ವಿಶ್ವ ಸೆಲ್ಫಿ ದಿನ..ಒಂದಿಷ್ಟು ಫೋಟೋ..ಒಂಚೂರು ತಲೆಹರಟೆ..

First Published 21, Jun 2018, 4:29 PM IST
World Selfie Day, Brief History and let's see some of the selfies
Highlights

ಈ ಮೊಬೈಲ್ ಎಂಬ ಮಾಯಾ ಪೆಟ್ಟಿಗೆ ಅದು ಯಾವಾಗ ಮಾನವನ ಕೈ ಸೇರಿತೋ ಅಂದಿಗೆ ಅರ್ಧ ಸಮಯ ವ್ಯರ್ಥವಾಗುವ ಪರಿಪಾಠವೂ ಶುರುವಾಯಿತು. ಮೊದಲೆಲ್ಲ ಒಂದು ಫೋಟೋ ತೆಗೆಯಬೇಕು ಎಂದಾದರೆ ಸ್ಟುಡಿಯೋವನ್ನೋ ಅಥವಾ ಫೋಟೋ ಗ್ರಾಫರ್ ನನ್ನೋ ಹುಡುಕಿಕೊಂಡು ಅಲೆದಾಡಬೇಕಾಗಿತ್ತು.

ಬೆಂಗಳೂರು(ಜೂ 21) ಈ ಮೊಬೈಲ್ ಎಂಬ ಮಾಯಾ ಪೆಟ್ಟಿಗೆ ಅದು ಯಾವಾಗ ಮಾನವನ ಕೈ ಸೇರಿತೋ ಅಂದಿಗೆ ಅರ್ಧ ಸಮಯ ವ್ಯರ್ಥವಾಗುವ ಪರಿಪಾಠವೂ ಶುರುವಾಯಿತು. ಮೊದಲೆಲ್ಲ ಒಂದು ಫೋಟೋ ತೆಗೆಯಬೇಕು ಎಂದಾದರೆ ಸ್ಟುಡಿಯೋವನ್ನೋ ಅಥವಾ ಫೋಟೋ ಗ್ರಾಫರ್ ನನ್ನೋ ಹುಡುಕಿಕೊಂಡು ಅಲೆದಾಡಬೇಕಾಗಿತ್ತು.

ಆದರೆ ಬದಲಾದ ಕಾಲ, ಬದಲಾದ ಸಂಶೋಧನೆ, ಬದಲಾದ ವಾತಾವರಣ ಅಂಗೈ ಅಗಲದ ಮೊಬೈಲ್ ನಲ್ಲಿ ಪ್ರಪಂಚವನ್ನೇ ತಂದು ಕೂರಿಸಿತು. ಇದು ಇತಿಹಾಸ ಅಂದುಕೊಳ್ಳಿ ನನ್ನದೇನೂ ಅಭ್ಯಂತರ ಇಲ್ಲ. ಆದರೆ ಮೊಬೈಲ್ ಜತೆಗೆ ಫ್ರೀಯಾಗಿ ಬಂದ ಕ್ಯಾಮರಾ ಸೆಲ್ಫಿ ಎಂಬ ಹುಚ್ಚು ಮಾಯೆಯನ್ನು ಗೊತ್ತಿಲ್ಲದೆ ನಮ್ಮೊಳಗೆ ಕೂರಿಸಿಬಿಟ್ಟಿತು.

ಇದೀಗ ಸೆಲ್ಫಿಗೆ ಒಂದು ದಿನವನ್ನು ನಿಗದಿ ಮಾಡಲಾಗಿದೆ. ಇಂದು ಅಂದರೆ ಜೂನ್ ೨೧ ನ್ನು ವಿಶ್ವ ಸೆಲ್ಫಿ ದಿನ ಎಂದು ಆಚರಣೆ ಮಾಡಲಾಗುತ್ತಿದೆ. ಆಚರಣೆ ಬೇಕೋ? ಬೇಡವೋ? ನನಗೆ ಗೊತ್ತಿಲ್ಲ. ಆದರೆ ಜನರಲ್ಲಿ ಅದರಲ್ಲೂ ಯುವ ಜನತೆಯಲ್ಲಿ ಸೆಲ್ಫಿ ಎಂಬುದು ಒಂದು ಕ್ರೇಜಾಗಿ ಒಂದು ಹುಚ್ಚಾಗಿ ನೆಲೆಸಿಕೊಂಡು ಬಲಿಟ್ಟಿದೆ. ಎಲ್ಲಿಗೆ ಬಂದಿದೆ ಎಂದರೆ ಶವಯಾತ್ರೆ ಸಮಯದಲ್ಲೂ ಸೆಲ್ಫಿ ತೆಗೆದುಕೊಂಡಿದ್ದು ಸಾಮಾಜಿಕ ತಾಣಕ್ಕೆ ಬರುವಂತಾಗಿದೆ.

ಇನ್ನೊಂದಿಷ್ಟು ಮೊಬೈಲ್ ಕಂಪನಿಗಳು ಸೆಲ್ಫಿ ಸ್ಪೆಶಲಿಸ್ಟ್ ಎಂಬ ಹೆಸರಿನಲ್ಲೇ ಸ್ಮಾರ್ಟ್ ಫೋನ್ ಗಳನ್ನು ಮಾರುಕಟ್ಟೆಗೆ ಬಿಟ್ಟಿವೆ. ಅಂತರ್ಜಾಲ ತಾಣಕ್ಕೆ ಹೋಗಿ ಹೊಸ ಮೊಬೈಲ್ ಖರೀದಿಗೆ ಮುಂದಾದರೆ ಸೆಲ್ಫಿ ಸ್ಪೆಷಲಿಸ್ಟ್ ಎಂಬ ಪೀಚರ್ ಕಾಣಿಸಿಕೊಳ್ಳುತ್ತದೆ ಎಂದರೆ ಸೆಲ್ಫಿ ಕ್ರೇಜ್ ಯಾವ ಪರಿ ಹುಚ್ಚೆದ್ದು ಹೆಚ್ಚಿದೆ ನೀವೆ ಲೆಕ್ಕ ಹಾಕಿಕೊಳ್ಳಿ

ಊಟ ಮಾಡುವುದಿರಲಿ, ಮದುವೆ ಸಮಾರಂಭವಿರಲಿ, ನಾಮಕರಣವಿರಲಿ, ಪಾರ್ಟಿ ಇರಲಿ, ಜನ್ಮದಿನ ಆಚರಣೆ ಇರಲಿ ಅಲ್ಲೊಂದು ಸೆಲ್ಫಿ ಇರಲೇಬೇಕು. ಪ್ರವಾಸಿ ತಾಣಕ್ಕೆ ಭೇಟಿ ನೀಡಿದಾಗ ಸೌಂದರ್ಯ ಆಸ್ವಾದಿಸುವುದು ಬಿಟ್ಟು ಸೆಲ್ಫಿಗಾಗಿ ಸಮಯ ವ್ಯರ್ಥ ಮಾಡಿಕೊಳ್ಳುವುದನ್ನು ನಾವು ರೂಢಿಸಿಕೊಂಡಿದ್ದೇವೆ. ಅದೆನೇ ಇರಲಿ ಇಂದು ವಿಶ್ವ ಸೆಲ್ಫಿ ದಿನವಂತೆ.. ಒಂದಷ್ಟು ಫೋಟೋ ನೋಡಿ.. ಸಮಯ ವ್ಯರ್ಥ ಮಾಡಿಕೊಂಡು ನಿಮ್ಮದು ಒಂದು ಸೆಲ್ಫಿಗೆ ಪೋಸ್ ಕೊಡಲು ಮರೆಯಬೇಡಿ.

 

loader