಡಿಸಿರುತ್ತಾರೆ! ಹಾಗೆಯೇ, ಇಂದಿನ ನಮ್ಮ ಸಮಸ್ಯೆಗೊಂದು ಉತ್ತರವನ್ನೂ ಹಿರಿಯರು ಕಂಡುಕೊಂಡಿದ್ದಾರೆ. ಅದೂ ಸಹಸ್ರಮಾನಗಳಿಗಿಂತಲೂ ಹಿಂದೆಯೇ. ಅದು ಯೋಗ! ಯೋಗ ಇಂದಿಗೂ ಪ್ರಸ್ತುತ. ಮುಂದಿಗೂ ಪ್ರಸ್ತುತ. ಹಾಗಾಗಿ ಅದು ಕಾಲಾತೀತ. ಅದಕ್ಕೆ ಭೇದವಿಲ್ಲ. ತನ್ನಡಿಯಲ್ಲಿ ವಿಶ್ರಮಿಸಿದವರಿಗೆಲ್ಲ ಮರ ಒಂದೇ ರೀತಿಯ ನೆರಳು-ಹಣ್ಣುಗಳನ್ನು ಕೊಟ್ಟಂತೆ.

ಏನದು ಯೋಗ?
ಯೋಗ. ಒಂದು ಪದ. ಅದೇ ವಾಕ್ಯವೂ. ಅದಕ್ಕಿದೆ ವಿಶಾಲ ಅರ್ಥ. ಅದೊಂದು ನಿಯಮ, ಅದೊಂದು ಬದುಕುವ ರೀತಿ. ಅದೊಂದು ಮಾರ್ಗ. ಅದೊಂದು ಪಯಣ. ‘ಯುಜ್ಯತೇ ಅನೇನ ಇತಿ ಯೋಗಃ’. ಸೇರಿಸುವುದು ಯೋಗ.

ಯಾವುದನ್ನು ಸೇರಿಸುವುದು? ಯಾವುದಕ್ಕೆ ಸೇರಿಸುವುದು? ನನ್ನನ್ನು ನಿನ್ನೊಂದಿಗೆ, ನಮ್ಮನ್ನು ನಿಮ್ಮೊಂದಿಗೆ, ನಮ್ಮೆಲ್ಲರನ್ನು ಉಳಿದೆಲ್ಲದರೊಂದಿಗೆ, ಹೀಗೆ ಸೃಷ್ಟಿಯ ಸಮಸ್ತವನ್ನೂ ಒಂದಕ್ಕೊಂದು ಬೆಸೆಯುವುದು ಯೋಗ. ‘ಯೋಗಶ್ಚಿತ್ತವೃತ್ತಿನಿರೋಧಃ’ ಎಂದಿದ್ದಾರೆ. ಅಂದರೆ ಮನೋವ್ಯಾಪರಗಳನ್ನು ನಿಗ್ರಹಿಸುವುದು, ಮನಸ್ಸನ್ನು ಸಮಸ್ಥಿತಿಗೆ ತರುವುದು ಯೋಗ.

‘ತಾಂ ಯೋಗಮಿತಿ ಮನ್ಯಂತೇ ಸ್ಥಿರಾಮ್ ಇಂದ್ರಿಯ ಧಾರಣಾಮ್’ ಎಂದು ವಿವರಿಸಿದ್ದಾರೆ. ಯಾವುದು ಇಂದ್ರಿಯಗಳನ್ನು ಸ್ಥಿರವಾಗಿರಿಸುವುದೋ ಅದು ಯೋಗ. ಯೋಗ ಎಂದಾಕ್ಷಣ -ಅದು ದೇಹದ ವ್ಯಾಯಾಮ. ಅದು ಉಸಿರಾಟದ ವ್ಯಾಯಾಮ. ಅದು ಧ್ಯಾನ. - ಹೀಗೆ ವಿವಿಧ ರೀತಿಯಲ್ಲಿ ನಾವು ಅದನ್ನು ವಿವರಿಸುತ್ತೇವೆ. ಯೋಗ ಇವೆಲ್ಲವನ್ನೂ ಒಳಗೊಂಡದ್ದು. ಯೋಗ ಎನ್ನುವುದು ವಿಸ್ತಾರವಾದದ್ದು. ಅದು ಆಳವಾದದ್ದು. ಅದೊಂದು ಕಲೆ. ಅದೊಂದು ಬದುಕಿಗೊಂದು ಅರ್ಥದ ವ್ಯಾಖ್ಯಾನ ಯೋಗ  ಪರಿಣಾಮವನ್ನು ಬೀರುತ್ತವೆ. ಬೊಜ್ಜು, ಸಂತಾನಹೀನತೆ, ಜೀರ್ಣಾಂಗದ ಸಮಸ್ಯೆ, ನರಗಳ ಸಮಸ್ಯೆ ಮುಂತಾದವು.

ಮಧುಮೇಹ, ಅಧಿಕರಕ್ತದೊತ್ತಡ, ಸಂವಾತ, ಮಾನಸಿಕ ಕಿರಿಕಿರಿ, ಇವುಗಳೆಲ್ಲವೂ ಅದರದ್ದೇ ಫಲ. ನಮ್ಮ ದೇಹಕ್ಕೆ, ನಾವಿರುವ ಪ್ರದೇಶಕ್ಕೆ, ನಾವಿರುವ ವಾತಾವರಣಕ್ಕೆ ಮತ್ತು ಋತುವಿಗೆ ಹೊಂದುವಂತಹ ಆಹಾರವನ್ನೇ ಸೇವಿಸಬೇಕು.ಆಹಾರದ ಸಮಯ ಮತ್ತು ಪ್ರಮಾಣವೂ ಕೂಡ ಅಷ್ಟೇ ಮುಖ್ಯ. ದೇಹಕ್ಕೆ ಅಗತ್ಯವಾದ ಪ್ರಮಾಣದಲ್ಲಿ, ಸಮತೋಲಿತ ಆಹಾರ ಸೇವಿಸಬೇಕು. ನಿಯಮಿತವಾದ ಸಮಯದಲ್ಲಿ, ಶುದ್ಧ ಪರಿಸರದಲ್ಲಿ, ಸಮಾಧಾನ ಚಿತ್ತದಿಂದ, ಅದೊಂದು ತಪಸ್ಸು ಎಂಬಂತೆ ಭಾವಿಸಿ ಆಹಾರ ಸೇವಿಸಬೇಕು. ನಮ್ಮ ಧಾವಂತದ ಬದುಕಿನಲ್ಲಿ ನಾವು ಮಾಡುವ ಮೊದಲ ತಪ್ಪೇ ಆಹಾರದ ಸಮಯ, ಪ್ರಮಾಣ ಮತ್ತು ಗುಣಮಟ್ಟವನ್ನು ಗಮನಿಸದಿರುವುದು. ಅದು ನಮ್ಮ ಅಜ್ಞಾನವೂ ಹೌದು, ನಿರ್ಲಕ್ಷ್ಯವೂ ಹೌದು.

ಯೋಗಾಸನ ಮತ್ತು ಪ್ರಾಣಾಯಾಮ
ಈಗ ನಾವು ಹೆಚ್ಚು ಅನುಸರಿಸುವ ಯೋಗದ ಅಂಗವಿದು. ಆಸನಗಳೆಂದರೆ ದೇಹದ ವಿವಿಧ ಭಂಗಿಗಳು. ಈ ಆಸನಗಳು ಪ್ರಕೃತಿಯಲ್ಲಿರುವ ಪ್ರಾಣಿ, ಪಕ್ಷಿ, ಕೀಟ ಅಥವಾ ಸೃಷ್ಟಿಯ ಯಾವುದೋ ಒಂದು ವಸ್ತುವನ್ನು ಹೋಲುತ್ತದೆ. ಉದಾಹರಣೆಗೆ ಗರುಡಾಸನ, ಎಂದರೆ ಗರುಡಪಕ್ಷಿಯಂತಹ ಭಂಗಿ, ಭುಜಂಗಾಸನ ಎಂದ ನಾಗರಹಾವಿನಂತಹ ಭಂಗಿ, ವೃಕ್ಷಾಸನ ಎಂದರೆ ಮರದಂತಹ ಭಂಗಿ. ಈ ರೀತಿಯ ವಿವಿಧ ಭಂಗಿಗಳಿವೆ. ಅವೆಲ್ಲಕ್ಕೂ ಬೇರೆ ಬೇರೆಯಾದ ಪ್ರಯೋಜನಗಳೂ ಇವೆ.

ಈ ಆಸನಗಳ ಅಭ್ಯಾಸ ದೇಹ ಮತ್ತು ಮನಸ್ಸಿನ ಮೇಲೆ ಪರಿಣಾಮವನ್ನು ಬೀರುತ್ತವೆ. ದೇಹದ ವಿವಿಧ ಅಂಗಗಳ ಕ್ರಿಯೆಗಳನ್ನು ಅವು ಪ್ರಚೋದಿಸುತ್ತವೆ ಮತ್ತು ಸಮರ್ಪಕವಾಗಿ ನಡೆಯುವಂತೆ ನೋಡಿಕೊಳ್ಳುತ್ತವೆ. ಆದ್ದರಿಂದಲೇ ಇವುಗಳನ್ನು ಚಿಕಿತ್ಸೆಯಲ್ಲಿಯೂ ಬಳಸಲಾಗುತ್ತದೆ. ಯೋಗಚಿಕಿತ್ಸೆಯು ಈ ವಿವಿಧ ಆಸನಗಳು ಯಾವ ಅಂಗವ್ಯೆಹದ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎನ್ನುವುದರ ಮೇಲೆ ಚಿಕಿತ್ಸೆಯನ್ನು ನೀಡಲಾಗುತ್ತದೆ. ಉದಾಹರಣೆಗೆ ಧನುರಾಸನ, ಭುಜಂಗಾಸನ, ಪದ್ಮಾಸನಗಳು ಗರ್ಭಕೋಶ ಮತ್ತು ಅಂಡಾಶಯಗಳ ಮೇಲೆ ಪ್ರಭಾವ ಬೀರುತ್ತವೆಯಾದ್ದರಿಂದ ಅದಕ್ಕೆ ಸಂಬಂಧಿಸಿದ ಸಮಸ್ಯೆಗಳಲ್ಲಿ ಈ ಆಸನಗಳ ಅಭ್ಯಾಸವನ್ನು ಹೇಳಲಾಗುತ್ತದೆ.

ಅದೇ ರೀತಿ ಪ್ರಾಣಾಯಾಮಗಳೂ ಕೂಡ. ಇವು  ಉಸಿರಿನ ನಿಯಮಗಳು. ಅದು ನಾಡಿಯನ್ನು, ತನ್ಮೂಲಕ ದೇಹವನ್ನು ಶುದ್ಧಿಗೊಳಿಸುತ್ತದೆ. ಅದಲ್ಲದೇ ಮನಸ್ಸಿನ ಮೇಲೆ ಹಿಡಿತ ಸಾಧಿಸಲು ಮೊದಲು ಉಸಿರಿನ ಮೇಲೆ ಹಿಡಿತ ಸಾಧಿಸಬೇಕು. ಅದನ್ನೇ ಹಠಯೋಗ ಪ್ರದೀಪಿಕೆಯಲ್ಲಿ ‘ಚಲೇ ವಾತೇ ಚಲಂ ಚಿತ್ತಂ ನಿಶ್ಚಲೇ ನಿಶ್ಚಲಂ ಭವೇತ್’ ಎಂದು ಹೇಳಲಾಗಿದೆ. ಉಸಿರು ಚಂಚಲವಾದಷ್ಟೂ ಮನಸ್ಸೂ ಚಂಚಲವಾಗುತ್ತದೆ. ಆದ್ದರಿಂದ ಮನಸ್ಸನ್ನು ಹಿಡಿತದಲ್ಲಿಡುವ ಉತ್ತಮ ಉಪಾಯ ಪ್ರಾಣಾಯಾಮ. ಅದರೊಂದಿಗೇ ಪ್ರಾಣಾಯಾಮವು ನಮ್ಮ ರಕ್ತಪರಿಚಲನೆ, ಹಾಗೂ ಮೆದುಳು ಮತ್ತು ನರಗಳ ಕ್ರಿಯೆಯ ಮೇಲೆ ಪ್ರಭಾವಬೀರುತ್ತವೆ. ಆ ಮೂಲಕವಾಗಿ ಅವು ಆರೋಗ್ಯವನ್ನು ಸಮಸ್ಥಿತಿಯಲ್ಲಿಡಲು ಸಹಕಾರಿಯಾಗಿವೆ.

ದೇಹದ ಬೊಜ್ಜನ್ನು ಕರಗಿಸಿ ಸರಿಯಾದ ಪ್ರಮಾಣಕ್ಕೆ ತಕ್ಕಂತೆ ಮಾಡುತ್ತದೆ. ಜಠರಾಗ್ನಿಯನ್ನು ಉದ್ದೀಪಿಸುತ್ತದೆ. ಮನಸ್ಸಿಗೆ ಆಹ್ಲಾದತೆಯನ್ನುಂಟುಮಾಡುತ್ತದೆ. ಸಮಾಧಾನವನ್ನು ಕೊಡುತ್ತದೆ. ದೇಹವನ್ನು ರೋಗಗಳಿಂದ ಮುಕ್ತಗೊಳಿಸುತ್ತದೆ. ಇಂದ್ರಿಯಗಳ ಮೇಲೆ ಹಿಡಿತವನ್ನು ಸಾಧಿಸುತ್ತದೆ. ನಾಡಿಗಳನ್ನು ಶುದ್ಧಗೊಳಿಸುತ್ತದೆ. ಯೋಗದ ಒಂದು ಶಾಖೆಯಾದ ಹಠಯೋಗದ ಅಭ್ಯಾಸದಿಂದಾಗುವ ಲಾಭಗಳಿವು ಎಂದು ಹೇಳಲಾಗಿದೆ. ಪ್ರಪಂಚ ಯೋಗದತ್ತ ನಡೆಯುತ್ತಿದೆ ಇಂದು. ಯೋಗದ ಪ್ರಯೋಜನಗಳು ನಮಗೆ ಅರಿವಾಗುತ್ತಿವೆ. ಅಮೆರಿಕಾದಲ್ಲಿ ನಡೆದ ಸಂಶೋಧನೆಯೊಂದರಲ್ಲಿ, ಹೆಚ್ಚು ಜನ ಯೋಗಭ್ಯಾಸ ಮಾಡಿದ ಪ್ರದೇಶದಲ್ಲಿ ಅಪರಾಧಗಳ ಪ್ರಮಾಣವೂ ಕಡಿಮೆಯಾಗಿರುವುದನ್ನು ದಾಖಲಿಸಿದ್ದಾರೆ.

ಯೋಗವನ್ನು ನಾವು ಅನುಸರಿಸುವುದಕ್ಕೆ ಅದೊಂದು ಪ್ರೇರಣೆಯಾಗಬೇಕಲ್ಲವೇ?ವ್ಯಕ್ತಿಯ ದೈಹಿಕ ಮಾನಸಿಕ ಆರೋಗ್ಯ ಉತ್ತಮವಾದೊಡನೆ ಸಾಮಾಜಿಕ ಸ್ವಾಸ್ಥ್ಯವೂ ತಾನಾಗಿಯೇ ಉತ್ತಮಗೊಳ್ಳುತ್ತದೆ. ಇಂದು ಜಗತ್ತಿಗೆ ಅಗತ್ಯವಾಗಿರುವುದೇ ಅದು. ದೈಹಿಕ ಮಾನಸಿಕ ಅನಾರೋಗ್ಯದೊಂದಿಗೆ ಸಮಾಜದ ಅನಾರೋಗ್ಯವನ್ನೂ ಗುಣಪಡಿಸುವ ಮತ್ತು ತನ್ಮೂಲಕ ಮನುಕುಲದ ಶ್ರೇಯಸ್ಸಿಗೆ ನೆರವಾಗುವ ಮಾರ್ಗ ಯೋಗ. ಆ ಮಾರ್ಗದಲ್ಲಿ ನಡೆಯುವ ಸಂಕಲ್ಪ  ನಮ್ಮದಾಗಲಿ.

ಹೇಗಿರಬೇಕು ಆಹಾರ?
ಆಹಾರದ ಬಗ್ಗೆ ಯೋಗ ಹೀಗೆ ಹೇಳುತ್ತದೆ. ನಮ್ಮ ಆಹಾರವು ಮಿತಾಹಾರವಾಗಿರಬೇಕು. ಅದು ಹಿತಾಹಾರವೂ ಆಗಿರಬೇಕು. ನಾವು ಏನನ್ನು, ಎಷ್ಟು ಪ್ರಮಾಣದಲ್ಲಿ, ಯಾವ ಸಮಯದಲ್ಲಿ ಸೇವಿಸುತ್ತೇವೆ ಎನ್ನುವುದೂ ಮುಖ್ಯ. ಅದಲ್ಲದಾಗ ನಮ್ಮ ದೇಹಕ್ಕೆ ಹಾಗೂ ಮನಸ್ಸಿನ ಮೇಲೆ ದುಷ್ಪರಿಣಾಮವಾಗುತ್ತದೆ. ನಾವು ಏನನ್ನು ಸೇವಿಸುತ್ತೇವೆಯೋ, ಅದೇ ನಾವಾಗುತ್ತೇವೆ. ಅಂದರೆ ನಮ್ಮ ಆಹಾರದ ಗುಣಾವಗುಣಗಳು ನಮ್ಮ ದೇಹವನ್ನು, ಆ ಮೂಲಕ ನಮ್ಮ ಮನಸ್ಸನ್ನು ಪ್ರವೇಶಿಸುತ್ತವೆ.

ದೈಹಿಕ ಮಾತು ಮಾನಸಿಕ ಸಮತೋಲನವನ್ನು ಅದು ಹಾಳುಮಾಡುತ್ತದೆ. ಈ ಅಸಮತೋಲನ ಎಲ್ಲ ಸಮಸ್ಯೆಗಳಿಗೂ ನಾಂದಿಹಾಡುತ್ತದೆ. ಈಗಿನ ಆಹಾರದಲ್ಲಿರುವ ಹಾನಿಕಾರಕ ರಾಸಾಯನಿಕಗಳ, ಕೃತಕ ಹಾರ್ಮೋನುಗಳು ದೇಹದ ಮೇಲೆ ಅತ್ಯಂತ ಕೆಟ್ಟ  ಪರಿಣಾಮ ಬೀರುತ್ತದೆ.  ಬೊಜ್ಜು, ಸಂತಾನಹೀನತೆ, ಜೀರ್ಣಾಂಗದ ಸಮಸ್ಯೆ, ನರಗಳ ಸಮಸ್ಯೆ ಮುಂತಾದವು. ಮಧುಮೇಹ, ಅಧಿಕರಕ್ತದೊತ್ತಡ, ಸಂವಾತ, ಮಾನಸಿಕ ಕಿರಿಕಿರಿ, ಇವುಗಳೆಲ್ಲವೂ ಅದರದ್ದೇ ಫಲ. ನಮ್ಮ ದೇಹಕ್ಕೆ, ನಾವಿರುವ ಪ್ರದೇಶಕ್ಕೆ, ನಾವಿರುವ ವಾತಾವರಣಕ್ಕೆ ಮತ್ತು ಋತುವಿಗೆ ಹೊಂದುವಂತಹ ಆಹಾರವನ್ನೇ ಸೇವಿಸಬೇಕು.

ಆಹಾರದ ಸಮಯ ಮತ್ತು ಪ್ರಮಾಣವೂ ಕೂಡ ಅಷ್ಟೇ ಮುಖ್ಯ. ದೇಹಕ್ಕೆ ಅಗತ್ಯವಾದ ಪ್ರಮಾಣದಲ್ಲಿ, ಸಮತೋಲಿತ ಆಹಾರ ಸೇವಿಸಬೇಕು. ನಿಯಮಿತವಾದ ಸಮಯದಲ್ಲಿ, ಶುದ್ಧ ಪರಿಸರದಲ್ಲಿ, ಸಮಾಧಾನ ಚಿತ್ತದಿಂದ, ಅದೊಂದು ತಪಸ್ಸು ಎಂಬಂತೆ ಭಾವಿಸಿ ಆಹಾರ ಸೇವಿಸಬೇಕು. ನಮ್ಮ ಧಾವಂತದ ಬದುಕಿನಲ್ಲಿ ನಾವು ಮಾಡುವ ಮೊದಲ ತಪ್ಪೇ ಆಹಾರದ ಸಮಯ, ಪ್ರಮಾಣ ಮತ್ತು ಗುಣಮಟ್ಟವನ್ನು ಗಮನಿಸದಿರುವುದು. ಅದು ನಮ್ಮ ಅಜ್ಞಾನವೂ ಹೌದು, ನಿರ್ಲಕ್ಷ್ಯವೂ ಹೌದು. 

 

ಲೇಖಕಿ: -ಡಾ. ಸುವರ್ಣಿನಿ ಕೊಣಲೆ 

loader