Asianet Suvarna News Asianet Suvarna News

ಕೂತಲ್ಲೇ ಕೆಲ್ಸ ಮಾಡ್ತೀರಾ? ಹಾಗಾದ್ರೆ ಡಯಟ್ ಹೀಗಿರಲಿ

ಎಲ್ಲರೂ ಹೆಚ್ಟು ಕೂತ್ಕೊಂಡೇ ಕೆಲಸ ಮಾಡೋದು ಈಗೀಗ. ಅದಕ್ಕೆ ಬೊಜ್ಜು ಸೇರಿ ಅನೇಕ ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳು ಕಾಣಿಸಿಕೊಳ್ಳುವುದು. ಇದನ್ನು ಕಡಿಮೆ ಮಾಡಲು ಹೀಗೆ ಡಯಟ್ ಮಾಡಿ...

work pressure leads to more consume of food
Author
Bengaluru, First Published Oct 4, 2018, 5:03 PM IST

ಕೆಲಸ-ಕೆಲಸ ಎಂದು ಮುಳುಗುವ ಮಂದಿ ತಿನ್ನೋದ್ರ ಕಡೆ ಗಮನ ಕೊಡೋದು ಕಡಿಮೆ. ಏನು ಸಿಗುತ್ತೋ, ಅದರಲ್ಲಿಯೂ ಜಂಕ್ ಫುಡ್‌ ಅನ್ನೇ ತಿನ್ನೋದು ಹೆಚ್ಚು. ಅದೂ ಹೊತ್ತಲ್ಲದ ಹೊತ್ತಲ್ಲಿ, ಕ್ವಾಂಟಿಟಿ ಕಡೆಗೂ ಗಮನಿಸದೇ ತಿನ್ನುತ್ತಾರೆ. ಅದಕ್ಕೆ ಗಾಳಿ ತುಂಬಿದ ಬಲೂನಿನಂತೆ ಊದಿ ಕೊಳ್ಳುತ್ತಾರೆ ಮಂದಿ. 

ಒತ್ತಡ ಹೆಚ್ಚಾದಷ್ಟೂ ತಿನ್ನುವುದೂ ಹೆಚ್ಚಾಗುತ್ತದೆ. ಇತಿ ಮಿತಿ ಇಲ್ಲದೇ ತಿನ್ನುವುದು ಒಂದು ಮಾನಸಿಕ ಕಾಯಿಲೆ. ಮನಸಿನ ಕಾಯಿಲೆ, ದೇಹದ ಮೇಲೂ ದುಷ್ಪರಿಣಾಮ ಬೀರುತ್ತದೆ. ಆರೋಗ್ಯ ಕಾಪಾಡಿಕೊಳ್ಳುವುದಾದರೆ 'ರಾಜನಂತೆ ತಿಂಡಿ, ರಾಣಿಯಂತೆ ಮಧ್ಯಾಹ್ನದ ಊಟ, ಭಿಕ್ಷುಕನಂತೆ ರಾತ್ರಿಯೂಟ ಮಾಡಬೇಕು'. ಅದೂ ಸಾತ್ವಿಕ ಆಹಾರವಾಗಿದ್ದರೆ ಒಳ್ಳೆಯದು. ಅಪರೂಪಕ್ಕೊಮ್ಮೆ ಕರಿದ, ಕುರುಕಲು ತಿಂದರೂ ಓಕೆ. ಅದೂ ಬಿಟ್ಟು ಮೂರು ಹೊತ್ತು, ಇಲ್ಲವಾದರೆ ನಾಲ್ಕು ಹೊತ್ತು ಬೇಡದ್ದನ್ನೇ ತಿಂದು ಬದುಕುತ್ತೀರೆಂದರೆ ಅನಾರೋಗ್ಯ ಕಟ್ಟಿಟ್ಟ ಬುತ್ತಿ. 

ಒತ್ತಡ ಮತ್ತು ಆತಂಕವೇ ಹೆಚ್ಚೆಚ್ಚು ಆಹಾರ ಸೇವಿಸಲು ಕಾರಣ. ತಿನ್ನುವಾಗ ಎಷ್ಟು, ಹೇಗೆ ತಿನ್ನುತ್ತಿದ್ದೇವೆ ಎಂಬುವುದು ಗಮನಕ್ಕೆ ಬಾರದಿದ್ದರೂ ದೀರ್ಘ ಕಾಲದ ನಂತರ ಅನಾರೋಗ್ಯ ಕಾಡುವುದು ತಪ್ಪೋಲ್ಲ. ಅದಕ್ಕೆ ಒಂದೇ ಸಮ ತಿನ್ನೋದನ್ನು ಕಡಿಮೆ ಮಾಡಲಾಗದಿದ್ದರೂ, ತಿನ್ನೋದರ ಮೇಲೆ ಹಿಡಿತ ಸಾಧಿಸಬೇಕು. ಅದನ್ನು ನಿಧಾನವಾಗಿ ಕಡಿಮೆ ಮಾಡ ಬೇಕು. ತಕ್ಷಣವೇ ತಿನ್ನೋದ ನಿಲ್ಲಿಸಿದರೆ ತಲೆ ಸುತ್ತು ಬಂದಂತೆ ಅಥವಾ ಒತ್ತಡ ಹೆಚ್ಚಿದಂತಾಗುತ್ತದೆ. 

ಹಾಗಾದರೆ ಕೆಲಸದ ಸಮಯದಲ್ಲಿ ಹೇಗೆ ತಿನ್ನಬೇಕು?

  • ಬೆಳಗಿನ ತಿಂಡಿಯನ್ನು ಮಿಸ್ ಮಾಡಬೇಡಿ.
  • ಸಕ್ಕರೆ ಪದಾರ್ಥ ಸಂಪೂರ್ಣವಾಗಿ ತ್ಯಜಿಸಿ. 
  • ಕಾಫಿಯನ್ನು ಆದಷ್ಟು ಕಂಟ್ರೋಲ್ ಮಾಡಿ.
  • ಆದಷ್ಟು ಮನೆ ಊಟವನ್ನೇ ತಿನ್ನಿ. 
  • ಸ್ನೇಹಿತರೊಂದಿಗೆ ಕೂತು, ಖುಷಿ ಖುಷಿಯಾಗಿ ಊಟ ಮಾಡಿ.
  • ತರಕಾರಿ ಹಾಗೂ ಹಣ್ಣಿನಿಂದ ಸಾಧ್ಯವಾದಷ್ಟು ಹೊಟ್ಟೆ ತುಂಬಿಸಿಕೊಳ್ಳಿ.
  • ಮೊಳಕೆ ಬರಿಸಿದ ಕಾಳು, ಫ್ರೂಟ್ಸ್ ಸಂಜೆ ಸ್ನ್ಯಾಕ್ಸ್ ಆದರೊಳಿತು.
Follow Us:
Download App:
  • android
  • ios