ಸೆಕ್ಸ್ ಬಗ್ಗೆ ತಮ್ಮ ಪತಿಯಂದಿರ ಸಿಕ್ರೇಟ್ ಬಿಚ್ಚಿಟ್ಟ ಮಹಿಳೆಯರು

life | Sunday, May 27th, 2018
Suvarna Web Desk
Highlights

ಇತ್ತೀಚಿಗೆ ಸ್ವಯಂಸೇವಾ ಸಂಸ್ಥೆಯೊಂದು ಮಹಿಳೆಯರ ಸೆಕ್ಸ್  ಜೀವನದ ಬಗ್ಗೆ ಸಮೀಕ್ಷೆ ಹಮ್ಮಿಕೊಂಡಿತ್ತು. ಇದರಲ್ಲಿ ವಿವಿಧಸ್ತರದ ಮಹಿಳೆಯರು ತಮ್ಮ ಪತಿ ಲೈಂಗಿಕ ಕ್ರಿಯೆ ನಡೆಸುವ ಸಂದರ್ಭದಲ್ಲಿ ಯಾವ ರೀತಿ ನಡೆದುಕೊಳ್ಳುತ್ತಾರೆ ಎಂಬುದನ್ನು ಮುಲಾಜಿಲ್ಲದೆ ಬಿಚ್ಚಿಟ್ಟರು. ಅಂತಹ ಮಹಿಳೆಯರ ಕೆಲವು ಅನುಭವಗಳು ಈ ರೀತಿಯಿವೆ.

ಇತ್ತೀಚಿಗೆ ಸ್ವಯಂಸೇವಾ ಸಂಸ್ಥೆಯೊಂದು ಮಹಿಳೆಯರ ಸೆಕ್ಸ್  ಜೀವನದ ಬಗ್ಗೆ ಸಮೀಕ್ಷೆ ಹಮ್ಮಿಕೊಂಡಿತ್ತು. ಇದರಲ್ಲಿ ವಿವಿಧಸ್ತರದ ಮಹಿಳೆಯರು ತಮ್ಮ ಪತಿ ಲೈಂಗಿಕ ಕ್ರಿಯೆ ನಡೆಸುವ ಸಂದರ್ಭದಲ್ಲಿ ಯಾವ ರೀತಿ ನಡೆದುಕೊಳ್ಳುತ್ತಾರೆ ಎಂಬುದನ್ನು ಮುಲಾಜಿಲ್ಲದೆ ಬಿಚ್ಚಿಟ್ಟರು. ಅಂತಹ ಮಹಿಳೆಯರ ಕೆಲವು ಅನುಭವಗಳು ಈ ರೀತಿಯಿವೆ.

1] ನಾವಿಬ್ಬರು ಮದುವೆಯಾಗಿ ಒಂದು ವರ್ಷದ ಮೇಲಾಯಿತು. ನನ್ನ ಪತಿಗೆ ಸೆಕ್ಸ್ ಹಾಗೂ ನನ್ನ ಬಗ್ಗೆ ಒಂದಿಷ್ಟು ತಾಳ್ಮೆಯೇ ಇಲ್ಲ. ಸಂಪೂರ್ಣ ತೃಪ್ತಿಗೊಳಿಸುವ ವ್ಯವಧಾನವು ಆತನಿಗಿಲ್ಲ. ಮೈಮೇಲೆ ಕ್ರೂರವಾಗಿ ಬೀಳುತ್ತಾನೆ. ಕಾಮಕ್ರೀಡೆಯ ಅಂತರಂಗದ ಭಾವನೆಗಳು ಆತನಿಗೆ ಒಂದಿಷ್ಟು ಗೊತ್ತಿಲ್ಲ. ಆತ ಸಂಪೂರ್ಣ ಸುಖಿಸಿದಾಗ ನನಗೆ ಮಾತ್ರವಲ್ಲ ಆತನು ಕೂಡ ಪೂರ್ಣ ತೃಪ್ತಿ ಹೊಂದುವುದಿಲ್ಲ. ನನ್ನ ಪತಿಯ ನಡವಳಿಕೆಯಿಂದ ನಾನು ಸೆಕ್ಸ್ ಸುಖ ಪಡೆಯಲಾಗುತ್ತಿಲ್ಲ.

2)ನಾವಿಬ್ಬರು ಕೆಲದಿನಗಳ ಹಿಂದಷ್ಟೆ ಹೊಸದಾಗಿ ಮದುವೆಯಾದವರು. ನನ್ನ ಪತಿಗಂತು ಸೆಕ್ಸ್'ನ ಪರಿಜ್ಞಾನವೇ ಇಲ್ಲ. ಒರಟಾಗಿ ಕಾಮಿಸುತ್ತಾನೆ. ಅದರಲ್ಲೇ ಸುಖಪಡುತ್ತಾನೆ. ಮುಂಜಾಗ್ರತ ಕ್ರಮಗಳನ್ನು ಅನುಸರಿಸುವುದಿಲ್ಲ. ಈ ಬಗ್ಗೆ ಹೇಳಿದರೂ ಅವರು ತಮ್ಮ ನಿಲುವನ್ನು ಸರಿಪಡಿಸಿಕೊಳ್ಳುತ್ತಿಲ್ಲ. ಈತನ ವರ್ತನೆಯಿಂದ ನಾನು ಹೆಚ್ಚು ದಿನ ಸುಖಿಯಾಗಿರುತ್ತೇನೆ ಎಂಬ ಭಾವನೆ ದಿನೇದಿನೆ ಕಡಿಮೆಯಾಗುತ್ತಿದೆ.    

3] ನನಗೆ ಮೂಡಿಲ್ಲದಿರುವ ಸಂದರ್ಭದಲ್ಲೂ ಅವರು ನನನ್ನು ಕಾಡುತ್ತಾರೆ. ನನ್ನ ಮನಸ್ಸು ಸರಿಯಿಲ್ಲದ ಸಮಯದಲ್ಲಿ ರತಿಕ್ರೀಡೆಯನ್ನು ನಯವಾಗಿ ನಿರಾಕರಿಸುತ್ತೇನೆ. ಹಾಸಿಗೆಯಲ್ಲಿರುವಾಗ ಕೆಲವು ಸಂದರ್ಭದಲ್ಲಿ ಮುರ್ಖತನದಿಂದ ವರ್ತಿಸುತ್ತಾರೆ. ಇದರಿಂದ ನಮ್ಮಿಬ್ಬರ ನಡುವೆ ದ್ವೇಷದ ಭಾವನೆ ಉಂಟಾಗಿದೆ. ಜೊತೆಗೆ ಗೌರವ ಕೂಡ.   

4] ಪತಿ ಹೆಚ್ಚು ವಿದ್ಯಾವಂತ ಆದರೆ ಸೆಕ್ಸ್ ಸಂದರ್ಭದಲ್ಲಂತೂ ಅತೀ ದಡ್ಡನಾಗಿ ವರ್ತಿಸುತ್ತಾನೆ. ಗಂಡನ ನಡವಳಿಕೆ ಇದೇ ರೀತಿ ಮುಂದುವರಿದರೆ ನಾನು ಒಂದು ದಿನ ತಾಳ್ಮೆ ಕಳೆದುಕೊಳ್ಳುವುದು ಖಂಡಿತಾ. ಲೈಂಗಿಕ ಕ್ರಿಯೆಯ ಜ್ಞಾನ ಹೆಚ್ಚು ಇರುವಂತಿಲ್ಲ ಆತನಿಗೆ.      

5] ನನಗೆ 2ನೇ ಮಗು ಹುಟ್ಟಿದ ನಂತರ  ಇಬ್ಬರ ಲೈಂಗಿಕತೆಯ ಖುಷಿ ಕಡಿಮೆಯಾಗುತ್ತಿದೆ. ಇಬ್ಬರು ಸುಖಿಸಲು ಶುರು ಮಾಡಿದರೂ  ಅಂತಿಮ ಕ್ಷಣದಲ್ಲಿ ಸಿಗಬೇಕಾದ ಆನಂದ ದೊರೆಯುತ್ತಿಲ್ಲ. ದಿನದಿಂದ ದಿನ ಬೇಸರ ಹೆಚ್ಚಾಗುತ್ತಿದೆ.

Comments 0
Add Comment

  Related Posts

  Summer Tips

  video | Friday, April 13th, 2018

  Benifit Of Hibiscus

  video | Thursday, April 12th, 2018

  Health Benifit Of Hibiscus

  video | Thursday, April 12th, 2018

  Skin Care In Summer

  video | Saturday, April 7th, 2018

  Summer Tips

  video | Friday, April 13th, 2018
  Chethan Kumar